ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಿದ ಚನ್ನಪಟ್ಟಣದ ಬಾಲು ಪಬ್ಲಿಕ್ ಶಾಲೆ; ಮಾಸಿಕ ಶುಲ್ಕ ಮಾತ್ರ ಪಡೆಯಲು ನಿರ್ಧಾರ

2020-2021 ನೇ ಸಾಲಿನಲ್ಲಿ ಈ ಶಾಲೆಗೆ ದಾಖಲಾಗುವ ಯಾವ ಮಕ್ಕಳಿಗೂ ಮಾಸಿಕ ಶುಲ್ಕವನ್ನ ಹೊರತುಪಡಿಸಿ ದಾಖಲಾತಿ ಶುಲ್ಕ ಸೇರಿದಂತೆ ಬೇರ್ಯಾವ ಹಣ ಪಡೆಯಬಾರದೆಂದು ಬಾಲು ಪಬ್ಲಿಕ್ ಶಾಲೆಯ ಮಾಲೀಕರು ನಿರ್ಧಾರ ಮಾಡಿದ್ದಾರೆ.

ಬಾಲು ಪಬ್ಲಿಕ್ ಶಾಲೆ, ಚೆನ್ನಪಟ್ಟಣ

ಬಾಲು ಪಬ್ಲಿಕ್ ಶಾಲೆ, ಚೆನ್ನಪಟ್ಟಣ

  • Share this:
ರಾಮನಗರ: ವಿಶ್ವದಲ್ಲೇ ಕೊರೋನಾ ಅಟ್ಟಹಾಸಕ್ಕೆ ಜನ ನಲುಗಿದ್ದಾರೆ. ಎಷ್ಟೋ ಜನ ಕಡುಬಡವರು ಒಂದೊತ್ತಿನ ಊಟಕ್ಕೆ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರದಾಡುತ್ತಿದ್ದಾರೆ. ಆದರೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಾಲು ಪಬ್ಲಿಕ್ ಶಾಲೆಯವರು ಇಂತಹ ಸಂಕಷ್ಟದ ಸಮಯದಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.

1 ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿನ ಮಕ್ಕಳ ಸಂಖ್ಯೆ 850 - 900. ಶಿಕ್ಷಕರು ಸಹ 35 - 40 ಸಂಖ್ಯೆಯಲ್ಲಿ ಈ ಶಾಲೆಯಲ್ಲಿ ಕೆಲಸ ಮಾಡ್ತಿದ್ದಾರೆ. ಕೊರೋನಾದಿಂದಾಗಿ ಅದೆಷ್ಟೋ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದಕ್ಕೂ ಕಷ್ಟಪಡುತ್ತಿದ್ದಾರೆ. ಹಾಗಾಗಿ 2020-2021 ನೇ ಸಾಲಿನಲ್ಲಿ ಈ ಶಾಲೆಗೆ ದಾಖಲಾಗುವ ಯಾವ ಮಕ್ಕಳಿಗೂ ಮಾಸಿಕ ಶುಲ್ಕವನ್ನ ಹೊರತುಪಡಿಸಿ ದಾಖಲಾತಿ ಶುಲ್ಕ ಸೇರಿದಂತೆ ಬೇರ್ಯಾವ ಶುಲ್ಕವನ್ನ ಪಡೆಯಬಾರದೆಂದು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ಬಂಡಾಯ ಸಭೆ ಸರಿಯಲ್ಲ; ಬಿಎಸ್​ವೈ ಸರ್ಕಾರದಿಂದ ಒಳ್ಳೆಯ ಆಡಳಿತ: ಜಗದೀಶ್ ಶೆಟ್ಟರ್

ಶಾಲೆಯ ಮುಖ್ಯಸ್ಥರಾದ ಬಾಲುಸುಬ್ರಹ್ಮಣ್ಯಂ ನ್ಯೂಸ್18 ಕನ್ನಡ ವಾಹಿನಿ ಜೊತೆ ಮಾತನಾಡಿ, ಕೊರೋನಾ ಸಂಕಷ್ಟದಲ್ಲಿ ಪ್ರತಿಯೊಬ್ಬರಿಗೂ ತೊಂದರೆಯಾಗಿದೆ. ನಮ್ಮ ಶಾಲೆಯಲ್ಲಿ ಬಹುತೇಕ ಬಡಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಹಾಗಾಗಿ ಅವರಿಗೆ ಈ ಸಂದರ್ಭದಲ್ಲಿ ನಾವು ನೆರವಾದರೆ ನಮ್ಮ ಸಂಸ್ಥೆಗೂ ಗೌರವ ಬರುತ್ತದೆ. ಅದಕ್ಕಾಗಿ ಶಾಲೆಯ ಪೋಷಕರು ಹಾಗೂ ಮಕ್ಕಳ ಹಿತದೃಷ್ಟಿಯಿಂದಾಗಿ ನಾವು ಈ ನಿರ್ಧಾರ ಮಾಡಿದ್ದೇವೆಂದು ತಿಳಿಸಿದ್ದಾರೆ.

ದುಡ್ಡು ಸಂಪಾದನೆಯೊಂದೇ ಗುರಿಯಾಗಿರಿಸಿಕೊಳ್ಳುವ ಖಾಸಗಿ ಶಾಲೆಗಳ ಮಧ್ಯೆ ಬಾಲಸುಬ್ರಹ್ಮಣ್ಯಂ ಅವರಂತಹ ಶಾಲಾ ಮಾಲೀಕರು ವಿಭಿನ್ನವಾಗಿ ಕಾಣುತ್ತಾರೆ.

ವರದಿ: ಎ.ಟಿ. ವೆಂಕಟೇಶ್

First published: