ಬಿಬಿಎಂಪಿ ಎಂಟು ವಲಯಗಳಿಗೆ ಹೆಲ್ಪ್​ಲೈನ್ ಇದ್ದರೂ ಸಾರ್ವಜನಿಕರಿಗೆ ಸಿಗುತ್ತಿಲ್ಲ ಸಹಾಯ

ಯಾವುದೇ ಮಾಹಿತಿ ಕೋರಿ ಸಹಾಯವಾಣಿಗೆ ಫೋನ್ ಮಾಡಿದರೂ ಸಿಬ್ಬಂದಿಯಿಂದ ಅಸಮರ್ಪಕ ಮತ್ತು ಅಸಹಾಯಕ ಉತ್ತರ ಬರುತ್ತದೆ. ಎಂಟು ವಲಯಗಳ ಹಲವೆಡೆ ಹೆಲ್ಪ್ ಲೈನ್ ನಂಬರ್​ಗಳಿಗೆ ಫೋನ್ ಮಾಡಿದರೆ ರಿಸೀವ್ ಕೂಡ ಆಗುತ್ತಿಲ್ಲ ಎಂಬ ಆರೋಪಗಳಿವೆ.

news18-kannada
Updated:August 8, 2020, 3:08 PM IST
ಬಿಬಿಎಂಪಿ ಎಂಟು ವಲಯಗಳಿಗೆ ಹೆಲ್ಪ್​ಲೈನ್ ಇದ್ದರೂ ಸಾರ್ವಜನಿಕರಿಗೆ ಸಿಗುತ್ತಿಲ್ಲ ಸಹಾಯ
ಬಿಬಿಎಂಪಿ ಹೆಲ್ಪ್ ಲೈನ್ ನಂಬರ್
  • Share this:
ಬೆಂಗಳೂರು(ಆ. 08): ನಗರದಲ್ಲಿ ಕೊರೋನಾ ಪ್ರಕರನಗಳು ಎಗ್ಗಿಲ್ಲದೆ ಮುಂದುವರಿಯುತ್ತಿವೆ. ಸರಿಯಾದ ಪರೀಕ್ಷಾ ಸೌಲಭ್ಯ, ಆಸ್ಪತ್ರೆ ವ್ಯವಸ್ಥೆ ಇತ್ಯಾದಿ ಇಲ್ಲವೆಂಬ ಆರೋಪಗಳು ಬಾರಿ ಬಾರಿ ಕೇಳಿಬರುತ್ತಲೇ ಇವೆ. ರಾಜ್ಯ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಇದನ್ನು ನಿಭಾಯಿಸುವುದು ಕೊರೋನಾ ಪ್ರಕರಣಗಳಿಗಿಂತ ಹೆಚ್ಚು ತಲೆಬಿಸಿಯಾಗಿದೆ. ಬಿಬಿಎಂಪಿ ಎಂಟು ವಲಯಗಳಿಗೆ ಪ್ರತ್ಯೇಕ ಹೆಲ್ಪ್​ಲೈನ್ ನಂಬರ್ ಮಾಡಿದ್ದರೂ ಗೊಂದಲ ಮುಂದುವರಿದಿದೆ. ಸಹಾಯವಾಣಿ ಸ್ವೀಕರಿಸುವ ಸಿಬ್ಬಂದಿಗೇ ಸರಿಯಾದ ಮಾಹಿತಿ ಇಲ್ಲವೆನ್ನಲಾಗುತ್ತಿದೆ.

ಯಾವುದೇ ಮಾಹಿತಿ ಕೋರಿ ಸಹಾಯವಾಣಿಗೆ ಫೋನ್ ಮಾಡಿದರೂ ಸಿಬ್ಬಂದಿಯಿಂದ ಅಸಮರ್ಪಕ ಮತ್ತು ಅಸಹಾಯಕ ಉತ್ತರ ಬರುತ್ತದೆ. ಎಂಟು ವಲಯಗಳ ಹಲವೆಡೆ ಹೆಲ್ಪ್ ಲೈನ್ ನಂಬರ್​ಗಳಿಗೆ ಫೋನ್ ಮಾಡಿದರೆ ರಿಸೀವ್ ಕೂಡ ಆಗುತ್ತಿಲ್ಲ ಎಂಬ ಆರೋಪಗಳಿವೆ.

ಬೆಂಗಳೂರಿನ 98 ವಾರ್ಡ್​ಗಳಲ್ಲಿ ಆರೋಗ್ಯ ಸಹಾಯ ಕೇಂದ್ರಗಳಲ್ಲಿ ಕೊರೋನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ನಿರ್ದಿಷ್ಟ ಮಾಹಿತಿ ಕೋರಿ ಸಹಾಯವಾಣಿಗೆ ಫೋನ್ ಮಾಡಿದರೆ ಆಗಲೂ ಅಸಮರ್ಪಕ ಉತ್ತರವೇ ಸಿಗುತ್ತಿದೆ. ಜಯನಗರದಲ್ಲಿ ಫೀವರ್ ಕ್ಲಿನಿಕ್ ಇಲ್ಲ, ಹತ್ತಿರದ ಕ್ಲಿನಿಕ್ ಅನ್ನು ಗೂಗಲ್ ಮಾಡಿ ಎಂಬ ಪುಕ್ಕಟ ಸಲಹೆ ಸಿಗುತ್ತದೆ.

ಇದನ್ನೂ ಓದಿ: ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೋನಾ ಕೇಸ್​ಗಿಂತ ಗುಣಮುಖರಾದವರೇ ಹೆಚ್ಚು

BBMP helpline numbers for Covid
ಬಿಬಿಎಂಪಿಯ ಸಹಾಯವಾಣಿ ನಂಬರ್​ಗಳು


ಬಸವನಗುಡಿ ಸಮೀಪ ಫೀವರ್ ಕ್ಲಿನಿಕ್ ಕೇಳಿದರೆ, ಹತ್ತಿರದಲ್ಲಿ ಇಲ್ಯಾವುದೂ ಇಲ್ಲ. ಬೇರೆ ಕಡೆ ಪ್ರಯತ್ನಿಸಿ ಎಂಬ ಬೇಜವಾಬ್ದಾರಿ ಉತ್ತರ ಸಿಗುತ್ತದೆ ಎಂದು ಅನೇಕ ಸಾರ್ವಜನಿಕರು ಹೆಲ್ಪ್​ಲೈನ್ ನಂಬರ್ ವ್ಯವಸ್ಥೆ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.
Published by: Vijayasarthy SN
First published: August 8, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading