ಮದುವೆ, ಸೀಮಂತ ಕಾರ್ಯಕ್ರಮಗಳನ್ನ ನಿಷೇಧಿಸಿದ ಬಾಗಲಕೋಟೆ ಜಿಲ್ಲಾಡಳಿತ

ಬಾಗಲಕೋಟೆ ಜಿಲ್ಲೆಯಲ್ಲಿ ಬಹಳಷ್ಟು ಕೊರೋನಾ ಪ್ರಕರಣಗಳಿಗೆ ವಿವಾಹ ಸಮಾರಂಭಗಳೇ ಹಾಟ್ಸ್ಪಾಟ್ ಆಗುತ್ತಿವೆ ಎಂದು ನ್ಯೂಸ್ 18 ವಾಹಿನಿ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ, ಡಿಸಿಎಂ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ಅವರ ಸೂಚನೆ ಮೇರಿಗೆ ಜಿಲ್ಲಾಧಿಕಾರಿ ಮದುವೆ ಹಾಗೂ ಸೀಮಂತ ಕಾರ್ಯಕ್ರಮಗಳನ್ನ ನಿಷೇಧಿಸಿ ಆದೇಶಿಸಿದ್ದಾರೆ.

news18-kannada
Updated:July 6, 2020, 6:13 PM IST
ಮದುವೆ, ಸೀಮಂತ ಕಾರ್ಯಕ್ರಮಗಳನ್ನ ನಿಷೇಧಿಸಿದ ಬಾಗಲಕೋಟೆ ಜಿಲ್ಲಾಡಳಿತ
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ
  • Share this:
ಬಾಗಲಕೋಟೆ(ಜುಲೈ 06): ಜಿಲ್ಲೆಯಲ್ಲಿ ಮದುವೆ ಮನೆಯಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯುವ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ತಿಳಿಸಿದರು. ಆದರೆ, ರಿಜಿಸ್ಟರ್ ಮದುವೆಗೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಈ ವೇಳೆ ಸ್ಪಷ್ಟಪಡಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಬಹಳಷ್ಟು ಕೊರೋನಾ ಪ್ರಕರಣಗಳಿಗೆ ವಿವಾಹ ಸಮಾರಂಭಗಳೇ ಹಾಟ್​ಸ್ಪಾಟ್ ಆಗುತ್ತಿವೆ ಎಂದು ನ್ಯೂಸ್ 18 ವಾಹಿನಿ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ, ಡಿಸಿಎಂ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ಅವರ ಸೂಚನೆ ಮೇರಿಗೆ ಜಿಲ್ಲಾಧಿಕಾರಿ ಮದುವೆ ಹಾಗೂ ಸೀಮಂತ ಕಾರ್ಯಕ್ರಮಗಳನ್ನ ನಿಷೇಧಿಸಿ ಆದೇಶಿಸಿದ್ದಾರೆ.

ಮದುವೆ ಕಾರ್ಯಕ್ರಮಗಳಿಂದ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರುತ್ತವೆ. ಮದುವೆ ಸಮಾರಂಭದಿಂದ ಜಿಲ್ಲೆಯ ಕಲಾದಗಿ ಮತ್ತು ಇಳಕಲ್ಲದಲ್ಲಿ ಇತರೆ ಸಮಾರಂಭ ಸೇರಿ 70ಕ್ಕೂ ಹೆಚ್ಚು ಪ್ರಕರಣಗಳು ಬಂದಿವೆ. ಇನ್ನು ಬಾದಾಮಿ ಸೀಮಂತ ಕಾರ್ಯಕ್ರಮದಿಂದ 15, ಶವ ಸಂಸ್ಕಾರದಿಂದ 20ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಶವಸಂಸ್ಕಾರಕ್ಕೆ 20 ಜನರಿಗೆ ಸೀಮಿತಗೊಳಿಸಿ ಅವಕಾಶ ಕೊಡಲಾಗಿದೆ. ಆದರೆ, ಸಾಮೂಹಿಕವಾಗಿ ಪಾಲ್ಗೊಳ್ಳುವ ಉಳಿದೆಲ್ಲ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಲಾಗಿದೆ. ಮದುವೆ ಮಾಡಿಕೊಳ್ಳುವವರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಆಗಮಿಸಿ ಮದುವೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮೂವರು ಮಕ್ಕಳ ಪಾಲಿಗೆ ಯಮಳಾದ ತಾಯಿ; ಮಕ್ಕಳಿಗೆ ವಿಷವಿಕ್ಕಿ ತಾನೂ ಆತ್ಮಹತ್ಯೆಗೆ ಯತ್ನ

ಜಿಲ್ಲೆಯ 4 ಪೊಲೀಸ್ ಸಿಬ್ಬಂದಿಗೆ ಸೋಂಕು ತಗಲಿದೆ. ಜಮಖಂಡಿಯ ತಾಲೂಕು ವೈದ್ಯಾಧಿಕಾರಿಗಳಿಗೂ ಸೋಂಕು ತಗುಲಿದೆ. ವೈದ್ಯರಿಗೆ ಹಿಪ್ಪರಗಿಯಲ್ಲಿ ಶವಸಂಸ್ಕಾರ ನಡೆಯುವ ಸಂದರ್ಭದಲ್ಲಿ ಹೋಗಿದ್ದಾಗ ಸೋಂಕು ತಗುಲಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾದಿಂದ ಓರ್ವ ವೈದ್ಯಾಧಿಕಾರಿ ಹಾಗೂ ಓರ್ವ ಡಿ ದರ್ಜೆ ನೌಕರ ಮೃತಪಟ್ಟಿರುತ್ತಾರೆ. ಇದನ್ನು ಗಮನಿಸಿದರೆ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲವೆನಿಸುತ್ತಿದೆ. ಆದ್ದರಿಂದ ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ಶವಸಂಸ್ಕಾರಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ತಿಳಿಸಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸರಕಾರದ ನಿಯಮಗಳ ಉಲ್ಲಂಘನೆಗೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ತಾಲೂಕಿಗೆ 4 ರಂತೆ 36 ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ನೇಮಕ ಮಾಡಲಾಗಿದೆ. ಇವರು ಜನರು ಗುಂಪು ಗುಂಪಾಗಿ ಸೇರುವ ಸ್ಥಳಗಳಲ್ಲಿ ಸಂಚರಿಸಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯಾಗುತ್ತಿರುವ ಬಗ್ಗೆ ನಿಗಾ ವಹಿಸಲಿದ್ದಾರೆ. ನಿಯಮ ಉಲ್ಲಂಘನೆಯಾದಲ್ಲಿ ದಂಡ ಮತ್ತು ಕಾನೂನಿನ ಕ್ರಮಕೈಗೊಳ್ಳಲಿದ್ದಾರೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಮಾತನಾಡಿ, ಮದುವೆ ಸಮಾರಂಭಕ್ಕೆ ಅನುಮತಿ ಪಡೆದು ಷರತ್ತುಗಳನ್ನು ಉಲ್ಲಂಘಿಸಿದವರ ವಿರುದ್ಧ ಸ್ಥಳೀಯ ಸಂಸ್ಥೆಯ ಮೂಲಕ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಅಂತಹವರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಅಲ್ಲದೇ ಕೊರೋನಾ ನಿಯಮ ಉಲ್ಲಂಘನೆಗೆ ಇಲ್ಲಿಯವರೆಗೆ 60 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಪಾಲನೆಯಾಗದ ವೈನ್‍ಶಾಪ್‍ವೊಂದನ್ನು ಮುಚ್ಚಿಸಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಹೊರ ಊರಿಂದ ಬರುವವರಿಂದ ಕೊರೋನಾತಂಕ; ಬಸ್​ಗಳನ್ನ ತಡೆದ ಸೋಲಿಗರು

ಕೊರೊನಾ ನಿಯಂತ್ರಣಕ್ಕೆ ಪೊಲೀಸ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜನರ ಸುರಕ್ಷತೆ ದೃಷ್ಟಿಯಿಂದ ಶ್ರಮಿಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗುವುದಿದ್ದಲ್ಲಿ ಮುಂದೂಡುವುದು ಉತ್ತಮ. ಆದಷ್ಟು ಅನಾವಶ್ಯಕವಾಗಿ ಹೊರಗಡೆ ಬರುವುದನ್ನು ಬಿಡಬೇಕು. ಜನರು ತಾವು ಸುರಕ್ಷಿತವಾಗಿರುವುದರ ಜೊತೆ ತಮ್ಮ ಮನೆಯವರ ಸುರಕ್ಷತೆಯನ್ನೂ ಕಾಪಾಡಿಕೊಳ್ಳಬೇಕು. ಒಟ್ಟಾರೆಯಾಗಿ ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಎಸ್​ಪಿ ಕೋರಿದರು.ಬಾಗಲಕೋಟೆ ಪ್ರವಾಸಿ ತಾಣಗಳತ್ತ ಸುಳಿಯದ ಪ್ರವಾಸಿಗರು‌‌‌:
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಪ್ರವಾಸಿ ತಾಣಗಳು ಬಂದ್ ಆಗಿದ್ದವು‌. ಇಂದಿನಿಂದ ಪ್ರವಾಸಿ ತಾಣಗಳು ತೆರೆಯಲು ಭಾರತೀಯ ಪುರಾತತ್ವ ಇಲಾಖೆ ಆದೇಶಿಸಿದೆ. ಆದರೆ, ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಐತಿಹಾಸಿಕ ಬಾದಾಮಿ ಪ್ರವಾಸಿ ತಾಣದತ್ತ ಮೊದಲ ದಿನ ಪ್ರವಾಸಿಗರು ಸುಳಿಯದೇ ಬೆರಳೆಣಿಕೆಯ ಜನ ಮಾತ್ರ ಭೇಟಿ ನೀಡಿದ್ದಾರೆ. ಪ್ರವಾಸಿ ತಾಣದಲ್ಲಿ ಸುರಕ್ಷಿತ ನಿಯಮ ಪಾಲನೆ, ಜೊತೆಗೆ ಇ ಟಿಕೆಟ್ ಪಡೆದು ಪ್ರವಾಸಿ ತಾಣ ವೀಕ್ಷಿಸಲು ಪುರಾತತ್ವ ಇಲಾಖೆ ಆದೇಶಿಸಿದ್ದು, ಬಾದಾಮಿ, ಪಟ್ಟದಕಲ್ಲು, ಐಹೊಳೆ ಪ್ರವಾಸಿ ತಾಣಗಳು ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳಿಂದ ಆರಂಭವಾಗಿವೆ.
Published by: Vijayasarthy SN
First published: July 6, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading