HOME » NEWS » District » ASHOK CHANDARGI URGES GOVERNMENT TO DEMOLISH OVERTAKEN MALAPRABHA LAND BEFORE MAHADAYI VERDICT HK

ಮಹದಾಯಿ ಅಂತಿಮ ತೀರ್ಪು ಬರುವ ಮುನ್ನವೇ ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸಿ ; ಅಶೋಕ್ ಚಂದರಗಿ ಆಗ್ರಹ

ಬರುವ ಬಜೆಟ್ ನಲ್ಲಿ ಒತ್ತುವರಿ ತೆರವಿಗೆ ಬಜೆಟ್ ನಲ್ಲಿ ಹಣ ಮೀಸಲಿಡಬೇಕು, ಇದರಲ್ಲಿ ರಾಜಕೀಯ ಅಸ್ತಕ್ಷೇಪವಾಗಬಾರದು. ಮಹದಾಯಿ ಅಂತಿಮ ತೀರ್ಪು ಬರುವ ಮುನ್ನವೇ ಸರ್ಕಾರ ಒತ್ತುವರಿಗೆ ತೆರವಿಗೆ ಮುಂದಾಗಬೇಕು ಇಲ್ಲವಾದಲ್ಲಿ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ

news18-kannada
Updated:September 2, 2020, 8:56 PM IST
ಮಹದಾಯಿ ಅಂತಿಮ ತೀರ್ಪು ಬರುವ ಮುನ್ನವೇ ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸಿ ; ಅಶೋಕ್ ಚಂದರಗಿ ಆಗ್ರಹ
ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ
  • Share this:
ಬಾಗಲಕೋಟೆ(ಸೆ. 02) : ಮಲಪ್ರಭಾ ನದಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಪಾಲಿಗೆ ಜೀವನಾಡಿ,ಮಲಪ್ರಭಾ ನದಿ ಪ್ರವಾಹಕ್ಕೆ ನದಿ ಒತ್ತುವರಿಯೇ ಕಾರಣ. ಸರ್ಕಾರ ಒತ್ತುವರಿ ತೆರವಿಗೆ ಸ್ಪಂದಿಸಿದ್ದಕ್ಕೆ ಸ್ವಾಗತಾರ್ಹ, ಇದೀಗ ಬೆಳಗಾವಿ ಕನ್ನಡ ಸಂಘಟನೆಗಳ ಕ್ರೀಯಾ ಸಮಿತಿ ಮಹದಾಯಿ ಅಂತಿಮ ತೀರ್ಪು ಮುನ್ನವೇ ಮಲಪ್ರಭೆ ನದಿ ಒತ್ತುವರಿ ತೆರವಿಗೆ ಸರ್ಕಾರ ಮುಂದಾಗಬೇಕೆಂದು ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ ಆಗ್ರಹಿಸಿದ್ದಾರೆ.

ಮಲಪ್ರಭಾ ನದಿ ಒತ್ತುವರಿ ತೆರವಿಗೆ ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಒತ್ತಡ ಹೆಚ್ಚಾಗಿದ್ದು. ಡಿಸಿಎಂ ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನದಿ ಒತ್ತುವರಿ ತೆರವಿಗಾಗಿ ಪತ್ರ ಬರೆದಿದ್ದು ಸ್ವಾಗತಾರ್ಹ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತಮಟ್ಟದ ಅಧಿಕಾರಿಗಳ ಹಾಗೂ ಸಂಬಂಧಿಸಿದ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಅಧಿಕಾರಿಗಳಿಗೆ ಪೂರ್ಣ ಪ್ರಮಾಣದ ಅಧಿಕಾರ ಕೊಡಬೇಕು . ಜೊತೆಗೆ ಬರುವ ಬಜೆಟ್ ನಲ್ಲಿ ಒತ್ತುವರಿ ತೆರವಿಗೆ ಬಜೆಟ್ ನಲ್ಲಿ ಹಣ ಮೀಸಲಿಡಬೇಕು, ಇದರಲ್ಲಿ ರಾಜಕೀಯ ಅಸ್ತಕ್ಷೇಪವಾಗಬಾರದು. ಮಹದಾಯಿ ಅಂತಿಮ ತೀರ್ಪು ಬರುವ ಮುನ್ನವೇ ಸರ್ಕಾರ ಒತ್ತುವರಿಗೆ ತೆರವಿಗೆ ಮುಂದಾಗಬೇಕು ಇಲ್ಲವಾದಲ್ಲಿ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಮಹದಾಯಿ ನದಿ ನೀರು ಕುಡಿಯುವ ಉದ್ದೇಶಕ್ಕಾಗಿ ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಕ್ಕೆ  ಹಂಚಿಕೆಯಾಗಿದ್ದು ಇನ್ನುಳಿದ ನೀರು  ಹಂಚಿಕೆಯಾಗಬೇಕಿದೆ.ಇನ್ನು ಮಲಪ್ರಭಾ ನದಿಯು ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ ಸೇರಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಂದಾಜು 365 ಕಿಮೀ ಅಧಿಕ ಉದ್ದವನ್ನು ಹೊಂದಿದ್ದು, 150ಮೀಟರ್ ಅಗಲವಾಗಿದ್ದು. ಮಹದಾಯಿ ಅಂತಿಮ ತೀರ್ಪು ಬಂದಾಗ  ಹಂಚಿಕೆಯಾದ ನೀರನ್ನು ನವಿಲು ತೀರ್ಥ ಜಲಾಶಯಕ್ಕೆ ಹರಿದು ಬರುತ್ತೆ.ಇದೇ ರೀತಿ ಮಳೆಯಾದರೆ ಮತ್ತೆ ಮಲಪ್ರಭಾ ನದಿ ಪಾತ್ರದಲ್ಲಿ ಇದಕ್ಕಿಂತ ಹೆಚ್ಚು ಹಾನಿ ಸಂಭವಿಸಲಿದೆ ಎಂದು ತಿಳಿಸಿದರು.

ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರವೇ ತೀರ್ಮಾನ ತೆಗೆದುಕೊಂಡು ಹಂತ ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಿ. ಈಗಾಗಲೇ  ನದಿ ಪಾತ್ರದಲ್ಲಿ ಸಾವಿರಾರು ಎಕರೆ  ಒತ್ತುವರಿ ಯಾಗಿದೆ. ಕಳೆದ 40 ವರ್ಷಗಳ ಹಿಂದೆ 1980ರಲ್ಲಿ ರಾಮದುರ್ಗದ ನಿವಾಸಿ ಮಾರುತಿ ಚಂದರಗಿ ನಾಗರಿಕ ವೇದಿಕೆಯನ್ನು ಕಟ್ಟಿಕೊಂಡು ಮಲಪ್ರಭೆ ಸ್ವಚ್ಚತೆ ಮತ್ತು ಒತ್ತುವರಿ ತೆರವಿಗೆ ಹೋರಾಟ ಮಾಡುತ್ತಲೇ ಬಂದಿದ್ರು. ಬಳಿಕ ಸೂರೇಬಾನ ಗ್ರಾಮದ ಪೂರ್ಣಿಮಾ ಗೌರೋಜಿ ನ್ಯಾಯಾಲಯದ ಮೆಟ್ಟಿಲು ಏರಿದ್ರು. ಹೀಗೆ ಸತತವಾಗಿ ಹೋರಾಟದ ಮಧ್ಯೆ ಇಂದು ನಿರಂತರ ಪ್ರವಾಹ ಸರ್ಕಾರವನ್ನು ಕಂಗೆಡುವಂತೆ ಮಾಡದೆ ಎಂದರು.

ಇದನ್ನೂ ಓದಿ : ಕರ್ನಾಟಕದಲ್ಲಿದೆ ಏಕೈಕ ಸಂಸ್ಕೃತ ಗ್ರಾಮ : ವ್ಯಾಪಾರ ವಹಿವಾಟು, ಸಂಭಾಷಣೆ ಸಹ ಸಂಸ್ಕೃತ ಭಾಷೆಯಲ್ಲೆ ಅದು ಎಲ್ಲಿದೆ ಗೊತ್ತಾ ?

ಆದ್ದರಿಂದ ಸರ್ಕಾರವೇ ಇದೀಗ ಒತ್ತುವರಿ ತೆರವು ನಡೆಸಲು ಮುಂದಾಗಿದ್ದು, ಇತ್ತ ಮಹದಾಯಿ ತೀರ್ಪಿನಲ್ಲಿ ಇನ್ನಷ್ಟು ನೀರು ನಮಗೆ ಸಿಗುವ ಭರವಸೆ ಇದ್ದು, ನೀರು ಸಿಕ್ಕಲ್ಲಿ ಮತ್ತಷ್ಟು ನೀರು ಹರಿಬಿಡಬೇಕಾಗುತ್ತದೆ. ಆದ್ದರಿಂದ ಇತ್ತ ಪ್ರವಾಹ ಅತ್ತ ಮಹದಾಯಿ ತೀರ್ಪಿನ ಪ್ರಕಟಣೆಯೊಳಗೆ ಆದಷ್ಟು ಬೇಗ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವು ಆಗಬೇಕು ಎಂದು ಒತ್ತಾಯಿಸಿದರು.
ಮಲಪ್ರಭಾ ನದಿ ಒತ್ತುವರಿ ತೆರವಿಗೆ ಅಂದಾಜು 1000ಕೋಟಿ ವೆಚ್ಚ ತಗುಲಬಹುದಾಗಿದ್ದು, ಒತ್ತುವರಿ ಮಾಡಿರುವ ಜಮೀನಿನ ಉತಾರದ ಮೇಲೆ ಭೋಜಾ ಹಾಕಿ, ಖರ್ಚು ಅವರಿಂದಲೇ ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ರೂಪಿಸಲಾಗುವುದು ಒತ್ತುವರಿ ತೆರವುಗೊಳಿಸುವಲ್ಲಿ ನೀರಾವರಿ, ಕಂದಾಯ, ಸರ್ವೆ ಇಲಾಖೆ ಜವಾಬ್ದಾರಿ ಹೆಚ್ಚಿದೆ. ಮಲಪ್ರಭಾ ನದಿಯಲ್ಲಿ ಹೂಳು ತುಂಬಿದೆ ಎಂದರು.
Published by: G Hareeshkumar
First published: September 2, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading