Bandipur: ಹುಲಿಗಳ ತಾಣ ಬಂಡೀಪುರದಲ್ಲಿ ಹೇಳೋರಿಲ್ಲ, ಕೇಳೋರಿಲ್ಲ; ಕಾಡಿಗೆ ಬೆಂಕಿ ಬಿದ್ರೆ ಹೊಣೆ ಯಾರು?

ಈಗ ಬೇಸಿಗೆ ಆರಂಭವಾಗಿದ್ದು ಕಾಡಿಗೆ  ಬೆಂಕಿ ಬೀಳುವ ಅಪಾಯ ಸಾಧ್ಯತೆಗಳು ಇವೆ. ಬೆಂಕಿ ಬೀಳದಂತೆ ಬೆಂಕಿರೇಖೆ ನಿರ್ಮಾಣ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ (ಫೆ.03) ಹುಲಿಗಳ(Tiger ) ತಾಣ ಎನಿಸಿರುವ ಚಾಮರಾಜನಗರ(Chamarajanagr) ಜಿಲ್ಲೆಯ ಬಂಡೀಪುರದಲ್ಲಿ(Bandipur) ಮೇಟಿಯೇ ಇಲ್ಲದಂತಾಗಿದೆ. ಹೌದು ಕಳೆದ ಒಂದೂವರೆ  ತಿಂಗಳಿಂದ  ಕ್ಷೇತ್ರ ನಿರ್ದೇಶಕರ ಹುದ್ದೆಯೇ  ಖಾಲಿ  ಬಿದ್ದಿದ್ದು, ಪ್ರಮುಖ ನಿರ್ಣಯ ಕೈಗೊಳ್ಳುವ ಅಧಿಕಾರಿಯೇ ಇಲ್ಲದಂತಾಗಿದೆ. ಹಿಂದೆ ಕ್ಷೇತ್ರ ನಿರ್ದೇಶಕರಾಗಿದ್ದ ಎಸ್.ಆರ್. ನಟೇಶ್ ವರ್ಗಾವಣೆ ನಂತರ ಈ  ಹುದ್ದೆ ಖಾಲಿಯಾಗಿದ್ದು ಮೈಸೂರು ಹುಲಿ ಯೋಜನೆ ನಿರ್ದೇಶಕ ಕರಿಕಾಳನ್ ಅವರಿಗೆ  ಪ್ರಭಾರ ನೀಡಲಾಗಿದೆ.

ಹೇಳೋರಿಲ್ಲ, ಕೇಳೋರಿಲ್ಲ

ಇದಲ್ಲದೆ ಬಂಡೀಪುರ ಕೇಂದ್ರ ಸ್ಥಾನದಲ್ಲಿ  ಡಿಸೆಂಬರ್ ತಿಂಗಳಿಂದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಹಾಗೂ  2021 ಆಗಸ್ಟ್ ತಿಂಗಳಿಂದ ವಲಯ ಅರಣ್ಯಾಧಿಕಾರಿ ಹುದ್ದೆಗಳು ಸಹ  ಖಾಲಿಯಾಗಿವೆ. 170 ಕ್ಕೂ ಹೆಚ್ಚು ಹುಲಿಗಳು ಅಪಾರ ಸಂಖ್ಯೆಯ ಆನೆ, ಚಿರತೆ ಕರಡಿ, ಕಾಡೆಮ್ಮೆ, ಜಿಂಕೆ ಸೇರಿದಂತೆ ಅಪರೂಪದ ಜೀವವೈವಿಧ್ಯತೆಯ ತಾಣವಾಗಿರುವ ಬಂಡೀಪುರದಲ್ಲಿ ಈಗ  ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Mandya: ಆ ಕುಟುಂಬದಲ್ಲಿ ಬರೋಬ್ಬರಿ 31 ಸಾವು; ನಿಗೂಢ ಸಾವಿಗೆ ಕಾರಣವಾದ್ರೂ ಏನು?

ಕಾಡಿಗೆ ಬೆಂಕಿ ಬಿದ್ರೆ ಹೊಣೆ ಯಾರು?

ಈಗ ಬೇಸಿಗೆ ಆರಂಭವಾಗಿದ್ದು ಕಾಡಿಗೆ  ಬೆಂಕಿ ಬೀಳುವ ಅಪಾಯ ಸಾಧ್ಯತೆಗಳು ಇವೆ. ಬೆಂಕಿ ಬೀಳದಂತೆ ಬೆಂಕಿರೇಖೆ ನಿರ್ಮಾಣ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೋ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಇಲಾಖೆಯ ಹಿರಿಯ ಹಾಗೂ ತಮ್ಮ ಕೈಕೆಳಗಿನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿರುತ್ತದೆ. ಆದರೆ  ಕ್ಲಿಷ್ಟಕರ ಪರಿಸ್ಥಿತಿ ಯಲ್ಲಿ ತೀರ್ಮಾನ ಕೈಗೊಳ್ಳುವ ಪ್ರಮುಖ ಅಧಿಕಾರಿಗಳೇ ಇಲ್ಲದ ದುಸ್ಥಿತಿ ಬಂಡೀಪುರದಲ್ಲಿ ತಲೆ ತೋರಿದೆ.

ಈ ಹಿಂದೆಯೂ ಕಾಡಿಗೆ ಬೆಂಕಿ ಬಿದ್ದಿತ್ತು

ಈಗಾಗಲೇ 2013 ರಿಂದ 2019 ರವರೆಗೆ ಮೂರು ಬಾರಿ  ಬಂಡೀಪುರಕ್ಕೆ ಬೆಂಕಿ ಬಿದ್ದು 6500 ಹೆಕ್ಟೇರ್ ಅರಣ್ಯ ಸುಟ್ಟು ಭಸ್ಮವಾಗಿತ್ತು. ವನ್ಯಜೀವಿಗಳು ತೊಂದರೆಗೆ ಸಿಲುಕುವಂತಾಗಿತ್ತು.  2016 ರಲ್ಲಂತೂ ಸ್ವತಃ ಅರಣ್ಯ ಸಚಿವರೇ ಬಂಡೀಪುರಕ್ಕೆ ಧಾವಿಸಿ  ಬೆಂಕಿ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದರು.

ಮತ್ತೆ ಬೆಂಕಿ ಬಿದ್ದರೆ?

ಮತ್ತೆ ಅಂತಹ ಪರಿಸ್ಥಿತಿ ಘಟಿಸಿದರೆ? ಎಂಬ ಪ್ರಶ್ನೆ, ಆತಂಕ  ಪರಿಸರಪ್ರೇಮಿಗಳು, ಪರಿಸರವಾದಿಗಳಲ್ಲಿ  ಸಹಜವಾಗಿಯೇ  ಮನೆ ಮಾಡಿದೆ. ಬಂಡೀಪುರದಂತಹ ವಿಶ್ವ ವಿಖ್ಯಾತ ಹುಲಿ ಸಂರಕ್ಷಿತ ಪ್ರದೇಶದ ರಕ್ಷಣೆಗೆ ಸರ್ಕಾರ  ಅಸಡ್ಡೆ ತೋರದೆ, ಕೂಡಲೇ ಪೂರ್ಣಾವಧಿಯ ಕ್ಷೇತ್ರನಿರ್ದೇಶಕರನ್ನು ನೇಮಿಸಬೇಕು ಎನ್ನುತ್ತಾರೆ ಪರಿಸರವಾದಿ ಜೋಸೆಫ್ ಹೂವರ್.

ಸಿಎಂಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ

ನಾವು  ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸಲು ಅವರನ್ನು ವಿನಂತಿಸಿದ್ದೇವೆ.  ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Accident: ಹಾವಾಗಿ ಬಂದಿದ್ದ ಜವರಾಯ! ನಾಲೆಗೆ ಬಿದ್ದ ಕಾರ್ - ಹೆಂಡತಿ ಸಾವು, ಗಂಡ ಬಚಾವ್!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ತಮ್ಮ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿದ್ದಾರೆಯೇ ಹೊರತು ಬೇರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಕರ್ನಾಟಕ ಅರಣ್ಯ ಇಲಾಖೆ ಅನುಭವಿ, ಪ್ರಾಮಾಣಿಕ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡಿತ್ತು.  ಆದರೆ ಸರ್ಕಾರವು ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದೆ  ಎಂದು ಅವರು ಆರೋಪಿಸಿದ್ದಾರೆ.
Published by:Latha CG
First published: