• Home
  • »
  • News
  • »
  • district
  • »
  • ಕಲಾವಿದನಾದ ಕಾರಣಕ್ಕೆ ಸಮಾಜದ ಬಹಿಷ್ಕಾರ; ಪುನೀತ್ ರಾಜ್​ಕುಮಾರ್ ಸಹಾಯಕ್ಕೆ ಕಾಯುತ್ತಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ನಟ!

ಕಲಾವಿದನಾದ ಕಾರಣಕ್ಕೆ ಸಮಾಜದ ಬಹಿಷ್ಕಾರ; ಪುನೀತ್ ರಾಜ್​ಕುಮಾರ್ ಸಹಾಯಕ್ಕೆ ಕಾಯುತ್ತಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ನಟ!

ಜೋಪಡಿಯಂತಹ ಮನೆಯಲ್ಲಿ ವಾಸವಾಗಿರುವ ಖ್ಯಾತ ನಟ ಎಂ.ಕೆ.ಮಠ

ಜೋಪಡಿಯಂತಹ ಮನೆಯಲ್ಲಿ ವಾಸವಾಗಿರುವ ಖ್ಯಾತ ನಟ ಎಂ.ಕೆ.ಮಠ

ಚಿತ್ರೀಕರಣ ನಡೆದು ಪುನೀತ್ ರಾಜ್ ಕುಮಾರ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದರೂ, ಕೊರೋನಾ ಕಾರಣಕ್ಕಾಗಿ ಅದು ಸಾಧ್ಯವಾಗಿರಲಿಲ್ಲ. ಬಳಿಕದ ದಿನಗಳಲ್ಲಿ ಪುನೀತ್ ಅವರನ್ನು ಸಂಪರ್ಕಿಸಲು ಇಷ್ಟರವರೆಗೂ ಅವಕಾಶ ಸಿಕ್ಕಿಲ್ಲ. ಆದರೂ ಪುನೀತ್ ರಾಜ್ ಕುಮಾರ್ ತನ್ನ ಕೈ ಬಿಡುವುದಿಲ್ಲ ಎನ್ನುವ ಭರವಸೆಯಲ್ಲೇ ದಿನ ದೂಡುತ್ತಿದ್ದಾರೆ ಈ ಖ್ಯಾತ ಪೋಷಕ ನಟ. 

ಮುಂದೆ ಓದಿ ...
  • Share this:

ಪುತ್ತೂರು; ಅತ್ಯುತ್ತಮ ಪೋಷಕ ನಟ ಎನ್ನುವ ರಾಜ್ಯ ಪ್ರಶಸ್ತಿ ವಿಜೇತ ನಟನಿಗೆ ತನ್ನ ಕುಟುಂಬವನ್ನೇ ಪೋಷಿಸಲಾಗದಂತಹ ಸ್ಥಿತಿಯಿದೆ. ರಾಜ್ಯದಲ್ಲಿ ಭಾರೀ ಯಶಸ್ಸು ಕಂಡ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ಯುವರತ್ನ ಚಿತ್ರದಲ್ಲಿ ಪುನೀತ್ ಉಳಿಸಲು ಹೊರಟ ಕಾಲೇಜಿನ ಗುಮಾಸ್ತನ ಪಾತ್ರದಲ್ಲಿ ಮಿಂಚಿದ್ದ ಈ ನಟ ಇದೀಗ ಸಹಾಯಕ್ಕಾಗಿ ಅಂಗಲಾಚುವಂತಹ ಪರಿಸ್ಥಿತಿಯಲ್ಲಿದ್ದಾರೆ. ಕಲಾವಿದನಾದ ಎನ್ನುವ ಒಂದೇ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರಕ್ಕೂ ಸಿಲುಕಿಕೊಂಡಿರುವ ಈ ನಟ ಇದೀಗ ಪುನೀತ್ ರಾಜ್ ಕುಮಾರ್ ನೀಡಿದ ಭರವಸೆಯ ನಿರೀಕ್ಷೆಯಲ್ಲಿ ಬದುಕುತ್ತಿದ್ದಾರೆ.


ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಿವಾಸಿಯಾಗಿರುವ ಅದ್ಭುತ ನಟನೆಯ ಮೂಲಕ ಚಿರಪರಿಚಿತವಾಗಿರುವ ಎಂ.ಕೆ.ಮಠ ಅವರ ಸದ್ಯದ ಸ್ಥಿತಿ. ರಂಗಭೂಮಿಯಲ್ಲಿ 32 ವರ್ಷಗಳ ಅಗಾಧ ಅನುಭವವನ್ನು ಹೊಂದಿರುವ ಎಂ.ಕೆ.ಮಠ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಜೊತೆಗೆ 16 ವರ್ಷಗಳ ಕಾಲ ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ನಾಗಾಭರಣ ನಿರ್ದೇಶನ ಕ್ಷೇತ್ರದಿಂದ ಸ್ವಲ್ಪ ಹಿಂದೆ ಸರಿದಾಗ ಎಂ.ಕೆ.ಮಠ ಅವರು ಅಭಿನಯ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿನ್ನಲೆಯಲ್ಲಿ ಎಂ.ಕೆ. ಮಠ ಅವರನ್ನು ಅವರ ಸಮಾಜ ಬಹಿಷ್ಕಾರದ ರೂಪದಲ್ಲಿ ಕಾಣಲಾರಂಭಿಸಿದೆ. ವರ್ಷದ ಹಿಂದೆ ಮನೆಯೊಂದನ್ನು ನಿರ್ಮಿಸಲು ಹೊರಟಿದ್ದ ಮಠ ಅವರಿಗೆ ಹಣಕಾಸಿನ ಸಹಾಯ ನೀಡಲು ಮುಂದೆ ಬಂದ ಸಮಾಜ ಬಾಂಧವರವರು ಬಹಿಷ್ಕಾರದ ಕಾರಣಕ್ಕಾಗಿ ಮತ್ತೆ ಹಿಂದೆ ಸರಿದಿದ್ದರು. ಬ್ಯಾಂಕ್ ನಲ್ಲಿ ಸಾಲ ಕೇಳಲು ಹೋದ ಸಂದರ್ಭದಲ್ಲಿ ಸಾಕ್ಷಿ ಹಾಕಲು ಬಂದ ಗೆಳೆಯರನ್ನೂ ಇದೇ ಬಹಿಷ್ಕಾರ ಹಿಂದೆ ಸರಿಯುವಂತೆ ಮಾಡಿದೆ. ಈ ಕಾರಣದಿಂದಾಗಿ ಕಟ್ಟಿಸಲು ಹೊರಟ ಮನೆ ಅರ್ಧದಲ್ಲೇ ಉಳಿಯುವಂತಾಗಿದೆ. ಇದರಿಂದಾಗಿ ಸಣ್ಣ ಜೋಪಡಿಯಲ್ಲೇ ಮನೆ ಮಂದಿಯೊಂದಿಗೆ ಬದುಕು ಸಾಗಿಸುವಂತಾಗಿದೆ.


ನಟ ಎಂ.ಕೆ. ಮಠ


ಇದನ್ನು ಓದಿ: ರಾಜ್ಯದ ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗೆ ತಜ್ಞರ ಮಾರ್ಗದರ್ಶನ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್


2008-09 ಸಾಲಿನ ಕರ್ನಾಟಕ ಸರಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗಗ್ಗರ ಚಿತ್ರಕ್ಕೆ ಪಡೆದುಕೊಂಡಿರುವ ಎಂ.ಕೆ.ಮಠ, ರಾಜ್ಯದಲ್ಲಿ ಭಾರೀ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಉಳಿಸಲು ಹೊರಟಿರುವ ಕಾಲೇಜಿನ ಗುಮಾಸ್ತನಾಗಿ ಕ್ಲೈಮಾಕ್ಸ್ ನಲ್ಲಿ ಪುನೀತ್ ಜೊತೆಗೆ ಮಿಂಚಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೂ ಪಾತ್ರವಾಗಿದೆ. ಯುವರತ್ನ ಚಿತ್ರೀಕರಣದ ಸಂದರ್ಭದಲ್ಲಿ ಎಂ.ಕೆ. ಮಠ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದ ಪುನೀತ್ ರಾಜ್ ಕುಮಾರ್ ಸಹಾಯದ ಅಭಯವನ್ನೂ ನೀಡಿದ್ದರು.


ಚಿತ್ರೀಕರಣ ನಡೆದು ಪುನೀತ್ ರಾಜ್ ಕುಮಾರ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದರೂ, ಕೊರೋನಾ ಕಾರಣಕ್ಕಾಗಿ ಅದು ಸಾಧ್ಯವಾಗಿರಲಿಲ್ಲ. ಬಳಿಕದ ದಿನಗಳಲ್ಲಿ ಪುನೀತ್ ಅವರನ್ನು ಸಂಪರ್ಕಿಸಲು ಇಷ್ಟರವರೆಗೂ ಅವಕಾಶ ಸಿಕ್ಕಿಲ್ಲ. ಆದರೂ ಪುನೀತ್ ರಾಜ್ ಕುಮಾರ್ ತನ್ನ ಕೈ ಬಿಡುವುದಿಲ್ಲ ಎನ್ನುವ ಭರವಸೆಯಲ್ಲೇ ದಿನ ದೂಡುತ್ತಿದ್ದಾರೆ ಈ ಖ್ಯಾತ ಪೋಷಕ ನಟ.

Published by:HR Ramesh
First published: