ಆನೇಕಲ್: ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳಕ್ಕೆ ಕಂಗಾಲಾದ ಗ್ರಾಮಸ್ಥರು

ಈ ಕುಗ್ರಾಮದಲ್ಲಿ ಅನಾದಿಕಾಲದಿಂದಲೂ ಸುಮಾರು ಐವತ್ತಕ್ಕು ಹೆಚ್ಚು ಕುಟುಂಬ ನೆಲೆ ನಿಂತಿವೆ. ಸುತ್ತಮುತ್ತಲಿನ ಸರ್ಕಾರಿ ಗೋಮಾಳದಲ್ಲಿ ಉತ್ತು ಬಿತ್ತು ನೆಮ್ಮದಿಯಿಂದ ಬಾಳ್ವೆ ನಡೆಸುತ್ತಿವೆ. ಆದ್ರೆ ಕಳೆದ ಏಳೆಂಟು ವರ್ಷಗಳಿಂದ ಅರಣ್ಯ ಅಧಿಕಾರಿಗಳ ಕಿರುಕುಳ ಎಲ್ಲೆ ಮೀರಿದೆ.

ಆನೇಕಲ್ ಅರಣ್ಯ ಪ್ರದೇಶ.

ಆನೇಕಲ್ ಅರಣ್ಯ ಪ್ರದೇಶ.

  • Share this:
ಆನೇಕಲ್ : ಅವ್ರು ದಶಕಗಳಿಂದಲೂ ಅಲ್ಲಿ ನೆಲೆ ನಿಂತು ಜೀವನ ಕಟ್ಟಿಕೊಂಡಿಕೊಂಡಿದ್ದಾರೆ. ಕೃಷಿಯನ್ನ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡದೆ ಕಾಡು ಪ್ರಾಣಿಗಳಿಗಿಂತಲು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕು ಅಲ್ಲಿನ ಜನರನ್ನ ಅರಣ್ಯ ಅಧಿಕಾರಿಗಳು ಹೀಗೆ ಹೀನಾಯ ಸ್ಥಿತಿಗೆ ದೂಡಲು ಕಾರಣವಾದ್ರು ಏನು ಅಂತೀರಾ ಈ ಸ್ಟೋರಿ ಓದಿ.....

ಹೌದು ಹೀಗೆ ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಕಣ್ಣೀರಿಡುತ್ತಿರುವ ಮಹಿಳೆಯರು, ಡಾಂಬರು ಇಲ್ಲದ ರಸ್ತೆ, ಕುಸಿಯುವ ಹಂತದಲ್ಲಿರುವ ಮಣ್ಣಿನ ಮನೆಗಳು, ಅರ್ಧಕ್ಕೆ ನಿಂತ ಮನೆ ಕಾಮಗಾರಿ, ಚರಂಡಿ ಇಲ್ಲದೆ ಗಬ್ಬುನಾರುತ್ತಿರುವ ಬೀದಿಗಳು. ಈ ಎಲ್ಲಾ ಪರಿಸ್ಥಿತಿ ಕಂಡುಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಬ್ಯಾಟರಾಯನ ದೊಡ್ಡಿ ಗ್ರಾಮದಲ್ಲಿ.

ನಿಜ ಈ ಕುಗ್ರಾಮದಲ್ಲಿ ಅನಾದಿಕಾಲದಿಂದಲೂ ಸುಮಾರು ಐವತ್ತಕ್ಕು ಹೆಚ್ಚು ಕುಟುಂಬ ನೆಲೆ ನಿಂತಿವೆ. ಸುತ್ತಮುತ್ತಲಿನ ಸರ್ಕಾರಿ ಗೋಮಾಳದಲ್ಲಿ ಉತ್ತು ಬಿತ್ತು ನೆಮ್ಮದಿಯಿಂದ ಬಾಳ್ವೆ ನಡೆಸುತ್ತಿವೆ. ಆದ್ರೆ ಕಳೆದ ಏಳೆಂಟು ವರ್ಷಗಳಿಂದ ಅರಣ್ಯ ಅಧಿಕಾರಿಗಳ ಕಿರುಕುಳ ಎಲ್ಲೆ ಮೀರಿದೆ. ಹೇಗಾದರು ಸರಿ ಇಲ್ಲಿನ ವಾಸಿಗಳನ್ನ ಒಕ್ಕಲೆಬ್ಬಿಸಬೇಕು ಎಂಬ ದುರುದ್ದೇಶದಿಂದ ಸರ್ಕಾರ ನೀಡುವ ಮೂಲಭೂತ ಸೌಕರ್ಯಗಳು ಈ ಗ್ರಾಮಕ್ಕೆ ದೊರೆಯದಂತೆ ಅಡ್ಡಿಪಡಿಸಲಾಗುತ್ತಿದೆ.

ಪ್ರಶ್ನಿಸಿದರೆ ಸುಳ್ಳು ಕೇಸುಗಳನ್ನು ಹಾಕಿ ಇನ್ನಿಲ್ಲದಂತೆ ತೊದರೆ ಕೊಡುತ್ತಾರೆ. ಹಾಗಾಗಿ ಇಲ್ಲಿನ ಬಡ ಕುಟುಂಬಗಳು ಮೂಲಭೂತ ಸೌಕರ್ಯಗಳಿಲ್ಲದೆ ಕಾಡು ಪ್ರಾಣಿಗಳಿಗಿಂತ ಹೀನಾಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದು, ನಮ್ಮನ್ನು ಆಳುತ್ತಿರುವ ದೊರೆಗಳು ಇತ್ತ ಗಮನ ಹರಿಸಿ ನೆಮ್ಮದಿಯಾಗಿ ಜೀವನ ನಡೆಸಲು ನಮಗೆ ಅನುವು ಮಾಡಿಕೋಡಬೇಕು ಎಂದು ಇಲ್ಲಿನ ವಾಸಿ ರವಿ ಮತ್ತು ನಾಗರಾಜ್ ತಮ್ಮ ನೋವನ್ನು ತೋಡಿಕೊಂಡಿಕೊಂಡಿದ್ದಾರೆ.

ಇನ್ನೂ ಅರಣ್ಯ ಅಧಿಕಾರಿಗಳು ಸರ್ಕಾರಿ ಗೋಮಾಳದಲ್ಲಿ ವ್ಯವಸಾಯ ಮಾಡಲು ಸಹ ಅಡ್ಡಿಪಡಿಸಿ  ತಿನ್ನುವ ಅನ್ನಕ್ಕು ಮಣ್ಣು ಹಾಕುತ್ತಿದ್ದಾರೆ. ಪ್ರಶ್ನಿಸಿದ್ರೆ ರೈತರು ಬೆಳೆದ ಬೆಳೆಗೆ ರಾತ್ರಿ ವೇಳೆ ಆನೆಗಳನ್ನು ಬಿಟ್ಟು ನಾಶಪಡಿಸುತ್ತಾರೆ ಜೊತೆಗೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುತ್ತಾರೆ. ಹೊಸ ಮನೆ ಕಟ್ಟುವುದಿರಲಿ, ಶಿಥಿಲಗೊಂಡ ಮನೆಗಳ ದುರಸ್ಥಿಗೆ ಅಡ್ಡಿಪಡಿಸುತ್ತಾರೆ.

ಇದನ್ನೂ ಓದಿ: DK Shivakumar: ರೈತ ಹೋರಾಟಗಾರ ರಾಕೇಶ್ ಟಿಕಾಯತ್ ವಿರುದ್ಧದ ಪ್ರಕರಣ ಖಂಡನೀಯ: ಡಿ.ಕೆ. ಶಿವಕುಮಾರ್

ಗ್ರಾಮದಲ್ಲಿ ದೇವಾಲಯ ನಿರ್ಮಾಣಕ್ಕು ತಕರಾರು ಮಾಡುವ ಅರಣ್ಯ ಅಧಿಕಾರಿಗಳು ರಸ್ತೆ ಒಳಚರಂಡಿ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಲು ಅವಕಾಶ ನೀಡದೆ ನಮ್ಮನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದು, ಇದು ಹೀಗೆ ಮುಂದುವರಿದರೆ ವಿಷ ಕುಡಿದು ಸಾಯಬೇಕಾಗುತ್ತದೆ ಎಂದು  ಗ್ರಾಮದ ನೊಂದ ವೃದ್ಧೆ ಪುಟ್ಟಮ್ಮ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಸಂವಿಧಾನ ದತ್ತವಾದ ಮೂಲಭೂತ ಸೌಕರ್ಯಗಳನ್ನು ಪಡೆಯುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಆದ್ರೆ ಇಲ್ಲಿ ಅರಣ್ಯ ಅಧಿಕಾರಿಗಳು ದಬ್ಬಾಳಿಕೆ ದೌರ್ಜನ್ಯದಿಂದಾಗಿ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಗ್ರಾಮ ವಾಸಿಗಳ ಸಂವಿಧಾನದ ಬದ್ಧವಾದ ಹಕ್ಕನ್ನು ದಮನಗೊಳಿಸುತ್ತಿದ್ದು, ಇನ್ನಾದ್ರು ಸಂಬಂದಪಟ್ಟ ಅಧಿಕಾರಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಇಲ್ಲಿನ ವಾಸಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿ ಅರಣ್ಯ ಅಧಿಕಾರಿಗಳ ಗೂಂಡಾ ವರ್ತನೆಗೆ ಬ್ರೇಕ್ ಹಾಕಬೇಕಿದೆ.

(ವರದಿ : ಆದೂರು ಚಂದ್ರು )
Published by:MAshok Kumar
First published: