ಆನೇಕಲ್; ಕೆರೆಗಳಿಗೆ ಸೇರುತ್ತಿವೆ ಸಿವೇಜ್ ಮತ್ತು ಕೈಗಾರಿಕಾ ಕೆಮಿಕಲ್ ನೀರು; ಕೆರೆಗಳ ಉಳಿವಿಗೆ ಸಾರ್ವಜನಿಕರ ಆಗ್ರಹ

ತಾಲ್ಲೂಕಿನ ಬಹುತೇಕ ಕೆರೆಗಳು ಕೈಗಾರಿಕಾ ತ್ಯಾಜ್ಯ ಮತ್ತು ಅಪಾರ್ಟ್ಮೆಂಟ್ ಹಾಗೂ ವಸತಿ ಬಡಾವಣೆಗಳ ಸಿವೇಜ್ ನೀರಿನಿಂದ ತುಂಬಿ ಜೀವ ಕಳೆದುಕೊಂಡಿವೆ. ಇದರಿಂದ ಅಂತರ್ಜಲ ಸಹ ಕಲುಷಿತಗೊಳ್ಳುವ ಮಟ್ಟಕ್ಕೆ ಕೆರೆಗಳು ಕಲುಷಿತಗೊಂಡು ಗಬ್ಬುನಾರುತ್ತಿವೆ.

ಕೆರೆಗೆ ಸೇರುತ್ತಿರುವ ಕೊಳಚೆ ನೀರು.

ಕೆರೆಗೆ ಸೇರುತ್ತಿರುವ ಕೊಳಚೆ ನೀರು.

  • Share this:
ಆನೇಕಲ್: ಬೆಂಗಳೂರು ನಗರ ಸುತ್ತಮುತ್ತಲಿನ ಅದೆಷ್ಟೋ ಕೆರೆಗಳು ಗತಕಾಲದಲ್ಲಿ  ಮಾಯವಾಗಿವೆ. ಆದ್ರೆ ಬೆಂಗಳೂರು ನಗರದ ಮಗ್ಗುಲಲ್ಲಿರುವ ಆನೇಕಲ್ ತಾಲ್ಲೂಕಿ ನಲ್ಲಿವೆ ಇಂದಿಗೂ ಇನ್ನೂರಕ್ಕೂ ಅಧಿಕ ಕೆರೆಗಳು ಅಸ್ತಿತ್ವದಲ್ಲಿವೆ. ದುರಂತ ಅಂದ್ರೆ ಬಹುತೇಕ ಕೆರೆಗಳು ಸಿವೇಜ್ ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಕಲುಷಿತ ಗೊಂಡಿವೆ. ಅಪಾರ್ಟ್ಮೆಂಟ್, ವಸತಿ ಬಡಾವಣೆಗಳ ಕಲುಷಿತ ನೀರು. ಕಾರ್ಖಾನೆಗಳ ಕಲುಷಿತ ನೀರು ಕೆರೆಗಳನ್ನು ಸೇರಿ ಸಂಪೂರ್ಣ ವಿಷಮಯ ವಾಗಿವೆ.  ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇಂದಿಗೂ 254 ಕೆರೆಗಳು ಜೀವಂತವಾಗಿವೆ. ಈ ಬಾರಿ ಉತ್ತಮ ಮಳೆಯಾಗಿದೆ. ಕೆರೆಗಳು ತುಂಬಿ ತುಳುಕುತ್ತಿವೆ.

ಆದ್ರೆ ತಾಲ್ಲೂಕಿನ ಬಹುತೇಕ ಕೆರೆಗಳು ಕೈಗಾರಿಕಾ ತ್ಯಾಜ್ಯ ಮತ್ತು ಅಪಾರ್ಟ್ಮೆಂಟ್ ಹಾಗೂ ವಸತಿ ಬಡಾವಣೆಗಳ ಸಿವೇಜ್ ನೀರಿನಿಂದ ತುಂಬಿ ಜೀವ ಕಳೆದುಕೊಂಡಿವೆ. ಇದರಿಂದ ಅಂತರ್ಜಲ ಸಹ ಕಲುಷಿತಗೊಳ್ಳುವ ಮಟ್ಟಕ್ಕೆ ಕೆರೆಗಳು ಕಲುಷಿತಗೊಂಡು ಗಬ್ಬುನಾರುತ್ತಿವೆ. ಜನ ಜಾನುವಾರುಗಳಿಗೆ ಬಳಕೆಯಾಗದಷ್ಟು ಹಾನಿಕಾರಕ ತ್ಯಾಜ್ಯವನ್ನು ಒಡಲಲ್ಲಿ ತುಂಬಿಕೊಂಡು ವಿಷಕಾರುತ್ತಿವೆ. ಆಪಾರ್ಟ್ಮೆಂಟ್ ಮತ್ತು ವಸತಿ ಬಡಾವಣೆಗಳು ಸೇರಿದಂತೆ ಕಲುಷಿತ ನೀರನ್ನು ಕೆರೆಗಳಿಗೆ ಸಂಸ್ಕರಿಸಿ ಹರಿಸಬೇಕು. ಜೊತೆಗೆ ಕಡ್ಡಾಯವಾಗಿ ಎಸ್ಟಿಪಿ ಘಟಕ ಹೊಂದಿರಬೇಕು ಎಂಬ ಕಾನೂನು ಇದೆ.

ಆದರೆ, ಯಾರೋಬ್ಬರು ಕಾನೂನು ಪರಿಪಾಲನೆ ಮಾಡುತ್ತಿಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ಪಿಳೀಗೆ ಕೆರೆಗಳ ಕಾರ್ಖಾನೆಗಳ ಡಸ್ಟ್ ಬಿನ್ ಗಳಾಗಿ ನೋಡಬೇಕಾದ ಪರಿಸ್ಥಿತಿ ಬರಲಿದೆ ಎಂದು ಸಾರ್ವಜನಿಕರಾದ ರಾಮು ಎಚ್ಚರಿಸಿದ್ದಾರೆ.

ಇನ್ನೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಕೆರೆಗಳ ನಿರ್ವಹಣೆ ಮತ್ತು ರಕ್ಷಣೆ ಜವಾಬ್ದಾರಿ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಈಗ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ, ಬಿಬಿಎಂಪಿ, ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೆ ಗೂಗಲ್ ಮ್ಯಾಪ್ ಮತ್ತು ಸರಹದ್ದು ಆಧಾರದ ಮೇಲೆ ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ತಮ್ಮ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಅಭಿವೃದ್ಧಿಯನ್ನು ಆಯಾ ಸಂಸ್ಥೆಗಳು ನೋಡಿಕೊಳ್ಳಬೇಕಿದೆ. ಜೊತೆಗೆ ಈಗಾಗಲೇ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ದಪಡಿಸಲಾಗಿದೆ. ಕೆಲವು ಕೆರೆಗಳ ಕಾಮಗಾರಿ ನಡೆಸಲು ಟೆಂಡರ್ ಸಹ ಕರೆಯಲಾಗಿದೆ. ಸಲ್ಲಿಕೆಯಾಗಿರುವ ಡಿಪಿಆರ್ಗಳಿಗೆ ಬಜೆಟ್ ನಿರೀಕ್ಷೆಯ ಲ್ಲಿದ್ದು, ಸದ್ಯದಲ್ಲಿಯೇ ಆನೇಕಲ್ ತಾಲ್ಲೂಕಿನ ಅನೇಕ ಕೆರೆಗಳಲ್ಲಿ ಎಸ್ಟಿಪಿ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: Javed Akhtar| RSS, VHP, Taliban ಈ ಎಲ್ಲಾ ಸಂಘಟನೆಗಳ ಮನಸ್ಥಿತಿ ಒಂದೇ; ಸಾಹಿತಿ ಜಾವೇದ್ ಅಖ್ತರ್ ವಿವಾದಾತ್ಮಕ ಹೇಳಿಕೆ

ಒಟ್ನಲ್ಲಿ ಜಿಲ್ಲಾಡಳಿತ ಒತ್ತುವರಿಯಾಗಿ ಅಸ್ತಿತ್ವ ಕಳೆದುಕೊಂಡಿದ್ದ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ಅದರ ಜೊತೆಗೆ ಕೆರೆಗಳು ಕಲುಷಿತವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ನೆಲ ಜಲ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ.

(ವರದಿ : ಆದೂರು ಚಂದ್ರು)
Published by:MAshok Kumar
First published: