ವಿಜಯಪುರ: ಈ ಬಾರಿ ತಿರುಪತಿಯಲ್ಲಿ (Tirupati Flood And Landslide) ಉಂಟಾದ ಜಲಪ್ರಳಯದ ಬಗ್ಗೆ 9 ತಿಂಗಳ ಹಿಂದೆಯೇ ವಿಜಯಪುರ ಜಿಲ್ಲೆಯ ಬಬಲಾದಿ ಮಠದ (Babaladi Mutt) ಸಿದ್ದು ಮುತ್ಯಾ (Siddu Mutya) ಭವಿಷ್ಯ ನುಡಿದಿದ್ದರು. ಅಂದು ಸಿದ್ದು ಮುತ್ಯಾ ಆಡಿದ್ದ ಮಾತುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದ್ದು, ಭಕ್ತರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದು ಮುತ್ಯಾ ಆಡುವ ಮಾತುಗಳ ಸತ್ಯ ಆಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಹೇಳಿ ವಿಡಿಯೋವನ್ನು (Viral Video) ಶೇರ್ ಮಾಡಿಕೊಳ್ಳುತ್ತಿದ್ದಾರೆ. "ಆಂಧ್ರ-ತೆಲಗು ರಾಜ್ಯಕ್ಕೆ ಕೇಡು" ಎಂದು ಭವಿಷ್ಯ ನುಡಿದಿದ್ದರು. ಸಿದ್ದು ಮುತ್ಯಾ ಹೇಳಿಕೆಯ 9 ತಿಂಗಳ ನಂತರ ತಿರುಪತಿಯನ್ನು ಕಂಡು ಕೇಳರಿಯದ ಜಲಪ್ರಳಯ ಉಂಟಾಗಿತ್ತು.
ಇದೇ ವೇಳೆ ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಹೇಳಿದ್ದರು. ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಭೂಮಿ ಸಹ ಕಂಪಿಸುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. 2021ರ ಶಿವರಾತ್ರಿ ದಿನದಂದು ಸಿದ್ದು ಮುತ್ಯಾ ಕಾಲಜ್ಞಾನ ಓದಿದ್ದರು.
ಸಿದ್ದು ಮುತ್ಯಾ ಕಾಲಜ್ಞಾನ
ಇರಾಕ್, ಇರಾನ್, ಅಮೆರಿಕ ದೇಶಗಳಿಗೆ ಕೆಡಕು, ಬೆಳೆಗಳ ಬೆಲೆ ಏರಿಕೆ, ರಾಜಕೀಯ ಅಸೂಹೆ ಮುಂದುವರಿಕೆ, ಪಕ್ಷದೊಳಗೆ ದ್ವೇಷ ರಾಜಕಾರಣ, ಮಳೆ-ಬೆಳೆ ಸಮನಾಗಿದೆ. ರಾಜಕೀಯ ವ್ಯಕ್ತಿಯ ಜೀವನ ಏರಳಿತ, ಅನ್ಯಕೋಮಿನ ದಂಗೆ, ಅಗ್ನಿ ಅವಘಡ ಸಂಭವಿಸಲಿದೆ ಎಂದು ಹೇಳಿದ್ದಾರೆ.
ಎಲ್ಲಿದೆ ಈ ಬಬಲಾದಿ ಮಠ?
ಬಬಲಾದಿ ಮಠ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿದೆ. ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವಮೂರ್ತಿ ಮಹಾಪುರುಷರು ಇಲ್ಲಿಯೇ ಲಿಂಗೈಕ್ಯರಾದ ಹಿನ್ನೆಲೆ ಮಠ ನಿರ್ಮಾಣ ಮಾಡಲಾಗಿದೆ. ಪ್ರತಿ ಶಿವರಾತ್ರಿ ದಿನ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ನಡೆಯುತ್ತದೆ.
ಇದನ್ನೂ ಓದಿ: Tara at Tirupathi- ತೇಲುತ್ತಿದ್ದ ನಟಿ ತಾರಾ ಕಾರು; ತಿರುಪತಿ ಪ್ರವಾಹದ ಅನುಭವ ಬಿಚ್ಚಿಟ್ಟ ನಟಿ
ಮದ್ಯವೇ ಪ್ರಸಾದ ಮತ್ತು ನೈವೇದ್ಯ
500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನ ಇದಾಗಿದ್ದು, ಪ್ರತಿ ವರ್ಷ ಶಿವರಾತ್ರಿಯಂದು ಇದನ್ನು ಓದಲಾಗುತ್ತದೆ. ಬಬಲಾದಿ ಮಠದ ಭವಿಷ್ಯ ರಾಜ್ಯದಲ್ಲೇ ಅತ್ಯಂತ ವಿಶಿಷ್ಟವಾಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತೆ. ಭಕ್ತರು ಸಹ ಮದ್ಯವನ್ನೇ ನೈವೇದ್ಯವಾಗಿ ತರುತ್ತಾರೆ.
ಮದ್ಯ ನೈವೇದ್ಯ ಯಾಕೆ?
ಸಿದ್ಧಿ ಪುರುಷ ಚಿಕ್ಕಪ್ಪಯ್ಯ ತಮ್ಮ ಸಿದ್ಧಿಗಾಗಿ ಬಿಂದುವಿನ ಪ್ರಮಾಣದಲ್ಲಿ ಮದ್ಯವನ್ನು ಸೇವಿಸಿ ಸಾಧನೆಗೆ ಕುಳಿತುಕೊಳ್ಳುತ್ತಿದ್ದರಂತೆ., ಕಾಲಾಂತರದಲ್ಲಿ ಇದನ್ನೇ ಪ್ರಮುಖವಾಗಿ ಪರಿಗಣಿಸಿರದ ಭಕ್ತರು ಈ ಗದ್ದುಗೆಗೆ ಮದ್ಯದ ನವೈದ್ಯ ಅರ್ಪಿಸಲಾರಂಭಿಸಿದರು. ಈ ಕುರಿತು ಮಠದ ಆಡಳಿತ ಮಂಡಳಿಯವರು ಎಷ್ಟೇ ತಿಳುವಳಿಕೆ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಮದ್ಯದ ನೈವೇದ್ಯ ಮುಂದುವರಿಸಿಕೊಂಡು ಬಂದಿದ್ದಾರೆ. ಇಂದಿಗೂ ಈ ಪದ್ಧತಿ ಇದೆ.
ಮದ್ಯ ನೈವೇದ್ಯದ ಬಗ್ಗೆ ಇನ್ನೊಂದು ಕಥೆ
ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬರು ಜಾತ್ರೆಯ ಸಂದರ್ಭದಲ್ಲಿ ಮದ್ಯವನ್ನು ನಿಷೇಧ ಮಾಡಿದ್ದರಂತೆ. ಆಗ ಸದಾಶಿವಂ ಅಜ್ಜನವರು ಕೃಪೆಯಿಂದ ಬಬಲಾದಿ ಯಲ್ಲಿ ಹರಿಯುವ ಕೃಷ್ಣಾ ನದಿ ಸಂಪೂರ್ಣ ಮದ್ಯಮಯ ಆಗಿತ್ತಂತೆ. ಆಗ ಬ್ರಿಟಿಷ್ ಅಧಿಕಾರಿ ಕ್ಷೆಮ ಕೇಳಿ ತಮ್ಮ ಆದೇಶ ಹಿಂಪಡೆದರಂತೆ ಎಂಬ ಕತೆಗಳನ್ನು ಇಲ್ಲಿಯ ಹಿರಿಯರು ಹೇಳುತ್ತಿರುತ್ತಾರೆ.
ಇದನ್ನೂ ಓದಿ: Tirupathi : ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ: ಕೊಚ್ಚಿ ಹೋಯ್ತು ವಾಹನಗಳು, ನದಿಯಂತಾದ ರಸ್ತೆ !
ತಿರುಪತಿಯಲ್ಲಿ ಜಲ ಪ್ರಳಯ
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿತ್ತು. ತಿರುಮಲ, ತಿರುಪತಿ ಸೇರಿದಂತೆ ಚಿತ್ತೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾದ ಹಿನ್ನೆಲೆ ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ದೇಗುಲ ನಗರದಲ್ಲಿ ಇಂಥ ಮಳೆ (Rain) ಅನಾಹುತ ಘಟಿಸಿದ್ದು 1996 ಭೀಕರ ಪ್ರವಾಹದ ಬಳಿಕ ಇದೇ ಮೊದಲು ಎಂದು ಹೇಳಲಾಗುತ್ತಿದೆ. ತಿರುಪತಿ ಬೆಟ್ಟಕ್ಕೆ ಹೋಗುವ ರಸ್ತೆಗಳೆಲ್ಲ ಕುಸಿದು ಹೋಗಿದ್ದವು.
ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲವಂತೂ ಪ್ರವಾಹ-ಭೂಕುಸಿತ (landslides) ಎರಡಕ್ಕೂ ತುತ್ತಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನೀರು ನುಗ್ಗಿದ್ದು, ಒಳಗಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯ ತಿರುಪತಿ ದರ್ಶನ ಮತ್ತೆ ಆರಂಭಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ