ಅಣಶಿ ಗುಡ್ಡ ಕುಸಿತ ಪುನರ್ ರಸ್ತೆ ನಿರ್ಮಾಣ ಇನ್ನು ಗೊಂದಲ; ಆಡಳಿತ ವ್ಯವಸ್ಥೆ ಮುಂದೆ ಹತ್ತಾರು ಸವಾಲುಗಳು!

ಉತ್ತರ ಕನ್ನಡ ಜಿಲ್ಲೆಯ ಅಣಶಿ ಘಟ್ಟ ಕುಸಿದು  ದೊಡ್ಡ ಅವಾಂತರ ಸೃಷ್ಟಿ ಆಗಿ ರಾಜ್ಯ ಹೆದ್ದಾರಿಯೇ ಬಂದ್ ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದ ಉದಾಹರಣೆ ಇಲ್ಲ. ಆದರೆ ಈ ಬಾರಿ ಗುಡ್ಡ ಕುಸಿದು ದೊಡ್ಡ ಸಮಸ್ಯೆ ತಂದಿದೆ. ಮುಂದೆ ಯಾವಾಗ ರಸ್ತೆ ನಿರ್ಮಾಣ ಆಗುತ್ತೆ ಎನ್ನೋದೆ ಮುಂದಿರುವ ದೊಡ್ಡ ಸವಾಲು.

ಅಣಶಿ ಗುಡ್ಡ ಕುಸಿದಿರುವುದು.

ಅಣಶಿ ಗುಡ್ಡ ಕುಸಿದಿರುವುದು.

  • Share this:
ಕಾರವಾರ: ಸದ್ಯಕ್ಕೆ ಬಗೆಹರಿಯದ ಸವಾಲಾಗಿ ಕಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಣಸಿಘಟ್ಟ ಗುಡ್ಡ ಕುಸಿತ ಸಮಸ್ಯೆಗೆ ಪರಿಹಾರ  ಪಾಪ್ತವಾಗಲಿದೆಯೋ ಅಥವಾ ಗುಡ್ಡವನ್ನೇ ವ್ಯವಸ್ಥಿತ ರೀತಿಯಲ್ಲಿ ಕಡಿದು ಸಂಚಾರಕ್ಕೆ ಮಾರ್ಗ ನಿರ್ಮಾಣ ಮಾಡುವುದು ಆಗಲಿದೆಯೋ ಎನ್ನುವುದಕ್ಕೆ ಇನ್ನು ಕೂಡಾ ಉತ್ತರ ಸಿಗದೆ ಗೊಂದಲದ ಗೂಡಾಗಿದೆ.

ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿರುವ ಅಣಶಿ ಘಟ್ಟ ಪ್ರದೇಶಕ್ಕೆ ಹುಬ್ಬಳ್ಳಿಯ ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಜಾಧವ ಹಾಗೂ ಭೂ ವಿಜ್ಞಾನ ವಿಷಯದ ಪ್ರೊಫೆಸರ್ ಗೂಡಗೂರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ತಜ್ಞರು ಅಣಶಿ ಗುಡ್ಡಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಹೇಗೆ ಮತ್ತುಎಲ್ಲಿ ರೂಪಿಸಬೇಕೆಂಬ ಬಗ್ಗೆಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಆದ್ರೆ ಅದೇನೆ ಇದ್ರು ಮುಕ್ತ ಸಂಚಾರಕ್ಕೆ ಮುಂದಿನ ಎರಡು ಮೂರು ತಿಂಗಳೇ ಬೇಕು ಎನ್ನುವ ಮಾತು ಕೇಳಿ ಬರುತ್ತಿದೆ.

ಅಣಶಿ ಘಟ್ಟದಲ್ಲಿ ಸುಮಾರು 200 ಮೀಟರ್‌ನಷ್ಟು ಕಂದಕ ನಿರ್ಮಾಣ ಆಗಿರುವುದರಿಂದ ಹಾಗೂ ಇಲ್ಲಿ ಶೇಡಿಮಣ್ಣಿನ ಅಂಶ ಇರುವುದರಿಂದ ಇಲ್ಲಿಉಂಟಾದ ಕಂದಕದಲ್ಲಿ ಮಣ್ಣು ತುಂಬಿ ರಸ್ತೆ ನಿರ್ಮಾಣ ಮಾಡುವ ಸಾಧ್ಯತೆ ಕಂಡು ಬರುತ್ತಿಲ್ಲ. ಹೀಗಾಗಿ ಗುಡ್ಡವನ್ನುಸೂಕ್ತ ಸ್ಥಳದಲ್ಲಿ ಮೆಟ್ಟಿಲುಗಳ ಮಾದರಿಯಲ್ಲಿ ಕಡಿದು ಪ್ರತ್ಯೇಕ ರಸ್ತೆ ನಿರ್ಮಿಸಬೇಕೋ ಅಥವಾ ಪರ್ಯಾಯವಾದ ಬೈಪಾಸ್ ರಸ್ತೆ ನಿರ್ಮಿಸಬೇಕೋ ಎಂಬ ಬಗ್ಗೆ ಈ ತಜ್ಞರು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಸದ್ಯ ಈ ತಜ್ಞರು ಪರಿಶೀಲನೆ ನಡೆಸಿದರೂ, ಇವರ ವರದಿ ಸಲ್ಲಿಕೆ ಆಗುವವರೆಗೂ ಕಾಯುವುದು ಅನಿವಾರ್ಯವಾಗಲಿದೆ. ಈ ತಜ್ಞರು ನೀಡುವ ವರದಿ ಹಾಗೂ ಎಲ್ಲಿ ಯಾವ ರೀತಿಯಲ್ಲಿ ರಸ್ತೆ ನಿರ್ಮಿಸಬೇಕು. ಇದಕ್ಕೆ ತಗಲುವ ವೆಚ್ಚ ಎಷ್ಟು? ಎಂಬ ವರದಿ ಪಡೆದ ನಂತರ ಜಿಲ್ಲಾಡಳಿತದ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದಾರೆ.

ಈ ತಜ್ಞರು ಅಣಸಿ ಘಟ್ಟದ ಮಣ್ಣಿನ ಪರೀಕ್ಷೆಗೆ ನಿರ್ಧರಿಸಿದರೆ, ಈ ಪರೀಕ್ಷೆಯ ವರದಿ ಬಂದ ನಂತರವೇ ಭೂಮರೆಡ್ಡಿ ಕಾಲೇಜಿನ ತಜ್ಞರು ತಮ್ಮ ವರದಿ ನೀಡುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾದರೆ, ವರದಿಗೆ ಸ್ವಲ್ಪ ವಿಳಂಬವಾಗಲಿದೆ. ವರದಿ ಆಧಾರದಲ್ಲಿ ಸರಕಾರದ ಹಾಗೂ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಅಣಸಿ ಘಟ್ಟದಲ್ಲಿ ರೂಪಿಸಬೇಕಾದ ಪರ್ಯಾಯ ಸಂಚಾರ ವ್ಯವಸ್ಥೆಯ ಬಗ್ಗೆ ನಿರ್ಧಾರಕ್ಕೆ ಬರಲಿದ್ದಾರೆ. ಆ ನಂತರವೇ ಸಂಚಾರ ವ್ಯವಸ್ಥೆ ರೂಪಿಸಲು ಸರಕಾರದ ಉನ್ನತ ಮಟ್ಟದಲ್ಲಿ ಟೆಂಡರ್ ಆಗಿ ಕಾಮಗಾರಿ ನಡೆಯಬೇಕಿದೆ.

ಇದನ್ನು ಓದಿ: ಆಫ್ರಿಕನ್ನರ ಡ್ರಗ್ ದಂಧೆ, ಬಾಂಗ್ಲಾದೇಶಿಯರ ವೇಶ್ಯಾವಾಟಿಕೆ ಜಾಲಯಿಂದ ಹೈರಾಣಾದ ಬೆಂಗಳೂರು ಪೊಲೀಸರು!

ಭಾರೀ ಮಳೆಗೆ ಕುಸಿದ ಗುಡ್ಡ

ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಣಶಿ ಘಟ್ಟ ಕುಸಿದು  ದೊಡ್ಡ ಅವಾಂತರ ಸೃಷ್ಟಿ ಆಗಿ ರಾಜ್ಯ ಹೆದ್ದಾರಿಯೇ ಬಂದ್ ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದ ಉದಾಹರಣೆ ಇಲ್ಲ. ಆದರೆ ಈ ಬಾರಿ ಗುಡ್ಡ ಕುಸಿದು ದೊಡ್ಡ ಸಮಸ್ಯೆ ತಂದಿದೆ. ಮುಂದೆ ಯಾವಾಗ ರಸ್ತೆ ನಿರ್ಮಾಣ ಆಗುತ್ತೆ ಎನ್ನೋದೆ ಮುಂದಿರುವ ದೊಡ್ಡ ಸವಾಲು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: