ಬೆಂಗಳೂರು(ಅ. 13): ಸ್ಯಾಂಡಲ್ವುಡ್ ಡ್ರಗ್ಸ್ ಆರೋಪದ ಕೇಸ್ನಲ್ಲಿ ಆರೋಪಿ ರವಿಶಂಕರ್ನ ಹೆಂಡತಿ ಅರ್ಚನಾ ನಾಯ್ಕ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ. 15 ದಿನಗಳ ಹಿಂದೆ ಅರ್ಚನಾ ನಾಯ್ಕ್ ಅವರಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಿದ್ದರು. ಆದ್ರೆ ಅನಾರೋಗ್ಯಕ್ಕೆ ಕಾರಣದಿಂದ ಸ್ವಲ್ಪ ಸಮಯಾವಕಾಶ ಕೇಳಿದ್ದ ಅರ್ಚನಾ ಕಳೆದ ವಾರ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪುಣೆಯಿಂದ ವಿಚಾರಣೆಗೆ ಬಂದಿದ್ದ ಅರ್ಚನಾ ನಾಯ್ಕ್ ಅವರನ್ನು ನಾಲ್ಕು ಗಂಟೆಗಳ ಕಾಲ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಈ ವೇಳೆ ರವಿಶಂಕರ್ ಅವರೊಂದಿಗೆ ಅರ್ಚನಾ ಎರಡು ವರ್ಷಗಳ ಹಿಂದೆ ವಿಚ್ಚೇದನಾ ಆಗಿರೋದರ ಬಗ್ಗೆಯೂ ಬಾಯಿಬಿಟ್ಟಿದ್ದಾರೆ. ಜೊತೆಗೆ ಈಗ ನನಗೂ ರವಿಶಂಕರ್ಗೂ ಯಾವುದೇ ಸಂಬಂಧ ಹಾಗೂ ಸಂಪರ್ಕ ಇಲ್ಲ. ದಯವಿಟ್ಟು ಈ ಪ್ರಕರಣದಲ್ಲಿ ನನ್ನನ್ನ ಮಧ್ಯಕ್ಕೆ ತರಬೇಡಿ ಅಂತ ತನಿಖಾಧಿಕಾರಿ ಅಂಜುಮಾಲ ಮುಂದೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Heavy Rain : ಭಾರೀ ಮಳೆಗೆ ಕೊಚ್ಚಿ ಹೋದ ಬಂಡರಗಲ್- ಹೂಲಗೇರಿ ಸಂಪರ್ಕ ಸೇತುವೆ
ಜೊತೆಗೆ ವಿಚ್ಚೇದನಕ್ಕೂ ಮುನ್ನ ರವಿಶಂಕರ್ ಜೊತೆ ತಾನು ಕೆಲವು ಪಾರ್ಟಿಗಳಿಗೆ ಹೋಗಿದ್ದೆನಾದರೂ ಅಲ್ಲಿ ಯಾವುದೇ ಡ್ರಗ್ಸ್ ಸೇವನೆ ಮಾಡಿಲ್ಲ. ನಾನು ಅವರಿಂದ ದೂರ ಆದ ಬಳಿಕ ಏನೇನು ನಡೆದಿದೆ ಅನ್ನೋದೂ ಸಹ ನನಗೆ ಗೊತ್ತಿಲ್ಲ ಅಂತ ಅರ್ಚನಾ ನಾಯ್ಕ್ ಸಿಸಿಬಿ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ತನಿಖಾಧಿಕಾರಿ ಅಂಜುಮಾಲ, ಇದೇ ಸ್ಟೇಟ್ಮೆಂಟ್ ಅನ್ನ ನೀವು ಕೋರ್ಟ್ ಮುಂದೆ ಹೇಳಿ. ಅದರ ವಿಡಿಯೋ ರೆಕಾರ್ಡ್ ಮಾಡ್ತೀವಿ ಎಂದು ಹೇಳಿದಾಗ, ‘ಇಲ್ಲ ಮೇಡಮ್ ದಯವಿಟ್ಟು ನನ್ನ ಬದುಕು ನನಗೆ ಬದುಕೋಕೆ ಬಿಡಿ. ನಾನು ಯಾವುದೇ ಕೋರ್ಟ್ ಮುಂದೆಯೂ ಸಾಕ್ಷಿ ಹೇಳಲ್ಲ. ಬೆಂಗಳೂರು ಸಹವಾಸ ಬೇಡ ಅಂತ ಪುಣೆಗೆ ಹೋಗಿ ಎಲ್ಲವನ್ನು ಮರೆತು ಆರಾಮಾಗಿ ಇದೀನಿ’ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: 7ನೇ ಬಾರಿಯೂ ನಡೆಯದ ಮಂಡ್ಯ ಜಿ.ಪಂ.ನ ಸಾಮಾನ್ಯ ಸಭೆ; ಅಧ್ಯಕ್ಷೆ-ಸದಸ್ಯರ ರಾಜಕೀಯ ಜಿದ್ದಿಗೆ ಸಾಮಾನ್ಯ ಸಭೆ ಬಲಿ
ಅರ್ಚನಾ ನಾಯ್ಕ್ ಕೊಟ್ಟ ಹೇಳಿಕೆಯನ್ನ ಸ್ಟೇಟ್ಮೆಂಟ್ ಮಾಡಿಕೊಂಡಿದ್ದು, ಮತ್ತೆ ವಿಚಾರಣೆಗೆ ಅವಶ್ಯಕತೆ ಇದ್ದರೆ ಕರೆಯುವುದಾಗಿ ಹೇಳಿ ಕಳುಹಿಸಿದ್ದಾರೆ. ಇದೇ ವೇಳೆ, ಈ ಪ್ರಕರಣದಲ್ಲಿ 9ನೇ ಆರೋಪಿಯಾಗಿರುವ ಅಶ್ವಿನ್ ಬೂಗಿಯನ್ನ ನ್ಯಾಯಾಲಯ ಏಳು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ. ಪೊಲೀಸರು ಆತನ ವಿಚಾರಣೆ ಮುಂದುವರಿಸಿದ್ದಾರೆ.
ವರದಿ: ಮಂಜುನಾಥ್ ಎನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ