• Home
  • »
  • News
  • »
  • district
  • »
  • ಜೂನ್ 8 ರಿಂದ ಬಂಡೀಪುರ ಸಫಾರಿ ಆರಂಭ : ಪ್ರವಾಸಿಗರಿಗೆ ಸಿಗಲಿದೆ ವನ್ಯಜೀವಿಗಳ ದರ್ಶನ ಭಾಗ್ಯ

ಜೂನ್ 8 ರಿಂದ ಬಂಡೀಪುರ ಸಫಾರಿ ಆರಂಭ : ಪ್ರವಾಸಿಗರಿಗೆ ಸಿಗಲಿದೆ ವನ್ಯಜೀವಿಗಳ ದರ್ಶನ ಭಾಗ್ಯ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಬಂಡೀಪುರಕ್ಕೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಫಾರಿ ತೆರಳುವ ಮೊದಲೇ ಅವರಿಗೆ ಕೌಂಟರ್ ನಲ್ಲೇ ಸ್ಯಾನಿಟೈಸರ್ ನೀಡಲಾಗುವುದು

  • Share this:

ಚಾಮರಾಜನಗರ(ಜೂ.6): ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ವನ್ಯಜೀವಿ ಪ್ರಿಯರಿಗೂ ಒಂದು ಸಿಹಿ ಸುದ್ದಿ ಇದೆ. ಕಳೆದ 85 ದಿನಗಳಿಂದ ಬಂದ್ ಆಗಿರುವ ಬಂಡೀಪುರ ಸಫಾರಿಯು ಸಹ ಜೂನ್ 8 ರಿಂದ ಆರಂಭಗೊಳ್ಳಲಿದೆ. ಸಪಾರಿ ಆರಂಭಿಸುವ ಬಗ್ಗೆ ಈಗಾಗಲೇ ರಾಷ್ಟ್ರೀಯ ಹುಲಿ ಪ್ರಾಧಿಕಾರ ಹಾಗೂ ಕರ್ನಾಟಕ  ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು ಇದರ ಅನ್ವಯ ಸಫಾರಿಗೆ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ.


ಬಂಡೀಪುರಕ್ಕೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಫಾರಿ ತೆರಳುವ ಮೊದಲೇ ಅವರಿಗೆ ಕೌಂಟರ್ ನಲ್ಲೇ ಸ್ಯಾನಿಟೈಸರ್ ನೀಡಲಾಗುವುದು. ಸಾಮಾಜಿಕ ಅಂತರ ಕಾಪಾಡುವ ಹಿನ್ನಲೆಯಲ್ಲಿ   ಪ್ರತಿ ಸಫಾರಿ ವಾಹನದಲ್ಲು ಶೇಕಡಾ 50 ರಷ್ಟು ಸೀಟ್ ಗಳಲ್ಲಿ ಮಾತ್ರ ಪ್ರವಾಸಿಗರು  ತೆರಳುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂಂದ್ರ ನ್ಯೂಸ್ 18 ಕನ್ನಡಕ್ಕೆ ಮಾಹಿತಿ  ನೀಡಿದ್ದಾರೆ.


ಪ್ರತಿ ಟ್ರಿಪ್ ನಂತರ ಸಫಾರಿ ವಾಹನಗಳ ಟೈರ್ ಗಳನ್ನು ಸ್ಯಾನಿಟೈಸ್ ಮಾಡಲಾಗುವುದು, 10 ವರ್ಷದ ಮಕ್ಕಳಿಗೆ ಹಾಗು 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬಂಡೀಪುರದಲ್ಲಿ ಎಂಟು ಬಸ್ ಗಳು ಹಾಗು ಐದು ಜಿಪ್ಸಿ ವಾಹನಗಳಿದ್ದು ಬೆಳಿಗ್ಗೆ 6.30 ರಿಂದ 8.30 ಹಾಗು ಸಂಜೆ 3 ರಿಂದ 5.30 ರವರಗೆ ಸಪಾರಿ ಇರಲಿದೆ. ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಬಸ್ ನಲ್ಲಿ ಒಬ್ಬರಿಗೆ ಎಂದಿನಂತೆ 350 ರೂಪಾಯಿ ಹಾಗು ಒಂದು ಜಿಪ್ಸಿ ವಾಹನಕ್ಕೆ 3500 ರೂಪಾಯಿ ದರ ಇರಲಿದೆ ಎಂದು ಅವರು ತಿಳಿಸಿದ್ದಾರೆ.


ಈಗಾಗಲೇ ರಾಷ್ಟ್ರೀಯ ಹುಲಿ ಪ್ರಾಧಿಕಾರ ಹಾಗು ಕರ್ನಾಟಕ ಸರ್ಕಾರದಿಂದ ಮಾರ್ಗಸೂಚಿ ಬಂದಿದೆ, ಚೀಫ್  ವೈಲ್ಡ್ ಲೈಫ್ ವಾರ್ಡನ್ ಅವರ ಅನುಮತಿಗಾಗಿ ಕಾಯಲಾಗುತ್ತಿದೆ. ಇಂದು ಅಥವಾ ನಾಳೆ ಅನುಮತಿ ನೀಡುವ ನಿರೀಕ್ಷೆ ಇದ್ದು ಸೋಮವಾರದಿಂದ ಸಫಾರಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ


ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ 85 ದಿನಗಳಿಂದ ಸಫಾರಿ ಬಂದ್ ಮಾಡಲಾಗಿತ್ತು, ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಇದರಿಂದ ಸುಮಾರು ಮೂರುವರೆ ಕೋಟಿ  ರೂಪಾಯಿ ಆದಾಯ ನಷ್ಟವಾಗಿದೆ ಎನ್ನುತ್ತಾರೆ ಬಂಡೀಫುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ.


ಇದನ್ನೂ ಓದಿ :  ಮಹಾರಾಷ್ಟ್ರದಲ್ಲಿ ಮಳೆ ಆರಂಭ; ಆಲಮಟ್ಟಿ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಜೂನ್ ಮೊದಲ ವಾರದಲ್ಲಿ ಒಳಹರಿವು ದಾಖಲು


ಅಂತೂ ಇಂತು ಕಳೆದ 85 ದಿನಗಳಿಂದ ಯಾವುದೇ ಗೌಜು ಗದ್ದಲವಿಲ್ಲದೆ ಸ್ವಚ್ಚಂದವಾಗಿ ವಿಹರಿಸುತ್ತಿರುವ ವನ್ಯಜೀವಿಗಳ ದರ್ಶನ ಭಾಗ್ಯ ಪ್ರವಾಸಿಗರಿಗೆ ಜೂನ್ 8 ರಿಂದ  ಸಿಗಲಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು