ಕೊರೋನಾ ಕಾಲದಲ್ಲಿ ರೈತರ ಗಾಯದ ಮೇರೆ ಬರೆ; ದುಬಾರಿಯಾದ ಬಿತ್ತನೆ ಬೀಜ

ಬಿತ್ತನೆ ಬೀಜದ ದರ ಏರಿಕೆ ಮಾಡಿ ಅನ್ನದಾತನ ಆಕ್ರೋಶಕ್ಕೆ ಸರ್ಕಾರ ಗುರಿಯಾಗಿದೆ. ಬಿತ್ತನೆ ಬೀಜದ ದರ ಏರಿಕೆ ಸಂಕಷ್ಟದಲ್ಲಿರೋ ರೈತನಿಗೆ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಹುಬ್ಬಳ್ಳಿ; ಕೊರೋನಾ ಎರಡನೆಯ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಂಡು, ಕೆಲ ರಾಜ್ಯಗಳಲ್ಲಿ ಇದೀಗ ನಿಯಂತ್ರಣಕ್ಕೆ ಬರೋ ಸೂಚನೆ ಕಂಡು ಬಂದಿದೆ. ಎಲ್ಲ ವರ್ಗದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಅದರಲ್ಲಿಯೂ ರೈತರು ಬೆಳೆದ ಬೆಳೆಗೆ ಸರಿಯಾದ ದರ ಸಿಗದೆ, ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಇದು ಹೀಗಿರುವಾಗ ರೈತರ ನೆರವೇಗಿ ಬರಬೇಕಿದ್ದ ಸರ್ಕಾರವೇ ಕೋವಿಡ್ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಿದೆ. ಬಿತ್ತನೆ ಬೀಜ ದರ ಏರಿಕೆ ಮಾಡಿ ಕಂಗಾಲಾಗುವಂತೆ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿದ್ದು, ಮುಂಗಾರು ಚಟುವಟಿಕೆಗಳು ಚುರುಕುಕೊಂಡಿವೆ. ಮಳೆ ಬರುತ್ತಿದೆ ಎಂದು ಖುಷಿಯಿಂದ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರೋ ರೈತನಿಗೆ ರಾಜ್ಯ ಸರ್ಕಾರ ತೀವ್ರ ನಿರಾಸೆ ಮೂಡುವಂತೆ ಮಾಡಿದೆ. ಕೋವಿಡ್ ಸಂಕಷ್ಟದ ನಡುವೆಯೇ ರೈತರಿಗೆ ಸರ್ಕಾರ ಬರೆ ಎಳೆದಿದೆ.

ಬಿತ್ತನೆ ಬೀಜದ ದರ ಏರಿಕೆ ಮಾಡಿ ಅನ್ನದಾತನ ಆಕ್ರೋಶಕ್ಕೆ ಸರ್ಕಾರ ಗುರಿಯಾಗಿದೆ. ಬಿತ್ತನೆ ಬೀಜದ ದರ ಏರಿಕೆ ಸಂಕಷ್ಟದಲ್ಲಿರೋ ರೈತನಿಗೆ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ.
ಆಗಾಗ ಮಳೆ ಬರ್ತಿರೋ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಸೋಯಾಬಿನ್, ಹೆಸರು, ಹತ್ತಿ, ಶೇಂಗಾ ಇತ್ಯಾದಿ ಬಿತ್ತನೆ ಮಾಡಲು ರೈತರು ಸಿದ್ಧತೆ ನಡೆಸಿದ್ದಾರೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಸರ್ಕಾರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮಾರಾಟ ಆರಂಭಿಸಿದೆ. ಬೀಜ ಖರೀದಿಗೆ ಹೋಗ್ತಿರೋ ರೈತನ ಜೇಬಿಗೇ ಸರ್ಕಾರ ಕತ್ತರಿ ಹಾಕಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಬಿತ್ತನೆ ಬೀಜದ ದರ ಕೇಳಿ ರೈತರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: Rahul Gandhi| ಲಸಿಕೆಗೆ ಆನ್​ಲೈನ್ ನೋಂದಣಿ ಸರಿಯಲ್ಲ, ಇಂಟರ್​ನೆಟ್ ಇಲ್ಲದವರಿಗೆ ಬದುಕುವ ಹಕ್ಕಿಲ್ಲವೇ?: ರಾಹುಲ್ ಗಾಂಧಿ ಪ್ರಶ್ನೆ

ಸೋಯಾಬಿನ್ ಬೀಜ ಕ್ವಿಂಟಲ್ ಗೆ ಕಳೆದ ವರ್ಷ 6700 ರೂಪಾಯಿ ಇತ್ತು. ಈ ವರ್ಷ ಅದರ ದರ 10,400 ರೂಪಾಯಿಗೆ ಏರಿಕೆಯಾಗಿದೆ. ಸೋಯಾಬಿನ್ 30 ಕೆ.ಜಿ. ಪಾಕೆಟ್ ಗೆ 2010 ರೂಪಾಯಿ ದರ ಇತ್ತು, ಆದ್ರೆ ಈ ವರ್ಷ 2370 ರೂಪಾಯಿಗೆ ದರ ಏರಿಕೆಯಾಗಿದೆ. ಹೆಸರು ಕ್ವಿಂಟಾಲ್ ಗೆ 9750 ರೂಪಾಯಿ ಇದ್ದ ದರ 12,400 ರೂಪಾಯಿಗೆ ಏರಿಕೆಯಾಗಿದೆ. ಶೇಂಗಾ ಕ್ವಿಂಟಾಲ್ ಗೆ 7500 ರೂಪಾಯಿ ಇದ್ದ ದರ 8300 ರೂಪಾಯಿಗೆ ಏರಿಕೆಯಾಗಿದೆ. ತೊಗರಿ ದರ 7500 ಇದ್ದ ದರ 10,400 ರೂಪಾಯಿಗೆ ಏರಿಕೆಯಾಗಿದೆ. ಜೋಳ, ಉದ್ದು, ಹತ್ತಿ ಮತ್ತಿತರ ಬೀಜಗಳ ದರವೂ ಏರಿಕೆ ಕಂಡಿದೆ.

ಇದನ್ನೂ ಓದಿ: Sushant Singh Rajput: ನಟ ಸುಶಾಂತ್ ಸಿಂಗ್ ಸಾವಿನ ಕುರಿತ ಚಿತ್ರಕ್ಕೆ ತಡೆ ನೀಡಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್​

ಮೊದಲೇ ಕೋವಿಡ್ ನಿಂದ ಕಂಗಾಲಾಗಿದ್ದೇವೆ. ಹೀಗಿರುವಾಗ ಸರ್ಕಾರ ಉಚಿತವಾಗಿ ಬಿತ್ತನೆ ಬೀಜ ನೀಡಬೇಕಿತ್ತು. ಉಚಿತವಾಗಿ ನೀಡೋದು ಬೇಡ, ಕನಿಷ್ಟ ಸಬ್ಸಿಡಿ ದರದಲ್ಲಿಯಾದರೂ ನೀಡಬೇಕಿತ್ತು. ಆದ್ರೆ ರಿಯಾಯಿತು ದರದಲ್ಲಿ ನೀಡೋದಾಗಿ ಹೇಳಿ ಸದ್ದಿಲ್ಲದೆ ದರ ಏರಿಕೆ ಮಾಡಿದೆ ಎಂದು ರೈತರ ಆರೋಪಿಸಿದ್ದಾರೆ. ಸರ್ಕಾರ ಒಂದು ಕಡೆ ರಿಯಾಯಿತಿ ಕೊಟ್ಟು ಮತ್ತೊಂದು ಕಡೆ ದರ ಏರಿಕೆ ಮಾಡಿರೋದ್ರಿಂದ ಲಾಭವೇನು ಎಂದು ರೈತರು ಪ್ರಶ್ನಿಸಿದ್ದಾರೆ.

ಗೊಬ್ಬರದ ದರವನ್ನೂ ಏರಿಕೆ ಮಾಡಲಾಗಿದೆ. ನಮ್ಮ ಉತ್ಪನ್ನಗಳನ್ನು ಅತ್ಯಂತ ಕಡಿಮೆ ದರಕ್ಕೆ ಖರೀದಿ ಮಾಡೋ ಸರ್ಕಾರ, ಬೀಜ ಮತ್ತು ಗೊಬ್ಬರಗಳ ದರ ಹೆಚ್ಚಿಸಿ ಮತ್ತಷ್ಟು ಸಂಕಷ್ಟ ನೀಡುತ್ತಿದೆ. ಸಬ್ಸಿಡಿ ಹೆಸರಲ್ಲಿ ರೈತರಿಗೆ ಸರ್ಕಾರ ಮಣ್ಣೆರಚುತ್ತಿದೆ ಎಂದು ಆರೋಪಿಸಲಾಗಿದೆ. ಕೊಡುವುದಾದರೆ ಕಳೆದ ವರ್ಷದ ದರಕ್ಕೆ ಬಿತ್ತನೆ ಬೀಜ ಕೊಡಬೇಕು, ಸಂಕಷ್ಟದಲ್ಲಿರೋ ರೈತರ ನೆರವಿಗೆ ಬರಬೇಕೆಂದು ಕಳಸಾ ಬಂಡೋರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ಧಣ್ಣ ತೇಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:MAshok Kumar
First published: