HOME » NEWS » District » ANNABHAGYA RICE POLISHED AND ILLEGAL SALES REPRESENTATIVES DEMAND TO STOP RGM HK

ಅನ್ನಭಾಗ್ಯ ಅಕ್ಕಿ ಪಾಲಿಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ; ದಂಧೆಗೆ ಬ್ರೇಕ್ ಹಾಕುವಂತೆ ಎಚ್ಚರಿಕೆ ನೀಡಿದ ಜನಪ್ರತಿನಿಧಿಗಳು

ರೈಸ್ ಮಿಲ್ ಗಳಲ್ಲಿ ಅಕ್ರಮವಾಗಿ ಪಾಲಿಶ್ ದಂಧೆ ನಡೆಸುತ್ತಿದ್ದಾರೆ. ಇಂತಹ ದಂಧೆಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಕೈ ಜೋಡಿಸಿರುವುದು ಸಂಸದರು ಮತ್ತು‌ ಸಚಿವರ ಗಮನಕ್ಕೆ ಬಂದು ಇದೀಗ ಅಂತಹ ಭ್ರಷ್ಟ ಅಧಿಕಾರಿಗಳಿಗೆ ಇಬ್ಬರು ಜನ ಪ್ರತಿನಿಧಿಗಳು ಸೇರಿ ಬೆವರಿಳಿಸಿದ್ದಾರೆ

news18-kannada
Updated:November 12, 2020, 7:19 AM IST
ಅನ್ನಭಾಗ್ಯ ಅಕ್ಕಿ ಪಾಲಿಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ; ದಂಧೆಗೆ ಬ್ರೇಕ್ ಹಾಕುವಂತೆ ಎಚ್ಚರಿಕೆ ನೀಡಿದ ಜನಪ್ರತಿನಿಧಿಗಳು
ಅನ್ನಭಾಗ್ಯ ಅಕ್ಕಿ ಚೀಲ
  • Share this:
ಮಂಡ್ಯ(ನವೆಂಬರ್​. 12): ಸಕ್ಕರೆನಾಡು ಮಂಡ್ಯದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿರುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದರು ಅಕ್ರಮ ದಂಧೆ ಕೋರರೊಂದಿಗೆ ಕೆಲವು ಭ್ರಷ್ಟ ಅಧಿಕಾರಿಗಳು ಕೈ ಜೋಡಿಸಿ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಇಂತಹ ದಂಧೆ ನಡೆಯಲು ಸಾಥ್ ನೀಡುತ್ತಿರುವ ಭ್ರಷ್ಟರ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಇದೀಗ ತಿರುಗಿ ಬಿದ್ದಿದ್ದು, ಭ್ರಷ್ಟ ಅಧಿಕಾರಿಗಳಿಗೆ ನೀರಿಳಿಸಿ ದಂಧೆಗೆ ಕಡಿವಾಣ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಕೆಲವು ರೈಸ್ ಮಿಲ್ ಗಳಲ್ಲಿ ಅನ್ನಭಾಗ್ಯ ಅಕ್ಕಿಯ ಪಾಲಿಶ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅದು ಅಲ್ಲದೇ ಲಾಕ್​​ಡೌನ್​​ ಅವಧಿಯಲ್ಲಿ ಸರ್ಕಾರ ಬಡವರಿಗಾಗಿ ಉಚಿತ ಅಕ್ಕಿಯನ್ನು ಮತ್ತಷ್ಟು ಹೆಚ್ಚಳ ಮಾಡಿ ನೀಡಿತ್ತು. ಇದನ್ನು ಬಂಡವಾಳ ಮಾಡಿಕೊಂಡ ಜಿಲ್ಲೆಯ ಕೆಲವು ರೈಸ್ ಮಿಲ್ ಮಾಲೀಕರು ಈ ಅಕ್ಕಿಯನ್ನ ಬೇರೆ ಬೇರೆ ಕಡೆಯಿಂದ ಸಂಗ್ರಹಿಸಿ ಮಂಡ್ಯ ಜಿಲ್ಲೆಯ ಕಿರುಗಾವಲು ಸೇರಿದಂತೆ ಹಲವು ರೈಸ್ ಮಿಲ್ ನಲ್ಲಿ ಈ ಅಕ್ಕಿಯನ್ನು ಪಾಲಿಶ್ ಮಾಡಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

ಇನ್ನು ಈ ಅನ್ನಭಾಗ್ಯ‌ ಅಕ್ಕಿಯ ಪಾಲಿಶ್ ದಂಧೆಯ ಇಂಚಿಂಚು ಮಾಹಿತಿಯನ್ನು ನ್ಯೂಸ್-18 ಕನ್ನಡ ಈ ಹಿಂದೆ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿತ್ತು. ಚಾಮರಾಜನಗರದ ಮೂಲಕ ಬಂದ ಅನ್ನಭಾಗ್ಯದ ಅಕ್ಕಿ ತರುತ್ತಿದ್ದ ವಾಹನವನ್ನು ಹಿಂಬಾಲಿಸಿ ಗಾಡಿಯಲ್ಲಿದ್ದ ಅನ್ನಭಾಗ್ಯದ ಅಕ್ಕಿಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಆ ವಾಹನವನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟಿತ್ತು.

ಈ ಬಗ್ಗೆ ಪ್ರಕರಣ ಕೂಡ ದಾಖಲಿಸಲಾಗಿತ್ತು. ತಹಶೀಲ್ದಾರ್ ಚಂದ್ರಮೌಳಿ ಈ ಬಗ್ಗೆ ಹಲವು ರೈಸ್ ಮಿಲ್ ನ  ಮೇಲೆ ದಾಳಿ ಮಾಡಿ ಪ್ರಕರಣ ಕೂಡ ದಾಖಲಿಸಿದ್ದರು. ಅಲ್ಲದೇ ಕ್ಷೇತ್ರದ ಶಾಸಕರು ಕೂಡ ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ ಸೂಚನೆ ನೀಡುವ ಭರವಸೆ ನೀಡಿದರು.

ಇನ್ನು ಇಷ್ಟಾದರು ಆದರೂ ಕೂಡ ಈ ದಂಧೆ ನಿಂತಿರಲಿಲ್ಲ. ಅದು ಅಲ್ಲದೇ ಲಾಕ್​ಡೌನ್​​​ ನಲ್ಲಿ ಜನರ ಬಳಿ ಹೆಚ್ಚಿನ‌ ಪ್ರಮಾಣದ ಅನ್ನಭಾಗ್ಯದ ಅಕ್ಕಿ ಸಂಗ್ರಹಣೆ ಆಗಿರುವ ಕಾರಣಕ್ಕೆ ಜನರಿಂದ ಈ ಅಕ್ಕಿ ಸಂಗ್ರಹಣೆ ಮಾಡಿ ಭ್ರಷ್ಟ ಅಧಿಕಾರಿಗಳ ಮೂಲಕ ಈ ರೈಸ್ ಪಾಲಿಶ್ ದಂಧೆಯನ್ನು ಮುಂದೆರೆಸಿದರು. ಕೇರಳ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈ ಅನ್ನಭಾಗ್ಯದ ಅಕ್ಕಿ ಪಾಲಿಶ್ ಮಾಡಿ ರವಾನೆಯಾಗುತ್ತಿದ್ದು, ಇದರ ಬಗ್ಗೆ ಸಚಿವರು ಮತ್ತು ಸಂಸದರಿಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದಿತ್ತು.

ಇದನ್ನೂ ಓದಿ : ಚೆಲುವ ಚಾಮರಾಜನಗರಕ್ಕೆ ಮತ್ತಷ್ಟು ಪವರ್: ಜಿಲ್ಲೆಯ ಪ್ರವಾಸೋದ್ಯಮದ ಪ್ರಮೋಷನಲ್ ವಿಡಿಯೋ ಸಿದ್ದ

ಈ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಾಣ ಗೌಡ ಈ ಬಗ್ಗೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರೆ, ಸಂಸದೆ ಸುಮಲತಾ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭ್ರಷ್ಟ ಅಧಿ ಕಾರಿಗಳಿಗೆ ಬಗ್ಗೆ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡು ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಆದೇಶ ಮಾಡಿದ್ದಾರೆ.
ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ದಂಧೆಕೋರರು ರೈಸ್ ಮಿಲ್ ಗಳಲ್ಲಿ ಅಕ್ರಮವಾಗಿ ಪಾಲಿಶ್ ದಂಧೆ ನಡೆಸುತ್ತಿದ್ದಾರೆ. ಇಂತಹ ದಂಧೆಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಕೈ ಜೋಡಿಸಿರುವುದು ಸಂಸದರು ಮತ್ತು‌ ಸಚಿವರ ಗಮನಕ್ಕೆ ಬಂದು ಇದೀಗ ಅಂತಹ ಭ್ರಷ್ಟ ಅಧಿಕಾರಿಗಳಿಗೆ ಇಬ್ಬರು ಜನ ಪ್ರತಿನಿಧಿಗಳು ಸೇರಿ ಬೆವರಿಳಿಸಿದ್ದಾರೆ, ಇನ್ನಾದರೂ ಈ ದಂಧೆಗೆ ಕಡಿವಾಣ ಬೀಳುತ್ತಾ ಎನ್ನುವುದನ್ನು‌ ಕಾದು ನೋಡಬೇಕಿದೆ‌.
Published by: G Hareeshkumar
First published: November 12, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories