• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೊರೋನಾ ಹೆಚ್ಚಳ; ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಯ ಪ್ರವಾಸಿಗರ ನಿಷೇಧಕ್ಕೆ ಸ್ಥಳೀಯರ ಒತ್ತಾಯ

ಕೊರೋನಾ ಹೆಚ್ಚಳ; ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಯ ಪ್ರವಾಸಿಗರ ನಿಷೇಧಕ್ಕೆ ಸ್ಥಳೀಯರ ಒತ್ತಾಯ

ಚಿಕ್ಕಮಗಳೂರು

ಚಿಕ್ಕಮಗಳೂರು

ಪರಿಸ್ಥಿತಿ ಹೀಗೆ ಇದ್ರೆ ಜಿಲ್ಲೆಗೆ ಬರೋ ಪ್ರವಾಸಿಗರೇ ಕಾಫಿನಾಡಿಗೆ ಮುಳ್ಳಾಗಬಹುದು ಅನ್ನೋದು ಸ್ಥಳೀಯರ ನಂಬಿಕೆ. ಹಾಗಾಗಿ, ಸ್ಥಳಿಯರೇ ಸರ್ಕಾರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಏನ್ ಮಾಡುತ್ತೋ ಕಾದು ನೋಡಬೇಕು.

  • Share this:

ಚಿಕ್ಕಮಗಳೂರು: ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಕೇಸ್ ಕಂಡು ಕಾಫಿನಾಡಿನ ಜನರು ಕಂಗಾಲಾಗಿದ್ದು, ಬೆಂಗಳೂರು, ಮಂಗಳೂರು, ಮೈಸೂರಿಗೆ ಬಂದಿರೋ ಸ್ಥಿತಿ ನಮಗೆ ಬೇಡ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರನ್ನು ನಿಷೇಧ ಮಾಡಿ ಎಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


ಪ್ರವಾಸಿಗರೇ ಕಾಫಿನಾಡಿನ ಬಂಡವಾಳ. ಆದರೆ ಇಂದು ಅದೇ ಪ್ರವಾಸಿಗರು ಕಾಫಿನಾಡಿಗೆ ಮುಳ್ಳಾಗ್ತಾರಾ ಎಂಬ ಆತಂಕ ಶುರುವಾಗಿದೆ. ಯಾಕಂದರೆ, ಈಗಾಗಲೇ ಕೊರೋನಾ ಎರಡನೇ ಅಲೆಗೆ ಕರ್ನಾಟಕ ಡೇಂಜರ್ ಜ್ಹೋನ್‍ನಲ್ಲಿದೆ. ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕೆಲ ಜಿಲ್ಲೆಗಳು ಕೊರೋನಾ ಹಾಟ್​ಸ್ಪಾಟ್​ಗಳಾಗಿವೆ. ನಮಗೆ ಆ ಸ್ಥಿತಿ ಬರಬಾರದು ಅಂತ ಕಾಫಿನಾಡಿನ ಜನರು ಈಗಲೇ ಎಚ್ಚರಿಕೆ ವಹಿಸುತ್ತಿದ್ದಾರೆ.  ಸರ್ಕಾರ ಹಾಗೂ ಜಿಲ್ಲಾಧಿಕಾರಿಗೆ ಪ್ರವಾಸಿಗರನ್ನು ಬ್ಯಾನ್ ಮಾಡಿ ಅಂತ ಆಗ್ರಹಿಸಿದ್ದಾರೆ. ಈಗಾಗಲೇ ಕೆಲವರು ಮನವಿ ಪತ್ರ ಕೂಡ ನೀಡಿದ್ದಾರೆ. ಮಳೆಗಾಲ ಆರಂಭವಾಗ್ತಿದೆ. ಇಲ್ಲೂ ಇತರೇ ಜಿಲ್ಲೆಗಳಂತಹಾ ಸ್ಥಿತಿ ನಿರ್ಮಾಣವಾದರೆ ನಿಯಂತ್ರಣ ಅಸಾಧ್ಯವಾಗುತ್ತಿದೆ. ಹಾಗಾಗಿ, ಜಿಲ್ಲಾಡಳಿತ ಕೂಡಲೇ 15 ದಿನದ ಮಟ್ಟಿಗಾದರೂ ಪ್ರವಾಸಿಗರನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಎಂತಹದ್ದೇ ಸ್ಥಿತಿ ಬಂದರೂ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.


ಈಗಾಗಲೇ ವೀಕ್ ಎಂಡ್‍ನಲ್ಲಿ ಕಾಫಿನಾಡಲ್ಲಿ ಪ್ರವಾಸಿಗರ ಸಂತೆ ನಡೆಯುತ್ತಿದೆ. ರಾಜ್ಯ-ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಕಾಫಿನಾಡಿಗೆ ಆಗಮಿಸುತ್ತಿದ್ದಾರೆ. ಬಂದವರು ಕೆಲವರು ಕೊರೋನಾ ರಿಪೋರ್ಟ್ ತರುತ್ತಿದ್ದಾರೆ. ಕೆಲವರು ತರುತ್ತಿಲ್ಲ. ಮುಳ್ಳಯ್ಯನಗಿರಿ ಭಾಗದಲ್ಲಿ ರ್ಯಾಪಿಂಡ್ ಟೆಸ್ಟ್ ಒಳಪಡದೇ ಆರೋಗ್ಯ ಸಿಬ್ಬಂದಿಗಳ ಜೊತೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಜಿಲ್ಲೆಗೆ ಬರ್ತಿರೋ ಟೂರಿಸ್ಟ್​ಗಳು ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಇಲ್ಲ. ಸಾಮಾಜಿಕ ಅಂತರ ಕೇಳೋದೇ ಬೇಡದಂತಹಾ ಸ್ಥಿತಿ ನಿರ್ಮಾಣವಾಗಿದೆ. ಹೋಂ ಸ್ಟೇ, ರೆಸಾರ್ಟ್, ಲಾಡ್ಜ್​ಗಳಲ್ಲೂ ವೀಕ್ ಎಂಡ್‍ನಲ್ಲಿ ತುಂಬಿರ್ತಾರೆ. ಜಿಲ್ಲೆಯಲ್ಲಿ 400 ಆ್ಯಕ್ಟೀವ್ ಕೇಸ್ ಇದ್ದು ದಿನ ಕಳೆದಂತೆ 30-40-50-60 ರಂತೆ ಬರುತ್ತಿದ್ದು ಜನ ಆತಂಕಕ್ಕೆ ಈಡಾಗಿದ್ದಾರೆ. ಹಾಗಾಗಿ, ಕೂಡಲೇ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ಹೇರುವಂತೆ ಸ್ಥಳಿಯರೇ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.


ಇದನ್ನು ಓದಿ: ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ 25 ಜನರ ಹೆಗಲೇರಿದ ಕೋವಿಡ್!


ಒಟ್ಟಾರೆ, ಕಾಫಿನಾಡಲ್ಲಿ ಈವರೆಗೆ 142 ಜನ ಸಾವನ್ನಪ್ಪಿದ್ದಾರೆ. 450 ಆ್ಯಕ್ಟೀವ್ ಕೇಸ್ ಇವೆ. ಈ ಮಧ್ಯೆಯೂ ಬೇರೆ ಜಿಲ್ಲೆಗೆ ಹೋಲಿಸಿದರೆ ಸದ್ಯಕ್ಕೆ ಕಾಫಿನಾಡು ಶಾಂತವಾಗಿದೆ. ಹೀಗೆ ಇರಬೇಕು ಅನ್ನೋದು ಸ್ಥಳೀಯರ ಆಸೆ. ಹಾಗಾಗಿ, ಪರಿಸ್ಥಿತಿ ಹೀಗೆ ಇದ್ರೆ ಜಿಲ್ಲೆಗೆ ಬರೋ ಪ್ರವಾಸಿಗರೇ ಕಾಫಿನಾಡಿಗೆ ಮುಳ್ಳಾಗಬಹುದು ಅನ್ನೋದು ಸ್ಥಳೀಯರ ನಂಬಿಕೆ. ಹಾಗಾಗಿ, ಸ್ಥಳಿಯರೇ ಸರ್ಕಾರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಏನ್ ಮಾಡುತ್ತೋ ಕಾದು ನೋಡಬೇಕು.


ರಾಜ್ಯದಲ್ಲಿ, ಅದರಲ್ಲೂ ರಾಜ್ಯ ರಾಜಧಾನಿಯಲ್ಲಿ ಆತಂಕಕಾರಿ ಮಟ್ಟದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುವ ಸೂಚನೆ ಇದೆ. ಎರಡನೇ ಅಲೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿ ತತ್ತರಿಸಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಇನ್ನೂ ಹೆಚ್ಚಿನ ಬಿಗಿಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯಗಳು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ತಜ್ಞರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಚರ್ಚಿಸಿದ್ದಾರೆ. ಈಗ ರಾಜ್ಯದಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಸದ್ಯದ ಮಟ್ಟಿಗೆ ಮುಂದುವರೆಸಿ, ಮುಂದಿನ ದಿನಗಳಲ್ಲಿ ಇನ್ನು ಕೆಲ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

top videos
    First published: