ಬೆಂಗಳೂರು ಗಲಭೆ ಪ್ರಕರಣ; ಹೈಕೋರ್ಟ್ ನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆಗೆ ವೈಎಸ್​ವಿ ದತ್ತಾ ಆಗ್ರಹ

Bangalore Violence: ಆ. 25 ರಂದು ಶಿವಮೊಗ್ಗಕ್ಕೆ ಮಾಜಿ ಪ್ರಧಾನಿ ದೇವೆಗೌಡರು ಬರಲಿದ್ದಾರೆ. ಸರ್ಕಾರ ಜಾರಿಗೊಳಿಸುತ್ತಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ವಿರೋಧಿಸಿ ಅಂದು  ದೇವೆಗೌಡರು ಚರ್ಚೆ ನಡೆಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ, ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ವಿಚಾರ ಸಂಕಿರಣ ಆಯೋಜನೆ ಮಾಡಲಾಗುತ್ತಿದೆ. ವಿಚಾರ ಸಂಕಿರಣದಲ್ಲಿ ಸುಮಾರು 300 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. 

ವೈಎಸ್​ವಿ ದತ್ತಾ

ವೈಎಸ್​ವಿ ದತ್ತಾ

  • Share this:
Bangalore Violence: ಶಿವಮೊಗ್ಗ; ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣವನ್ನು ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಿದೆ. ಈ ಪ್ರಕರಣವನ್ನು ಹೈಕೋರ್ಟ್​ ನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂಬುದು ನಮ್ಮ ಪಕ್ಷದ ಒತ್ತಾಯವಾಗಿದೆ ಎಂದು ಮಾಜಿ ಶಾಸಕ ವೈಎಸ್​ವಿ ದತ್ತಾ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈಎಸ್​ವಿ ದತ್ತಾ, ಗಲಭೆ ಪ್ರಕರಣವನ್ನು ಸಿಸಿಬಿಯವರು ತನಿಖೆ ಮಾಡುತ್ತಿದ್ದಾರೆ. ಇಂತಹ ಒಂದು ಘಟನೆ ಮ್ಯಾಜಿಸ್ಟ್ರೇಟ್ ತನಿಖೆಯಿಂದ ಆಗೋದಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಗಲಭೆಯಲ್ಲಿ ಯಾವುದೇ ಮುಲಾಜಿಲ್ಲ. ದಾಕ್ಷಿಣ್ಯ ಇಲ್ಲ. ಗಲಭೆಯ ಹಿಂದೆ ರಾಜಕೀಯ ಪಕ್ಷಗಳ ಪಾತ್ರ ಇದ್ದರೆ, ಅದು ಯಾವುದೇ ಪಕ್ಷ ಇರಲಿ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಈ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರೆ, ಇಂತಹ ಘಟನೆಗಳಲ್ಲೆಲ್ಲಾ ನ್ಯಾಯಾಂಗ ತನಿಖೆಯೇ ನಡೆದಿದೆ. ಶಾಸಕರ ಮೇಲೆ ದಬ್ಬಾಳಿಕೆ, ಶಾಸಕರ ಹತ್ಯೆ ಯತ್ನ, ಶಾಸಕರ ಮನೆ ಮೇಲೆ ದಾಳಿ, ಶಾಸಕರಾದವರ ಮೇಲೆ ಇಂತಹ ಘಟನೆ ನಡೆದಿದೆ ಎಂದಾದ ಮೇಲೆ ಅದು ನ್ಯಾಯಾಂಗ ತನಿಖೆಯೇ ಸೂಕ್ತ. ದೇವೇಗೌಡರು ಸಹ ಇದನ್ನೇ ಹೇಳಿದ್ದಾರೆ. ನಮ್ಮ ಪಕ್ಷದ ಒತ್ತಾಯ ಸಹ ಆಗಿದೆ. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತಿಲ್ಲ. ಈ ಗಲಭೆಗೆ ಪಕ್ಷಗಳು ಕಾರಣ ಆಗಿದೆಯಾ, ಓಟ್ ಬ್ಯಾಂಕಿಂಗ್ ಕಾರಣ ಆಗಿದೆಯಾ, ಅಥವಾ ಖಾಸಗಿಯಾಗಿ ಆ ಕುಟುಂಬದೊಳಗೆ ಏನಾದರೂ ಕಾರಣ ಇತ್ತಾ ಎಂಬ ಅಂಶ ಬೆಳಕಿಗೆ ಬರಬೇಕು ಎಂದರೆ ನ್ಯಾಯಾಂಗ ತನಿಕೆ ಆಗಬೇಕು ಎಂದರು.

ಇದನ್ನು ಓದಿ: ಡಿಜೆ ಹಳ್ಳಿ ಗಲಭೆ; ಸರ್ಕಾರದ ವೈಫಲ್ಯ ಮುಚ್ಚಲು ಕಾಂಗ್ರೆಸ್‌ ಮೇಲೇಕೆ ಗೂಬೆ ಕೂರಿಸುತ್ತೀರಿ?; ಸಿಎಂಗೆ ಸಿದ್ದರಾಮಯ್ಯ ಪತ್ರ

ಮೂಲಭೂತವಾದಿಗಳು ಯಾವುದೇ ಧರ್ಮದಲ್ಲಿ ಇದ್ದರೂ ಅಪಾಯಕಾರಿ. ಅವರು ಖಂಡನಾರ್ಹರು. ಹಿಂದೂ ಮೂಲಭೂತವಾದಿಗಳು ಇರಬಹುದು, ಮುಸ್ಲಿಂ ಮೂಲಭೂತವಾದಿಗಳು ಇರಬಹುದು. ಯಾವುದೇ ಧರ್ಮದ ಮೂಲಭೂತವಾದಿಗಳು ಇರಬಹುದು. ಅವರ ಮೂಲಭೂತವಾದಿತನಕ್ಕೆ ಅಮಾಯಾಕರ ಆಸ್ತಿಪಾಸ್ತಿ ಹಾನಿ ಆಗುವುದು ದೊಡ್ಡ ದುರಂತ. ಈ ವಿಷಯದಲ್ಲಿ ಜೆಡಿಎಸ್ ರಾಜಕೀಯ ಬೆರೆಸುವುದಿಲ್ಲ. ಆದರೆ ಘಟನೆಯ ಸ್ಪಷ್ಟತೆ ತಿಳಿಯಬೇಕು ಎಂದರು.

ಇನ್ನು ಆ. 25 ರಂದು ಶಿವಮೊಗ್ಗಕ್ಕೆ ಮಾಜಿ ಪ್ರಧಾನಿ ದೇವೆಗೌಡರು ಬರಲಿದ್ದಾರೆ. ಸರ್ಕಾರ ಜಾರಿಗೊಳಿಸುತ್ತಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ವಿರೋಧಿಸಿ ಅಂದು  ದೇವೆಗೌಡರು ಚರ್ಚೆ ನಡೆಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ, ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ವಿಚಾರ ಸಂಕಿರಣ ಆಯೋಜನೆ ಮಾಡಲಾಗುತ್ತಿದೆ. ವಿಚಾರ ಸಂಕಿರಣದಲ್ಲಿ ಸುಮಾರು 300 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
Published by:HR Ramesh
First published: