HOME » NEWS » District » BANGALORE POLICE HAVE PASTED A NOTICE ON THE GRANDMOTHERS HOME OF A YOUNG WOMAN WHO IS SAID TO BE IN A CD CASE MVSV MAK

Ramesh Jarkiholi CD Case: ಸಿಡಿ ಪ್ರಕರಣದಲ್ಲಿದ್ದಾಳೆ ಎನ್ನಲಾದ ಯುವತಿಯ ಅಜ್ಜಿಯ ಮನೆಗೆ ನೊಟೀಸ್ ಅಂಟಿಸಿದ ಬೆಂಗಳೂರು ಪೊಲೀಸರು

ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಸಿಡಿ ಪ್ರಕರಣದ ಸಂತ್ರಸ್ತೆ ಎನ್ನಲಾದ ಯುವತಿಯ ಅಜ್ಜಿಯ ಮನೆಯನ್ನು ಬೆಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲದೆ, ಆ ಮನೆಯ ಬಾಗಿಲಿಗೆ ನೊಟೀಸ್​ ಅಂಟಿಸಿದ್ದಾರೆ ಎನ್ನಲಾಗಿದೆ.

news18-kannada
Updated:March 14, 2021, 6:24 PM IST
Ramesh Jarkiholi CD Case: ಸಿಡಿ ಪ್ರಕರಣದಲ್ಲಿದ್ದಾಳೆ ಎನ್ನಲಾದ ಯುವತಿಯ ಅಜ್ಜಿಯ ಮನೆಗೆ ನೊಟೀಸ್ ಅಂಟಿಸಿದ ಬೆಂಗಳೂರು ಪೊಲೀಸರು
ಸಂತ್ರಸ್ತ ಯುವತಿ.
  • Share this:
ವಿಜಯಪುರ (ಮಾರ್ಚ್​ 13); ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ವಿಜಯಪುರಕ್ಕೂ ಆಗಮಿಸಿ ತನಿಖೆ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಈ ಸಿಡಿ ಪ್ರಕರಣವನ್ನು ಎಸ್ ಐ ಟಿ ಮೂಲಕ ತನಿಖೆ ನಡೆಸಲು ಈಗಾಗಲೇ ರಾಜ್ಯ ಸರಕಾರ ಆದೇಶ ನೀಡಿದೆ. ಒಂದು ಕಡೆ ಸಿಡಿ ಪ್ರಕರಣವನ್ನು SIT ತಂಡ ತನಿಖೆ ಕೈಗೊಂಡಿದೆ. ಇತ್ತ ಮತ್ತೊಂದು ಕಡೆ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಸಿಡಿ ಪ್ರಕರಣದ ಸಂತ್ರಸ್ತೆ ಎನ್ನಲಾದ ಯುವತಿಯ ಅಜ್ಜಿಯ ಮನೆಯನ್ನು ಬೆಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲದೆ, ಆ ಮನೆಯ ಬಾಗಿಲಿಗೆ ನೊಟೀಸ್​ ಅಂಟಿಸಿದ್ದಾರೆ ಎನ್ನಲಾಗಿದೆ.

ಸಂತ್ರಸ್ತ ಯುವತಿಯ ಮೂಲ ಊರು ಬಾಗಲಕೋಟೆ ಜಿಲ್ಲೆಯಲ್ಲಿದ್ದರೆ, ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ ಯುವತಿಯ ತಾಯಿಯ ತವರು ಮನೆಯಾಗಿದೆ. ಇಲ್ಲಿಯೇ ಯುವತಿಯ ಅಜ್ಜಿ ವಾಸಿಸುತ್ತಿದ್ದಾರೆ.  ಕಳೆದ ವರ್ಷ ಈ ಯುವತಿಯ ಅಜ್ಜ ಮತ್ತು ಮಾವ ನಿಧನರಾಗಿದ್ದಾರೆ ಎನ್ನಲಾಗಿದೆ.  ಈಗ ಅನಾರೋಗ್ಯದ ಹಿನ್ನೆಲೆಯಲ್ಲಿ ಅಜ್ಜಿಯೂ ಮನೆಯಲ್ಲಿ ಇಲ್ಲ ಎಂದು ಹೇಳಲಾಗುತಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನಿಡಗುಂದಿಗೆ ಆಗಮಿಸಿದ ಕಬ್ಬನ್ ಪಾರ್ಕ್ ಪೊಲೀಸರು ಈ ಯುವತಿಯ ಅಜ್ಜಿಯ ಮನೆಗೆ ನೊಟೀಸ್ ಅಂಟಿಸಿದ್ದಾರೆ.

ಈ ಯುವತಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ್ದು, ನಂತರ ಬೇರೆ ಬೇರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದಾಳೆ.  ಕಳೆದ ವರ್ಷ ಅಜ್ಜ ನಿಧನರಾದಾಗ ಇಲ್ಲಿಗೆ ಬಂದು ಹೋಗಿರುವ ಯುವತಿ ನಂತರ ಇಲ್ಲಿಗೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಯುವತಿಯ ತಾಯಿಯ ತವರು ಮನೆ ನಿಡಗುಂದಿ ಪಟ್ಟಣದ ವೀರೇಶ ನಗರದಲ್ಲಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಲಿಂಕ್ ಇರುವ ಕಾರಣದಿಂದ ಬೆಂಗಳೂರಿನಿಂದ ಬಂದಿರುವ ಪೊಲೀಸರು ನೊಟೀಸ್ ಅಂಟಿಸಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣ; ನನಗೆ ಯಾವ ರಾಜಕೀಯ ಬೆಂಬಲವೂ ಇಲ್ಲ; ರಕ್ಷಣೆ ಕೋರಿ ವಿಡಿಯೋ ಹಂಚಿಕೊಂಡ ಸಂತ್ರಸ್ತ ಯುವತಿ

ಈ ನೊಟೀಸಿನಲ್ಲಿ ನಿನ್ನೆ ಅಂದರೆ 13.03.2021 ದಿನಾಂಕ ನಮೂದಾಗಿದ್ದು, ಅದರಲ್ಲಿ ದಿ. 02.03.2021 ರಂದು ದಿನೇಶ ಕಲ್ಲಹಳ್ಳಿಯವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಂಬಂಧ ಠಾಣಾ ಅರ್ಜಿ ಸಂಖ್ಯೆ Q1PS/PET/GNL/48/2021, ರಲ್ಲಿ ದೂರು ದಾಖಲಾಗಿ ವಿಚಾರಣೆಯ ಲ್ಲಿರುತ್ತದೆ.  ಈ ದೂರಿನ ಹೆಚ್ಚಿನ ವಿಚಾರಣೆಯ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ತಮ್ಮ ಹೇಳಿಕೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯವಾ ಗಿರುತ್ತದೆ.
Youtube Video

ಆದ್ದರಿಂದ ಯುವತಿ ನೊಟೀಸ್ ನೋಡಿದ ತಕ್ಷಣ ತುರ್ತಾಗಿ ಈ ಕೆಳಗೆ ಸಹಿ ಮಾಡಿರುವ ಅಧಿಕಾರಿಯ ಮೊಬೈಲ್ ನಂಬರ್/ ಈ-ಮೇಲೆ ಅನ್ನು ಸಂಪರ್ಕಿಸುವುದು ಮತ್ತು ತಾವು ನಿಗಧಿಪಡಿಸಿದ ದಿನಾಂಕ/ಸಮಯ ಮತ್ತು ಸ್ಥಳಕ್ಕೆ ಬಂದು ತಮ್ಮ ಹೇಳಿಕೆಯನ್ನು ಪಡೆಯಲಾಗುವುದು. ತಮ್ಮ ಮನವಿಯ ಮೇರೆಗೆ ಸೂಕ್ತ ರಕ್ಷಣೆಯನ್ನು ಒದಗಿಸಲಾಗುವುದು ಎಂದು ಬರೆಯಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಬೆಂಗಳೂರಿನ ಕಬ್ಬನ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್​ ಮಾರುತಿ ಎಂಬುವರ ಸಹಿ ಹೊಂದಿರುವ ನೊಟೀಸ್ ಅನ್ನು ಯುವತಿಯ ಅಜ್ಜಿಯ ಮನೆಗೆ ಅಂಟಿಸಲಾಗಿದೆ.
Published by: MAshok Kumar
First published: March 14, 2021, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories