ತುಮಕೂರುನ ಹೆಗ್ಗೆರೆಯಲ್ಲಿ ಕಳುವಾಗಿದ್ದ ಎಟಿಎಂ ನೆಲಮಂಗಲದಲ್ಲಿ ಪತ್ತೆ

ಜ. 18ರಂದು ತುಮಕೂರಿನ ಹೆಗ್ಗೆರೆಯಲ್ಲಿ ಕಳ್ಳರು ಎಟಿಎಂ ಮೆಷೀನ್ ಅನ್ನೇ ಹೊತ್ತೊಯ್ದಿದ್ದರು. ಅದೇ ದಿನ ನೆಲಮಂಗಲ ಬಳಿಯ ಹಳ್ಳಿಯೊಂದರಲ್ಲಿ ಯಂತ್ರವೊಂದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪತ್ತೆಯಾಗಿತ್ತು. ಅದೀಗ ಅದೇ ಎಟಿಎಂ ಎಂಬುದು ದೃಢಪಟ್ಟಿದೆ. ಕಳ್ಳರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ನೆಲಮಂಗಲದ ಹಳ್ಳಿಯೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಎಟಿಎಂ ಮೆಷೀನ್

ನೆಲಮಂಗಲದ ಹಳ್ಳಿಯೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಎಟಿಎಂ ಮೆಷೀನ್

  • Share this:
ನೆಲಮಂಗಲ (ಜ. 21): ಕೆಲ ದಿನಗಳ ಹಿಂದೆ ತುಮಕೂರಿನ ಹೊರವಲಯದ ಹೆಗ್ಗೆರೆ ಗ್ರಾಮದಲ್ಲಿ ಕಳುವಾಗಿದ್ದ ಎಟಿಎಂ ಮೆಷಿನ್ ಇದೀಗ ನೆಲಮಂಗಲ ಸಮೀಪದ ಗ್ರಾಮವೊಂದರಲ್ಲಿ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬರಗೇನಹಳ್ಳಿ ಗ್ರಾಮದ ಹೋರಗಿನ ರೈತ ಪುಟ್ಟಗಂಗಯ್ಯನ ಅಡಕೆ ತೋಟದಲ್ಲಿ ಬೆಳಿಗ್ಗೆ 7 ಗಂಟೆಗೆ ಯಾವುದೋ ರೀತಿಯ ಮೆಷಿನನ್ನು ಹೋಡೆದು ಹಾಕಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು, ಮೆಷಿನ್‌ ನೋಡಿದ ಸ್ಥಳೀಯ ಗ್ರಾಮಸ್ಥರು ಇಲ್ಲಿ ಯಾವುದೋ ದುಷ್ಕೃತ್ಯ ನಡೆದಿದೆ ಎಂದು ಅನುಮಾನಗೊಂಡು ಕೂಡಲೆ ಡಾಬಸ್‌ಪೇಟೆ ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.  ಪೋಲಿಸರು ಬಂದು ಸ್ಥಳ ಪರಿಶೀಲನೆ ನಡೆಸಿದಾಗ ಅದು ಎಟಿಎಂ ಮಿಷಿನ್ ಎಂದು ತೀಳಿದು ಬಂದಿತ್ತು. ಕೂಡಲೆ ಕಂಟ್ರೋಲ್ ರೂಂ‌ಗೆ ಕರೆ ಮಾಡಿ ಸುತ್ತ ಮುತ್ತಲ ಠಾಣೆಗಳಲ್ಲಿ ಎಲ್ಲಿಯಾದರೂ ಎಟಿಎಂ ಮೆಷಿನ್ ಸಮೇತ ಕಳವಾಗಿದೆಯ ಎನ್ನುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕಳೆದ 18 ನೇ ತಾರೀಕಿನಂದು ತುಮಕೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ರಿಯ ಹೆಗ್ಗೆರೆ ಗ್ರಾಮದಲ್ಲಿ ಇಂಡಿಯನ್ ಓವರ್ ಸಿಸ್ ಬ್ಯಾಂಕ್‌‌ಗೆ ಸಂಬಂಧಿಸಿದ 85 ಸಾವಿರ ನಗದು ಹೊಂದಿದ್ದ ಎಟಿಎಂ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿರುವುದು ತಿಳಿದುಬರುತ್ತದೆ. ಕಳ್ಳರು ಎಟಿಎಂ ಮೆಷೀನ್ ಅನ್ನು ದರೋಡೆ ಮಾಡಿ ಅದನ್ನು ಈ ಗ್ರಾಮಕ್ಕೆ ತಂದು ಬಿಸಾಡಿರುವುದು ಬೆಳಕಿಗೆ ಬಂದಿದೆ. 

ತೆಂಗಿನ ಕಾಯಿ ನೋಡುತ್ತಿದ್ದೇವೆ ಎಂದಿದ್ದ ಆರೋಪಿಗಳು: ಎಟಿಎಂ ಮಿಶಿನ್ ತಂದವರು ಜ. 18ರಂದು ಬೆಳಿಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಬರಗೇನಹಳ್ಳಿಯ ತೋಟದ ರಸ್ತೆಯಲ್ಲಿ ಟಾಟಾ ಏಸ್ ಗಾಡಿಯಲ್ಲಿ ಹೋಗುತ್ತಿದ್ದಾಗ ಸ್ಥಳೀಯ ರೈತ ಪುಟ್ಟಗಂಗಯ್ಯ ಏಕೆ ಎಂದು ವಿಚಾರಿಸಿದ್ದರು. ನಾವು ತೆಂಗಿನ ಕಾಯಿ ಕೊಳ್ಳುವವರು. ಇಲ್ಲಿ ಯಾರೋ ಒಬ್ಬರು ತೆಂಗಿನ ಕಾಯಿ ಇದೆ ಅಂತ ಹೇಳಿದ್ದರು. ಅದನ್ನು ನೋಡಲು ಹೋಗುತ್ತಿದ್ದೇವೆ ಎಂದು ಹೇಳಿ ನಿಲ್ಲದೆ ಹೊರಟಿದ್ದಾರೆ. ಆ ವಾಹನದಲ್ಲಿ ನಂಬರ್ ಇರಲಿಲ್ಲಾ ಎಂದು ಪುಟ್ಟಗಂಗಯ್ಯ ಪೋಲಿಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಬೇವಿನ ಮರದಿಂದ ಹಾಲಿನಂತಹ ದ್ರವ; ಯಲ್ಲಮ್ಮನ ಪವಾಡ ಎಂದು ಮುಗಿಬಿದ್ದಿರುವ ಜನರು

ಅಡಿಕೆ ತೋಟದಲ್ಲಿ ಆಪರೇಷನ್: ಎಟಿಎಂ ಮಿಷಿನ್ ತಂದವರು ಮೊದಲು ನೀಲಗಿರಿ ತೋಪಿನಲ್ಲಿ ಇಳಿಸಿದ್ದು ಅದು ಜನ ಓಡಾಡುವ ಪ್ರದೇಶ ಎಂದು ತಿಳಿದಾಗ ಅಲ್ಲಿಂದ ಸುಮಾರು 300 ಅಡಿ ದೂರ ಇರುವ ಅಡಿಕೆ ತೋಟಕ್ಕೆ ಹೊತ್ತೊಯ್ದಿದ್ದಾರೆ. ಅಲ್ಲಿ ತಂತಿ ಬೇಲಿಯ ಕಂಬಿ ಕಿತ್ತು ತದನಂತರ ಅಲ್ಲಿನ ಬೋರ್‌ವೆಲ್ ಮಿಷಿನ್ ರೂಮ್‌ನ ಬೀಗ ಹೋಡೆದು ವಿದ್ಯುತ್ ಬಳಸಿಕೊಂಡು ಎಲೆಕ್ಟ್ರಿಕ್‌ ಕಟ್ಟರ್‌ನಿಂದ  ಮೆಷಿ‌ನ್ ಓಪನ್ ಮಾಡಿ ಅದರಲ್ಲಿದ್ದ 85 ಸಾವಿರ ತೆಗೆದುಕೊಂಡು ಹೋಗಿದ್ದಾರೆ.

ತುಮಕೂರು ಗ್ರಾಮಾಂತರ ಠಾಣೆಗೆ ಮೆಷಿನ್ ಹಸ್ತಾಂತರ: ಪ್ರಕರಣ ದಾಖಲಿಸಿಕೊಂಡ ಡಾಬಸ್‌ಪೇಟೆ ಪೇಟೆ ಪೊಲೀಸರು ಜಖಂಗೊಂಡ ಎಟಿಎಂ ಮೆಷಿನ್ ಅನ್ನು ನೆಲಮಂಗಲ ವೃತ್ತ ನಿರೀಕ್ಷಕರಾದ ಎಂ. ಆರ್ ಹರೀಶ್ ನೇತೃತ್ವದಲ್ಲಿ ತುಮಕೂರು ಗ್ರಾಮಾಂತರ ಠಾಣೆ ಆರಕ್ಷಕ ಉಪ ನಿರೀಕ್ಷಕರಾದ ಲಕ್ಷಯ್ಯ ಮುಖಾಂತರ ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ: ನಿಯಮ ಮೀರಿ ಮಣ್ಣು ಬಗೆದು ಕೆರೆ ಹಾಳು ಮಾಡಿದ ಖಾಸಗಿ ಕಂಪನಿ; ಕ್ರಮ ಕೈಗೊಳ್ಳದ ಸಣ್ಣ ನೀರಾವರಿ ಇಲಾಖೆ

ಸದ್ಯ ಘಟನೆಗೆ ಸಂಬಂಧಿಸಿದಂತೆ ಡಾಬಸ್‌ಪೇಟೆ ಹಾಗೂ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹೆದ್ದಾರಿಯಲ್ಲಿ ತುಮಕೂರಿನ ಹೆಗ್ಗೆರೆಯಿಂದ ಡಾಬಸ್‌ಪೇಟೆಯ ಬರಗೇಬಹಳ್ಖಿ ವರೆಗೆ ರಸ್ತೆಯುದ್ದಕ್ಕೂ ಸಿಸಿ ಕ್ಯಾಮೆರಾ ಪರಿಶೀಲನೆಗೆ ಮುಂದಾಗಿದ್ದಾರೆ.

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by:Vijayasarthy SN
First published: