HOME » NEWS » District » BAGALKOTE LATEST LOVERS DAY NEWS RBK MAK

ಬಾಗಲಕೋಟೆ; ಪ್ರೇಮಿಗಳ ದಿನದಂದೇ ಪ್ರೇಯಸಿಗಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ ಪ್ರೀಯಕರ!

ಶಾಲಾ ದಿನಗಳಲ್ಲಿ ಖೋ ಖೋ ಆಟವಾಡುತ್ತಿದ್ದಾಗ  ಶಂಭು ಹಾಗೂ ಪೂಜಾ ಮಧ್ಯೆ ಬಾಲ್ಯದಲ್ಲೇ ಪ್ರೇಮಾಂಕುರವಾಗಿದೆ. ಸಣ್ಣವರಾದ ಹಿನ್ನೆಲೆಯಲ್ಲಿ ಇಬ್ಬರು ಓದಿನತ್ತ ಗಮನಹರಿಸಿದ್ದಾರೆ. ಪೂಜಾ ಬಿಕಾಂ ಓದುತ್ತಿದ್ದರೆ, ಶಂಭು ಐಟಿಐ ಓದುತ್ತಿದ್ದಾನೆ. ಸದ್ಯ ಶಂಭುವಿಗೆ 21ವರ್ಷ, ಪೂಜಾಗೆ 18ವರ್ಷ ತುಂಬಿದೆ.

news18-kannada
Updated:February 14, 2021, 7:37 PM IST
ಬಾಗಲಕೋಟೆ; ಪ್ರೇಮಿಗಳ ದಿನದಂದೇ ಪ್ರೇಯಸಿಗಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ ಪ್ರೀಯಕರ!
ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಪ್ರೇಮಿ.
  • Share this:
ಬಾಗಲಕೋಟೆ (ಫೆಬ್ರವರಿ 14): ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳು ಸೇರಿ ತಮಿಗಿಷ್ಟವಾದ ಜಾಗದಲ್ಲಿ ಸುತ್ತಾಡಿ, ಶುಭಾಶಯ ತಿಳಿಸಿ, ಪಾರ್ಟಿ ಮಾಡಿ ಮಾಡುತ್ತಾರೆ. ಆದರೆ ಬಾಗಲಕೋಟೆಯಲ್ಲೊಬ್ಬ ಪ್ರಿಯಕರ ತನ್ನ ಪ್ರೇಯಸಿಯನ್ನ ತನಗೆ ಕೊಡಿಸುವಂತೆ ಆಗ್ರಹಿಸಿ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾನೆ. ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಯುವಕ ಶಂಭು ಎಂಬಾತ ಕಳೆದ 8 ವರ್ಷಗಳಿಂದ ಅದೇ ಊರಿನ ಪೂಜಾ ಎಂಬುವವಳನ್ನ ಪ್ರೀತಿಸುತ್ತಿದ್ದಾನೆ.  5ನೇ ತರಗತಿಯಲ್ಲಿ ಓದುತ್ತಿದ್ದಾಗ. ಖೋ ಖೋ ಆಟವಾಡುತ್ತಿದ್ದಾಗ  ಶಂಭು ಹಾಗೂ ಪೂಜಾ ಮಧ್ಯೆ ಬಾಲ್ಯದಲ್ಲೇ ಪ್ರೇಮಾಂಕುರವಾಗಿದೆ. ಸಣ್ಣವರಾದ ಹಿನ್ನೆಲೆಯಲ್ಲಿ ಇಬ್ಬರು ಓದಿನತ್ತ ಗಮನಹರಿಸಿದ್ದಾರೆ. ಪೂಜಾ ಬಿಕಾಂ ಓದುತ್ತಿದ್ದರೆ, ಶಂಭು ಐಟಿಐ ಓದುತ್ತಿದ್ದಾನೆ. ಸದ್ಯ ಶಂಭುವಿಗೆ 21ವರ್ಷ, ಪೂಜಾಗೆ 18ವರ್ಷ ತುಂಬಿದೆ.

ಇವುಗಳ  ಮಧ್ಯೆ ಇವರಿಬ್ಬರ ಪ್ರೀತಿ ವಿಚಾರ ಪೋಷಕರಿಗೆ ಗೊತ್ತಾಗಿದೆ. ಇವರಿಬ್ಬರ ಜಾತಿಗಳು ಬೇರೆ ಬೇರೆಯಾಗಿದ್ದು. ಇಬ್ಬರ ಮನೆಯಿಂದಲೂ ವಿರೋಧ ವ್ಯಕ್ತವಾಗುತ್ತಿದೆಯಂತೆ. ಈ ಮಧ್ಯೆ ಶಂಭುನ ಮನೆಯವರು ಸಹ ಈ ಮದುವೆ ಬೇಡವೆಂದು ಹೇಳಿ ಆತನಿಗೆ ವಿರೋಧಿಸುತ್ತಿದ್ದಾರೆ. ಫೆ,10ರಂದು  ಪೂಜಾ ,ಶಂಭು  ರಿಜಿಸ್ಟರ್ ಮದುವೆಯಾಗಲೆಂದು ಮುಧೋಳಕ್ಕೆ ಬಂದಿದ್ದಾರೆ.ಈ ವಿಷಯ ಪೋಷಕರಿಗೆ ತಿಳಿದು, ಪೂಜಾ ಕುಟುಂಬಸ್ಥರು ಕಾರು ತಂದು ನನಗೆ ಹಲ್ಲೆ ಮಾಡಿ, ಪೂಜಾಳನ್ನು ಕರೆದುಕೊಂಡು ಹೋಗಿದ್ದರೆಂದು ನೊಂದ ಪ್ರೇಮಿ ಶಂಭು ಆರೋಪಿಸಿದ್ದಾನೆ.

ಇವರಿಬ್ಬರು ಸುತ್ತಾಡದ ಜಾಗವೇ ಇಲ್ಲಂತೆ, ಪೂಜಾ ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ಇವರಿಬ್ಬರು ಪ್ರೀತಿ ಪೂಜಾ ಹಂಚಿಕೊಂಡ ವಿಡಿಯೋದೊಂದಿಗೆ ತನ್ನ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾನೆ. ಪೂಜಾ ನಮ್ಮಿಬ್ಬರ ಪ್ರೀತಿಗೆ ಜಾತಿ ಅಡ್ಡಗೋಡೆಯಾಗಿದೆ. ನಮಗೇನಾದರೂ ಆದರೆ ಅದಕ್ಕೆ ಪೋಷಕರೇ ಕಾರಣ ಎಂದಿದ್ದಾಳೆ . ಈಚೆಗೆ ಬರ್ತಡೇ , ಚಾಕಲೇಟ್ ಡೇ ದಿನ ಆಕೆಯನ್ನ ಕರೆಯಿಸಿ ಚಾಕಲೇಟ್ ನೀಡಿ ಇಬ್ಬರು ಮದುವೆಯಾಗಲು ನಿರ್ಧರಿಸಿ ಬೇರೆಡೆ ತೆರಳಲು ನಿರ್ಧರಿಸಿದ್ದಾರೆ.

ಈ ವೇಳೆ ಇದು ಮನೆಯವರಿಗೆ ಗೊತ್ತಾಗಿ ಮರಳಿ ಯುವತಿ ಪೂಜಾಳನ್ನ ಇವನಿಂದ ಬೇರ್ಪಡಿಸಿ ಕರೆದೊಯ್ದಿದ್ದಾರಂತೆ. ಸಾಲದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್​ ಸಹ ಆಗಿದ್ದಾನೆ. ಇಂದು ಬಾಗಲಕೋಟೆ ಜಿಲ್ಲಾ ಎಸ್ಪಿ ಕಚೇರಿಗೆ ಆಗಮಿಸಿದ್ದ ಶಂಭು, ಮಾಧ್ಯಮಗಳೊಂದಿಗೆ ಮಾತನಾಡಿ, "ನನಗೆ ಈಗ ನನ್ನ ಪ್ರೇಯಸಿ ಪೂಜಾಳನ್ನ ಮದುವೆಯಾಗುವಂತೆ ಮಾಡಿಕೊಡಿ, ನಾವು 8 ವರ್ಷದಿಂದ ಪ್ರೀತಿಸುತ್ತಿದ್ದೇವೆ. ಇಂದು ಎಲ್ಲೆಡೆ ವ್ಯಾಲೆಂಟೈನ್ಸ್ ಡೇ ಇರುವ ಕಾರಣ ಎಲ್ಲ ಪ್ರೇಮಿಗಳು ಸಂಭ್ರಮದಲ್ಲಿದ್ದಾರೆ. ಆದ್ರೆ ನಾನಿಂದ ನನ್ನ ಪ್ರೇಯಿಸಿಗಾಗಿ ಅಲೆದಾಡುವಂತಾಗಿದ್ದು, ದಯಮಾಡಿ ನನ್ನ ಪ್ರೇಯಸಿ ನನಗೆ ಸಿಗುವಂತೆ ಮಾಡಿ. ಪ್ರೀತಿಗೆ ಜಾತಿ ಅಡ್ಡಿ ಬರಬಾರದು, ಎಲ್ಲರ ಮೈಯಲ್ಲಿ ಹರಿಯುವ ಕೆಂಪು ರಕ್ತ.  ಅವಳಿಲ್ಲದೇ ನಾನು ಬದುಕುವುದು ಕಷ್ಟ" ಎಂದು ಕಣ್ಣೀರಿಟ್ಟಿದ್ದಾನೆ.

ಇದನ್ನೂ ಓದಿ: Covid Vaccine: ನಾಳೆಯಿಂದ ಎರಡನೇ ಸುತ್ತಿನ ಕೊರೋನಾ ಲಸಿಕೆ ಅಭಿಯಾನ: ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿಗೆ ಎರಡನೇ ಡೋಸ್

ನನಗೆ ಪೂಜಾ ಬೇಕೆಂದು ಪೊಲೀಸ್ ಕಚೇರಿಗೆ ಬಂದಿದ್ದೇನೆ ಎನ್ನುತ್ತಾನೆ ಶಂಭು. ಈ ಮಧ್ಯೆ ಕೆಲವು ಸಂಘಟನೆಗಳು ಈತನಿಗೆ ಬೆಂಬಲಕ್ಕೆ ನಿಂತಿದ್ದು, ಯುವತಿಯ ಪೋಷಕರಲ್ಲಿ ಮನವಿ ಮಾಡಿ ಪ್ರೇಮಿಗಳಿಬ್ಬರು ಒಂದಾಗುವಂತೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
Youtube Video
ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ಪ್ರೇಮಿಯೊಬ್ಬ ಪ್ರೇಮಿಗಳ ದಿನದಂದು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪ್ರೇಯಸಿ ಬೇಕೆಂದು ಬಂದಿದ್ದು ವಿಪರ್ಯಾಸ. ಏನು ಅರಿಯದ ವಯಸ್ಸಿನಲ್ಲಿ ಪ್ರೀತಿ ಹುಟ್ಟಿ, ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದವರು ಪ್ರೀತಿ ಮಾಯೆಯಲ್ಲಿ ಸಿಲುಕಿ ಜೀವಕ್ಕೆ ಹಾನಿಮಾಡಿಕೊಳ್ಳದೇ ನೊಂದ ಪ್ರೇಮಿಗಳು  ಬದುಕಿ ಬಾಳಿ ತೋರಿಸಬೇಕಿದೆ.
Published by: MAshok Kumar
First published: February 14, 2021, 7:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories