ಆಯುಷ್ ಇಲಾಖೆ ಸೂಚಿಸಿದ ಔಷಧಗಳಿಗೆ ಭಾರೀ ಬೇಡಿಕೆ; ಗ್ರಾಮಮಟ್ಟದಲ್ಲೂ ಔಷಧ ಪೂರೈಕೆ

ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಹಾಗೂ ಜಿಪಂ ಸಿಇಓ ಶಿಲ್ಪಾ ಶರ್ಮಾ ಆದೇಶದಂತೆ ಆಯುಷ್ ಅಧಿಕಾರಿಗಳು ಯಾದಗಿರಿಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಚ್ಯವನ್​ಪ್ರಾಶ್ ವಿತರಣೆ ಮಾಡಿದ್ದಾರೆ.

ಯಾದಗಿರಿಯಲ್ಲಿ ಔಷಧ ವಿತರಿಸುತ್ತಿರುವ ಆಯುಶ್ ಅಧಿಕಾರಿಗಳು

ಯಾದಗಿರಿಯಲ್ಲಿ ಔಷಧ ವಿತರಿಸುತ್ತಿರುವ ಆಯುಶ್ ಅಧಿಕಾರಿಗಳು

  • Share this:
ಯಾದಗಿರಿ: ಕೊರೊನಾ ವೈರಸ್​ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಕೂಡ ಕೊರೊನಾ ಪ್ರಕರಣಗಳು ನಿತ್ಯವೂ ಹೆಚ್ಚಾಗುತ್ತಿವೆ. ಆದರೆ, ಕೊರೊನಾ ರೋಗ ತಗುಲದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದು ಮಾಡಿಕೊಂಡು ಸೇವನೆ ಮಾಡಿಕೊಳ್ಳುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಇದೇ ವಳೆ, ಆಯುರ್ವೇದ, ಹೋಮಿಯೋಪಥಿ ಸೇರಿ ಆಯುಷ್ ಪದ್ದತಿಯ ಔಷಧಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿಗೂ ಔಷಧಿ ವಿತರಣೆ..!

ಆಯುಷ್ ಇಲಾಖೆಯು ಜಿಲ್ಲೆಗೆ ಅಗತ್ಯ ಔಷಧಿಗಳನ್ನು ಪೂರೈಕೆ ಮಾಡಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದದ ಚವನಪ್ರಾಶ್, ಸಂಶಮನಿ ವಟಿ ಮಾತ್ರೆ, ಹೋಮಿಯೋಪಥಿಯ ಆರ್ಸೆನಿಕಮ್ ಆಲ್ಬಮ್ (Arsenicum Album) ಹಾಗೂ ಅರ್ಕೇ ಅಜೀಬ್ ಔಷಧಿಯನ್ನು ಶಕ್ತಿವರ್ಧಕಗಳಂತೆ ಬಳಸಲು ಜಿಲ್ಲಾ ಆಯುಷ್ ಇಲಾಖೆಗೆ ಪೂರೈಕೆ ಮಾಡಲಾಗಿದೆ.

1028 ಚ್ಯವನ್​ಪ್ರಾಶ್, ಅರ್ಸೇನಿಕಮಾಲ್ಬಮ್ ಮಾತ್ರೆಗಳ 25 ಸಾವಿರ ಕಿಟ್, 15 ಸಾವಿರ ಸಂಶಮನಿ ವಟಿ ಮಾತ್ರೆಗಳು ಹಾಗೂ 5 ಸಾವಿರ ಅರ್ಕೇ ಅಜೀಬ್ ಔಷಧಿಗಳನ್ನು ಸರಕಾರ ಪೂರೈಕೆ ಮಾಡಿದೆ.

ಇದನ್ನೂ ಓದಿ: ನನ್ನ ಮೇಲೆ ರೈತರ ಋಣವಿದೆ, ಕಾಂಗ್ರೆಸ್‌ನವರದ್ದಲ್ಲ; ಹೆಚ್‌.ಡಿ. ಕುಮಾರಸ್ವಾಮಿ ಕಿಡಿ

ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಶಿಲ್ಪಾ ಶರ್ಮಾ ಅವರ ಸಲಹೆ ಸೂಚನೆ ಹಾಗೂ ಆದೇಶದಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಗಾಳಿ, ಆಯುಷ್ ವೈದ್ಯಾಧಿಕಾರಿ ಡಾ. ಪ್ರಕಾಶ್ ರಾಜಾಪುರ ಅವರು ಯಾದಗಿರಿ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಚ್ಯವನ್​ಪ್ರಾಶ್ ವಿತರಣೆ ವ್ಯವಸ್ಥೆ ಮಾಡಿದ್ಧಾರೆ. ಅದೇ ರೀತಿ, ಪ್ರತಿ ಹಳ್ಳಿಯಲ್ಲಿ ಕೊರೊನಾ ಸೈನಿಕರಂತೆ ಕಾರ್ಯನಿರ್ವಹಣೆ ಮಾಡುವ ಪಂಪ್ ಆಪರೇಟರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ‌ ಲೆಕ್ಕಾಧಿಕಾರಿ, ಕಂದಾಯ, ಜಿಲ್ಲಾ ಪಂಚಾಯತ್ ಹೀಗೆ ಎಲ್ಲಾ ಇಲಾಖೆಯಲ್ಲಿ ಕೆಲಸ ನಿರ್ವಹಣೆ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ. ಔಷಧಿ ಹೇಗೆ ತೆಗೆದುಕೊಳ್ಳಬೇಕು ಹಾಗೂ ಏನೇನು ‌ಕೊರೊನಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಿ ಔಷಧಿಗಳನ್ನು ನೀಡಲಾಗುತ್ತಿದೆ.

ಈ ಬಗ್ಗೆ ನ್ಯೂಸ್18 ಕನ್ನಡಕ್ಕೆ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ವಂದನಾ ಗಾಳಿ ಮಾತಮಾಡಿ, ಕೊರೊನಾ ಬಗ್ಗೆ ಎಚ್ಚರ ವಹಿಸಬೇಕೇ ಹೊರತು ಯಾರೂ ಭಯಪಡುವ ಅಗತ್ಯವಿಲ್ಲ. ಆಯುಷ್ ಇಲಾಖೆ ವೈದ್ಯರ ಸಲಹೆ ಸೂಚನೆಯಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಯಾವ ಹೈಫೈ ಹೋಟೆಲ್​​ಗೂ ಕಡಿಮೆಯಿಲ್ಲ; ಇಲ್ಲಿ ಕೇವಲ 1 ರೂ.ಗೆ ಸಿಗುತ್ತೇ ಅಜ್ಜಿ ಮನೆ ಇಡ್ಲಿ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಹುತೇಕರು ಇಷ್ಟಪಟ್ಟು ಯಾವುದೇ ರೋಗ ಬರಬಾರದೆಂದು ಎಚ್ಚರ ವಹಿಸಿ ಆಯುಷ್ ಇಲಾಖೆಯ ಔಷಧಿಗಳನ್ನು ಪಡೆಯಲು ಮುಂದಾಗುತ್ತಿದ್ದಾರೆ. ಒಟ್ಟಾರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನ‌ ಆಯುಷ್ ಔಷಧಿಗಳ ಮೊರೆಹೋಗಿರುವುದಂತೂ ಹೌದು.

ವರದಿ: ನಾಗಪ್ಪ ಮಾಲಿಪಾಟೀಲ

First published: