HOME » NEWS » District » AYODHYA RAM MANDIR BELAGAVI NEWS HERE IS THE DETAILS RAM MANDIR BHUMI PUJAN MUHURAT EVENT NARENDRA MODI RAMALALLA AYODHYA RAM MANDIR HK

Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭ ; ಬೆಳಗಾವಿ ಜಿಲ್ಲೆಗೂ ರಾಮನಿಗೂ ಇರುವ ಸಂಬಂಧ ಎಂಥದ್ದು ಗೊತ್ತಾ..!

Ram Mandir: ಶ್ರೀರಾಮನಿಗಾಗಿ ಶಬರಿ ಕಾಯ್ದಳು ಎನ್ನಲಾದ ಐತಿಹಾಸಿ ದೇವಸ್ಥಾನವೊಂದು ಸಹ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹೊರ ವಲಯದಲ್ಲಿ ಇದೆ.

news18-kannada
Updated:August 5, 2020, 10:52 AM IST
Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭ ; ಬೆಳಗಾವಿ ಜಿಲ್ಲೆಗೂ ರಾಮನಿಗೂ ಇರುವ ಸಂಬಂಧ ಎಂಥದ್ದು ಗೊತ್ತಾ..!
ಸುರೇಬಾನ
  • Share this:
Ayodhya Ram Mandir:  ಬೆಳಗಾವಿ(ಆಗಸ್ಟ್.05): ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಮಂದಿರ ಶೀಲನ್ಯಾಸಕ್ಕೆ ಬೆಳಗಾವಿಯ ವಿದ್ವಾಂಸರೇ ಮೂಹೂರ್ತ ನೀಡಿದ್ದು ಎಂಬುದು ಎಲ್ಲರಿಗೂ ಗೊತ್ತಿರೋ ಸಂಗತಿಯಾಗಿದೆ. ಆದರೇ ಶ್ರೀರಾಮನಿಗೂ ಹಾಗೂ ಬೆಳಗಾವಿಗು ಇರುವ ಅವಿನಾಭ ಸಂಬಂಧ ಇದೆ.

ಶತಮಾನಗಳಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಆಗಬೇಕು ಎನ್ನುವುದ ಭಕ್ತರ ಕನಸು. ಈ ಕನಸು ಸದ್ಯ ನನಸಾಗುವ ಕಾಲ ಬಂದಿದೆ. ಮಂದಿರ ಶಿಲಾನ್ಯಾಸಕ್ಕೆ ಮೂಹುರ್ತ ನೀಡಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯದ ಕುಲಪತಿ ಎನ್ ಆರ್ ವಿಜಯೇಂದ್ರ ಶರ್ಮಾ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ಶರ್ಮಾ ನೀಡಿದ್ದ 5 ಮೂಹೂರ್ತಗಳಲ್ಲಿ ಆಗಸ್ಟ್ 5 ನ್ನು ರಾಮ ಮಂದಿರ ಟ್ರಸ್ಟ್ ಆಯ್ಕೆ ಮಾಡಿಕೊಂಡಿದೆ.

ಶ್ರೀರಾಮನಿಗಾಗಿ ಶಬರಿ ಕಾಯ್ದಳು ಎನ್ನಲಾದ ಐತಿಹಾಸಿ ದೇವಸ್ಥಾನವೊಂದು ಸಹ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹೊರ ವಲಯದಲ್ಲಿ ಇದೆ. ಶಬರಿಕೊಳ್ಳ ಅಂತಲೇ ಈ ಪುಣ್ಯ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ. ಎರಡು ಬೆಟ್ಟಗಳ ಕಣಿವೆ ಪ್ರದೇಶದಲ್ಲಿ ಸುಂದರ ಪ್ರಾಕೃತಿಕ ತಾಣದಲ್ಲಿ ದೇವಾಲಯ ಇದೆ. ಇಲ್ಲಿ ಹಲವು ಐತಿಹಾಸಿಕ ಕುರುಹುಗಳು ಇಂದಿಗು ನೋಡಲು ಸಿಗುತ್ತವೆ.

ಶ್ರೀರಾಮನ ಭಕ್ತಳಾದ ಶಬರಿ, ರಾಮ, ಲಕ್ಷಣನೊಂದಿಗೆ ವನವಾಸಕ್ಕೆ ಬುರವ ಮಾರ್ಗದಲ್ಲಿ ಕಾದು ತಾನು ಸಂಗ್ರಹಿಸಿದ್ದ ಬೋರೆ ಹಣ್ಣುಗಳನ್ನು ನೀಡುವ ಕಥೆ ರಾಮಾಯಣದಲ್ಲಿ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆ ನಡೆದಿರೋದು ಇದೇ ಶಬರಿಕೊಳ್ಳದಲ್ಲಿ ಎಂದೇ ಹೇಳಲಾಗುತ್ತದೆ. ಹಣ್ಣನ್ನು ಸ್ವೀಕರಿಸಿದ ಶ್ರೀರಾಮ, ಈಕೆ ಭಕ್ತಿಗೆ ಮೆಚ್ಚಿ ಏನು ವರಬೇಕೆಂದು ಕೇಳುತ್ತಾನೆ.

ಇದನ್ನೂ ಓದಿ : ಕೋವಿಡ್ ಸಂದರ್ಭದಲ್ಲಿ ಕಲಿಕೆ ನಿರಂತರತೆಗೆ ವಿದ್ಯಾಗಮ ಜಾರಿ: ಹೀಗಿದೆ ಯೋಜನೆಯ ರೂಪುರೇಷೆ

ನಿನ್ನ ತೊಡೆಯ ಮೇಲೆ ಪ್ರಾಣ ಬಿಡುವ ವರ ನೀಡುವಂತೆ ಶರಬಿ ರಾಮನಿಗೆ ಕೇಳುತ್ತಾಳೆ. ಪ್ರಾಣ ಹೋಗುವ ಸಂದರ್ಭದಲ್ಲಿ ಬಾಯಿಗೆ ನೀರು ಬಿಡುವ ರಾಮ ಸುತ್ತಮುತ್ತಲೂ ನೋಡುತ್ತಾನೆ. ನೀರಿನ ಸೆಲೆ ಕಾಣಿಸದೇ ಇದ್ದಾಗ ಬಾಣ ಪ್ರಯೋಗ ಮಾಡಿ ನೀರು ಚಿಮ್ಮಿಸಿದೆ ಎಂದೇ ಐತಿಹಾಸಲ್ಲಿ ಹೇಳಲಾಗಿದೆ. ಹೀಗೆ ನೀರು ಚಿಮ್ಮಿದ ಎರಡು ಹೊಂಡಗಳು ಇಲ್ಲಿ ಸಾಕ್ಷಿಯಾಗಿ ಉಳಿದುಕೊಂಡಿವೆ. ಈ ಪೈಕಿ ಗಣಪತಿ ಹೊಂಡವು ಯಾವುದೇ ಕಾಲದಲ್ಲಿಯೂ ಬತ್ತದೇ ಇರುವುದರ ಬಗ್ಗೆ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Youtube Video
ನಂತರ ಇಲ್ಲಿ ಪ್ರಸಿದ್ಧ ಶಿಲ್ಪಿ ಜಕಣಾಚಾರಿ ನಿರ್ಮಾಣ ಮಾಡಿರುವ ಮಂದಿರ ಇಂದಿಗೂ ಇದೆ. ಜತೆಗೆ ಎರಡು ಪುಷ್ಕರಣಿಗಳು ನೋಡುಗರ ಆಕರ್ಷಣೆಯ ಸ್ಥಳವಾಗಿವೆ. ಸದ್ಯ ಇದೀಗ ಇದೊಂದು ಪ್ರವಾಸಿ ಸ್ಥಳವಾಗಿದ್ದು, ರಾಮದುರ್ಗ ಸೇರಿ ಅನೇಕ ಕಡೆಗಳಿಂದ ಜನ, ಭಕ್ತರು ಇಲ್ಲಿಗೆ ಆಗಮಿಸಿ ಶಬರಿಯ ದರ್ಶನ ಪಡೆಯತ್ತಿದ್ದಾರೆ.
Published by: G Hareeshkumar
First published: August 5, 2020, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories