HOME » NEWS » District » AVADHUTA VINAY GURUJI SAYS LORD SHIVA SAVED LIFE OF DCM KARAJOLAS SON VCTV SNVS

ಡಾಕ್ಟರ್, ಯಮನಿಗಿಂತ ಮಿಗಿಲಾದವನು ಶಿವ; ಕಾರಜೋಳರ ಮಗನ ವಿಚಾರದಲ್ಲಿ ಇದು ನಿಜವಾಗಿದೆ: ವಿನಯ್ ಗುರೂಜಿ

ತಮ್ಮ ಮಗ ಉಳಿಯುವುದಿಲ್ಲ ಎಂದುಕೊಂಡಿದ್ದ ಡಿಸಿಎಂ ಕಾರಜೋಳರಿಗೆ ವಿನಯ್ ಗುರೂಜಿ ಭರವಸೆ ಒದಗಿಸಿದ್ದರು. ಅದರಂತೆ ಮಗ ಬದುಕಿದ್ದಾನೆ. ಗುರೂಜಿ ಆಶ್ರಮದಲ್ಲಿ ದತ್ತಾತ್ರೇಯನ ಪ್ರಾರ್ಥನೆ ಮಾಡಲಾಗಿತ್ತು. ಅದರಿಂದಾಗಿ ಜೀವ ಉಳಿಯಿತು ಎಂದು ಅವಧೂತರು ಹೇಳಿದ್ದಾರೆ.

news18-kannada
Updated:February 28, 2021, 7:47 AM IST
ಡಾಕ್ಟರ್, ಯಮನಿಗಿಂತ ಮಿಗಿಲಾದವನು ಶಿವ; ಕಾರಜೋಳರ ಮಗನ ವಿಚಾರದಲ್ಲಿ ಇದು ನಿಜವಾಗಿದೆ: ವಿನಯ್ ಗುರೂಜಿ
ವಿನಯ್ ಗುರೂಜಿ ಜೊತೆ ಡಿಸಿಎಂ ಗೋವಿಂದ ಕಾರಜೋಳ
  • Share this:
ಚಿಕ್ಕಮಗಳೂರು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿನಯ್ ಗುರೂಜಿಯ ಗೌರಿಗದ್ದೆ ಆಶ್ರಮದಲ್ಲಿ ಮೃತ್ಯುಂಜಯ ಹೋಮ ನಡೆಸಿದ್ದಾರೆ. ಎರಡು ತಿಂಗಳಿನಿಂದ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ತಮ್ಮ ಮಗನಿಗೆ ಏನೂ ಆಗಲ್ಲ ಎಂದು ವಿನಯ್ ಗುರೂಜಿ ಹೇಳಿದ್ದರು. ಅದರಂತೆ ಕಾರಜೋಳರ ಮಗ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿನಯ್ ಗುರೂಜಿ ಆಶ್ರಮಕ್ಕೆ ಬಂದು ಅವಧೂತ ವಿನಯ್ ಗುರೂಜಿ ಅವರ ಆಶೀರ್ವಾದ ಪಡೆದು ಮೃತ್ಯುಂಜಯ ಹೋಮ ನಡೆಸಿದ್ದಾರೆ.

ಡಿಸಿಎಂ ಕಾರಜೋಳ ಅವರ ಮಗ ಎರಡು ತಿಂಗಳು ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನ ಏರ್‍ಲಿಫ್ಟ್ ಮಾಡಲಾಗಿತ್ತು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರೇ ಹೋಪ್ ಕಳೆದುಕೊಂಡಿದ್ದರು. ಆಗ ವಿನಯ್ ಗುರೂಜಿ ಕಾರಜೋಳ ಅವರನ್ನ ಭೇಟಿ ಮಾಡಿ ಎರಡು ತಿಂಗಳು ಬಿಟ್ಟು ನಾನು ಅವನ ಜೊತೆ ದೋಸೆ ತಿಂತೀನಿ ಎಂದಿದ್ದರು. ಅವನಿಗೆ ಏನೂ ಆಗಲ್ಲ. ನೀವು ಭಯಪಡಬೇಡಿ ಎಂದು ಡಿಸಿಎಂ ಕಾರಜೋಳಾಗೆ ಧೈರ್ಯ ತುಂಬಿದ್ರು. ಅದೇ ರೀತಿ, ಡಿಸಿಎಂ ಕಾರಜೋಳರ ಪುತ್ರ ಹುಷಾರಾಗಿದ್ದಾರೆ. ಆರಾಮಾಗಿದ್ದಾರೆ. ಚೆನ್ನಾಗಿದ್ದಾರೆ. ಅದಕ್ಕೆ ವಿನಯ್ ಗುರೂಜಿ ಅಂದು ತೋರಿದ ಪ್ರೀತಿಗೆ ಡಿಸಿಎಂ ಸಾಹೇಬ್ರು ಕೂಡ ಭಕ್ತಿಯ ಋಣ ತೀರಿಸಿದ್ದಾರೆ. ವಿನಯ್ ಗುರೂಜಿಯ ಕೊಪ್ಪ ತಾಲೂಕಿನ ಗೌರಿಗದ್ದೆ ಸ್ವರ್ಣಪೀಠಿಕೇಶ್ವರಿ ಆಶ್ರಮದಲ್ಲಿ ಮೃತ್ಯುಂಜಯ ಹೋಮ ಮಾಡಿಸಿ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿದೆ ಬೀಡಿ ಉದ್ಯಮ, ಪರ್ಯಾಯ ವ್ಯವಸ್ಥೆಗಾಗಿ ಕಾಯುತ್ತಿದ್ದಾರೆ ಕಾರ್ಮಿಕರು

ಅವತ್ತು ವೈದ್ಯರು ಆಗಲ್ಲ ಎಂದಾಗ ಇದೇ ವಿನಯ್ ಗುರೂಜಿ ಡಾಕ್ಟ್ರು, ಯಮನಿಗಿಂತ ಶಿವ ದೊಡ್ಡವನು ಎಂದಿದ್ರು. ಅದನ್ನ ಇಂದು ದತ್ತಾತ್ರೇಯ ಗುರುಗಳು ಸಾಬೀತು ಮಾಡಿದ್ದಾರೆ ಎಂದು ವಿನಯ್ ಗುರೂಜಿಯೇ ಹೇಳಿದ್ದಾರೆ. ನಾನು ಅಂದೇ ಹೇಳಿದ್ದೇ ಎರಡು ತಿಂಗಳು ಬಿಟ್ಟು ಅವನ ಜೊತೆ ದೋಸೆ ತಿಂತೀನಿ ಎಂದು, ನಾನೀಗ ಆತನ ಜೊತೆ ದೋಸೆ ತಿನ್ನುವ ಕೆಲಸ ಬಾಕಿ ಇದೆ ಎಂದು ನಗುಮೊಗದಲ್ಲಿ ಹೇಳಿದ್ರು. ನಾನು ಹಾಗೇ ಹೇಳಿದ್ದಾಗ ಎಲ್ಲಾ ವೈದ್ಯರು ಕೂಡ ಶಾಕ್ ಆಗಿದ್ರು. ಕಾರಜೋಳರ ಮಗನನ್ನ ಅಂದು ಏರ್‍ಲಿಫ್ಟ್ ಮಾಡಲಾಗಿತ್ತು. ಅವತ್ತು ದತ್ತಾತ್ರೇಯರಿಗೆ ಪ್ರಾರ್ಥನೆ ಮಾಡಿದ್ದೆವು. 16 ದಿನ 48 ಜನ ನೀರಲ್ಲಿ ಕೂತು ಜಪ ಮಾಡಿದ್ದರು. ಇಂದು ಅವರ ಮಗ ಗುಣಮುಖರಾಗಿದ್ದಾರೆ. ವೇದದ ತಾಕತ್ತೇನೆಂದು ಭಗವಂತ ಸೈನ್ಸ್ ಹಾಗೂ ಪ್ರಪಂಚಕ್ಕೆ ತೋರಿಸಿದ್ದಾನೆ ಎಂದು ವಿನಯ್ ಗುರೂಜಿ ವೇದದ ಶಕ್ತಿಯನ್ನ ಮತ್ತೊಮ್ಮೆ ಹೇಳಿದ್ದಾರೆ. ಆ ಪೂಜೆಯ ಕೊನೆ ದಿನದ ಮೃತ್ಯಂಜಯ ಯಾಗದಲ್ಲಿ ಡಿಸಿಎಂ ಕಾರಜೋಳ ಭಾಗಿಯಾಗಿ ಪೂರ್ಣಾಹುತಿಗೊಳಿಸಿದ್ದಾರೆ.

ಒಟ್ಟಾರೆ, ವೇದದ ಶಕ್ತಿಯೋ, ವೈದ್ಯರ ಪ್ರಯತ್ನದ ಫಲವೋ, ಕಾರಜೋಳರ ಪುತ್ರನ ಹಣೆಬರಹವೋ ಗೊತ್ತಿಲ್ಲ, ಇವತ್ತು ಅವ್ರು ಹುಷಾರಾಗಿ ಚೆನ್ನಾಗಿದ್ದಾರೆ. ವೈದ್ಯರ ಚಿಕಿತ್ಸೆಯಿಂದ ಹುಷಾರಾದ್ರೋ, ಋತ್ವಿಜರು ನೀರಲ್ಲಿ ಕೂತು ಜಪ ಮಾಡಿದಕ್ಕೆ ಹುಷಾರಾದ್ರೊ ಅದೂ ಗೊತ್ತಿಲ್ಲ. ಯಾರಿಂದಲೋ, ಹೇಗೋ ಹುಷಾರಾಗಿದ್ದಾರೆ. ಕುಟುಂಬಸ್ಥರಲ್ಲಿ ಸಂತಸ ಮೂಡಿದೆ. ಇಲ್ಲಿ ವಿಜ್ಞಾನ ಸೋತು ವೇದ ಗೆದ್ದಿತು ಎನ್ನುವುದಕ್ಕಿಂತ ಎಲ್ಲರ ಪ್ರಯತ್ನದ ಫಲವಾಗಿ ಒಂದು ಜೀವ ಉಳಿದಿದೆ ಎಂದರೂ ತಪ್ಪಿಲ್ಲ ಅನಿಸುತ್ತೆ.

ವರದಿ: ವೀರೇಶ್ ಹೆಚ್ ಜಿ
Published by: Vijayasarthy SN
First published: February 28, 2021, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories