ಬೆಳಗಾವಿ (ಜುಲೈ 03); ದೇಶದಾದ್ಯಂತ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ವುತ್ತಲೆ ಇದೆ. ಅದರಲ್ಲೂ ಕರ್ನಾಟಕದಲ್ಲಿ ಇತ್ತಿಚ್ಚೆಗೆ ನಿತ್ಯವೂ ಕೊರೋನಾ ಪೀಡಿತರ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ. ಸಾವಿನ ಸಂಖ್ಯೆ ಕೂಡ ಹೆಚ್ಚಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಪರಿಣಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಜನ ಸ್ವಯಂ ಪ್ರೇರಣೆಯಿಂದ ಗ್ರಾಮವನ್ನ ಲಾಕಡೌನ್ ಮಾಡಲು ನಿರ್ಧರಿಸಿದ್ದಾರೆ.
ಮುಂಬೈ ದೇಶದ ಕೊರೋನಾ ರಾಜಧಾನಿಯಾಗಿ ಬದಲಾಗಿದೆ. ಮುಂಬೈನಿಂದ ದೇಶದ ನಾನಾ ಮೂಲೆಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಂದ ಕೊರೋನಾ ಸೋಂಕು ಎಲ್ಲೆಡೆ ಹರಡುತ್ತಿದೆ. ಬೆಳಗಾವಿಯೂ ಮಹಾರಾಷ್ಟ್ರದ ಗಡಿಯಲ್ಲೇ ಇರುವ ಕಾರಣ ಮಾರಣಾಂತಿಕ ಸೊಂಕಿನ ಭಯ ಎದುರಿಸುತ್ತಿದೆ. ಹೀಗಾಗಿ ಈ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಜನ ದಿಟ್ಟ ಹೆಜ್ಜೆಯನ್ನಿರಿಸಿದ್ದಾರೆ.
ಈಗಾಗಲೇ ಅಥಣಿ ತಾಲೂಕಿನಲ್ಲಿ 23 ಕ್ಕೂ ಹೆಚ್ಚು ಜನರಿಗೆ ಕೊರೋನಾ ಬಂದಿದ್ದು ಅದರಲ್ಲಿ 4 ಜನ ಕೊರೋನಾದಿಂದ ಮೃತರಾಗಿದ್ದಾರೆ. ಒಂದೆ ತಾಲೂಕಿನಲ್ಲಿ 4 ಜನ ಮೃತರಾಗುತ್ತಿದ್ದಂತೆ ಭಯಭೀತರಾದ ಜನರೆ ಸರ್ಕಾರದ ನಿರ್ಧಾರಕ್ಕೆ ಕಾಯದೆ ಸ್ವಯಂ ಲಾಕಡೌನ್ ಘೋಷಣೆ ಮಾಡಿಕೊಂಡಿದ್ದಾರೆ.
4 ಘಂಟೆ ಮಾತ್ರ ವ್ಯಾಪಾರ:
ಇನ್ನು ಐಗಳಿ ಗ್ರಾಮದಲ್ಲಿ ಎಲ್ಲಾ ಗ್ರಾಮಸ್ಥರು ಒಂದೆಡೆ ಸೇರಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಗ್ರಾಮದಲ್ಲಿ ಎಲ್ಲರೂ ಸಹ ಒಟ್ಟಾಗಿದ್ದು ಕಟ್ಟುನಿಟ್ಟಾಗಿ ಪಂಚಾಯತಿಯ ನಿರ್ಧಾರಗಳನ್ನ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ನಿತ್ಯವೂ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ವಹಿವಾಟು ನಡೆಸಬೇಕು. ಬಳಿಕ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಗಳನ್ನ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನ ಬಂದ ಮಾಡಬೇಕು. ಸ್ಥಳೀಯರು ಎಲ್ಲೂ ಹೊರಗಡೆ ಓಡಾದೆ ಮನೆಯಲ್ಲೇ ಇರಬೇಕು. ಅಲ್ಲದೆ, ವಾರದ ಸಂತೆಯನ್ನು ರದ್ದು ಮಾಡುವ ತೀರ್ಮಾನ ಮಾಡಿ ಗ್ರಾಮದಲ್ಲಿ ಡಂಗೂರ ಸಾರಿದ್ದಾರೆ.
ಇದನ್ನೂ ಓದಿ : ಶೀಘ್ರವೇ ಅಮೆರಿಕ, ಕೆನಡಾ, ಸೌದಿಗೆ ವಿಮಾನ ಸೇವೆ ಪ್ರಾರಂಭ?; ಅಧಿಕಾರಿಗಳಿಂದ ಸುಳಿವು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ