ಮಳೆಯ ಮಧ್ಯೆಯೂ ಕರ್ತವ್ಯ ನಿಷ್ಠೆ ತೋರಿದ ಬಾಗಲಕೋಟೆ ಪೊಲೀಸ್ ಕಾನ್ಸ್​ಟೇಬಲ್; ಡಿಸಿಎಂ ಕಾರಜೋಳರಿಂದ ಪ್ರಶಂಸೆ

ಕೊಡೆ ಆಶ್ರಯದಲ್ಲಿ ಮಳೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡ ಗ್ರಾಮದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಅದನ್ನು ಹರಿಬಿಟ್ಟಿದ್ದಾರೆ. ಮಳೆಯ ಮಧ್ಯೆಯೂ ಪೊಲೀಸ್ ಕಾನ್​ಸ್ಟೇಬಲ್ ಕರ್ತವ್ಯ ನಿಷ್ಠೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮಳೆಯ ನಡುವೆಯೂ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್​ಟೇಬಲ್.

ಮಳೆಯ ನಡುವೆಯೂ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್​ಟೇಬಲ್.

  • Share this:
ಬಾಗಲಕೋಟೆ (ಜು,09): ಕೊರೋನಾ ವೈರಸ್ ಎಲ್ಲೆಡೆ ವ್ಯಾಪಿಸಿದೆ. ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ವೈದ್ಯರು, ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಮಳೆಯ ಮಧ್ಯೆಯೂ ಡಿಎಆರ್ ಪೊಲೀಸ್ ಕಾನ್ಸ್​ಟೇಬಲ್ ಒಬ್ಬರು ಕರ್ತವ್ಯ ನಿರ್ವಹಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸ್ ಕಾನ್ಸ್​ಟೇಬಲ್​ಗೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಅವರು ಕರ್ತವ್ಯನಿಷ್ಠೆ ಮೆರೆದ ಕಲಾದಗಿ ಪೊಲೀಸ್ ಠಾಣೆಯ ಡಿಎಆರ್ ಕಾನ್ಸ್​ಟೇಬಕ್ ಮಾರುತಿ ಭಜಂತ್ರಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ಬರೆದಿದ್ದಾರೆ. ಇನ್ನು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ ತಮ್ಮ ಕಚೇರಿಗೆ ಭಜಂತ್ರಿ ಅವರನ್ನು ಕರೆಯಿಸಿ ಅಭಿನಂದಿಸಿ, ಮತ್ತಷ್ಟು ಹುರುಪು ತುಂಬಿದ್ದಾರೆ.

ಬಾಗಲಕೋಟೆ ಸೇರಿದಂತೆ ರಾಜ್ಯದಲ್ಲಿ ಕೊರೋನಾ ಮಹಾಮಾರಿ ಪೊಲೀಸ್, ವೈದ್ಯರನ್ನು ಬಿಡುತ್ತಿಲ್ಲ. ಹೀಗಾಗಿ ಕೊರೋನಾ ವಾರಿಯರ್ಸ್ ಕರ್ತವ್ಯದ ಮಧ್ಯೆಯೂ ಆತಂಕ ಪಡುವಂತಾಗಿದೆ. ಆದರೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಜೂನ್ 13ರಂದು ಮದುವೆಯ ಆರತಕ್ಷತೆ ನಡೆದ ಹಿನ್ನೆಲೆಯಲ್ಲಿ ನವವಿವಾಹಿತ, ಹಾಗೂ ಹಾವೇರಿ ಅಬಕಾರಿ ಇಲಾಖೆ ಸಬ್ ಇನ್ಸ್ಪೆಕ್ಟರ್ ಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆತನಿಂದ ಗ್ರಾಮದಲ್ಲಿ 70 ಮಂದಿಗೆ ಸೋಂಕು ತಗುಲಿದೆ. ಕಲಾದಗಿ ಗ್ರಾಮ ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಿನ್ನೆ ಕರ್ತವ್ಯದಲ್ಲಿ ಮಾರುತಿ ಭಜಂತ್ರಿ ಇದ್ದಾಗ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದೆ. ಆಗ ಕೊಡೆ(ಛತ್ರಿ) ಹಿಡಿದು ಭಜಂತ್ರಿ ಅವರು ಕಾರ್ಯ ನಿರ್ವಹಿಸಿ, ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಗೋವಿಂದ ಕಾರಜೋಳ ಅವರು ಬರೆದಿರುವ ಪ್ರಶಂಸ ಪತ್ರ.


ಇದನ್ನು ಓದಿ: ಅಬಕಾರಿ ಸಚಿವರ ತವರಲ್ಲಿ ನಿಲ್ಲದ ಲಿಕ್ಕರ್ ಮಾಫಿಯಾ; ಎಂಆರ್​ಪಿ ಮಳಿಗೆಗಳಲ್ಲೂ ನಡೆಯುತ್ತಿದೆ ಲೂಟಿ

ಕೊಡೆ ಆಶ್ರಯದಲ್ಲಿ ಮಳೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡ ಗ್ರಾಮದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಅದನ್ನು ಹರಿಬಿಟ್ಟಿದ್ದಾರೆ. ಮಳೆಯ ಮಧ್ಯೆಯೂ ಪೊಲೀಸ್ ಕಾನ್​ಸ್ಟೇಬಲ್ ಕರ್ತವ್ಯ ನಿಷ್ಠೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಕಾನ್ಸ್​ಟೇಬಲ್ ಕರ್ತವ್ಯ ನಿಷ್ಠೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಪೊಲೀಸ್ ಕಾನ್ಸ್​ಟೇಬಲ್ ಕರ್ತವ್ಯ ನಿಷ್ಠೆಗೆ ಶಹಬ್ಬಾಸ್ ಹೇಳಿದ್ದು, ಪೊಲೀಸ್ ಸಿಬ್ಬಂದಿಯಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ಹೆಚ್ಚಸಿದೆ.
Published by:HR Ramesh
First published: