• Home
  • »
  • News
  • »
  • district
  • »
  • ಒಂದು ರಾತ್ರಿ ಜೊತೆ ಮಲಗು, ಬಿಡುತ್ತೇನೆ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವತಿಗೆ ಟಾರ್ಚರ್

ಒಂದು ರಾತ್ರಿ ಜೊತೆ ಮಲಗು, ಬಿಡುತ್ತೇನೆ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವತಿಗೆ ಟಾರ್ಚರ್

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಅನಾರೋಗ್ಯದ ಕಥೆ ಕಟ್ಟಿ ಫೇಸ್​ಬುಕ್​ನಲ್ಲಿ ಯುವತಿಯ ಸ್ನೇಹ ಬೆಳೆಸಿ ಬಳಿಕ ಲೈಂಗಿಕ, ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

  • Share this:

ಬೆಂಗಳೂರು(ಫೆ. 02): ಫೇಸ್​ಬುಕ್​ನಲ್ಲಿ ಯುವತಿಯ ಪರಿಚಯ ಮಾಡಿಕೊಂಡು ಸಾವಿನ ನಾಟಕವಾಡಿ ಮೊಬೈಲ್ ನಂಬರ್ ಪಡೆದು ಇನ್ನಿಲ್ಲದಂತೆ ಪೀಡಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಶ್ರವಣ್ ಕುಮಾರ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ತನ್ನ ಮೇಲೆ ಈತನಿಂದ ಲೈಂಗಿಕ ಹಲ್ಲೆ, ಮಾನಸಿಕ ಕಾಟ ಆಗಿದೆ ಎಂದು ಯುವತಿ ಜನವರಿ 29ರಂದು ನೀಡಿದ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.


ಘಟನೆ ಏನು?


ಯುವತಿ ನೀಡಿರುವ ದೂರಿನ ಪ್ರಕಾರ ಆರೋಪಿ ಶ್ರವಣ್ ಕುಮಾರ್ ಮೂರು ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯ ಆಗುತ್ತಾನೆ. ತಾನು ಜಾಸ್ತಿ ದಿನ ಬದುಕುವುದಿಲ್ಲ. ತನಗೆ ಮೂಗು ಬಾಯಲ್ಲಿ ರಕ್ತ ಬರುತ್ತದೆ ಎಂದು ಹೇಳಿ ಕನಿಕರ ಹುಟ್ಟುವಂತೆ ಮಾತನಾಡಿ ಸ್ನೇಹ ಬೆಳೆಸಿಕೊಂಡು ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾನೆ. ಆ ನಂತರ ಆಕೆಯೊಂದಿಗೆ ವಾಟ್ಸಾಪ್ ಮತ್ತು ಫೇಸ್​ಬುಕ್ ಚಾಟಿಂಗ್ ಮಾಡುತ್ತಿರುತ್ತಾನೆ. 2020, ಫೆಬ್ರವರಿಯಿಂದ ಶ್ರವಣ್ ಕುಮಾರ್ ಆ ಯುವತಿ ಜೊತೆ ಸೆಕ್ಸ್ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಪ್ರಾರಂಭಿಸುತ್ತಾನೆ. ಅದಾದ ಬಳಿಕ ಯುವತಿ ಆತನ ನಂರನ್ನ ಬ್ಲಾಕ್ ಮಾಡಿ ಆತನ ಸಂಪರ್ಕ ಕಟ್ ಮಾಡುತ್ತಾಳೆ. ಆದರೂ ಸುಮ್ಮನಾಗದ ಶ್ರವಣ್ ಕುಮಾರ್ ಬೇರೆ ನಂಬರ್​ಗಳಿಂದ ಪದೇ ಪದೇ ಕರೆ ಮಾಡುತ್ತಿರುತ್ತಾನೆ. ಒಂದು ರಾತ್ರಿ ನನ್ನ ಪಕ್ಕ ಮಲಗಿದರೆ ಬಿಟ್ಟು ಬಿಡುತ್ತೇನೆ ಎಂದು ಅಶ್ಲೀಲವಾಗಿ ಮಾತನಾಡುತ್ತಿರುತ್ತಾನೆ. ನಿನ್ನನ್ನ ಪ್ರೀತಿಸುತ್ತಿದ್ದೇನೆ. ನೀನು ರಿಜೆಕ್ಟ್ ಮಾಡಿದರೆ ನಿನ್ನನ್ನು ಕೊಲೆ ಮಾಡುತ್ತೇನೆ. ನಂತರ ನಾನೂ ಸಾಯುತ್ತೇನೆ ಎಂದು ಬೆದರಿಸುತ್ತಿರುತ್ತಾನೆ. ಮನೆಯವರಿಗೆ ಈ ವಿಚಾರ ತಿಳಿಸುತ್ತೇನೆಂದು ಯುವತಿ ಹೇಳಿದರೂ ಜಗ್ಗದ ಆತ, ಏನೇ ಆದರೂ ಬಿಡುವುದಿಲ್ಲ, ನಿನ್ನನ್ನು ಸಾಯಿಸುತ್ತೇನೆ. ಏನಾದರೂ ಆಗಲಿ ಎಂದು ಎಚ್ಚರಿಕೆ ಕೊಟ್ಟಿರುತ್ತಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.


ಇದನ್ನೂ ಓದಿ: ದೆಹಲಿ ಗಲಭೆಯಲ್ಲಿ ರೈತರ ಪಾತ್ರ ಇಲ್ಲ; ನಮ್ಮ ಹೋರಾಟ ತಡೆಯಲು ಸಾಧ್ಯವಿಲ್ಲ: ರಾಮನಗರದಲ್ಲಿ ರೈತರ ಎಚ್ಚರಿಕೆ


ಯುವತಿ ಕೆಲಸ ಮಾಡುತ್ತಿದ್ದ ಕ್ಲಿನಿಕ್​ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಶ್ರವಣ್ ಕುಮಾರ್ ತೆರಳಿ ಪೀಡಿಸುವ ಕೆಲಸವನ್ನೂ ಮಾಡುತ್ತಿರುತ್ತಾನೆ. 2021, ಜನವರಿ 29ರ ಸಂಜೆ 7ಕ್ಕೆ ಆಕೆ ಕ್ಲಿನಿಕ್​ನಲ್ಲಿ ಕೆಲಸದಲ್ಲಿರುವಾಗ ಬಂದ ಆರೋಪಿ, ಆಕೆಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಇದನ್ನ ಪ್ರತಿರೋಧಿಸಿದಾಗ ಆಕೆಯ ಬಟ್ಟೆ ಹರಿದು ತಲೆಗೂದಲನ್ನ ಹಿಡಿದು ಎಳೆದಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಅಂದೇ ಯುವತಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.


ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆರೋಪಿ ಶ್ರವಣ್ ಕುಮಾರ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ವರದಿ: ಮಂಜುನಾಥ್ ಎನ್

Published by:Vijayasarthy SN
First published: