HOME » NEWS » District » BANANA AND WATER MELON LOST DEMAND DUE TO LOCKDOWN IN PUTTURU TALUK RHHSN DKK

ತೋಟದಲ್ಲೆ ಕೊಳೆಯುತ್ತಿವೆ ಬೆಳೆಗಳು; ಬಾಳೆ‌, ಕಲ್ಲಂಗಡಿಗೆ ಈ‌ ಬಾರಿಯೂ ಕೊರೋನಾ ಕಂಠಕ!

20-25 ರೂಪಾಯಿ ಇದ್ದ ಬಾಳೆಯ ದರ 8-10 ರೂಪಾಯಿಗೆ ಕುಸಿದಿದ್ದು, ಕೊರೋನಾದಿಂದಾಗಿ ಖರೀದಿಸಲು ಸಹ ಯಾರು ಮುಂದೆ ಬರದೇ ಗಿಡದಲ್ಲಿಯೇ ಕೊಳೆಸುವ ಸ್ಥಿತಿ ಎದುರಾಗಿದೆ. ಇಷ್ಟು ವರ್ಷ ಬಾಳೆಯ ಪ್ಲಾಟಿಗೆ ಬಂದು ಟನ್‌ಗಟ್ಟಲೇ ಖರೀದಿಸುತ್ತಿದ್ದ ವ್ಯಾಪಾರಸ್ಥರು ಸಹ ತಟಸ್ಥರಾಗಿದ್ದಾರೆ. ಕಳೆದ ವರ್ಷ ಲಕ್ಷಾಂತರ ರೂಪಾಯಿ ನಷ್ಟದ ಹೊರೆ ಹೊತ್ತಿದ್ದ ರೈತಾಪಿ ಸಮುದಾಯಕ್ಕೆ ಈ ಬಾರಿಯೂ ಕೋವಿಡ್ ಬರೆ ಎಳೆದಿದೆ. 

news18-kannada
Updated:May 10, 2021, 6:57 PM IST
ತೋಟದಲ್ಲೆ ಕೊಳೆಯುತ್ತಿವೆ ಬೆಳೆಗಳು; ಬಾಳೆ‌, ಕಲ್ಲಂಗಡಿಗೆ ಈ‌ ಬಾರಿಯೂ ಕೊರೋನಾ ಕಂಠಕ!
ತೋಟದಲ್ಲಿಯೇ ಕೊಳೆಯುತ್ತಿರುವ ಕಲ್ಲಂಗಡಿ.
  • Share this:
ಕಾರವಾರ: ಕೃಷಿಯಲ್ಲೇ ಬದುಕು ಕಟ್ಟಿಕೊಂಡು ಬೆವರು ಸುರಿಸಿ ವಿವಿಧ ಬೆಳೆ ಬೆಳೆಯುವ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ರೈತರ ಪಾಲಿಗೆ ಕೊರೋನಾ ಶಾಪವಾಗಿ ಪರಿಣಮಿಸಿದ್ದು, ಕೃಷಿ ಉತ್ಪನ್ನಗಳನ್ನು ಖರೀದಿಸುವವರಿಲ್ಲದೇ ರೈತಾಪಿ ಸಮುದಾಯದ ತುತ್ತಿನ ಚೀಲದ ಮೇಲೆ ಲಾಕ್‌ಡೌನ್ ಬರೆ ಎಳೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕೃಷಿ ಕಣಜವಾಗಿರುವ ಬನವಾಸಿ ಹೋಬಳಿಯ ರೈತರಿಗೆ ಕಳೆದ ಒಂದು ವರ್ಷದಿಂದ ಕೊರೋನಾ ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಬನವಾಸಿ ಸುತ್ತಮುತ್ತಲಿನ ಭಾಗದಲ್ಲಿ ಭತ್ತ, ಅಡಕೆ, ಶುಂಠಿ ಜತೆಗೆ ಉಪಬೆಳೆಗಳಾಗಿ ಕಲ್ಲಂಗಡಿ, ಅನಾನಸ್, ಬಾಳೆ ಮತ್ತಿತರ ಬೆಳೆಗಳನ್ನು ಬೆಳೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕಳೆದ ವರ್ಷದಿಂದ ಎದುರಾದ ಕೋವಿಡ್ ಮಹಾಮಾರಿಯ ಲಾಕ್‌ಡೌನ್ ಕೃಷಿಕರ ಆದಾಯಕ್ಕೆ ಬರೆ ಎಳೆದಿದೆ.

ಕಲ್ಲಂಗಡಿ-ಅನಾನಸ್ ಖರೀದಿಸುವವರಿಲ್ಲ

ಬನವಾಸಿ ಹೋಬಳಿಯ ಭಾಶಿ, ಅಜ್ಜರಣಿ, ಮರಗುಂಡಿ, ತಿಗಣಿ, ಕಂತ್ರಾಜಿ, ಗುಡ್ನಾಪುರ, ಮಧುರವಳ್ಳಿ ಭಾಗದಲ್ಲಿ ಕಲ್ಲಂಗಡಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಏಪ್ರಿಲ್ ಹಾಗೂ ಮೇ ತಿಂಗಳು ಕಲ್ಲಂಗಡಿ ಹಣ್ಣಿನ ಸೀಸನ್ ಆಗಿದ್ದು, ಲಾಕ್‌ಡೌನ್ ಪರಿಣಾಮ ಇದನ್ನು ಖರೀದಿಸುವವರಿಲ್ಲದೇ ಬೆಳೆಗಾರ ಬೆವರು ಸುರಿಸಿ ದುಡಿದ ಬೆಳೆ ಕೊಳೆಯುವಂತಾಗಿದೆ. ದರ ಕೂಡ ಸಂಪೂರ್ಣ ಕುಸಿತಗೊಂಡು ರೈತರನ್ನು ಚಿಂತೆಗೀಡು ಮಾಡಿದೆ. ಕಲ್ಲಂಗಡಿಯ ಜತೆಗೆ ಅನಾನಸ್ ಹಾಗೂ ಬಾಳೆಯನ್ನು ಕೂಡ ಬನವಾಸಿಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕಳೆದ ವರ್ಷ ಮಾರ್ಚ್ ಅಂತ್ಯದಲ್ಲಿ ವಿಧಿಸಿದ ಲಾಕ್‌ಡೌನ್‌ನಿಂದ ಮಾರುಕಟ್ಟೆ ಸ್ಥಗಿತಗೊಂಡು ಹೊಲದಲ್ಲೇ ಕೊಳೆತು ತುತ್ತಿನ ಚೀಲದ ಮೇಲೆ ಬರೆ ಎಳದಿದ್ದ ಕೊರೋನಾ ಈ ಬಾರಿಯೂ ಕೂಡ ಕೃಷಿಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಬಾಳೆಗೂ ಮಾರುಕಟ್ಟೆಯಿಲ್ಲ

ಶಿರಸಿ ತಾಲೂಕಿನ ಪೂರ್ವಭಾಗ ಬನವಾಸಿ ಹೋಬಳಿಯಾದ್ಯಂತ ಅಡಕೆಯ ಜತೆಗೆ ಬಾಳೆಯನ್ನು ಕೂಡ ಹೇರಳವಾಗಿ ಬೆಳೆಯುತ್ತಿದ್ದಾರೆ. ಇಲ್ಲಿಯ ಅಂಡಗಿ, ಕಲಕರಡಿ, ಬಂಕನಾಳ, ಮಾಳಂಜಿ, ಕಂಡ್ರಾಜಿ, ಬದನಗೋಡ, ಹೆಬ್ಬತ್ತಿ, ರಾಮಾಪುರ ಮತ್ತಿತರ ಕಡೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಮಿಟ್ಲಿ,  ಪಚ್ಚಬಾಳೆಯನ್ನು ಉಪಬೆಳೆಯಾಗಿ ರೈತರು ಬೆಳೆಯುತ್ತಿದ್ದಾರೆ. 20-25 ರೂಪಾಯಿ ಇದ್ದ ಬಾಳೆಯ ದರ 8-10 ರೂಪಾಯಿಗೆ ಕುಸಿದಿದ್ದು, ಕೊರೋನಾದಿಂದಾಗಿ ಖರೀದಿಸಲು ಸಹ ಯಾರು ಮುಂದೆ ಬರದೇ ಗಿಡದಲ್ಲಿಯೇ ಕೊಳೆಸುವ ಸ್ಥಿತಿ ಎದುರಾಗಿದೆ. ಇಷ್ಟು ವರ್ಷ ಬಾಳೆಯ ಪ್ಲಾಟಿಗೆ ಬಂದು ಟನ್‌ಗಟ್ಟಲೇ ಖರೀದಿಸುತ್ತಿದ್ದ ವ್ಯಾಪಾರಸ್ಥರು ಸಹ ತಟಸ್ಥರಾಗಿದ್ದಾರೆ. ಕಳೆದ ವರ್ಷ ಲಕ್ಷಾಂತರ ರೂಪಾಯಿ ನಷ್ಟದ ಹೊರೆ ಹೊತ್ತಿದ್ದ ರೈತಾಪಿ ಸಮುದಾಯಕ್ಕೆ ಈ ಬಾರಿಯೂ ಕೋವಿಡ್ ಬರೆ ಎಳೆದಿದೆ.
Youtube Video

ಏನಂತಾರೆ ರೈತರು?ಭತ್ತ, ಅಡಕೆ ಜತೆಗೆ ಬಾಳೆ, ಅನಾನಸ್, ಕಲ್ಲಂಗಡಿಯನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದೇವೆ. ಕಲ್ಲಂಗಡಿ ಹಾಗೂ ಅನಾನಸ್ ಹಣ್ಣಾಗುವ ಸಮಯದಲ್ಲೇ ಲಾಕ್‌ಡೌನ್ ಜಾರಿಯಾಗಿ ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡು ಬೆಳೆದ ಬೆಳೆ ಕೊಳೆತು ಭೂಮಿ ಪಾಲಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿ ಸಾಲಕ್ಕೆ ತುತ್ತಾಗಿದ್ದ ರೈತರಿಗೆ ಈ ಬಾರಿಯೂ ಕೂಡ ಸೀಸನ್‌ನಲ್ಲೇ ವ್ಯಾಪಾರವಿಲ್ಲದೇ ವರ್ಷದ ಆದಾಯಕ್ಕೆ ಕುತ್ತು ಬಂದಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೃಷಿಕರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಅಂತಾರೆ ಬನವಾಸಿಯ ಪ್ರಗತಿಪರ ರೈತ ಸಂತೋಷ ಕಲಕರಡಿ.
Published by: HR Ramesh
First published: May 10, 2021, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories