HOME » NEWS » District » ARCHEOLOGY DEPT OFFICIALS VISIT HISTORICAL MANNE VILLAGE NEAR NELAMANGALA SNVS

ಐತಿಹಾಸಿಕ ಮಣ್ಣೆ ಗ್ರಾಮಕ್ಕೆ ಪುರಾತತ್ವ ತಜ್ಞರ ಭೇಟಿ; ನ್ಯೂಸ್18 ವರದಿ ಫಲಶೃತಿ

ಗಂಗರಸರ ಕಾಲದ ಮಣ್ಣೆ ಗ್ರಾಮದಲ್ಲಿ ಅಮೂಲ್ಯವಾದ ಶಿಲಾ ಶಾಸನಗಳ ಬಂಡೆಗೆ ಹಾನಿಯಾದ ಬಗ್ಗೆ ನ್ಯೂಸ್18 ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಪುರಾತತ್ವ ಇಲಾಖೆಯ ಅಧಿಕಾರಿಗಳು ಮಣ್ಣೆಗೆ ಭೇಟಿ ನೀಡಿದ್ದಾರೆ.

news18-kannada
Updated:October 6, 2020, 5:57 PM IST
ಐತಿಹಾಸಿಕ ಮಣ್ಣೆ ಗ್ರಾಮಕ್ಕೆ ಪುರಾತತ್ವ ತಜ್ಞರ ಭೇಟಿ; ನ್ಯೂಸ್18 ವರದಿ ಫಲಶೃತಿ
ನೆಲಮಂಗಲ ಬಳಿಯ ಮಣ್ಣೆ ಗ್ರಾಮಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ
  • Share this:
ನೆಲಮಂಗಲ(ಅ. 06): ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿಯ ಗಂಗರಸರ ರಾಜಧಾನಿಯಾಗಿದ್ದ ಮಣ್ಣೆ ಗ್ರಾಮದ ಮುಖ್ಯರಸ್ತೆಯಲ್ಲಿ ವಿಜಯನಗರ ಕಾಲದ ಎರಡು ಶಾಸನಗಳನ್ನು ಸಣ್ಣ ರಸ್ತೆ ನಿರ್ಮಾಣ ನೆಪದಲ್ಲಿ ಶಿಲಾ ಶಾಸನಗಳ ಬಂಡೆಗೆ ಹಾನಿ ಮಾಡಿರುವ ಬಗ್ಗೆ ಸಂಶೋಧಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ನ್ಯೂಸ್ 18 ಕನ್ನಡ ವರದಿ ಸಹ ಪ್ರಸಾರ ಮಾಡಿತ್ತು,  ಕೇಂದ್ರ ಸರಕಾರದ ಪುರಾತತ್ವ ಇಲಾಖೆಯ ಅದೀಕ್ಷಕ ಪುರಾತತ್ವ ತಜ್ಞರಾದ ಡಾ. ಶಿವಕಾಂತ್ ಭಾಜಪೇಯಿ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಡಾ. ಆರ್ ಗೋಪಾಲ್ ಅವರು ಎಚ್ಚೆತ್ತುಕೊಂಡಿದ್ದು ಘಟನಾ ಸ್ಥಳ ಮಣ್ಣೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರೀಶೀಲನೆ ನಡೆಸಿದರು. ಇಲ್ಲಿ ಕೈಗೊಳ್ಳಬಹುದಾದ ಜೀರ್ಣೋದ್ಧಾರ ಕ್ರಮಗಳ ಕುರಿತು ಚರ್ಚೆ ಮಾಡಿದರು.

ಈ ಸಂದರ್ಭದಲ್ಲಿ ಭಾರತ ಸರಕಾರದ ಪುರಾತತ್ವ ಇಲಾಖೆಯ ಅಧೀಕ್ಷಕ ಪುರಾತತ್ತಜ್ಞರಾದ ಡಾ. ಶಿವಕಾಂತ್ ಬಾಜಪೇಯಿ ಮಾತನಾಡಿ, ಈ ಗ್ರಾಮದಲ್ಲಿ ಗಂಗರ ಕಾಲದ ಮಹತ್ವದ ವಿಚಾರಗಳನ್ನು ಒಳಗೊಂಡ ಕುರುಹುಗಳಿವೆ. ಅದರೆ ಇದುವರೆಗೂ ಇದರ ಸಂರಕ್ಷಣೆಯ ಬಗ್ಗೆ ಯಾರೂ ಗಮನಹರಿಸದಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪುರಾತತ್ವ ಇಲಾಖೆಯ ವತಿಯಿಂದ ಈ ಗ್ರಾಮದಲ್ಲಿರುವ ದೇವಾಲಯಗಳು, ಶಾಸನಗಳು ಮತ್ತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೆಲವು ಪ್ರದೇಶದಲ್ಲಿ ಉತ್ಖನನ ಮಾಡುವ ಬಗ್ಗೆ ಸರಕಾರದ ಗಮನಕ್ಕೆ ತಂದು ಕೆಲಸವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಗ್ರಾಮದ ಸ್ಥಳೀಯರು ಗಮನಹರಿಸಿ ಗ್ರಾಮದ ಇತಿಹಾಸವನ್ನು ರಕ್ಷಿಸುವಲ್ಲಿ ಆಸಕ್ತಿ ತೋರಿಸಿ ಸಹಕಾರ ನೀಡಬೇಕು ಎಂದು ಕೋರಿಕೊಂಡರು.

ಇಲಾಖೆಯ ವತಿಯಿಂದ ಕೆಲಸ ಶುರು ಮಾಡಲು ಸ್ಥಳೀಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ದೇವಾಲಯಗಳ ಸುತ್ತಲಿನ ಪ್ರದೇಶವನ್ನು ಯಾವುದೇ ತಕಾರರು ಇಲ್ಲವೆಂದು ಪುರಾತತ್ವ ಇಲಾಖೆಗೆ ವರ್ಗಾಹಿಸಿದರೇ ಅದಷ್ಟು ಶೀಘ್ರವಾಗಿ ಕೆಲಸವನ್ನು ಶುರುಮಾಡಬಹುದು ಇಲ್ಲಿನ ಬಹುತೇಕ ಕಟ್ಟಡಗಳು ಶಿಥಿಲಗೊಂಡಿವೆ ಈ ಬಗ್ಗೆ ಸ್ಥಳೀಯ ಅದಿಕಾರಿಗಳು ಬೇಗ ಸಹಕರಿಸಬೇಕು ಎಂದರು.

ಇದನ್ನೂ ಓದಿ: ‘ಗಾಯ ಆದವನಿಗೆ ಗೊತ್ತು ಆ ನೋವು’ – ಎದೆ ಮುಟ್ಟಿಕೊಂಡು ಭಾವುಕರಾದ ಡಿಕೆ ಶಿವಕುಮಾರ್

ಛಾಯಚಿತ್ರಗಳ ಪ್ರದರ್ಶನ: ಕೇಂದ್ರ ಮತ್ತು ರಾಜ್ಯ ಸರಕಾರದ ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಗಂಗರ ರಾಜಧಾನಿಯಾಗಿದ್ದ ಮಾನ್ಯಪುರ(ಮಣ್ಣೆ) ಗ್ರಾಮದಲ್ಲಿ ಲಭ್ಯವಿರುವ ದೇವಾಲಯಗಳು, ಶಾಸನಗಳು, ವೀರಗಲ್ಲುಗಳು ಮತ್ತು ವಿಗ್ರಹಗಳ ಪೋಟೊಗಳನ್ನು ಒಳಗೊಂಡತೆ ಒಂದು ದಿನದ ಪ್ರದರ್ಶನವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾನೂನು ಕ್ರಮ ಕೈಗೊಳ್ಳಬೇಕು: ರಾಜ್ಯ ಪುರಾತತ್ವ ಇಲಾಖೆಯ ಡಾ. ಆರ್ ಗೋಪಾಲ್ ಮಾತನಾಡಿ ಮಣ್ಣೆ ಗ್ರಾಮದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಮಾಹಿತಿಯನ್ನು ಒಳಗೊಂಡಿರುವ ಎರಡು ಶಾಸನಗಳ ಶಿಲಾಶಾಸನವನ್ನು ರಸ್ತೆ ಮಾಡುವ ನೆಪದಲ್ಲಿ ಹೊಡೆದು ಹಾಕಿರುವ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸರ್ವೆ ಕಾರ್ಯ: ಗಂಗರ ಕಾಲದ ಕಪಿಲೇಶ್ವರ ದೇವಾಲಯ, ಅಕ್ಕತಂಗಿಯರ ಗುಡಿ ಮತ್ತು ಜಿನ ಬಸದಿ (ಸೂಳೆಯರ ಗುಡಿ) ಒಳಗೊಂಡಂತೆ ಇತರ ಐತಿಹಾಸಿಕ ಕಟ್ಟಡಗಳಿರುವ ಪ್ರದೇಶವನ್ನು ಸೋಮವಾರದಿಂದ ಸರ್ವೆ ಕಾರ್ಯ ಶುರುಮಾಡಲಾಗುತ್ತದೆ ಹಾಗೂ ಈ ಪ್ರದೇಶದ ಸುತ್ತ ಗಡಿಯನ್ನು ಗುರುತಿಸಿ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಗೆ ಅಗತ್ಯವಾದ ಕ್ರಮಕೈಗೊಳ್ಳಲಾಗುತ್ತದೆ ಮತ್ತು ದೇವಾಲಯದ ಸುತ್ತ ಕಾಪೌಂಡ್ ಹಾಕಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಾಲೂಕು ದಂಡಾದಿಕಾರಿ ಶ್ರೀನಿವಾಸಯ್ಯ ತಿಳಿಸಿದರು.ಇದನ್ನೂ ಓದಿ: ಒಂದು ದಶಕ ಕಳೆದರೂ ಸಂತ್ರಸ್ತರಿಗೆ ಸಿಗಲಿಲ್ಲ ಸೂರು ; ಬೀಳುವ ಮನೆಗಳಿಗೆ ಹಕ್ಕು ಪತ್ರ ನೀಡಲು ಮುಂದಾದ ಜಿಲ್ಲಾಡಳಿತ

ಇತಿಹಾಸ ತಜ್ಞರಾದ ಡಾ.ಹೆಚ್.ಎಸ್. ಗೋಪಾಲ್ ರಾವ್ ಮಾತನಾಡಿ, ಕಳೆದ ಒಂದು ವಾರದಿಂದ ಮಣ್ಣೆ ಗ್ರಾಮದಲ್ಲಿ ಶಿಲಾಶಾಸನವನ್ನು ನಾಶಮಾಡಿರುವ ಕುರಿತು ಸುದೀರ್ಘವಾಗಿ ಸುದ್ದಿಗಳನ್ನು ಬಿತ್ತರಿಸಿ ಅಕಾರಿಗಳ ಗಮನಕ್ಕೆ ಬರುವಂತೆ ಮಾಡಿದ ಎಲ್ಲ ದಿನಪತ್ರಿಕೆಗಳ ಫಲ ಇಂದು ಸ್ಥಳಕ್ಕೆ ಕೇಂದ್ರ ಸರಕಾರದ ಅದಿಕಾರಿಗಳು ಭೇಟಿ ನೀಡುವಂತಾಗಿದೆ. ಹಾಗೂ ಇಲ್ಲಿನ ಸಂಪೂರ್ಣ ಇತಿಹಾಸವನ್ನು ಒಳಗೊಂಡ ಸುಮಾರು 250 ಪುಟಗಳ ಪುಸ್ತಗಳವನ್ನು ಬರೆಯುತ್ತಿದ್ದೇನೆ. ಇಲ್ಲಿನ ಎಲ್ಲಾ ಐತಿಹಾಸಕ ಕಟ್ಟಡಗಳು ಸಂರಕ್ಷಿಸಬೇಕು. ಮುಂದಿನ ಪೀಳಿಗೆಗೆ ಇತಿಹಾಸದ ಕುರುಹುಗಳನ್ನು ಉಳಿಸಬೇಕು ಎಂದರು.

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by: Vijayasarthy SN
First published: October 6, 2020, 5:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading