HOME » NEWS » District » BANGLORE CRIME NEWS ANLM MAK

Crime News: ಸಾಲ ಮರುಪಾವತಿ ಬಾಕಿ ಹಿನ್ನೆಲೆ ಫೈನಾನ್ಸ್‌ ಕಂಪನಿಯವರಿಂದ ಮನೆ ಸೀಜ್; ಮನನೊಂದು ಒಬ್ಬ ಆತ್ಮಹತ್ಯೆ

ರಾಜಣ್ಣ ಸಾಲ ಪಡೆದ ಕೆಲ ತಿಂಗಳಲ್ಲಿ ತನ್ನ ಹೆಂಡತಿ ನೀಲಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಸಾಲದ ಜವಬ್ದಾರಿ ಹೊತ್ತು ಕೆಲಸ ಮಾಡುತ್ತಾ ಪ್ರತಿ ತಿಂಗಳು ಚಾಚು ತಪ್ಪದೆ 60 ಸಾವಿರ ಇಎಂಐ ಕಟ್ಟುತ್ತಿದ್ದರು.

news18-kannada
Updated:April 5, 2021, 7:39 AM IST
Crime News: ಸಾಲ ಮರುಪಾವತಿ ಬಾಕಿ ಹಿನ್ನೆಲೆ ಫೈನಾನ್ಸ್‌ ಕಂಪನಿಯವರಿಂದ ಮನೆ ಸೀಜ್; ಮನನೊಂದು ಒಬ್ಬ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ದಾಸರಹಳ್ಳಿಯ ಪ್ರಶಾಂತ್‌ ನಗರ ನಿವಾಸಿ ರಾಜಣ್ಣ ತನ್ನ ಉದ್ಯಮ ಅಭಿವೃದ್ದಿಗಾಗಿ ಖಾಸಗಿ ಬ್ಯಾಂಕ್‌ನಿಂದ ಸಾಲ ಮಾಡಿ ಬಂಡವಾಳ ಹೂಡಿಕೆ ಮಾಡಿದ್ದ ಕೋವಿಡ್ ಮಹಾಮಾರಿ ಎಲ್ಲಾ ಉದ್ಯಮಗಳ ಮೇಲೆ ಕರಿ ನೆರಳು ಚೆಲ್ಲಿದ್ದ ಹಿನ್ನೆಲೆ ಸಾಲ ಮರುಪಾವತಿ ಮಾಡೋದು ತಡವಾಯ್ತು, ಸಾಲ ಮರುಪಾವತಿಗೆ ಬ್ಯಾಂಕ್‌ನವರು ನೀಡಿದ ಕಿರುಕುಳಕ್ಕೆ ಬೇಸತ್ತು ಉದ್ಯಮದ ಕನಸು ಕಂಡಿದ್ದ ವ್ಯಕ್ತಿ ಸಾವಿನ ಮನೆ ಕದ ತಟ್ಟಿದ್ದಾನೆ.‌ ಹತ್ತಾರು ವರ್ಷಗಳಿಂದ ಊರ ಮಡಿ ತೊಳೆಯೋ ಮಡಿವಾಳಿಕೆ ವೃತ್ತಿ ಮಾಡುತ್ತಿದ್ದ 57 ವರ್ಷದ ರಾಜಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೋಬಿ ಘಾಟ್‌ಗಳಲ್ಲಿ ಬಟ್ಟೆ ಒಗೆಯುತ್ತಿದ್ದ ರಾಜಣ್ಣ ಉದ್ಯಮ ಅಭಿವೃದ್ದಿ ಮಾಡಿಕೊಳ್ಳಲು ಖಾಸಗಿ ಬ್ಯಾಂಕ್‌ನಲ್ಲಿ ತನ್ನ ಹೆಂಡತಿ ನೀಲಮ್ಮ‌ ಹೆಸರಿನಲ್ಲಿ 2018ರ ಜೂನ್‌ತಿಂಗಳಲ್ಲಿ 35 ಲಕ್ಷ ಸಾಲ ಪಡೆದಿರುತ್ತಾರೆ.

ಸಾಲ ಪಡೆಯಲು ಹೆಂಡತಿ ಹೆಸರಿನಲ್ಲಿದ್ದ ಮನೆಯನ್ನು ಒತ್ತೆ ಇಟ್ಟು ಸಾಲ ಮಾಡಿ ಬಟ್ಟೆ ಹೊಗೆಯುವ ಒಂದು ದೊಡ್ಡ ಮೆಷನ್‌ಗೆ ಬಂಡವಾಳ ಹಾಕಿ ಉದ್ಯೋಗ ನಡೆಸುತ್ತಿದ್ದ ಇವರು ಇಂದು ಸಾಲ ನೀಡಿದ ಬ್ಯಾಂಕ್‌ನವರ ಕಿರುಕುಳಕ್ಕೆ ಬೇಸತ್ತು ದೋಬಿಘಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೆಲ ಕಚ್ಚಿದ ಉದ್ಯಮ:

ರಾಜಣ್ಣ ಸಾಲ ಪಡೆದ ಕೆಲ ತಿಂಗಳಲ್ಲಿ ತನ್ನ ಹೆಂಡತಿ ನೀಲಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಸಾಲದ ಜವಬ್ದಾರಿ ಹೊತ್ತು ಕೆಲಸ ಮಾಡುತ್ತಾ ಪ್ರತಿ ತಿಂಗಳು ಚಾಚು ತಪ್ಪದೆ 60 ಸಾವಿರ ಇಎಂಐ ಕಟ್ಟುತ್ತಿದ್ದರು. ಈ ನಡುವೆ ಕೊರೋನಾ ಮಹಾಮಾರಿಯಿಂದಾಗಿ ಹೊಟೆಲ್ ಬ್ಯುಸಿನೆಸ್‌ಗಳು ನೆಲ ಕಚ್ಚಿ, ರಾಜಣ್ಣ ಉದ್ಯಮಕ್ಕೆ ಹೊಡೆತ ಕೊಟ್ಟಿತ್ತು ಈ ನಡುವೆಯು ರಾಜಣ್ಣ ಹೇಗೋ ಸಣ್ಣ ಪುಟ್ಟ ಕೆಲಸಗಳನ್ನ ಮಾಡಿ 17 ಲಕ್ಷ ಸಾಲ ಮರುಪಾವತಿ ಮಾಡಿದ್ದಾರೆ, ಆದ್ರೆ ಕಳೆದ ಆರು ತಿಂಗಳುಗಳಿಂದ ಸಾಲ ತೀರಿಸಲಾಗಿರಲಿಲ್ಲ.

ಮನೆ ಸೀಜ್​:

ಬ್ಯಾಂಕ್ ಮ್ಯಾನೇಜರ್ ಹಾಗೂ ರಿಕವರಿ ಏಜೆಂಟ್ ಹಲವು ಬಾರಿ ಮನೆ ಬಳಿ ಬಂದು ಸಾಲ ಮರುಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ. ಸಾಲ‌ ಮರುಪಾವತಿ ಆಗದ ಹಿನ್ನೆಲೆ ಕಳೆದ ಫೆಬ್ರವರಿ 16 ರಂದು ಏಕಾ ಏಕಿ ಮನೆ ಬಳಿ ಸೆಕ್ಯುರಿಟಿಗಳನ್ನ ಕರೆತಂದು ಎಲ್ಲರನ್ನೂ ಹೊರಗೆ ಹಾಕಿ ಮನೆ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ಅನುದಾನ ನೀಡದಿದ್ದಕ್ಕೆ ಸಿಎಂ ವಿರುದ್ಧ ಮೈಸೂರಿನ ಕೈ ಶಾಸಕರ ಆಕ್ರೋಶ!ಮನನೊಂದು ನೇಣಿಗೆ ಶರಣು:

ವಿಧಿ ಇಲ್ಲ ಎನ್ನುವಂತೆ ರಾಜಣ್ಣ ತನ್ನ ಮಗನೊಂದಿಗೆ ದೋಬಿ ಘಾಟ್‌ ಬಳಿಯ ಒಂದು ಸಣ್ಣ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, ಬ್ಯಾಂಕ್‌ನವರು ಅಲ್ಲಿಯು ಹೋಗಿ ಕಿರುಕುಳ ಕೊಡುತ್ತಿದ್ದರು ಎಂದು ಮನನೊಂದ ರಾಜಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Youtube Video

ಒಟ್ಟಾರೆ ಸಾಲ‌ ಪಡೆದುಕೊಂಡ ವ್ಯಕ್ತಿ ಬ್ಯಾಂಕ್‌ನವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಕೋವಿಡ್‌ನಂತಹ ಸಾಂಕ್ರಾಮಿಕ ಕಾಯಿಲೆಯ ಸಂಧರ್ಭದಲ್ಲಿ ಸಾಲಾ ವಸೂಲಾತಿ ವಿಚಾರದಲ್ಲಿ ಸರ್ಕಾರಗಳಿ ನಿರ್ಧಿಷ್ಟ ನಿಲುವು ತೆಗೆದುಕೊಂಡು ಜನ ಸಾಮಾನ್ಯರ ನೆರವಿಗೆ ಬರಬೇಕಿದೆ.
Published by: MAshok Kumar
First published: April 5, 2021, 7:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories