• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Free Electricity: ಇಲ್ಲಿ ಫ್ರಿಡ್ಜ್, ಫ್ಯಾನ್, ಮಿಕ್ಸಿ, ಲೈಟ್ ಎಲ್ಲವೂ ದಿನವಿಡೀ ಉರಿದರೂ ಯಾರೂ ಕೇಳಲ್ಲ..ಎಲ್ಲಾ ಫ್ರೀ! ನೀವೂ ಪಡೆಯಬಹುದು...

Free Electricity: ಇಲ್ಲಿ ಫ್ರಿಡ್ಜ್, ಫ್ಯಾನ್, ಮಿಕ್ಸಿ, ಲೈಟ್ ಎಲ್ಲವೂ ದಿನವಿಡೀ ಉರಿದರೂ ಯಾರೂ ಕೇಳಲ್ಲ..ಎಲ್ಲಾ ಫ್ರೀ! ನೀವೂ ಪಡೆಯಬಹುದು...

ವಿನೂತನ ಸೋಲಾರ್ ಕ್ಯಾಂಟೀನ್

ವಿನೂತನ ಸೋಲಾರ್ ಕ್ಯಾಂಟೀನ್

407 ವಾಹನವನ್ನು ಮಿನಿ ಬಸ್ ನಂತೆ ಪರಿವರ್ತಿಸಿ ಕ್ಯಾಂಟಿನ್ ಮಾಡಲಾಗಿದೆ. ಅದರ ಮೇಲ್ಬಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ ಇದರಿಂದ ಕ್ಯಾಂಟಿನ್ ಒಳಗಿರುವ ಪ್ರಿಜ್, ಮಿಕ್ಸರ್, ಅವನ್, ಎಕ್ಸಾಸ್ಟ್  ಪ್ಯಾನ್ ಮತ್ತಿತರ ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ಉಪಕರಣದ ಬಳಕೆಯ ವಿದ್ಯುತ್ ಗೆ ಮಾಲೀಕರು ಒಂದೇ ಒಂದು ರೂಪಾಯಿ ಎಲೆಕ್ಟ್ರಿಕ್ ಬಿಲ್ ಕಟ್ಟಬೇಕಿಲ್ಲ.

ಮುಂದೆ ಓದಿ ...
  • Share this:

ಕಟೀಲು: ಇತ್ತೀಚಿನ ದಿನಗಳಲ್ಲಿ ವಿದ್ಯುತ್ ನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಮನೆಯಲ್ಲಿ ಒಂದು ಬಲ್ಬ್ ಉರಿಸಲೂ ಲೆಕ್ಕಾಚಾರ ಹಾಕಿಕೊಳ್ಳುವ ಪರಿಸ್ಥಿತಿಯಿದೆ. ಬಲ್ಬ್ ಅಥವಾ ಫ್ಯಾನ್ ಹೆಚ್ಚು ಉರಿಸಿದಲ್ಲಿ ತಿಂಗಳಿನ ಕರೆಂಟ್ ಬಿಲ್ ಎಲ್ಲಿ ದುಪ್ಪಟ್ಟಾಗುತ್ತೋ ಎನ್ನುವ ತಲೆ ಬಿಸಿಯೂ ತಪ್ಪಿದ್ದಲ್ಲ. ಆದರೆ ಇಲ್ಲೊಬ್ಬರು ಮೊಬೈಲ್ ಕ್ಯಾಂಟೀನ್ ನಡೆಸುವ ವ್ಯಕ್ತಿ ಫ್ಯಾನ್, ಲೈಟ್ ಸೇರಿದಂತೆ ಏನೆಲ್ಲಾ ಉಪಕರಣಗಳಿವೆ ಎಲ್ಲವನ್ನೂ ಬಿಂದಾಸ್ ಆಗಿ ಉರಿಸಿಕೊಳ್ಳುತ್ತಿದ್ದಾರೆ. ಸಂಚಾರಿ ಎನ್ನುವ ಹೆಸರಿನ ಈ ಮೊಬೈಲ್ ಕ್ಯಾಂಟೀನ್ ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಪರಿಸರದಲ್ಲಿ ಉತ್ತಮ ಸೇವೆಯ ಜೊತೆಗೆ ಇನ್ನೊಂದು ವಿಚಾರದಲ್ಲೂ ಮನೆ ಮಾತಾಗಿದೆ. ಹೌದು ಈ ಕ್ಯಾಂಟೀನ್ ನ ಎಲ್ಲಾ ವ್ಯವಸ್ಥೆಗಳು ನಡೆಯೋದು ಸೋಲಾರ್ ಎನರ್ಜಿ ಮೂಲಕವೇ.


ಈ ಮೊಬೈಲ್ ಕ್ಯಾಂಟಿನನ್ನು ತಮ್ಮ ವಿಶೇಷ ಕಲ್ಪನೆ ಮೂಲಕ ಸಾಕರಗೊಳಿಸಿದವರು ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಕಟೀಲು ಪಂಚಾಯತ್ ನ ಮಾಜಿ ಸದಸ್ಯ ಅರುಣ್ ಕುಮಾರ್ ಮಲ್ಲಿಗೆಯಂಗಡಿ. 407 ವಾಹನವನ್ನೇ ಮೊಬೈಲ್ ಕ್ಯಾಂಟಿನ್ ಆಗಿ ಪರಿವರ್ತಿಸಿ ಇದರಲ್ಲಿನ ಎಲ್ಲಾ ಉಪಕರಣಗಳು ಸೋಲಾರ್ ಎನರ್ಜಿ ಉಪಯೋಗಿಸಿಕೊಂಡು ನಡೆಯೋದು ಈ ಕ್ಯಾಂಟಿನ್ ವಿಶೇಷ. 407 ವಾಹನವನ್ನು ಮಿನಿ ಬಸ್ ನಂತೆ ಪರಿವರ್ತಿಸಿ ಕ್ಯಾಂಟಿನ್ ಮಾಡಲಾಗಿದೆ. ಅದರ ಮೇಲ್ಬಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ ಇದರಿಂದ ಕ್ಯಾಂಟಿನ್ ಒಳಗಿರುವ ಪ್ರಿಜ್, ಮಿಕ್ಸರ್, ಅವನ್, ಎಕ್ಸಾಸ್ಟ್  ಪ್ಯಾನ್ ಮತ್ತಿತರ ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸುತ್ತಿದೆ.


ಎಲ್ಲಾ ತಿಂಡಿ ತಿನಸುಗಳನ್ನು ಇದರಲ್ಲಿಯೇ ತಯಾರಿಸಲಾಗುತ್ತದೆ.   ಗ್ರಾಹಕರಿಗೆ ಕೈ ತೊಳೆಯಲು  ಬಸ್ ನ ಹಿಂಬಾಗದಲ್ಲಿ ವಾಶ್ ಬೇಸಿನ್ ಮಾಡಲಾಗಿದ್ದು, ನೀರಿಗಾಗಿ ಬಸ್ ನ ಮೇಲ್ಭಾಗದಲ್ಲಿ 500 ಲೀಟರ್ ಸಾಮರ್ಥ್ಯದ ಟ್ಯಾಂಕ್  ಅಳವಡಿಸಲಾಗಿದೆ, ಕೈ ತೊಳೆದ ತ್ಯಾಜ್ಯ ನೀರು ಬಸ್ ನ ಅಡಿ ಬಾಗದ ಇನ್ನೊಂದು 300 ಲೀಟರ್ ಸಾಮರ್ಥ್ಯದ ಟ್ಯಾಂಕ್ ನಲ್ಲಿ ಸಂಗ್ರಹವಾಗುತ್ತಿದ್ದು ವಿಲೇವಾರಿ ಮಾಡಲು ಸುಲಭವಾಗುವಂತೆ ಅಳವಡಿಸಲಾಗಿದೆ. ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿರುವ ಈ ಮೊಬೈಲ್ ಕ್ಯಾಂಟೀನ್ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಶಂಸೆಗೂ ಪಾತ್ರವಾಗಿದೆ.


ಇದನ್ನೂ ಓದಿ: Covid Report: ತಮಿಳುನಾಡಿನಿಂದ ಬರುವ ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಕಡ್ಡಾಯ, ರಿಪೋರ್ಟ್ ಇಲ್ಲದಿದ್ರೆ ಗಡಿಯಲ್ಲೇ ವಾಪಸ್


ಮೊಬೈಲ್ ಕ್ಯಾಂಟೀನ್ ವಾಹನದ  ಇನ್ನೊಂದು ವಾಹನದ ಚೇಸ್  ಅನ್ನು ಕೋಣೆಯಂತೆ ಮಾಡಿ ಅದರಲ್ಲಿ ಕುರ್ಚಿ ಮತ್ತು ಟೇಬಲ್ ನ್ನು ಅಳವಡಿಸಲಾಗಿದೆ, ಗ್ರಾಹಕರಿಗೆ ಕುಳಿತುಕೊಂಡು ತಿನ್ನುವ ವ್ಯವಸ್ಥೆಯನ್ನು  ಮಾಡಲಾಗಿದ್ದು ಇದಕ್ಕಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ಪ್ಯಾನ್ ಅಳವಡಿಸಿದ್ದು ಮೇಲ್ಬಾಗದಲ್ಲಿ ಬಿಸಿ ಗಾಳಿ ಹೊರ ಹೋಗಲಿಕ್ಕೆ ಎಕ್ಸಾಸ್ಟ್ ಪ್ಯಾನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.  ಸದ್ಯಕ್ಕೆ ಕಟೀಲು ಬಸ್ ನಿಲ್ಡಾಣದ ಪಕ್ಕ ನಿಂತಿದ್ದು ವ್ಯಾಪಾರಕ್ಕೆ ಬೇರೆ ಬೇರೆ ಕಡೆಗಳಿಗೆ ಕೊಂಡ್ಯೊಯ್ಯಬಹುದಾಗಿದೆ, ಕ್ಯಾಂಟಿನ್ ನ ಹೊರ ಬಾಗದಲ್ಲಿ ಬೇರೆ ಬೇರೆ ಹಣ್ಣು ಹಂಪಲುಗಳ ಚಿತ್ರಗಳನ್ನು ಬಿಡಿಸಿ ಆಕರ್ಷಕಣಿಯವಾಗಿ ಮಾಡಲಾಗಿದ್ದು, ಸಂಪೂರ್ಣವಾಗಿ ಸ್ವಚ್ಚತೆಯ ಬಗ್ಗೆ ಗಮನಹರಿಸಲಾಗಿದೆ.


ಈ ಕ್ಯಾಂಟಿನ್ ನ ವಿನ್ಯಾಸಕ್ಕಾಗಿ ಒಟ್ಟು 6.25 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿಯೂ ಈ ಕ್ಯಾಂಟೀನ್ ಗೆ ಭಾರೀ ಬೇಡಿಕೆಯಿದ್ದು, ಚಿತ್ರ ತಂಡ ಈ ಮೊಬೈಲ್ ಕ್ಯಾಂಟೀನ್ ಅನ್ನು ತಮ್ಮ ಚಿತ್ರೀಕರಣದ ಸ್ಪಾಟ್ ನಲ್ಲಿ ಇರಿಸಿ ತಮ್ಮ ಊಟೋಪಚಾರದ ವ್ಯವಸ್ಥೆಯನ್ನು ಪೂರೈಸಿಕೊಳ್ಳುತ್ತಿದ್ದಾರೆ.
ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಈ ಕ್ಯಾಂಟಿನ್ ನ ವೀಕ್ಷಣೆಗೆಗಾಗಿ ಕಟೀಲಿಗೆ ಬಂದಿದ್ದು, ಎಲ್ಲಾ ವ್ಯವಸ್ಥೆಗಳಿರುವ ಈ  ಕ್ಯಾಂಟಿನ್ ನನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಸಂಪೂರ್ಣ ಸ್ವಚ್ಚತೆಯ ಬಗ್ಗೆ ಗಮನಹರಿಸಿದ ಈ ಕ್ಯಾಂಟಿನ್ ಕೆಲವೊಂದು ಸಮಾವೇಶ ಮತ್ತು ಉತ್ಸವಗಳಿಗೆ  ಅಗತ್ಯತೆ ಇದೆ ಎನ್ನುವ ಅಭಿಪ್ರಾಯವನ್ನೂ ಸಚಿವರು ಹಂಚಿಕೊಂಡಿದ್ದಾರೆ.

Published by:Soumya KN
First published: