news18-kannada Updated:February 24, 2021, 6:09 PM IST
ವಿವಾದಿತ ಮೋಹನ ಜ್ಯೋತಿ ಒನಮಾರ್ಟ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ.
ಬೆಳಗಾವಿ (ಫೆಬ್ರವರಿ 24); ಜನ ಸ್ವಲ್ಪ ತಮ್ಮ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುತ್ತೆ ಅಂದ್ರೆ ಸಾಕು ಹಿಂದು ಮುಂದು ನೋಡದೆ ಎಲ್ಲಿ ಬೇಕಾದರೂ ಇನ್ವೆಸ್ಟ್ ಮಾಡಲು ಸಜ್ಜಾಗುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ ಐ.ಎಂ.ಎ ಹಗರಣ. ಹೆಚ್ಚಿನ ಬಡ್ಡಿ ನೀಡುವ ಆಮೀಶ ತೋರಿದ್ದ ಮಾಲಿಕ ಕೋಟ್ಯಾಂತರ ಬಡವರ ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಪ್ರಕಾರಣ ಈಗಾಗಲೇ ಪೊಲೀಸ ತನಿಖೆ ಹಂತದಲ್ಲಿ ಇದೆ. ಈಗ ಇಂತಹದ್ದೇ ಮತ್ತೊಂದು ಕಂಪನಿ ತಲೆ ಎತ್ತಿ ನಿಂತಿದ್ದು ಆರ್.ಬಿ.ಐ ಮಾರ್ಗಸೂಚಿಗಳನ್ನ ಗಾಳಿಗೆ ತೋರಿ ಯಾವುದೆ ಪರವಾನಗಿ ಇಲ್ಲದೆ ನಿಯಮ ಬಾಹಿರವಾಗಿ ಜನರಿಂದ ಹಣ ಪಡೆದು ಹೆಚ್ಚಿನ ಬಡ್ಡಿ ನೀಡುವ ಆಸೇ ತೋರುತ್ತಿದೆ.
ಹೌದು ಇಂತಹದೊಂದು ಕಂಪನಿ ತಲೆ ಎತ್ತಿ ನಿಂತಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ. ಆ ಕಂಪನಿ ಹೆಸರು ಮೋಹನ ಜ್ಯೋತಿ ಒನಮಾರ್ಟ ಇಂಡಿಯಾ ಪ್ರೈವೇಟ್ ಲಿಮಿಟೆಡ್. ಕಂಪನಿ ರಜೀಸ್ಟರ ಆಗಿದ್ದು ಆನ್ಲೈನ್ ಬಿಸಿನೆಸ್. ಇಂಟರ್ನೆಟ್ ಸವಿರ್ಸ ಪ್ರೋವಾಡೈರ ಎನ್ನುವ ಹೆಸರಿನಲ್ಲಿ ಆದ್ರೆ ವ್ಯವಹಾರ ನಡೆಸುತ್ತಿರೋದು ಮಾತ್ರ ಹಣದ ಲೇವಾದೇವಿ. ಹೌದು ಅಥಣಿಯ ವಿಜಯಮೋಹನ ಹೊಣಕಾಂಬಳೆ ಎಂಬುವವರು ಈ ಕಂಪನಿಯನ್ನ ಕಳೆದ 19 ತಿಂಗಳ ಹಿಂದೆ ಸ್ಥಾಪನೆ ಮಾಡಿದ್ದಾರೆ. ಇದೆ ಕಂಪನಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಯಾವುದೆ ಪರವಾನಗಿ ಪಡೆಯದೆ ಜನರಿಂದ ಲಕ್ಷಾಂತರ ಹಣದ ಡಿಪಾಸಿಟ್ ಪಡೆದು ಪ್ರತಿ ತಿಂಗಳಿಗೆ ಶೇ.7 ರಷ್ಟಯ ಬಡ್ಡಿ ನೀಡುವುದಾಗಿ ಹೇಳುತ್ತಿದೆ.
ನೀವು ಒಂದು ಲಕ್ಷ ರೂಪಾಯಿ ಈ ಕಂಪನಿಯ ಹೆಸರಿನಲ್ಲಿ ಡಿಪಾಸಿಟ್ ಮಾಡಿದ್ರೆ ಸಾಕು ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಗಳನ್ನ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಒಂದು ವರ್ಷದ ಬಳಿಕ ನೀವು ಡಿಪಾಸಿಟ್ ಮಾಡಿರುವ ಒಂದು ಲಕ್ಷ ರೂಪಾಯಿಯನ್ನು ನಿಮಗೆ ಮರಳಿ ನೀಡಲಾಗುತ್ತದೆ. ಇದು ಒಂದು ವರ್ಷದ ಅವಧಿ ಇರುವ ಸ್ಕೀಮ್ ಎಂದು ಹೇಳಿ ಜನರಿಂದ ಹಣ ಪಾವತಿಸಿಕೊಳ್ಳಲಾಗುತ್ತಿದೆ.
ಏಜೆಂಟರ ಮೂಲಕ ಗ್ರಾಹಕರಿಗೆ ಗಾಳ;
ಇನ್ನು ಈ ಕಂಪನಿಯಲ್ಲಿ ಹೊಸ ಹೂಡಿಕೆ ಮಾಡಬೇಕು ಅಂದ್ರೆ ನೇರವಾಗಿ ತೆರಳಿದರೆ ನಿಮ್ಮ ಹಾಣ ಪಡೆಯಲ್ಲ ಈ ಕಂಪನಿ. ಬದಲಾಗಿ ಕಂಪನಿ ಜೊತೆ ವ್ಯವಹಾರ ನಡೆಸಿರುವವರು ಅಥವಾ ಏಜೆಂಟರ ಮೂಲಕ ಬಂದ್ರೆ ಮಾತ್ರ ಈ ಕಂಪನಿಯಲ್ಲಿ ಎಂಟ್ರಿ ಇದೆ. ಇನ್ನು ಕಂಪನಿಯ ಮೋಸದ ಪ್ರಚಾರಕ್ಕೆ ಒಂದು ವಾಟ್ಸಪ್ ಗ್ರೂಪ್ ಕೂಡ ಇದ್ದು ವಾಟ್ಸಪ್ ಮೂಲಕ ಗ್ರಾಹಕರನ್ನ ಸೆಳೆಯುವ ಕೆಲಸ ಮಾಡುತ್ತಿದೆ.
ಏಜೆಂಟರಿಗೆ ಬಂಪರ್;
ಇನ್ನು ಈ ಕಂಪನಿಯಲ್ಲಿ ಹಣ ಹಾಕಿಸಲು ಮುಂದಾಗುವ ಏಜೆಂಟರಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ನೀಡುತ್ತೆ ಈ ಕಂಪನಿ ಒಬ್ಬರಿಂದ ಒಂದು ಲಕ್ಷ ಡಿಪಾಸಿಟ್ ಮಾಡಿಸಿದ್ರೆ ಹಣ ಜಮಾ ಮಾಡಿದವರಿಗೆ 5 ಸಾವಿರ ಹಾಗೂ ಡಿಪಾಸಿಟ್ ಮಾಡಿಸಿದ ಏಜೆಂಟರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಿಗೆ ಒಂದು ಲಕ್ಷ ಹಣಕ್ಕೆ ಪ್ರತಿ ತಿಂಗಳು 7 ಸಾವಿರ ರೂಪಾಯಿ ನೀಡುತ್ತಿದೆ. ಶೇ.7 ಪ್ರತಿಶತ ಬಡ್ಡಿಯನ್ನು ಯಾವ ಆಧಾರದ ಮೇಲೆ ನೀಡಲಾಗುತ್ತದೆ ಅನ್ನೋದು ಪ್ರಶ್ನೆಯಾಗಿದೆ.
ಇದನ್ನೂ ಓದಿ: Explainer: ಕೋವಿಡ್ -19 ಹೊಂದಿರುವ ಜನರಿಗೆ ಇನ್ನೂ ಲಸಿಕೆ ನೀಡಬೇಕೇ?: ಸಂಶೋಧಕರು ಹೇಳಿದ್ದೇನು?
ದೂರು ನೀಡಿದರೂ ಕ್ರಮಕ್ಕೆ ಮುಂದಾಗದ ಪೊಲೀಸರು;
ಈ ಕಂಪನಿ ಹಣದ ಆಮೀಶ ನೀಡಿ ಮತ್ತೊಂದು ಐ.ಎಂ.ಎ ಅಂತಹ ಹಗರಣ ಮಾಡಲು ಮುಂದಾಗಿದ್ದು ಆರ್.ಬಿ.ಐ ಪರವಾನಗಿ ಇಲ್ಲದೆ ಹಣದ ವ್ಯವಹಾರ ನಡೆಸುತ್ತಿದೆ. ಹಣದ ಆಮೀಶಕ್ಕೆ ಜನ ಮೋಸ ಹೋಗುತ್ತಿದ್ದು ಕೂಡಲೆ ಕಂಪನಿ ಮೇಲೆ ತನಿಖೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಸಂಜಯ ಸಾವಂತ ಎಂಬುವವರು ಅಥಣಿ ಡಿ.ವೈ.ಎಸ್.ಪಿ ಗೆ ಲಿಖಿತ ದೂರು ಸಲ್ಲಿಸಿದ್ದಾರೆ.ಆದರೆ, ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ ಇದುವರೆಗೂ ತನಿಖೆಯನ್ನು ನಡೆಸಿಲ್ಲ ಎಂದು ದೂರುದಾರ ಸಂಜಯ ಆರೋಪಿಸಿದ್ದಾರೆ.
ಒಟ್ಟಿನಲ್ಲಿ 19 ತಿಂಗಳ ಹಿಂದೆ ಹುಟ್ಟಿಕೊಂಡಿರುವ ಕಂಪನಿ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಕೋಟ್ಯಾಂತರ ಹಣವನ್ನ ಡಿಪಾಸಿಟ್ ಪಡೆಯುತ್ತಿದ್ದು, ಕೂಡಲೆ ಮೋಹನ ಜ್ಯೋತಿ ಒನಮಾರ್ಟ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಬೇಕಿದೆ.
Published by:
MAshok Kumar
First published:
February 24, 2021, 6:00 PM IST