• Home
  • »
  • News
  • »
  • district
  • »
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾನವಿಯತೆ ಮೆರೆಯುತ್ತಿರುವ ಸಂಘ ಸಂಸ್ಥೆಗಳು; ಜನರ‌ ಮೆಚ್ಚುಗೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾನವಿಯತೆ ಮೆರೆಯುತ್ತಿರುವ ಸಂಘ ಸಂಸ್ಥೆಗಳು; ಜನರ‌ ಮೆಚ್ಚುಗೆ

ಪ್ರಾತಿನಿಧಿಕ ಚಿತ್ರ (ಫೋಟೋ: ಗೂಗಲ್​)

ಪ್ರಾತಿನಿಧಿಕ ಚಿತ್ರ (ಫೋಟೋ: ಗೂಗಲ್​)

ಕೊರೋನಾದಿಂದ ಸಾವು ಕಂಡಿದ್ದ ಓರ್ವನ ಮೃತ ದೇಹವನ್ನ ಮನಗೆ ತೆಗೆದುಕೊಂಡು ಹೋಗಲು ಕುಟುಂಬದವರು ನಿರಾಕರಿಸಿದ್ದರು. ಆಗ ಇಲ್ಲಿನ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ತಾವೇ ಖುದ್ದಾಗಿ ಮುಂದೆ ನಿಂತು ಶವ ಸಂಸ್ಕಾರ ನೆರವೇರಿಸಿ, ಮಾವಿಯತೆ ಮೆರೆದಿದ್ದಾರೆ.

  • Share this:

ಕಾರವಾರ: ಕೊರೋನಾ ಮಹಾಮಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಂಡವಾಡುತ್ತಿದೆ. ಜಿಲ್ಲೆಯಲ್ಲಿ ಸಹಜವಾಗಿ ಸತ್ತರೂ ಶವ ಸಂಸ್ಕಾರಕ್ಕೆ ಹೋಗಲು ಸಂಬಂಧಿಕರೆ ಹಿಂದೇಟು ಹಾಕುತ್ತಿದ್ದಾರೆ. ಕೊರೋನಾದಿಂದ ಸತ್ತರೆ ಬಿಡಿ ಶವವನ್ನ ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ಯಲು ಕೂಡ ಮೂಗು ಮುರಿಯುತ್ತಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಸಹಜವಾಗಿ ಸಾವು ಕಂಡ ಬಡ ಕುಟುಂಬದ ಮಹಿಳೆಯ ಶವ ಸಂಸ್ಕಾರವನ್ನು ಇಲ್ಲಿನ ರೆಡ್ ಕ್ರಾಸ್ ಸಂಸ್ಥೆಯವರು ಮಾಡಿದ್ದಾರೆ.


ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ನಿವಾಸಿ ಅಲ್ಕಾ ನಾಯ್ಕ್ ಎಂಬ ಮಹಿಳೆ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳು ಸಂಬಂಧಿತ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದರು. ತೀರಾ ಬಡ ಕುಟುಂಬ ಇವರದ್ದಾಗಿತ್ತು ಇವರ ಶವ ಸಂಸ್ಕಾರ ಮಾಡೋದು ಈಕೆಯ ಗಂಡನಿಗೆ ಭಾರವಾಗಿತ್ತು. ಕೊರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸಹಜ ಸಾವಿಗೂ ಶವ ಸಂಸ್ಕಾರ ಮಾಡಲು ಸಂಬಂಧಿಕರ ಅಕ್ಕಪಕ್ಕದವರು ನೆರವಾಗಿರಲಿಲ್ಲ. ಈ ಹೊತ್ತಲ್ಲಿ ನೆನಪಾಗಿದ್ದು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಈ  ಕುಟುಂಬಕ್ಕೆ ಆತ್ಮೀಯರಾಗಿದ್ದ ಮಾಧವ್ ನಾಯಕ್. ಮಾಧವ್ ನಾಯಕರಿಗೆ ಕಷ್ಟವನ್ನ ವಿವರಿಸಿದಾಗ ಕೂಡಲೇ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣ ಘಟಕದ ಸದಸ್ಯರೆಲ್ಲರು ಕೂಡಿ ಬಡ ಮಹಿಳೆಯ ಶವ ಸಂಸ್ಕಾರ ಮಾಡಿ ಮಾನವಿಯತೆ ಮೆರೆದಿದ್ದಾರೆ.


ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರಕಾರಿ ಆಸ್ಪತ್ರೆಯಲ್ಲಿ ಮೆದುಳು ಸಂಬಂಧ ಕಾಯಿಲೆಗೆ ತುತ್ತಾಗಿ ಅಲ್ಕಾ ನಾಯ್ಕ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವಿದಿಯಾಟಕ್ಕೆ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದರು. ದುರಂತ ಅಂದರೆ ಈಗ ಕೊರೋನಾ ಮಹಾಮಾರಿ ತಾಂಡವಾಡುತ್ತಿದ್ದು ಸಹಜವಾಗಿ ಸಾವು ಆದರೂ ಕೂಡಾ ಈಕೆಯ ಶವ ಸಂಸ್ಕಾರಕ್ಕೆ ಸಂಬಂಧಿಕರು ಮತ್ತು ಅಕ್ಕಪಕ್ಕದ ಜನರು ಬರಲು ಒಪ್ಪದ ಹಿನ್ನಲೆಯಲ್ಲಿ ಪೇಚಿಗೆ ಸಿಲುಕಿದ ಅಲ್ಕಾಳ ಗಂಡ ರೆಡ್ ಕ್ರಾಸ್ ಮೊರೆ ಹೋಗಿ ಕೊನೆಗೂ ಹಿಂದು ಪದ್ದತಿ ಯಂತೆ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ನೆರವೇರಿಸಲಾಯಿತು. ರೆಡ್ ಕ್ರಾಸ್ ಸದಸ್ಯರು ತಮ್ಮ ಖರ್ಚಿನಲ್ಲೆ ಶವ ಸಂಸ್ಕಾರ ಮಾಡಿದರು.


ಮುಂಡಗೋಡದಲ್ಲೂ ಮಾನವಿಯತೆ ಮೆರೆದ ಪಟ್ಟಣ ಪಂಚಾಯತ್ ಸಿಬ್ಬಂದಿ


ಇನ್ನೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ದಿನನಿತ್ಯಕ್ಕೂ ಹಲವು ಜನರು ಕೊರೋನಾ ಮಹಾಮಾರಿಗೆ ಸಾವಿನ ಮನೆ ಸೇರುತ್ತಿದ್ದಾರೆ. ಇಲ್ಲಿ ಶವ ಸಂಸ್ಕಾರ ಮಾಡೋದೆ ದೊಡ್ಡ ಕೆಲಸವಾಗಿ ಬಿಟ್ಟಿದೆ. ಹೀಗೆ ಕೊರೋನಾದಿಂದ ಸಾವು ಕಂಡಿದ್ದ ಓರ್ವನ ಮೃತ ದೇಹವನ್ನ ಮನಗೆ ತೆಗೆದುಕೊಂಡು ಹೋಗಲು ಕುಟುಂಬದವರು ನಿರಾಕರಿಸಿದ್ದರು. ಆಗ ಇಲ್ಲಿನ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ತಾವೇ ಖುದ್ದಾಗಿ ಮುಂದೆ ನಿಂತು ಶವ ಸಂಸ್ಕಾರ ನೆರವೇರಿಸಿ, ಮಾವಿಯತೆ ಮೆರೆದಿದ್ದಾರೆ.


ಕಾರವಾರದಲ್ಲಿ ಒಂದಲ್ಲೊಂದು ಸಮಸ್ಯೆ ಉಂಟಾಗುತ್ತಿದ್ದರೆ ಒಂದೆಡೆ ಮಾವಿಯತೆ ಸತ್ತು ಹೋಗಿದೆ. ಆದರೆ ಕೆಲವೊಂದು ಕಡೆ ಮಾನವಿಯತೆ ಇರೋರು ಇಂತಹ ಕೆಲಸದಲ್ಲಿ ಭಾಗಿಯಾಗಿ ಸತ್ತವರ ಆತ್ಮಕ್ಕೆ ಮುಕ್ತಿ ನೀಡುತ್ತಿದ್ದಾರೆ.

Published by:HR Ramesh
First published: