HOME » NEWS » District » ANOTHER BLUNDER FROM CHIKKAMAGALURU HEALTH DEPARTMENT OFFICIALS MAK

ವರದಿ ಬರುವ ಮುನ್ನವೇ ಸೋಂಕಿತನನ್ನು ಮನೆಗೆ ಕಳಿಸಿದ ಅಧಿಕಾರಿಗಳು; ಚಿಕ್ಕಮಗಳೂರಲ್ಲಿ ಮತ್ತೊಂದು ಯಡವಟ್ಟು

ಕೊರೋನಾ ಪಾಸಿಟಿವ್ ಇರುವ ವ್ಯಕ್ತಿಯನ್ನ ವರದಿ ಬರೋ ಮುನ್ನವೇ ನೀವು ಆರೋಗ್ಯವಾಗಿದ್ದೀರಿ ಅಂತಾ ಅಧಿಕಾರಿಗಳು ಮನೆಗೆ ಕಳಿಸಿದ್ದಾರೆ. ಆದರೆ, ತದನಂತರ ತಾವು ಮನೆಗೆ ಕಳುಹಿಸಿದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ತಿಳಿದಮೇಲೆ ಅಧಿಕಾರಿಗಳು ತಬ್ಬಿಬ್ಬಾಗಿ ಎದ್ನೋ ಬಿದ್ನೋ ಅಂತಾ ಸೋಂಕಿತನ ಮನೆಗೆ ದೌಡಾಯಿಸಿದ್ದಾರೆ.

news18-kannada
Updated:May 30, 2020, 9:50 PM IST
ವರದಿ ಬರುವ ಮುನ್ನವೇ ಸೋಂಕಿತನನ್ನು ಮನೆಗೆ ಕಳಿಸಿದ ಅಧಿಕಾರಿಗಳು; ಚಿಕ್ಕಮಗಳೂರಲ್ಲಿ ಮತ್ತೊಂದು ಯಡವಟ್ಟು
ಪ್ರಾತಿನಿಧಿಕ ಚಿತ್ರ.
  • Share this:
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದಿಲ್ಲೊಂದು ಯಡವಟ್ಟುಗಳು ನಡೆಯುತ್ತಿವೆ. ಅಧಿಕಾರಿಗಳೇ ಯಡವಟ್ಟುಮಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ವೈದ್ಯ ಮತ್ತು ಗರ್ಭಿಣಿ ಮಹಿಳೆಗೆ ಕೊರೋನಾ ಇಲ್ಲದೆಯೂ ಪಾಸಿಟಿವ್ ವರದಿ ನೀಡಿ ಪೇಚಿಗೆ ಸಿಲುಕಿದ್ದ ಅಧಿಕಾರಿಗಳು ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.

ಕೊರೋನಾ ಪಾಸಿಟಿವ್ ಇರುವ ವ್ಯಕ್ತಿಯನ್ನ ವರದಿ ಬರೋ ಮುನ್ನವೇ ನೀವು ಆರೋಗ್ಯವಾಗಿದ್ದೀರಿ ಅಂತಾ ಅಧಿಕಾರಿಗಳು ಮನೆಗೆ ಕಳಿಸಿದ್ದಾರೆ. ಆದರೆ, ತದನಂತರ ತಾವು ಮನೆಗೆ ಕಳುಹಿಸಿದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ತಿಳಿದಮೇಲೆ ಅಧಿಕಾರಿಗಳು ತಬ್ಬಿಬ್ಬಾಗಿ ಎದ್ನೋ ಬಿದ್ನೋ ಅಂತಾ ಸೋಂಕಿತನ ಮನೆಗೆ ದೌಡಾಯಿಸಿದ್ದಾರೆ. ಅಧಿಕಾರಿಗಳ ಯಡವಟ್ಟಿನಿಂದಾಗಿ ಇದೀಗ ಸೋಂಕಿತನ ಮನೆಯವರು ಸೇರಿದಂತೆ ಕೆಲ ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರಿಗೂ ಕೊರೋನಾ ಕಂಟಕ ಎದುರಾಗಿದೆ.

ಅಧಿಕಾರಿಗಳ ಯಡವಟ್ಟಿನಿಂದಾಗಿ ಇನ್ನೂ ತಾನು ಆರೋಗ್ಯವಾಗಿದ್ದೇನೆಂದು ತಿಳಿದಿದ್ದ ಸೋಂಕಿತ ವ್ಯಕ್ತಿ ಮನೆಯಲ್ಲಿ ಎಲ್ಲರ ಜೊತೆ ಮಿಂಗಲ್ ಆಗಿದ್ದ. ಆತ ಮನೆಗೆ ಮರಳಿದ ವಿಚಾರ ತಿಳಿದು ಕೆಲವರು ಮಾತಾನಾಡಿಸಲು ಬಂದು ಹೋಗಿದ್ದರು.  ಹೀಗೆ ಊರಿನ ಅನೇಕ ಜನರನ್ನ ಆತ ಭೇಟಿ ಮಾಡಿದ್ದ. ಅವರಿಗೆಲ್ಲಾ ಇದೀಗ ಫಜೀತಿ ಶುರುವಾಗಿದೆ. ಸದ್ಯ 9 ಮಂದಿಯನ್ನಷ್ಟೇ ಕ್ವಾರಂಟೈನ್ ಮಾಡಿದ್ದಾರೆ.

ಒಟ್ಟಾರೆ ಕಾಫಿನಾಡಿನಲ್ಲಿ ಎರಡು ನೆಗೆಟಿವ್ ಪ್ರಕರಣಗಳನ್ನ ಪಾಸಿಟಿವ್ ಪ್ರಕರಣ ಎಂದು ಹೇಳಿ ರಾಜ್ಯ ಆರೋಗ್ಯ ಇಲಾಖೆ ಆತಂಕ ಹುಟ್ಟಿಸಿದ್ದ ಇದೇ ಚಿಕ್ಕಮಗಳೂರಿನಲ್ಲಿ ಇದೀಗ ವರದಿ ಬರೋ ಮುನ್ನವೇ ಶೃಂಗೇರಿ ಅಧಿಕಾರಿ ವರ್ಗ, ಸಿಬ್ಬಂದಿಗಳು ಸೋಂಕಿತನನ್ನ ಮನೆಗೆ ಕಳುಹಿಸಿ ಕೊರೋನಾ ಮಾರಿಯನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ, ಮತ್ತೆಷ್ಟು ಜನರಿಗೆ ಕೊರೊನಾ ಕಂಟಕ ಎದುರಾಗುತ್ತೋ? ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

ಇದನ್ನೂ ಓದಿ : ಜೂನ್ ತಿಂಗಳಿನಿಂದ ಪಡಿತರ ಚೀಟಿ ಇಲ್ಲದಿದ್ದರೂ ಆಹಾರ ಧಾನ್ಯ ವಿತರಣೆ; ಸಚಿವ ಗೋಪಾಲಯ್ಯ
First published: May 30, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories