• Home
  • »
  • News
  • »
  • district
  • »
  • ಸೈಕ್ಲಿಂಗ್ ವೇಳೆ ಹೃದಯಾಘಾತ : ಬೀಳಗಿ ಕ್ಷೇತ್ರದ ಮಾಜಿ ಶಾಸಕ ಎಸ್​​ ಎಸ್​ ಪಾಟೀಲ್​​ರ ಮಗ ಸಾವು

ಸೈಕ್ಲಿಂಗ್ ವೇಳೆ ಹೃದಯಾಘಾತ : ಬೀಳಗಿ ಕ್ಷೇತ್ರದ ಮಾಜಿ ಶಾಸಕ ಎಸ್​​ ಎಸ್​ ಪಾಟೀಲ್​​ರ ಮಗ ಸಾವು

ಮೃತ ವಿನೋದ್ ಪಾಟೀಲ್

ಮೃತ ವಿನೋದ್ ಪಾಟೀಲ್

ಬಾಗಲಕೋಟೆಯ ವಿದ್ಯಾಗಿರಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕೆರೂರು ಪಟ್ಟಣದವರೆಗೆ ಕ್ರಮಿಸಿ ವಾಪಸ್ ಬರುತ್ತಿದ್ದ ವೇಳೆ ಅಗಸನಕೊಪ್ಪ ಗ್ರಾಮದ ಬಳಿ ಇಳಿಜಾರು ರಸ್ತೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.

  • Share this:

ಬಾಗಲಕೋಟೆ(ಸೆಪ್ಟೆಂಬರ್​. 13): ಸೈಕ್ಲಿಂಗ್ ಕ್ಲಬ್ ಸದಸ್ಯ, ಬೀಳಗಿ ಕ್ಷೇತ್ರದ ಮಾಜಿ ಶಾಸಕ ಎಸ್ ಎಸ್ ಪಾಟೀಲ್ ಅವರ ಮಗ ವಿನೋದ್ ಪಾಟೀಲ್ (50) ಸೈಕ್ಲಿಂಗ್ ಮಾಡುವ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಅಗಸನಕೊಪ್ಟ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯ ಇಳಿಜಾರು ರಸ್ತೆಯಲ್ಲಿ ಹೃದಯಾಘಾತವಾಗಿದೆ. ಬೆಳಿಗ್ಗೆ ಬಾಗಲಕೋಟೆ ವಿದ್ಯಾಗಿರಿಯಿಂದ ಕೆರೂರು ವರೆಗೆ ಬಾಗಲಕೋಟೆಯ 15ಜನ ಸೈಕ್ಲಿಸ್ಟ್ ಗಳು ಸೈಕ್ಲಿಂಗ್ ಗೆಂದು 70 ಕಿಲೋ ಮೀಟರ್ ಪ್ರಾಕ್ಟೀಸ್ ಗೆ ತೆರಳಿದ್ದಾರೆ. ವಿದ್ಯಾಗಿರಿಯಿಂದ ಕೆರೂರುವರೆಗೆ ಹೋಗಿ ವಾಪಸ್ ಬಾಗಲಕೋಟೆಯ ವಿದ್ಯಾಗಿರಿಗೆ ಬರುವ ವೇಳೆ ಅಗಸನಕೊಪ್ಪ ಗ್ರಾಮದ ಬಳಿ ಇಳಿಜಾರು ರಸ್ತೆಯಲ್ಲಿ ವಿನೋದ್ ಪಾಟೀಲ್ ಅವರಿಗೆ  ಹೃದಯಾಘಾತವಾಗಿದೆ. ಇದೇ ಸ್ಥಳದಲ್ಲಿ ವಿನೋದ್ ಪಾಟೀಲ್ ಫೋಟೊ ತೆಗೆಯಿರಿ ಎಂದಿದ್ದರಂತೆ. ಇನ್ನು ವಿನೋದ್ ಪಾಟೀಲ್ ,ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಸೈಕ್ಲಿಂಗ್ ನಲ್ಲಿ ಆಸಕ್ತಿಯುಳ್ಳವರಾಗಿದ್ದರು.


ಶನಿವಾರ 70 ಕಿಲೋ ಮೀಟರ್, 100 ಕಿಲೋ ಮೀಟರ್ ಕ್ರಮಿಸುವ ಅವಕಾಶ ತಪ್ಪಿಸಿಕೊಂಡಿದ್ದೆ. ಭಾನುವಾರ 100 ಕಿಲೋ ಮೀಟರ್ ಕ್ರಮಿಸುವೆ ಎಂದು ನಿನ್ನೆ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು. ಇವತ್ತು ಮುಂಜಾನೆ ಬಾಗಲಕೋಟೆಯ ವಿದ್ಯಾಗಿರಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕೆರೂರು ಪಟ್ಟಣದವರೆಗೆ ಕ್ರಮಿಸಿ ವಾಪಸ್ ಬರುತ್ತಿದ್ದ ವೇಳೆ ಅಗಸನಕೊಪ್ಪ ಗ್ರಾಮದ ಬಳಿ ಇಳಿಜಾರು ರಸ್ತೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.


ತಕ್ಷಣವೇ ಸೈಕ್ಲಿಂಗ್ ತಂಡದಲ್ಲಿದ್ದ ವೈದ್ಯರೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡಿ, ಸೈಕ್ಲಿಂಗ್ ತಂಡದ ಸದಸ್ಯರು ಕೆರೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದಾರಿ ಮಧ್ಯೆಯೇ ವಿನೋದ್ ಇಹಲೋಕ ತ್ಯಜಿಸಿದ್ದಾರೆ ಎಂದು ಸೈಕ್ಲಿಸ್ಟ್  ವಿಜಯ್ ದೊಡ್ಡಮನಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.


ಇದನ್ನೂ ಓದಿ : ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಒಂದೆಡೆ ಗಾಂಜಾ ಮತ್ತೊಂದೆಡೆ ಐನಾತಿ ಕಳ್ಳನ ಬಂಧನ


ಇನ್ನು ಸೈಕ್ಲಿಸ್ಟ್ ವಿನೋದ್ ಅಗಲಿಕೆಗೆ ವಿಜಯಪುರ ಸೈಕ್ಲಿಸ್ಟ್ ಅಸೋಸಿಯೇಷನ್ ಹಾಗೂ  ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಸಂತಾಪ ಸೂಚಿಸಿದ್ದಾರೆ.


ಸಾಯಂಕಾಲ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ವಿನೋದ್ ಅವರ ಅಂತ್ಯಕ್ರಿಯೆ ನಡೆಯಿತು. ವಿನೋದ್ ಪಾಟೀಲ್​​ ಅವರ ಅಗಲಿಕೆಗೆ ಅವರ ಕುಟುಂಬಸ್ಥರು, ಬಾಗಲಕೋಟೆ ಸೈಕ್ಲಿಸ್ಟ್ ಗಳು ಕಂಬನಿ ಮಿಡಿದಿದ್ದಾರೆ.

Published by:G Hareeshkumar
First published: