ಕಲಬುರ್ಗಿಯಲ್ಲಿ ಮತ್ತೋರ್ವ ಪೊಲೀಸ್ ಕಾನ್ಸ್​​ಟೇಬಲ್​ಗೆ ಸೋಂಕು ; ಉದ್ಯೋಗ ಖಾತ್ರಿ ಕೆಲಸಕ್ಕೂ ತಟ್ಟಿದ ಸೋಂಕಿನ ಬಿಸಿ

ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ಹರಡಿರುವ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಕಲಬುರ್ಗಿ(ಜೂ.26): ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸಕ್ಕೆ ಬ್ರೇಕ್ ಬೀಳದಂತಾಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಸಾಮಾನ್ಯರ ಜೊತೆಗೆ ಕೊರೋನಾ ವಾರಿಯರ್ಸ್ ಗೂ ಸೋಂಕಿನ ಬಿಸಿ ತಟ್ಟಲಾರಂಭಿಸಿದೆ. ಕಲಬುರ್ಗಿಯಲ್ಲಿ ಮತ್ತೋರ್ವ ಪೊಲೀಸ್ ಕಾನ್ಸ್​​ಟೇಬಲ್​​ಗೆ ಸೋಂಕು ದೃಢಪಟ್ಟಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ 43 ವರ್ಷದ ಕಾನ್ಸ್​​ಟೇಬಲ್​​​ ಅವರಿಗೆ ಸೋಂಕಿರುವುದು ಖಾತ್ರಿಯಾಗಿದೆ.

  ಪೊಲೀಸ್ ಸಿಬ್ಬಂದಿಗೆ ರಾಂಡಮ್ ಆಗಿ ಥ್ರೋಟ್ ಸ್ಯಾಂಪಲ್ ಮಾಡಿದಾಗ ಸೋಂಕಿರುವುದು ದೃಢಪಟ್ಟಿದೆ. ಠಾಣೆಯಲ್ಲಿ ಸುಮಾರು 50 ಸಿಬ್ಬಂದಿ ಇದ್ದು, ಬಹುತೇಕ ಎಲ್ಲರದ್ದು ನೆಗೆಟಿವ್ ಎಂದು ಬಂದಿದೆ. ಆದರೆ ಕಾನ್ಸ್​ಟೇಬಲ್​​ಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇಡೀ ಠಾಣೆ ಸ್ಯಾನಿಟೈಸ್ ಮಾಡಲಾಗಿದೆ. ಎಲ್ಲ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಹಿಂದೆ ಕೆಎಸ್​ಆರ್​​ಪಿ ಕಾನ್ಸ್​ಟೇಬಲ್​ಗೆ ಕೊರೋನಾ ಸೋಂಕು ತಗುಲಿತ್ತು. ಆತ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ವಾಪಸ್ಸಾಗಿದ್ದ. ಮೊನ್ನೆಯಷ್ಟೇ ಪೋಕ್ಸೋ ಆರೋಪಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಮಹಿಳಾ ಠಾಣೆ ಎಎಸ್ಐ ಸೇರಿ ಹಲವು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದರ ಬೆನ್ನ ಹಿಂದೆಯೇ ವಿ.ವಿ. ಠಾಣೆ ಕಾನ್ಸ್​​ಟೇಬಲ್​​ಗೆ ಸೋಂಕು ದೃಢಪಟ್ಟಿರುವುದು ಪೊಲೀಸ್ ಸಿಬ್ಬಂದಿಯನ್ನು ಆತಂಕಕ್ಕೊಳಲಾಗುವಂತೆ ಮಾಡಿದೆ.

  ಉದ್ಯೋಗ ಖಾತ್ರಿಗೂ ಕೊರೋನಾ ಕುತ್ತು:

  ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ಹರಡಿರುವ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಗಳಗಿಯ ಬರಗಾಲ್ ಚಾಳಿ ನಿವಾಸಿ 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಉದ್ಯೋಗ ಖಾತ್ರಿ ಕೆಲಸದಲ್ಲಿ 179 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

  ಇದನ್ನೂ ಓದಿ : ಎಸ್​ಎಸ್​​ಎಲ್​​ಸಿ ಎರಡನೇ ಪರೀಕ್ಷೆ; ಕಂಟೈನ್​ಮೆಂಟ್ ನಿಂದ ಯಾರೂ ಪರೀಕ್ಷೆ ಬರೆದಿಲ್ಲ ; ಸಚಿವ ಸುರೇಶ್ ಕುಮಾರ್

  ಕೆಲಸ ಮಾಡುತ್ತಿದ್ದ ಮಹಿಳೆಗೆ ಸೋಂಕು ಬಂದಿರುವುದರಿಂದ ಉಳಿದ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.

  ಮಹಿಳೆ ಜೊತೆ ಸಂರ್ಪಕದಲ್ಲಿದ್ದ 200 ಜನ ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಇಂಗಳಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ
  First published: