Karnataka KSEEB SSLC Result 2020: ಟೈಲರ್​ ಮಗ ರಾಜ್ಯಕ್ಕೆ ಮೂರನೇ ಸ್ಥಾನ ; ಎಸ್​ಎಸ್​ಎಲ್​​ಸಿ ಫಲಿತಾಂಶ ದಿಂದ ಬಾಗಲಕೋಟೆಗೆ ಮಹಾನಂದ ತಂದ ಆನಂದ್

ಬೀಳಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಆನಂದ್ ಹೊಸಮನಿ 625 ಅಂಕಗಳಿಗೆ 623 ಅಂಕ ಪಡೆದುಕೊಂಡಿದ್ದು, ಕನ್ನಡ-125, ಇಂಗ್ಲಿಷ್-100, ಗಣಿತ-99, ಸಮಾಜ ವಿಜ್ಞಾನ-99, ವಿಜ್ಞಾನ-100, ಹಿಂದಿ-100 ಅಂಕ ಪಡೆದು ಕೊಂಡು

news18-kannada
Updated:August 10, 2020, 11:01 PM IST
Karnataka KSEEB SSLC Result 2020: ಟೈಲರ್​ ಮಗ ರಾಜ್ಯಕ್ಕೆ ಮೂರನೇ ಸ್ಥಾನ ; ಎಸ್​ಎಸ್​ಎಲ್​​ಸಿ ಫಲಿತಾಂಶ ದಿಂದ ಬಾಗಲಕೋಟೆಗೆ ಮಹಾನಂದ ತಂದ ಆನಂದ್
ಆನಂದ್ ಹೊಸಮನಿ
  • Share this:
ಬಾಗಲಕೋಟೆ(ಆ.10): ಕೊರೋನಾ ಆತಂಕದ ಮಧ್ಯೆ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು, ಪೋಷಕರ ಮೊಗದಲ್ಲಿ ಫಲಿತಾಂಶದಿಂದ ಸಂತಸ ತಂದಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಟೈಲರ್​ ಮಗ ಆನಂದ್ ಹೊಸಮನಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.

ಜಿಲ್ಲೆಯ ಬೀಳಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಆನಂದ್ ಹೊಸಮನಿ  625 ಅಂಕಗಳಿಗೆ 623 ಅಂಕ ಪಡೆದುಕೊಂಡಿದ್ದಾನೆ. ಕನ್ನಡ-125, ಇಂಗ್ಲಿಷ್-100, ಗಣಿತ-99, ಸಮಾಜ ವಿಜ್ಞಾನ-99, ವಿಜ್ಞಾನ-100, ಹಿಂದಿ-100 ಅಂಕ ಪಡೆದು ಕೊಂಡಿದ್ದಾನೆ. ಆನಂದ್ ಮಲ್ಲಿಕಾರ್ಜುನ ಹೊಸಮನಿ ಮೂಲತಃ ವಿಜಯಪುರ ಜಿಲ್ಲೆಯ ಗರಸಂಗಿ ಗ್ರಾಮದವನು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆ ವೇಳೆ ರ‍್ಯಾಂಕಿಂಗ್​ ನಲ್ಲಿ ಬೀಳಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೀಟ್ ಸಿಕ್ಕಿದೆ. ಆನಂದ್ ನ ತಂದೆ ತೀರಿಹೋಗಿದ್ದಾರೆ. ತಾಯಿ ಯಮುನಾಬಾಯಿ ಮೂವರು ಮಕ್ಕಳಿಗೆ  ಟೇಲರಿಂಗ್ ವೃತ್ತಿ ಜೊತೆಗೆ ವಿದ್ಯಾಭ್ಯಾಸ  ಮಾಡಿಸುತ್ತಿದ್ದಾರೆ.

ಬಡತನದ ಮಧ್ಯೆಯೂ ಆನಂದ್ ಹೊಸಮನಿ ಸಾಧನೆ ಮಾಡುವ ಮೂಲಕ ಕುಟುಂಬಸ್ಥರಲ್ಲಿ ಮಹಾನಂದ ತಂದಿದ್ದಾನೆ. ಮುಂದೆ ವಿಜ್ಞಾನ ವಿಷಯ ತೆಗೆದುಕೊಂಡು ಇಂಜಿನಿಯರಿಂಗ್ ಸೇರುವ ಕನಸಿದೆ.

ಕೊರೋನಾ ಭಯವಿಲ್ಲದೇ ಶಿಕ್ಷಕರು ಪೋಷಕರ ಪ್ರೋತ್ಸಾಹದಿಂದ ಪರೀಕ್ಷೆ ಬರೆದೆ, ಶಿಕ್ಷಕರು ಮಗನಂತೆ ನೋಡುತ್ತಿದ್ದರು‌.ಇದೀಗ ಉತ್ತಮ ಫಲಿತಾಂಶ ಬಂದಿದೆ ಎಂದು ನ್ಯೂಸ್ 18ನೊಂದಿಗೆ ಆನಂದ್ ಸಂತಸ ಹಂಚಿಕೊಂಡಿದ್ದಾನೆ.

ತಾಯಿ ಯಮನಾಬಾಯಿ, ಮಗ ಶೇಕಡ 90ರಷ್ಟು ಫಲಿತಾಂಶ ಮಾಡಿದ್ರೆ ಸಾಕು ಎಂದುಕೊಂಡಿದ್ವಿ. ಆದರೆ ಮಗ ನಿರೀಕ್ಷೆಗೂ ಮೀರಿ ಎಲ್ಲರೂ ಹೆಮ್ಮೆಪಡುವ ಸಾಧನೆ ಮಾಡಿದ್ದು ಮಹದಾನಂದ ತಂದಿದೆ ಎನ್ನುತ್ತಾರೆ.

ಬಾಗಲಕೋಟೆ ಜಿಲ್ಲೆಗೆ ಆನಂದ್ ಪ್ರಥಮ, ದ್ವಿತೀಯ ಸ್ಥಾನ ಇಬ್ಬರ ಪಾಲು!!

ಬಾಗಲಕೋಟೆ ಜಿಲ್ಲೆ ‘ಬಿ’ ಗ್ರೇಡ್ ಸ್ಥಾನ ಪಡೆದು ರಾಜ್ಯಕ್ಕೆ 26ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 27 ಸ್ಥಾನ ಪಡೆದಿದ್ದು, ಈ ವರ್ಷದ ಒಂದು ಸ್ಥಾನ ಹೆಚ್ಚಿಗೆ ಪಡೆದುಕೊಂಡಿದೆ. ಫಲಿತಾಂಶದಲ್ಲಿ ಬಾದಾಮಿ ತಾಲೂಕು ‘ಬಿ’ ಗ್ರೇಡ್ ಪಡೆದುಕೊಂಡರೆ ಬಾಗಲಕೋಟೆ ಸಿ ಗ್ರೇಡ್, ಬೀಳಗಿ ಬಿ ಗ್ರೇಡ್, ಹುನಗುಂದ ಸಿ, ಜಮಖಂಡಿ ಬಿ, ಮುಧೋಳ ಬಿ ಗ್ರೇಡ್ ಪಡೆದುಕೊಂಡಿವೆ.ಇದನ್ನೂ ಓದಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆ ; ಶಾಸಕಿಯ ಸಹೋದರನಿಂದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ.!

ಜಿಲ್ಲೆಯ ಬೀಳಗಿ ತಾಲೂಕಿಗೆ ಪ್ರಥಮ, ತೃತೀಯ ಸ್ಥಾನ ಪಾಲಾಗಿದ್ದು. ಬೀಳಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಆನಂದ ಹೊಸಮನಿ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದರೆ ಜಿಲ್ಲೆಗೆ ಪ್ರಥಮ ಸ್ಥಾನ. ಮಹಾಲಿಂಗಪೂರದ ಬಿ.ಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರುಚಿತಾ ಅನ್ವೇಕರ ಹಾಗೂ ಬಾಗಲಕೋಟೆ ವಿದ್ಯಾಗಿರಿಯ ಸೇಂಟ್ ಆನ್ಸ್ ಕಾನ್ವೆಂಟ್‍ನ ರಾಜಶೇಖರ ರೆಡ್ಡಿ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ, ಬೀಳಗಿ ಆದರ್ಶ ವಿದ್ಯಾಲಯದ ವೇದಾ ಹುನಗುಂಡಿ 625ಕ್ಕೆ 620 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡು ಶಿಕ್ಷಕರು, ಪೋಷಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ 3ನೇ ರ‍್ಯಾಂಕ್ ಗಿಟ್ಟಿಸಿಕೊಂಡ ವಿದ್ಯಾರ್ಥಿ ಆನಂದ ಹೊಸಮನಿ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ರುಚಿತಾ ಅನ್ವೇಕರ, ರಾಜಶೇಖರ ರೆಡ್ಡಿ ಮತ್ತು ತೃತೀಯ ಸ್ಥಾನ ಪಡೆದ ವೇದಾ ಹುನಗುಂಡಿ ಅವರಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ, ಡಿಡಿಪಿಐ ಶ್ರೀಶೈಲ ಬಿರಾದಾರ ಅಭಿನಂದಿಸಿದ್ದಾರೆ.
Published by: G Hareeshkumar
First published: August 10, 2020, 10:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading