ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮುಹೂರ್ತ ನಿಗದಿ ; ಪಟ್ಟಕ್ಕಾಗಿ ಘಟಾನುಘಟಿಗಳ ಕಸರತ್ತು ಆರಂಭ..!

ಕಳೆದ ಚುನಾವಣೆಯಲ್ಲಿ ಒಂದಾಗಿದ್ದ ಜಾರಕಿಹೊಳಿ ಹಾಗೂ ಕತ್ತಿ ಸಹೋದರರ ಪ್ಯಾನಲ್ ಈ ಸಲವು ಮುಂದುವರೆಯುವ ಸಾಧ್ಯತೆ ಇದೆ

ಬಾಲಚಂದ್ರ ಜಾರಕೊಹೊಳಿ,  ರಮೇಶ್ ಕತ್ತಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿ

ಬಾಲಚಂದ್ರ ಜಾರಕೊಹೊಳಿ, ರಮೇಶ್ ಕತ್ತಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಳಗಾವಿ(ಜೂ.12): ಸದ್ಯ ರಾಜ್ಯದಲ್ಲಿ ಲೋಕಸಭೆ, ವಿಧಾನಸಭೆ ಹಾಗೂ ರಾಜ್ಯಸಭೆ ಚುನಾವಣೆಗಳು ಮುಕ್ತಾಯಗೊಂಡಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ತಿಂಗಳು ಸಹಕಾರ ಕ್ಷೇತ್ರದ ಚುನಾವಣೆ ನಡೆಯಲಿದ್ದು. ಇದಕ್ಕಾಗಿ ಜಿಲ್ಲೆಯ ಬಹುತೇಕ ಘಟಾನುಘಟಿ ನಾಯಕರು ತುರುಸಿನ ಪೈಪೋಟಿ ನಡೆಸಲು ಸಿದ್ದತೆಯನ್ನು ಮಾಡಿದ್ದಾರೆ.

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಚುನಾವಣೆಗೆ ಈಗಾಗಲೇ ಮೂಹುರ್ತ ನಿಗದಿಯಾಗಿದೆ. ಜುಲೈ 30ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜುಲೈ 31 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 1ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ ನೀಡಲಾಗಿದೆ. ಇನ್ನೂ ಆಗಸ್ಟ್ ತಿಂಗಳ 7 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.

ಸಹಕಾರ ಬ್ಯಾಂಕ್ ಚುನಾವಣೆಗೆ ರಿಟರ್ನಿಂಗ್ ಅಧಿಕಾರಿಯನ್ನು ನೇಮಕ ಮಾಡಿದ ಸಹಕಾರ ಚುನಾವಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಅಫ್ರೀನ್ ಬಾನು ಅವರನನ್ನು ರಿಟರ್ನಿಂಗ್ ಅಧಿಕಾರಿ ಎಂದು ನೇಮಿಸಲಾಗಿದೆ. ಚುನಾವಣೆಯ ಸಂಪೂರ್ಣ ಉಸ್ತುವಾರಿ ಇವರೇ ನೋಡಿಕೊಳ್ಳಲಿದ್ದಾರೆ.

ಜಿಲ್ಲಾ ರಾಜಕಾಣದ ದಿಕ್ಕು ಬದಲಿಸುವ ಶಕ್ತಿ ಹೊಂದಿದೆ ಡಿಸಿಸಿ ಬ್ಯಾಂಕ್:

ಸದ್ಯ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಮೇಶ ಕತ್ತಿ 5 ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದ್ದಾರೆ. ಮುಂದಿನ ಅವಧಿಗೆ ಅಧ್ಯಕ್ಷರಾಗಲು ಈಗಾಗಲೇ ಸ್ಪರ್ಧೆ ಏರ್ಪಟಿದೆ. ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸಹೋದರರು, ಕತ್ತಿ ಸಹೋದರರು ಹಾಗೂ ಸವದಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ಒಂದಾಗಿದ್ದ ಜಾರಕಿಹೊಳಿ ಹಾಗೂ ಕತ್ತಿ ಸಹೋದರರ ಪ್ಯಾನಲ್ ಈ ಸಲವು ಮುಂದುವರೆಯುವ ಸಾಧ್ಯತೆ ಇದೆ. ಜತೆಗೆ ಡಿಸಿಎಂ ಲಕ್ಷ್ಮಣ ಸವದಿ, ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಬ್ ಜೊಲ್ಲೆ ಹಾಗೂ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಬಣ ಒಟ್ಟಾಗಿ ಚುನಾವಣೆ ನಡೆಸಲಿದೆ.

ಇದನ್ನೂ ಓದಿ : ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹೊಸ ನೇಮಕಕ್ಕೆ ಬ್ರೇಕ್ ; ಆರ್ಥಿಕ ಇಲಾಖೆ ಆದೇಶ

ಈ ಚುನಾವಣೆಯಲ್ಲಿ ಹೊಸದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಎಂಟ್ರಿ ಕೊಡಲಿದ್ದಾರೆ. ಬೆಳಗಾವಿ ತಾಲೂಕಿನಿಂದ ಆಯ್ಕೆಯಾಗುವ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಬಣವನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತುಹಲಕ್ಕೆ ಕೆರೆಳಿಸಿದೆ.

ಜಿಲ್ಲಾ ರಾಜಕಾರಣದಲ್ಲಿ ಬೀಗಿ ಹಿಡಿತ ಸಾಧಿಸಲು ಡಿಸಿಸಿ ಬ್ಯಾಂಕ್ ಚುಕ್ಕಾಣಿ ಪ್ರಮುಖವಾಗಿದ್ದು, ಇದಕ್ಕಾಗಿ ಪ್ರಭಾವಿ ನಾಯಕರು ಪೈಟ್ ನಡೆಸಲಿದ್ದಾರೆ. ಈಗಾಗಲೇ ಕೆಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಚುನಾವಣೆಯ ಬಗ್ಗೆ ಗ್ರೌಂಡ್ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಇದನ್ನು ವಿರೋಧಿ ಬಣಗಳು ಹೇಗೆ ಎದುರಿಸಲಿವೆ ಎಂಬುದು ಕಾದು ನೋಡಬೇಕು.
First published: