ಗದಗ (ಮಾ.10): ಅಪೂರ್ವಾ ಪುರಾಣಿಕ (Apoorva Pauranik) ಎಂಬ ಯುವತಿ 4 ವರ್ಷಗಳಿಂದ ಹುಬ್ಬಳ್ಳಿ ಮೂಲದ ಇಜಾಜ್ ಶಿರೂರು (Ijaz Shirur) ಎನ್ನುವ ಮುಸ್ಲಿಂ ಯುವಕನನ್ನು ಪ್ರೀತಿ (Love) ಮಾಡ್ತಾ ಇದ್ದಳು. ಪೋಷಕರ ವಿರೋಧದಲ್ಲೇ ಆತನನನ್ನು ವಿವಾಹವಾಗಿದ್ಳು, ಮೋಸ ಮಾಡಿ ಸುಳ್ಳು ಹೇಳಿ ಅಪೂರ್ವಳನ್ನು ಮದುವೆಯಾಗಿದ್ದ ಇಜಾಜ್. ಅಪೂರ್ವಗೆ ಒಂದು ಕೂಡ ಇದೆ. ಮಗುವಾದ ಬಳಿಕ ಆಕೆಯ ಇಜಾಜ್ ಮೊದಲೇ ಮದುವೆಯಾಗಿರೋ ಸತ್ಯ ಬಯಲಾಗಿದೆ. ಆಗ ಅಪೂರ್ವಾ ವಿಚ್ಚೇದನ (Divorce) ನೀಡಲು ಮುಂದಾಗುತ್ತಾಳೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಇಜಾಜ್ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಸುಳ್ಳು ಹೇಳಿ ಮದುವೆಯಾಗಿ ಕಿರುಕುಳ ಕೊಟ್ಟ
ಸತ್ಯ ಮುಚ್ಚಿಟ್ಟು ಅಪೂರ್ವಾಳನ್ನು ವಿವಾಹವಾದ ಇಜಾಜ್ ಮದುವೆ ಬಳಿಕ ತನ್ನ
ಅಸಲಿ ಆಟವನ್ನು ಆರಂಭ ಮಾಡಿದ್ದಾನೆ. ಅಪೂರ್ವಾಳನ್ನು ಮುಸ್ಲಿಂ ಸಂಪ್ರದಾಯದಂತೆ ನಡೆದುಕೊಳ್ಳುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಪೂರ್ವಾ ಪುರಾಣಿಕ ಬದಲಾಗಿ, ಅರ್ಪಾ ಬಾನು ಇಜಾಜ್ ಶಿರೂರು ಅಂತಾ ಮರು ನಾಮಕರಣ ಸಹ ಮಾಡಿದ್ದ. ಮದುವೆ ಬಳಿಕ ಇಜಾಜ್ ಶಿರೂರು ಪತ್ನಿಯ ಮೇಲೆ ನಿತ್ಯ ಕಿರುಕುಳ ನೀಡ್ತಾಯಿದ್ದ. ನೀನು ಬುರ್ಕಾ ಹಾಕಿಕೊಳ್ಳಬೇಕು ಒತ್ತಾಯ ಮಾಡಿ ಟಾರ್ಚರ್ ಕೊಟ್ಟಿದ್ದಾನೆ.
23 ಬಾರಿ ಮನಸೋ ಇಚ್ಚೆ ಚುಚ್ಚಿ ಹಲ್ಲೆ
ಇದನ್ನೆಲ್ಲಾ ಸಹಿಸಿಕೊಂಡು ಜೀವನ ಮಾಡ್ತಾಯಿದ್ದಳು ಈ ಅಪೂರ್ವಾ. ಆದ್ರೆ ಇಜಾಜ್ ಶಿರೂರು ಮೊದಲು ಒಂದು ಮದುವೆಯಾಗಿದ್ದಾನೆ ಅನ್ನುವ ಸತ್ಯ ಬಹಿರಂಗವಾದ ಮೇಲೆ ವಿಚ್ಚೇದನ ನೀಡಲು ಮುಂದಾಗಿದ್ದಾಳೆ. ಆಗ ಇಬ್ಬರ ನಡುವೆ ಜಗಳವಾಗಿ ಅಪೂರ್ವಾ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬಂದು ವಾಸ ಮಾಡ್ತಿದ್ಳು. ಆದರೆ ಏಕಾಏಕಿ ಬಂದ ಕಿರಾತಕ ಪತಿ ಇಜಾಜ್ ಅವಳ ಮೇಲೆ ಮಚ್ಚಿನಿಂದ 23 ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಅರ್ಪಾ ಬಾನುರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಮೋಸಗಾರ ಪತಿ ಇಜಾಜ್ ಸಹವಾಸ ಬೇಡ ಎಂದು ಗದಗ ತಾಯಿಯ ಮನೆಯಲ್ಲಿ ಅಪೂರ್ವಾ ಹಾಗೂ ಎರಡು ವರ್ಷದ ಮಗು ಕಳೆದ ನಾಲ್ಕು ತಿಂಗಳಿಂದ ವಾಸವಾಗಿದ್ರು. ಇಂದು ಗುರುವಾರ ಮುಂಜಾನೆ ಬೈಕ್ ಕಲಿಯಲು ಅಪೂರ್ವಾ ಹಾಗೂ ಪಕ್ಕದ ಮನೆಯ ರವಿ ಎನ್ನುವ ಹುಡುಗನ ಜೊತೆಗೆ ಗದಗ ನಗರದ ಲಯನ್ ಸ್ಕೂಲ್ ಗ್ರೌಂಡ್ ನಲ್ಲಿ ಬೈಕ್ ಕಲಿಯುವಾಗ ಏಕಾಏಕಿ ಪ್ರತ್ಯಕ್ಷವಾದ ಇಜಾಜ್ ಶಿರೂರು ಅಪೂರ್ವಾ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ.
ಇಜಾಜ್ ಶಿರೂರು ಅಪೂರ್ವಾಳನ್ನು ಮದುವೆಯಾಗುವ ಮುಂಚೆ ಮುಸ್ಲಿಂ ಸಮಾಜದ ಮಹಿಳೆಯನ್ನು ಮದುವೆಯಾಗಿದ್ದ. ಅವಳಿಗೆ ಮೂವರು ಮಕ್ಕಳು ಕೂಡಾ ಇದ್ದಾರಂತೆ! ಇಜಾಜ್ ಮದುವೆಯಾಗಿರೋ ಸತ್ಯ ಗೊತ್ತಾದ ಮೇಲೆ ಅಪೂರ್ವಾ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ನಾಳೆ ಕೋರ್ಟಿಗೆ ಹೋಗಬೇಕಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ