ಜೋರಾದ ಮಳೆ, ಮನೆ ಬಾಗಿಲಿಗೇ ಬಂದ ಮೊಸಳೆ ಮರಿ.. ಮೊಸಳೆಯನ್ನು ಹೇಗೆ ಹಿಡಿದರು..ವಿಡಿಯೋ ನೋಡಿ!
Baby Crocodile: ಸಾಸ್ವೆಹಳ್ಳಿಯ ತುಂಗಭದ್ರಾ ನದಿ ತಟದಲ್ಲಿ ರೈತ ಉಮೇಶ್ ಮನೆ ಇದೆ. ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಜಾಸ್ತಿ ಆಗಿದೆ. ಈ ವೇಳೆ ನದಿಯ ನೀರು ಹೆಚ್ಚಾದ ಹಿನ್ನಲೆ ಮೊಸಳೆ ಮರಿ ರೈತನ ಮನೆ ಹತ್ತಿರವೇ ಬಂದುಬಿಟ್ಟಿದೆ.
ದಾವಣಗೆರೆ: ರಾಜ್ಯಾದ್ಯಂತ ಮಳೆ ಆರ್ಭಟ ಹೆಚ್ಚಾಗೇ ಇದೆ. ಈ ಜೋರು ಮಳೆಯಲ್ಲಿ ಮನೆಯ ಛಾವಣಿ ಗೋಡೆಗಳು ಕುಸಿಯುವುದು, dನಕರುಗಳು ನೀರಿನಲ್ಲಿ ಕೊಚ್ಚಿಹೋಗುವುದು, ಹೊಲ ಗದ್ದೆಗಳೆಲ್ಲಾ ನೀರಲ್ಲಿ ಮುಳುಗುವುದು ಎಲ್ಲವೂ ಪ್ರತಿದಿನ ನೋಡುತ್ತಲೇ ಇದ್ದೇವೆ. ಆದ್ರೆ ಈ ಎಲ್ಲಾ ಪ್ರಕರಣಗಳಿಗಿಂತ ಒಂದು ಹೆಜ್ಜೆ ಮುಂದೆ ಹೋದಂಥಾ ಘಟನೆಯೊಂದು ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಮಳೆಯ ನೀರಿನಲ್ಲಿ ಈಜಾಡಿಕೊಂಡು ಮೊಸಳೆಯ ಮರಿಯೊಂದು ರೈತನ ಮನೆಯ ಬಳಿ ಬಂದುಬಿಟ್ಟಿದೆ. ಇಲ್ಲಿನ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಮೊಸಳೆಯ ಮರಿ ರೈತನ ಮನೆಗೆ ಬಂದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಾಸ್ವೆಹಳ್ಳಿಯ ತುಂಗಭದ್ರಾ ನದಿ ತಟದಲ್ಲಿ ರೈತ ಉಮೇಶ್ ಮನೆ ಇದೆ. ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಜಾಸ್ತಿ ಆಗಿದೆ. ಈ ವೇಳೆ ನದಿಯ ನೀರು ಹೆಚ್ಚಾದ ಹಿನ್ನಲೆ ಮೊಸಳೆ ಮರಿ ರೈತನ ಮನೆ ಹತ್ತಿರವೇ ಬಂದುಬಿಟ್ಟಿದೆ. ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದ ತುಂಗಭದ್ರಾ ನದಿ ಪಾತ್ರದಲ್ಲಿ ರೈತನೋರ್ವನ ಮನೆ ಮುಂದೆ ಮೊಸಳೆಯ ಮರಿಯೊಂದು ಕಂಡುಬಂದಿದೆ. ನೋಡಲು ದೊಡ್ಡ ಹಲ್ಲಿಯಂತೆಯೇ ಕಾಣುವ ಇದನ್ನು ಮೊಸಳೆಯ ಮರಿ ಎಂದು ರೈತನ ಕುಟುಂಬಸ್ಥರು ಗುರುತಿಸಿದ್ದಾರೆ. ನಂತರ ಗ್ರಾಮಸ್ಥರು ಮಾವಿನ ಕೋಟೆ ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ದೇಶ್ ಎಂ ವಿ ಅವರಿಗೆ ಕರೆ ಮಾಡಿದ್ದಾರೆ.
Baby Crocodile washed out in the floods in Saasivehalli of Davanagere District, Karnataka. The farmer Umesh was surprised by this unusual guest and called in forest department officials. The baby croc was caught and released into its habitat safely. #News18Kannadapic.twitter.com/3FqiKGJlF6
ಅಷ್ಟರೊಳಗೆ ಬಕೆಟ್ ಒಂದರಲ್ಲಿ ಸ್ವಲ್ಪ ನೀರು ಹಾಕಿ ಮೊಸಳೆಯ ಮರಿಯನ್ನು ಅದರಲ್ಲಿ ಹಿಡಿದಿದ್ದಾರೆ. ಮೊಸಳೆಯ ಮರಿಯನ್ನು ಅವರಿಗೆ ಭಾನುವಾರ ಸಂಜೆ ಒಪ್ಪಿಸಿದ್ದು, ಪ್ರಾಣಿಯ ಮೇಲೆ ಗ್ರಾಮಸ್ಥರು ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ವೇಳೆ ಮೊಸಳೆ ಮರಿ ರಕ್ಷಿಸಿ ಮಾವೀನ ಕೋಟೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ. ನಿನ್ನೆ ಸಂಜೆ 6 ಗಂಟೆಗಳ ಸುಮಾರಿಗೆ ನೀರು ಹೆಚ್ಚಾದ ಹಿನ್ನೆಲೆ ಹೊಳೆಯ ಪಕ್ಕದಲ್ಲಿ ಇರುವ ಉಮೇಶ್ ರವರ ಮನೆ ಮೊಸಳೆಯ ಮರಿ ಬಂದಿದೆ ಎನ್ನಲಾಗಿದೆ. ಸದ್ಯ ಮೊಸಳೆಯ ಮರಿ ಮತ್ತೆ ನೀರಿಗೆ ಸೇರಿರುವುದು ಒಂದು ರೀತಿ ಸಮಾಧಾನ ತಂದಿದೆ ಎಂದಿದ್ದಾರೆ ಗ್ರಾಮಸ್ಥರು.