ಜ್ವರ ತಪಾಸಣೆ ಮಾಡಲು ಕೊರೋನಾ ವಾರಿಯರ್ಸ್​ಗೆ ಆರೋಗ್ಯ ಕಿಟ್ ವಿತರಿಸಿದ ಅಜೀಂ ಪ್ರೇಮ್ ಜೀ ಫೌಂಡೇಶನ್

ಜಿಲ್ಲೆಯಲ್ಲಿ 1019 ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ರೀನರ್ ಹಾಗೂ ಪಲ್ಸ್ ಆಕ್ಸಿ ಮೀಟರ್ ವಿತರಣೆ ಮಾಡುವ ಜೊತೆಗೆ ಯಾದಗಿರಿ ಜಿಲ್ಲೆಯ 166 ಆರೋಗ್ಯ ಉಪಕೇಂದ್ರಗಳಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಗಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್​ನ  ಸಾಮಾಜಿಕ ಕಳಕಳಿಗೆ ಪ್ರಶಂಸೆ ವ್ಯಕ್ತವಾಗಿದೆ.

news18-kannada
Updated:July 27, 2020, 3:54 PM IST
ಜ್ವರ ತಪಾಸಣೆ ಮಾಡಲು ಕೊರೋನಾ ವಾರಿಯರ್ಸ್​ಗೆ ಆರೋಗ್ಯ ಕಿಟ್ ವಿತರಿಸಿದ ಅಜೀಂ ಪ್ರೇಮ್ ಜೀ ಫೌಂಡೇಶನ್
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ: ಕೊರೋನಾ ವಿರುದ್ಧ ಹಗಲಿರುಳು ಶ್ರಮವಹಿಸುತ್ತಿರುವ ಕೊರೋನಾ ವಾರಿಯರ್ಸ್​ ಇನ್ನೂ ಮುಂದೆ ಜನರ ಜ್ವರ ತಪಾಸಣೆ ಸರಳವಾಗಿ ಮಾಡಬಹುದಾಗಿದೆ. ಕೊರೋನಾ ವಾರಿಯರ್ಸ್ ಸಂಕಷ್ಟ ಅರಿತು ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ  ಯಾದಗಿರಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ರೀನರ್ ಹಾಗೂ ಪಲ್ಸ್ ಆಕ್ಸಿ ಮೀಟರ್ ವಿತರಣೆ ಮಾಡಲಾಗಿದೆ.

ಅಜೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ಜಿಲ್ಲಾಡಳಿತ ಸಹಯೋಗದೊಂದಿಗೆ ಜಿಲ್ಲೆಯ 1019 ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಗಿದೆ. ಯಾದಗಿರಿ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್ ಮೊದಲಾದ ಭಾಗದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಿ ಥರ್ಮಲ್ ಸ್ಕ್ರೀನರ್ ಹಾಗೂ ಪಲ್ಸ್ ಆಕ್ಸಿ ಮೀಟರ್ ವಿತರಣೆ ಮಾಡಲಾಗಿದೆ. ದೇಶದಲ್ಲಿಯೇ ಮೊದಲಬಾರಿಗೆ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಣೆ ಮಾಡಿದ್ದು ವಿಶೇಷವಾಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅಜೀಂ ಪ್ರೇಮ್ ಜಿ ಫೌಂಡೇಶನ್​ನ ಸಂಪನ್ಮೂಲ ವ್ಯಕ್ತಿ ರಂಗನಾಥ ಬೆನಕಟ್ಟಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಥರ್ಮಲ್ ಸ್ಕ್ರೀನರ್ ಹಾಗೂ ಪಲ್ಸ್ ಆಕ್ಸಿ ಮೀಟರ್ ವಿತರಣೆ ಮಾಡಲಾಗಿದೆ ಎಂದರು.

ರೋಗದ ಸಮಸ್ಯೆ ಪತ್ತೆ ಹಚ್ಚಲು ಸಹಕಾರಿ..!

ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು ಮೊದಲಾದ ಭಾಗದಿಂದ ವಲಸಿಗರು ಆಗಮಿಸಿದ್ದಾರೆ. ಮಹಾರಾಷ್ಟ್ರ ವಲಸಿಗರಲ್ಲಿಯೇ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಹುತೇಕ ಯಾದಗಿರಿ, ಗುರುಮಠಕಲ್, ಶಹಾಪುರ, ಸುರಪುರ ತಾಲೂಕಿನ ಹಳ್ಳಿ ಹಾಗೂ ತಾಂಡಾದ ವಲಸಿಗರಲ್ಲಿ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಗ್ರಾಮೀಣ ಭಾಗದ ಜನರ ಆರೋಗ್ಯದ ಮೇಲೆ ನಿಗಾ ಇಡಲು ಆರೋಗ್ಯ ಕಿಟ್ ಅನುಕೂಲವಾಗಲಿದೆ. ಆರೋಗ್ಯ ತಪಾಸಣೆ ಮಾಡಿ ಅನಾರೋಗ್ಯದ ಬಗ್ಗೆ ಮಾಹಿತಿ ಅರಿಯಲು ಸಾಧ್ಯವಾಗಿದೆ. ಇದರಿಂದ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ತುಂಬಾ ಅನುಕೂಲವಾಗಲಿದೆ.

ಇದನ್ನು ಓದಿ: ಖಾಸಗಿ ಆಸ್ಪತ್ರೆಗಳ ಮೇಲೆ ಸಿಎಂ ಬಿಎಸ್​ ಯಡಿಯೂರಪ್ಪ ಗರಂ; ಚಿಕಿತ್ಸೆ ನೀಡಲು ಒಪ್ಪದಿದ್ದರೆ ನೀರು, ವಿದ್ಯುತ್ ಬಂದ್​ಗೆ ಚಿಂತನೆ
ಜಿಲ್ಲೆಯಲ್ಲಿ 1019 ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ರೀನರ್ ಹಾಗೂ ಪಲ್ಸ್ ಆಕ್ಸಿ ಮೀಟರ್ ವಿತರಣೆ ಮಾಡುವ ಜೊತೆಗೆ ಯಾದಗಿರಿ ಜಿಲ್ಲೆಯ 166 ಆರೋಗ್ಯ ಉಪಕೇಂದ್ರಗಳಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಗಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್​ನ  ಸಾಮಾಜಿಕ ಕಳಕಳಿಗೆ ಪ್ರಶಂಸೆ ವ್ಯಕ್ತವಾಗಿದೆ.
Published by: HR Ramesh
First published: June 29, 2020, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading