HOME » NEWS » District » BANGALORE BOYS BLACKMAIL THROUGH FACEBOOK BY SENDING NAKED PHOTOS SESR KKM

ಫೇಸ್​ಬುಕ್​ನಲ್ಲಿ ಹುಡುಗಿಯ ಬೆತ್ತಲೆ ಫೋಟೋ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದ 20ರ ಹರೆಯದ ಯುವಕರು

ಒಂದು ವೇಳೆ ಹಣ ನೀಡದಿದ್ದರೆ, ಪೊಲೀಸ್​ ಕಮಿಷನರ್​ ಹೆಸರಿನಲ್ಲಿ ಅವರಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು

news18-kannada
Updated:November 25, 2020, 8:58 PM IST
ಫೇಸ್​ಬುಕ್​ನಲ್ಲಿ ಹುಡುಗಿಯ ಬೆತ್ತಲೆ ಫೋಟೋ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದ 20ರ ಹರೆಯದ ಯುವಕರು
ಬಂಧಿತ ಯುವಕರು
  • Share this:
ಮಂಗಳೂರು (ನ.25): ಅವರಿಬ್ಬರು ಇನ್ನು ಮೀಸೆ ಚಿಗುರದ 20ರ ಹರೆಯದ ಯುವಕರು. ಹಣದ ಆಸೆಗೆ ಬಿದ್ದ ಈ ಯುವಕರು, ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಜನರಿಗೆ ವಂಚಿಸಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.  ಇವರು ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್​ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಹಲವರನ್ನು ಪರಿಚಯ ಮಾಡಿಕೊಂಡು ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಒಂದು ವೇಳೆ ಹಣ ನೀಡದಿದ್ದರೆ, ಪೊಲೀಸ್​ ಕಮಿಷನರ್​ ಹೆಸರಿನಲ್ಲಿ ಅವರಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಇದೇ ರೀತಿ ಹಲವು ಜನರಿಗೆ ಮೋಸ ಮಾಡಿದ ಈ ಯುವಕರು ಲಕ್ಷ ಲಕ್ಷ ಹಣ ದೋಚಿದ್ದಾರೆ.  ಬೆಂಗಳೂರು ಮೂಲದ ಗೋಕಲ್ ರಾಜ್.  ಪವನ್ ಬಂಧಿತ ಯುವಕರು. 

'ಸಾಕ್ಷಿ ರಾಜ್' ಎನ್ನುವ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ಇವರಿಬ್ಬರು ಸೇರಿ ಸೃಷ್ಟಿಸಿದ್ದರು. ಈ ಖಾತೆಯಲ್ಲಿ ಸುಂದರ ಹುಡುಗಿಯ ಫೋಟೋ ನೋಡಿ ಅನೇಕರು ರಿಕ್ವೆಸ್ಟ್​ ಕಳುಹಿಸುತ್ತಿದ್ದರು. ಅಲ್ಲದೇ ಇವರು ಕೂಡ ಅನೇಕರಿಗೆ ರಿಕ್ವೆಸ್​ ಕಳುಹಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಚಾಟಿಂಗ್​ ನಡಿಸಿ, ಬೆತ್ತಲೆ ಫೋಟೋವನ್ನು ಕಳುಹಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಫೇಸ್​ಬುಕ್​ ಫ್ರೆಂಡ್​ನಿಂದ ಕೂಡ ಬೆತ್ತಲೆ ಫೋಟೋ ಪಡೆಯುತ್ತಿದ್ದರು. ಈ ಫೋಟೋ ಸಿಕ್ಕ ಬಳಿಕ ಅವರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇಲ್ಲದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹರಿಯಬಿಡುವ ಬೆದರಿಕೆ ಹಾಕುತ್ತಿದ್ದರು. ಈ ಮೂಲಕ ಅನೇಕರಿಂದ ಇವರು ಲಕ್ಷ ಲಕ್ಷ ಹಣ ದೋಚುತ್ತಿದ್ದರು.

ಕಡೆಗೂ ಸಿಕ್ಕಿ ಬಿದ್ದ ಆರೋಪಿಗಳು:

ಮಂಗಳೂರಿನ ಉದ್ಯಮಿಯೊಬ್ಬರಿಗೆ ಸಾಕ್ಷಿ ರಾಜ್ ಹೆಸರಿನಲ್ಲಿ ಮೆಸೇಜ್ ಮಾಡಿದ್ದಾರೆ. ಬೆತ್ತಲೆ ಫೋಟೊ ಕಳುಹಿಸಿ ಉದ್ಯಮಿಯ ಬೆತ್ತಲೆ ಫೋಟೊ ಸೆಂಡ್ ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ ಇನ್ನು ಮಂಗಳೂರು ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಎಂದು ಅವರಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಸಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಬಂಧಿಸಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಬೆದರಿದ ಉದ್ಯಮಿ ಹಣ ನೀಡಿದ್ದಾರೆ. ಇದಾದ ಬಳಿಕ ಮತ್ತೆ ಮತ್ತೆ ಹಣದ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೆಸತ್ತ ಉದ್ಯಮಿ ಕದ್ರಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇದನ್ನು ಓದಿ: ಗ್ರಾ. ಪಂಚಾಯತಿ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಸಿದ್ಧತೆ; ರಾಜ್ಯಾದ್ಯಂತ ಸಮಾವೇಶ 

ಈ ಪ್ರಕರಣವನ್ನು ಸೈಬರ್​ ಕ್ರೈಂ ಪೊಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆ ನಡೆಸಿದಾಗ ಚಿಗುರು ಮೀಸೆ ಹುಡುಗರ ಈ ಮೋಸದಾಟ ಬಯಲಾಗಿದೆ, ಬೆಂಗಳೂರಿನ ಸಾಕಷ್ಟು ಜನರಿಗೆ ಇದೇ ರೀತಿ ಇವರು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ನೀಡದವರಿಗೆ  ಬೆಂಗಳೂರು ಪೊಲೀಸ್ ಕಮಿಷನರ್, ಡಿಸಿಪಿ, ಎಸಿಪಿ, ಇನ್ಸ್​ಪೆಕ್ಟರ್​ ಎಂದು ಕರೆ ಮಾಡಿ ಹಣ ವಸೂಲಿ ಮಾಡಿದ್ದಾರೆ.

ಪೊಲೀಸರು ಇವರನ್ನು ಬಂಧಿಸುವ ಮೊದಲೇ ಇದರ ಸುಳಿವು ಸಿಕ್ಕಿ ಬಂಧಿಸದಂತೆ ಹೈಕೋರ್ಟ್ ವರೆಗೂ ಕಾನೂನಿನ ಅಡಿಯಲ್ಲಿ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಆದರೆ ಪೊಲೀಸ್ ಕಡೆಗೂ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published by: Seema R
First published: November 25, 2020, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories