ಬಾಳೆಪುಣೆ ಒಂಟಿ ಮಹಿಳೆ ಅತ್ಯಾಚಾರ-ಕೊಲೆ ಪ್ರಕರಣ; ಕಾಸರಗೋಡಿನ ವ್ಯಕ್ತಿ ಬಂಧನ

ಬಂಟ್ವಾಳ ತಾಲೂಕಿನ ಬಾಳೆಪುಣೆ ಗ್ರಾಮದ ಅವಿವಾಹಿತ ಒಂಟಿ ಮಹಿಳೆಯ ಮನೆಗೆ ನುಗ್ಗಿ ಹಣ ಮತ್ತು ಮಾನ ಎರಡನ್ನೂ ದೋಚಿ, ಆಕೆಯ ಪ್ರಾಣ ತೆಗೆದು ಹೋಗಿದ್ದ ಆರೋಪಿ ಆಶ್ರಫ್​ನನ್ನು ಬಂಟ್ವಾಳ ಪೊಲೀಸರು ಹಿಡಿದುಹಾಕಿದ್ದಾರೆ.

ಬಾಳೆಪುಣೆ ಒಂಟಿ ಮಹಿಳೆ ಅತ್ಯಾಚಾರ ಕೊಲೆ ಮಾಡಿದ ಆರೋಪಿ ಆಶ್ರಫ್

ಬಾಳೆಪುಣೆ ಒಂಟಿ ಮಹಿಳೆ ಅತ್ಯಾಚಾರ ಕೊಲೆ ಮಾಡಿದ ಆರೋಪಿ ಆಶ್ರಫ್

  • Share this:
ಮಂಗಳೂರು(ಅ. 22): ಕಳೆದ ತಿಂಗಳು ಇಡಿ ಮಂಗಳೂರನ್ನೇ ತಲ್ಲಣಗೊಳಿಸಿದ್ದ ಒಂಟಿ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಕಾಸರಗೋಡು ನಿವಾಸಿ ಹಾಗೂ ಕೂಲಿಯಾಳು 30 ವರ್ಷದ ಆರೋಪಿ ಆಶ್ರಫ್ ಎಂಬಾತನನ್ನು ಬಂಧಿಸಿದ್ದಾರೆ. ಬಾಳೆಪುಣಿ ಗ್ರಾಮದ ಅವಿವಾಹಿತ ಒಂಟಿ ಮಹಿಳೆಯ ಮನೆಯಿಂದ ಈತ ಕಳುವು ಮಾಡಿದ್ದೂ ಅಲ್ಲದೆ ಆಕೆಯ ಮಾನ ದೋಚಿ ಕೊಲೆಯನ್ನೂ ಮಾಡಿ ಹೋಗಿದ್ದ.

ಏನಿದು ಘಟನೆ?: ಅದು ಸೆಪ್ಟೆಂಬರ್ 24. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿ ವಾಸವಿದ್ದ 53 ವರ್ಷದ ಒಂಟಿ ಮಹಿಳೆ ಕುಸುಮಾ ತನ್ನ ಮನೆಯಲ್ಲಿ ನಗ್ನಸ್ಥಿತಿಯಲ್ಲಿ ಸತ್ತು ಬಿದ್ದಿದ್ದಳು. ಮದುವೆಯಾಗದೇ ಒಬ್ಬೊಂಟಿಯಾಗಿ ವಾಸವಿದ್ದರು. ಇವರನ್ನು ನೋಡಲು ಬಂದ ಗ್ರಾಮದ ಓರ್ವರಿಂದ ಇವರು ಕೊಲೆಯಾಗಿರುವ ವಿಚಾರ ಗೊತ್ತಾಗಿದೆ. ಅವರು ಪೊಲೀಸರಿಗೆ ವಿಚಾರ ತಿಳಿಸುತ್ತಾರೆ. ತತ್​ಕ್ಷಣ ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಿಮಿಸಿ, ಸ್ಥಳ ಪರಿಶೀಲನೆ ಮಾಡುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್​ ಸೇವಿಸಿ ವರದಕ್ಷಿಣೆ ಕಿರುಕುಳ; ಗಂಡನ ವಿರುದ್ಧ ದೂರು ನೀಡಿದ ಹೆಂಡತಿ

ಅಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಆ ಕೊಲೆ ನಡೆದು ಹೋಗಿರುತ್ತದೆ. ಅಷ್ಟಕ್ಕೂ ಕೊಲೆ ಮಾಡಿದ ವ್ಯಕ್ತಿ ಆ ಮಹಿಳೆಯ ಓಲೆಗಳು ಮತ್ತು ಮನೆಯಲ್ಲಿದ್ದ ನಗದನ್ನು ಕದ್ದು ಪರಾರಿಯಾಗಿರುತ್ತಾನೆ. ಇನ್ನು ಪೊಲೀಸರು ಮೃತ ಮಹಿಳೆ ಕುಸುಮಾರ ಮೃತದೇಹವನ್ನು ಪೋಸ್ಟ್ ಮಾರ್ಟ್ಂಗೆ ಕಳಿಹಿಸುತ್ತಾರೆ. ಆಗ ಒಂದು ಆಘಾತಕಾರಿ ವಿಚಾರ ಹೊರ ಬಂದಿತ್ತು. ಆದು ಕುಸುಮಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಅನ್ನೊದು ಗೊತ್ತಾಗುತ್ತದೆ. ಎಸಿಪಿ ರಂಜಿತ್ ಕುಮಾರ್ ನೇತೃತ್ವದಲ್ಲಿ ತಂಡವನ್ನ ರಚಿಸಿ ತನಿಖೆ ನಡೆಸಲಾಗುತ್ತದೆ.

ಇದನ್ನೂ ಓದಿ: ಕಟೀಲ್​ ಒಬ್ಬ ಕಾಡು ಮನುಷ್ಯ, ಸಂಘ ಪರಿವಾರದಲ್ಲಿ ಮಾನವಂತರಿದ್ದರೆ ಅವರಿ​ಗೆ ಬುದ್ಧಿಹೇಳಿ; ಸಿದ್ದರಾಮಯ್ಯ ಕಿಡಿ

ತನಿಖೆಯ ಜಾಡು ಹಿಡಿದು ಪೊಲೀಸರು ಹೊರಟಿದ್ದು ಕೇರಳಕ್ಕೆ. ಕಾಸರಗೋಡು ನಿವಾಸಿ 30 ವರ್ಷದ ಅಶ್ರಫ್ ಅನ್ನುವನನ್ನು ಬಂಧಿಸಿದ್ದಾರೆ. ಈತ ಕುಸುಮಾ ಮೇಲೆ ಮೃಗದಂತೆ ಎರಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೂ ಈ ಅಶ್ರಫ್ ಇದೇ ಕುಸುಮ ಅವರ ಮನೆಗೆ ಈ ಮೊದಲೇ ಕೆಲಸಕ್ಕೆ ಬಂದಿರುತ್ತಾನೆ. ತಿಂಗಳ ಹಿಂದೆ ಇವರ ಮನೆ ಬಾವಿಗೆ ಹೆಬ್ಬಾವು ಬಿದ್ದಿರುತ್ತದೆ. ಅದನ್ನು ತೆಗೆಯಲು ಬಂದಿದ್ದ ಈ ಅಶ್ರಫ್ ಈಕೆ ಒಂಟಿಯಾಗಿ ವಾಸವಿರುವ ವಿಚಾರವನ್ನು ತಿಳಿದುಕೊಂಡಿರುತ್ತಾನೆ. ಅಲ್ಲದೇ ಮನೆ ತುಂಬಾ ಅಡಿಕೆ ಬೆಳೆ ಇತ್ತು. ಇದ್ರಿಂದ ಈಕೆಯ ಬಳಿ ಲಕ್ಷಾಂತರ ರೂ ಹಣ ಮನೆಯಲ್ಲಿದೆ ಅಂತಾ ಯೋಚಿಸುತ್ತಾನೆ. ಬಳಿಕ ಸೆಪ್ಟಂಬರ್ 24 ರಂದು ಸ್ಕೆಚ್ ಹಾಕಿ ಮನೆಗೆ ನುಗ್ಗುತ್ತಾನೆ. ಕದಿಯೋಕೆ ಹೋದವನಿಗೆ ಸಿಕ್ಕಿದ್ದು 15 ಸಾವಿರ ರೂ ಹಣ ಮಾತ್ರ. ಆಕೆ ನೋಡಲು ಚೆನ್ನಾಗಿದ್ದಾಳೆ ಎಂದು ಅತ್ಯಾಚಾರ ಕೂಡ ಎಸಗುತ್ತಾನೆ. ಬಳಿಕ ಆಕೆಯನ್ನ ಸುಟ್ಟು ಹಾಕಲು ಯತ್ನಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್​ ಪಕ್ಷದ ವಿದೂಷಕ ಇದ್ದ ಹಾಗೆ; ಕಟೀಲ್ ವಿರುದ್ಧದ ಮಾಜಿ ಸಿಎಂ ಟ್ವೀಟ್​ಗೆ ಬಿಜೆಪಿ ತಿರುಗೇಟು

ಸದ್ಯ, ಈತನನ್ನು ಬಂಧಿಸಿರುವ ಮಂಗಳೂರು ನಗರ ಪೊಲೀಸರು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ. ಈತನ ಈ ದುಷ್ಕೃತ್ಯಕ್ಕೆ ಇಡೀ ಕರಾವಳಿಯೇ ತಲ್ಲಣಗೊಂಡಿದೆ. ತಾನಾಯ್ತು ತನ್ನ ಪಾಡಾಯ್ತು ಅಂತಾ ಇದ್ದ ಅಮಾಯಕ ಮಹಿಳೆಯನ್ನು ವಯಸ್ಸನ್ನು ನೋಡದೆ ಅತ್ಯಾಚಾರ ಮಾಡಿ ಕೊಂದು ಹಾಕಿದ್ದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ವರದಿ: ಕಿಶನ್ ಕುಮಾರ್
Published by:Vijayasarthy SN
First published: