Garbage problem: ಮಧ್ಯರಾತ್ರಿ ಕಸ ಹಾಕುವವರ ಮೈಚಳಿ ಬಿಡಿಸಿದ ಸ್ಥಳೀಯರು, ಕಸ ಹಾಕಿದವರಿಂದಲೇ ಕಸ ಬಾಚಿಸಿದ ಯುವಕರು

ಚಿಕ್ಕಮಗಳೂರಲ್ಲಿ ಮಧ್ಯರಾತ್ರಿ ರಸ್ತೆಗೆ ಕಸ ಸುರಿಯುತ್ತಿದ್ದವರನ್ನು ಪತ್ತೆ ಹಚ್ಚಿದ ಸ್ಥಳಿಯ ಯುವಕರು ಅವರಿಂದಲೇ ಕಸ ತುಂಬಿಸಿದ್ದಾರೆ.

ರಸ್ತೆಯಲ್ಲಿ ಕಸದ ರಾಶಿ

ರಸ್ತೆಯಲ್ಲಿ ಕಸದ ರಾಶಿ

  • Share this:
ಚಿಕ್ಕಮಗಳೂರು: ಎಲ್ಲೆಂದರಲ್ಲಿ ಕಸ (Garbage) ತಂದು ಸುರಿಯೋದು  (Dumdped)ಹಲವರಿಗೆ ಕೆಟ್ಟ ಅಭ್ಯಾಸವಾಗಿದೆ. ಬೆಂಗಳೂರಂತಹ ನಗರಗಳಲ್ಲಿ ಮನೆ ಮುಂದೆಯೇ ಕಸದ ಗಾಡಿ ಬಂದ್ರು ಜನ ಕಸ ಹಾಕೋದಿಲ್ಲ ರಸ್ತೆಗಳಲ್ಲೇ ತಂದು ಸುರೀತಾರೆ. ಎಷ್ಟೆ ಹೇಳಿದ್ರು ಜನರಿಗೆ ಬುದ್ದಿ ಬರೋದಿಲ್ಲ. ಬಿಬಿಎಂಪಿ ಫೈನ್​ ಹಾಕಿದ್ರು ಕ್ಯಾರೆ ಅನ್ನೋದಿಲ್ಲ. ಇಂಥಾ ಘಟನೆಯೊಂದು ಚಿಕ್ಕಮಗಳೂರಿ(Chikkamagaluru)ನಲ್ಲಿ ನಡೀತಿದೆ. ಕೆಲವರು ನಿತ್ಯ ಮಧ್ಯರಾತ್ರಿ ರಸ್ತೆಗೆ ಕಸ ತಂದು ಸುರಿಯುತ್ತಿದ್ದರು. ಸ್ಥಳೀಯ ಯುವಕರು ಅವರನ್ನು ಪತ್ತೆ ಹಚ್ಚಿ ಅವರ ಕೈಯಲ್ಲೇ ಕಸ ತುಂಬಿಸಿದ್ದಾರೆ. ನಗರದ ಖಾಲಿ ಸೈಟು, ಲೈಟ್ ಕಂಬ ಹಾಗೂ ರಸ್ತೆಯ ತಿರುವುಗಳಲ್ಲಿ ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನ ಪತ್ತೆ ಹಚ್ಚಿದ ಯುವಕರು ತಕ್ಕಪಾಠ ಕಲಿಸಿದ್ದಾರೆ. 

ಚಿಕ್ಕಮಗಳೂರಲ್ಲಿ ಕಸದ ಕಿರಿಕ್​

ಚಿಕ್ಕಮಗಳೂರಿನ ಪಟ್ಟಣ ಭಾಗದಲ್ಲಿ ಎಲ್ಲೆಂದರಲ್ಲಿ ಕಸ ತಂದು ಸುರಿಯುವವರ ಸಂಖ್ಯೆ ಹೆಚ್ಚಾಗಿದೆ. ನಗರದ 26ನೇ ವಾರ್ಡಿನಲ್ಲಿ  ರಸ್ತೆ ಬದಿಗಳಲ್ಲಿ ಬೆಳಗಾಗುವುದರಲ್ಲಿ ಕಸ ತುಂಬಿರುತ್ತಿತ್ತು. ಯಾರು, ಯಾವಾಗ ಕಸ ತಂದು ಹಾಕ್ತಾರೆ ಅನ್ನೋದೇ ಸ್ಥಳಿಯರಿಗೆ ದೊಡ್ಡ ತಲೆನೋವಾಗಿತ್ತು. ಇದರಿಂದ ಸುತ್ತಮುತ್ತಲಿ ಮನೆಯವರಿಗೆ ಕೆಟ್ಟ ವಾಸನೆ ಕೂಡ ಬರುತ್ತಿತ್ತು. ನಗರದ ಸೌಂದರ್ಯವೂ ಹಾಳಾಗಿತ್ತು.

ಕಸ ಹಾಕುವವರನ್ನು ಪತ್ತೆ ಹಚ್ಚಿದ ತಂಡ

ರಸ್ತೆಗಳಿಗೆ ಕಸ ತಂದು ಸುರಿಯುವವರನ್ನು ಕಂಡು ಹಿಡಿಯಲೇ ಬೇಕು ಅಂತ ಸ್ಥಳೀಯ ಯುವಕರ ತಂಡ ನಿರ್ಧರಿಸಿತ್ತು. ಇದಕ್ಕಾಗಿ ನಗರದ ನಾಲ್ಕೈದು ಹುಡುಗರು ಮಧ್ಯರಾತ್ರಿವರೆಗೂ ಕಾದು ಕೂತು ಕಸ  ಹಾಕುವವರನ್ನ ಪತ್ತೆ ಹಚ್ಚಿದ್ದಾರೆ. ಅಷ್ಟೆ ಅಲ್ಲದೆ, ಕಸ ಹಾಕಿದವರ ಕೈಯಿಂದಲೇ ಬಾಚಿಸಿದ್ದಾರೆ. ಅಲ್ಲದೇ ನಾಳೆ ಬೆಳಗ್ಗೆ ಕಸದ ಗಾಡಿ ನಿತ್ಯ ಕಸ  ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಯುವಕರ ವಾರ್ನಿಂಗ್​

ರಾತ್ರಿ ಇಲ್ಲಿ ಕಸ ತಂದು ಸುರಿಯುವ ಬದಲು ಬೆಳಗ್ಗೆ ಬೇಗ ಎದ್ದು ಪ್ರತಿದಿನ ಬರುವ ಕಸದ ಗಾಡಿಯಲ್ಲಿ ಕಸವನ್ನ  ಹಾಕಿ. ಇನ್ನು ಮುಂದೆ ಹೀಗೆ ರಸ್ತೆ ಬದಿ ಕಸ ಸುರಿಯುವುದು ಕಂಡು ಬಂದರೆ ಕಸವನ್ನ ತುಂಬಿಕೊಂಡು ಬಂದು ನಿಮ್ಮ ಮನೆಯ ಆವರಣದಲ್ಲಿ ಸುರಿಯೋದಾಗಿ  ಯುವಕರು ಎಚ್ಚರಿಕೆ ನೀಡಿದ್ದಾರೆ.

ಯುವಕನಿಗೆ ಸಿ.ಟಿ ರವಿ ಕ್ಲಾಸ್​

ಇತ್ತೀಚೆಗೆ ನಗರದ ಮಲ್ಲಂದೂರು ರಸ್ತೆಯಲ್ಲಿ ಉಪ್ಪಳ್ಳಿಗೆ ಹೋಗುವ ಮಾರ್ಗದಲ್ಲಿ ಹಾಡಹಗಲೇ ಯುವಕನೋರ್ವ ಉಪ್ಪಳ್ಳಿ ಚಿತಾಗಾರದ ಸಮೀಪ ಯಗಚಿ ನದಿಗೆ ಸೇರುವ ಹಳ್ಳಕ್ಕೆ ಬೈಕಿನಲ್ಲೇ ಕೂತೆ ಕಸ ಎಸೆದು ಹೋಗುತ್ತಿದ್ದನು. ಇದನ್ನ ಗಮನಿಸಿದ ಶಾಸಕ ಸಿ.ಟಿ.ರವಿ ಕಾರಿನಿಂದ ಕೆಳಗೆ ಇಳಿದು ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ರು.

ಈ ಹಳ್ಳದ ನೀರು ಯಗಚಿ ಜಲಾಶಯಕ್ಕೆ ಸೇರಲಿದೆ. ನಿಮ್ಮ ಮನೆ ಬಾಗಿಲಿಗೆ ಕಸದ ಗಾಡಿ ಬರತ್ತೆ. ಇಲ್ಲಿ ಏಕೆ ಕಸ ತಂದು ಹಾಕ್ತೀರಾ ಎಂದು ಯುವಕನಿಗೆ ರಸ್ತೆ ಮಧ್ಯೆಯೇ ಸಿ.ಟಿ ರವಿ ಕ್ಲಾಸ್ ತೆಗೆದುಕೊಂಡಿದ್ದರು.

ನಗರದ ಕಲ್ಯಾಣ ನಗರದ ಬಳಿಯೂ ಯುವಕ ರಸ್ತೆಗೆ ಕಸ ಸುರಿದ ಹೋಗುವುದನ್ನ ಗಮನಿಸಿದ ನಗರಸಭೆ ಆಯುಕ್ತ ಬಸವರಾಜ್ ಅವನ ಕೈನಲ್ಲೇ ಕಸ ತುಂಬಿಸಿದ್ರು. ಇನ್ನು ಮುಂದೆ ಹೀಗೆ ರಸ್ತೆಯಲ್ಲಿ ಎಸೆದರೆ ಮನೆಗೆ ನೀಡಿರುವ ಮೂಲಭೂತ ಸೌಲಭ್ಯಗಳನ್ನ ಕಟ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ನಗರವನ್ನು ಸ್ವಚ್ಛವಾಗಿಡಲು ಲಕ್ಷ ಲಕ್ಷ ಹಣವನ್ನ ನಗರಸಭೆ ವ್ಯಯ ಮಾಡುತ್ತೆ. ಹಾಗಿದ್ರೂ ಸ್ಥಳೀಯರು ಈ ರೀತಿ ಕಸ ತಂದು ರಸ್ತೆ ಸುರಿಯೋದು ಬೇಸರ ತರಿಸಿದೆ. ಹೀಗಾಗಿ ಕಾದು ಕಸ ಹಾಕುವವರನ್ನ ಹುಡುಕಿ ಅವರಿಂದಲೇ ಕಸ ಬಾಚಿಸಿದ್ದೇವೆ ಅಂತ ಯುವಕರು ಹೇಳ್ತಿದ್ದಾರೆ.
Published by:Pavana HS
First published: