ಇಂದಿನಿಂದ ರಾಜ್ಯಾದ್ಯಂತ ಬಾರ್ ಅಂಡ್‌ ರೆಸ್ಟೋರೆಂಟ್ ಓಪನ್ ; ಬಾಗಲಕೋಟೆಯಲ್ಲಿ ಮಾತ್ರ ವಿಘ್ನ ಯಾಕೆ ಗೊತ್ತಾ..?

ಸರ್ಕಾರ, ಜಿಲ್ಲಾಡಳಿತದ ಆದೇಶದಂತೆ ಇಂದು ಬಾಗಲಕೋಟೆಯಲ್ಲಿ 11ನೇ ದಿನದ ಗಣೇಶ್ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಆಗಿವೆ.

news18-kannada
Updated:September 1, 2020, 5:55 PM IST
ಇಂದಿನಿಂದ ರಾಜ್ಯಾದ್ಯಂತ ಬಾರ್ ಅಂಡ್‌ ರೆಸ್ಟೋರೆಂಟ್ ಓಪನ್ ; ಬಾಗಲಕೋಟೆಯಲ್ಲಿ ಮಾತ್ರ ವಿಘ್ನ ಯಾಕೆ ಗೊತ್ತಾ..?
ಬಂದ್​ ಇರುವ ಬಾರ್ ಅಂಡ ರೆಸ್ಟೋರೆಂಟ್
  • Share this:
ಬಾಗಲಕೋಟೆ(ಸೆಪ್ಟೆಂಬರ್​. 01): ರಾಜ್ಯಾದ್ಯಂತ ಇಂದಿನಿಂದ ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಗಳು ಆರಂಭವಾಗಿವೆ. ಕೊರೋನಾ ಲಾಕ್ ಡೌನ್ ದಿಂದಾಗಿ ಸುಮಾರು 6 ತಿಂಗಳಿಂದ ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಗಳಿಗೆ ಬೀಗ ಬಿದ್ದಿತ್ತು. ಇದೀಗ ಮತ್ತೆ ರೀ ಓಪನ್ ಆಗಿದ್ರೆ. ಬಾಗಲಕೋಟೆಯಲ್ಲಿಂದು ಬಾರ್ ರೆಸ್ಟೋರೆಂಟ್ ಓಪನ್ ಭಾಗ್ಯ ಸಿಕ್ಕಿಲ್ಲ. 11ನೇ ದಿನದ ಗಣೇಶ ವಿಸರ್ಜನೆ ಹಿನ್ನೆಲೆ ಬಾಗಲಕೋಟೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ 6 ತಿಂಗಳ ಬಳಿಕ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಕ್ಕೆ ಸಿಕ್ಕಿದ್ದ ಭಾಗ್ಯಕ್ಕೆ ವಿಘ್ನ ಕವಿದಿದೆ.

ಬಾಗಲಕೋಟೆ ನಗರದಲ್ಲಿ ಅಂದಾಜು 18 ಬಾರ್ ಅಂಡ್ ರೆಸ್ಟೋರೆಂಟ್ ಗಳಿವೆ. ದೇಶದಲ್ಲಿ 4ನೇ ಹಂತದ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 1 ರಿಂದ ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಗಳ ತೆರೆಯಲು ಕೆಲವೊಂದು ನಿಯಮಗಳನ್ನು ವಿಧಿಸಿ  ಅವಕಾಶ ಕಲ್ಪಿಸಿದೆ. ಮೊದಲನೇ ದಿನವೇ ಬಾಗಲಕೋಟೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭ ಆಗದಿರುವುದಕ್ಕೆ ಮದ್ಯ ಪ್ರಿಯರು, ಮಾಲೀಕರಿಗೆ ಶಾಕ್ ಆಗಿದೆ.

ಬಾಗಲಕೋಟೆಯಲ್ಲಿ ಬಿಕೋ ಎನ್ನುತ್ತಿರುವ ಬಾರ್ ರೆಸ್ಟೋರೆಂಟ್..

ಬಾಗಲಕೋಟೆ ನಗರ, ವಿದ್ಯಾಗಿರಿ, ನವನಗರದಲ್ಲಿರುವ 18 ಬಾರ್ ಅಂಡ್ ರೆಸ್ಟೋರೆಂಟ್ ಗಳು ಬಂದ್ ಆಗಿದ್ದು, ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. 6ತಿಂಗಳಿಂದ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ ಹಿನ್ನೆಲೆ, ಟೇಬಲ್ ಗಳು ಧೂಳುಮಯವಾಗಿವೆ. ಇನ್ನು ಆರಂಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಾಗ, ಕೇವಲ ಪಾರ್ಸಲ್ ಗೆ ಅವಕಾಶ ಇತ್ತು. ಇದರಿಂದ ಮದ್ಯ ಪ್ರೀಯರು ಎಣ್ಣೆ ತೆಗೆದುಕೊಂಡು ಹೋಗಿ ಕುಡಿಯಲು ಹರಸಾಹಸಪಡುವಂತಾಗಿತ್ತು.

ಇದೀಗ ರಾಜ್ಯಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಓಪನ್ ಆಗಿ ಮದ್ಯ ಪ್ರೀಯರು ಕೆಲವೆಡೆ ಫುಲ್ ಖುಷಿ ಆಗಿದ್ದಾರೆ. ಊಟ ತಗೊಂಡ್ರೆ ಮಾತ್ರ ಎಣ್ಣೆ ಸಿಗುತ್ತೆ ಎನ್ನುವ ನಿಯಮ ಮಾತ್ರ ಮದ್ಯಪ್ರೀಯರಿಗೆ ಕೊಂಚ ನಿರಾಸೆ ತಂದಿದೆ. ಇನ್ನು ಬಾಗಲಕೋಟೆ ನಗರದಲ್ಲಿ ಮಾತ್ರ ಬಾರ್ ಅಂಡ್ ರೆಸ್ಟೋರೆಂಟ್ ಆರು ತಿಂಗಳ ಬಳಿಕ ಆರಂಭದ ಮೊದಲದ ದಿನಕ್ಕೆ ವಿಘ್ನದಿಂದಾಗಿ ಮದ್ಯ ಪ್ರಿಯರಿಗೆ ನಿರಾಸೆ ಮೂಡಿದೆ. ನಾಳೆ ಬಾಗಲಕೋಟೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಬಾಗಿಲು ತೆರೆಯಲಿವೆ. ಸರ್ಕಾರ, ಜಿಲ್ಲಾಡಳಿತದ ಆದೇಶದಂತೆ ಇಂದು ಬಾಗಲಕೋಟೆಯಲ್ಲಿ 11ನೇ ದಿನದ ಗಣೇಶ್ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಆಗಿವೆ.

ಅನ್ ಲಾಕ್ 4.0 ದಂತೆ ರಾಜ್ಯಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಓಪನ್ ಆಗಿವೆ. ಆದರೆ ಅನಿವಾರ್ಯ, ನಿಯಮ ಪಾಲಿಸಬೇಕಲ್ಲ. ಇವತ್ತು ಬಂದ್ ಮಾಡಿದ್ದೇವೆ. ನಾಳೆಯಿಂದ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಆಗಲಿವೆ ಎನ್ನುತ್ತಾರೆ ಬಾಗಲಕೋಟೆ ಮದ್ಯ ಮಾರಾಟ ಸಂಘದ ಅಧ್ಯಕ್ಷ ನಿಂಗನಗೌಡ ಪಾಟೀಲ್.

ಇದನ್ನೂ ಓದಿ : ಸಂಗೊಳ್ಳಿ ರಾಯಣ್ಣನ ಕಟೌಟ್​​​ಗೆ ಅವಮಾನ ಮಾಡಿದ ದುಷ್ಕರ್ಮಿಗಳು : ಕಟೌಟ್​​ಗೆ ಕ್ಷೀರಾಭಿಷೇಕ ಮಾಡಿ ಗೌರವಿಸಿದ ಪಿಎಸ್ಐಇನ್ನು ಆರು ತಿಂಗಳ ಬಳಿಕ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕುಳಿತು ಎಣ್ಣೆ ಹೊಡೆಯುವ ಮೊದಲ ದಿನದ ಅವಕಾಶ ತಪ್ಪಿದೆ. ಸ್ವಲ್ಪ ಬೇಸರವಾಗಿದೆ, ನಾಳೆಯಿಂದ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಆಗುತ್ತೆ, ಎಣ್ಣೆ ಹೊಡೆದು ಖುಷಿ ಪಡುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಮದ್ಯ ಪ್ರೀಯ ಹೇಳುತ್ತಾರೆ.

ಒಟ್ಟಿನಲ್ಲಿ ರಾಜ್ಯಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್ ಪಬ್ ಓಪನ್ ಗೆ ಅವಕಾಶ ಸಿಕ್ಕ ಹಿನ್ನೆಲೆ ಗ್ರಾಹಕ, ಮಾಲೀಕರಿಗೆ ಸಂತಸ ತಂದಿದೆ. ಈ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಆದಾಯ ಬರಲಿದ್ದು, ರಾಜ್ಯದ ಬೊಕ್ಕಸ ಚೇತರಿಕೆ ನಿರೀಕ್ಷೆ ಹೊಂದಲಾಗಿದೆ.
Published by: G Hareeshkumar
First published: September 1, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading