HOME » NEWS » District » AMMA AWARD DISTRIBUTION IN SEDAM AT KALBURGI SAKLB HK

ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ 20 ರ ಸಂಭ್ರಮ ; ಪ್ರಶಸ್ತಿ ಪುರಸ್ಕೃತರಿಗೆ ಕೌದಿ, ತೊಗರಿ ಬೇಳೆ ಕಾಣಿಕೆ

ಅಮ್ಮ ಪ್ರಶಸ್ತಿ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರಶಸ್ತಿ ಪುರಸ್ಕೃತರಿಗೆ ಕೌದಿ ಹಾಗೂ ತೊಗರಿ ಬೇಳೆ ಕಾಣಿಕೆಯಾಗಿ ನೀಡಿದ್ದ ಈ ಬಾರಿ ಪ್ರಶಸ್ತಿಯ ವಿಶೇಷ.

news18-kannada
Updated:November 26, 2020, 10:12 PM IST
ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ 20 ರ ಸಂಭ್ರಮ ; ಪ್ರಶಸ್ತಿ ಪುರಸ್ಕೃತರಿಗೆ ಕೌದಿ, ತೊಗರಿ ಬೇಳೆ ಕಾಣಿಕೆ
ಅಮ್ಮ ಪ್ರಶಸ್ತಿ ಪುರಸ್ಕೃತರು
  • Share this:
ಕಲಬುರ್ಗಿ(ನವೆಂಬರ್​.26): ಅಮ್ಮ ಎನ್ನುವ ಹೆಸರಲ್ಲಿ ಆರಂಭಿಸಿರುವ ಈ ಪ್ರಶಸ್ತಿ ರಾಜ್ಯದ ಮನೆ ಮಾತಾಗಿದೆ. ಮಾತೋಶ್ರೀ ಮಹಾದೇವಪ್ಪ ಮುನ್ನೂರ ಪ್ರತಿಷ್ಠಾನದಿಂದ ಕೊಡಮಾಡುವ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ 20ರ ಸಂಭ್ರಮ. ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅವರು ತಮ್ಮ ತಾಯಿಯ ಹೆಸರಲ್ಲಿ ಆರಂಭಿಸಿದ ಪ್ರಶಸ್ತಿ ನಾಡಿನೆಲ್ಲೆಡೆ ಮನೆ ಮಾತಾಗಿದೆ. 20ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಕಲಬುರ್ಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಸಂಭ್ರಮದಿಂದ ನೆರವೇರಿತು. ಸೇಡಂನ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಚಾಲನೆ ನೀಡಿದರು. ನಾಲವಾರ ಕೋರಿಸಿದ್ಧೇಶ್ವರ ಮಠದ ಪೀಠಾಧಿಪತಿ ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹಾಗೂ ಸೇಡಂನ ಸದಾಶಿವ ಮಹಾಸ್ವಾಮಿಗಳು ಸಾನಿಧ್ಯತೆ ವಹಿಸಿಕೊಂಡಿದ್ದರು. ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ ಉಪಸ್ಥಿತರಿದ್ದರು.

ಅಮ್ಮ ಪುಸ್ತಕ ಪ್ರಶಸ್ತಿ ಹಾಗೂ ಅಮ್ಮ ಗೌರವ ಪ್ರಶಸ್ತಿಗಳನ್ನು ಈ ವೇಳೆ ಪ್ರದಾನ ಮಾಡಲಾಯಿತು. ಪುಸ್ತಕ ಪ್ರಶಸ್ತಿಯನ್ನು ಕೆ.ಎ.ದಯಾನಂದ ಅವರ ಹಾದಿಗಲ್ಲು (ಆತ್ಮಕಥನ), ಕಿರಣ್ ಭಟ್ ಅವರ ರಂಗ ಕೈರಳಿ (ಪ್ರವಾಸ ಕಥನ), ಕಲಬುರಗಿಯ ಶ್ರೀನಿವಾಸ ಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ (ವೈಚಾರಿಕ ಸಂಕಲನ), ನದೀಂ ಸನದಿ ಅವರ `ಹುಲಿಯ ನೆತ್ತಿಯ ನೆರಳು’ ಮತ್ತು ಡಾ. ಸತ್ಯಮಂಗಲ ಮಹಾದೇವ ಅವರ `ಪಂಚವರ್ಣದ ಹಂಸ’ (ಕವನ ಸಂಕಲನ) ಪ್ರದಾನ ಮಾಡಲಾಯಿತು.

ಇದನ್ನೂ ಓದಿ : ವಿಜಯೇಂದ್ರ ಉಪ ಚುನಾವಣೆ ಗೆಲುವಿನ ರೂವಾರಿ- ಹಾಗಾದ್ರೆ ಮಂತ್ರಿಗಳು, ರಾಜ್ಯಾಧ್ಯಕ್ಷರು ಏನೂ ಅಲ್ಲ: ಬೇಳೂರು ಪ್ರಶ್ನೆ

ಅಮ್ಮ ಪುಸ್ತಕ ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಹಾಗೂ ಫಲಕವನ್ನೊಳಗೊಂಡಿದೆ. ಅಲ್ಲದೆ ಇದೇ ವೇಳೆ ಅಮ್ಮ ಗೌರವ ಪುರಸ್ಕಾರವನ್ನು ಕಲಬುರ್ಗಿಯ ಪಿ.ಎಂ.ಮಣ್ಣೂರ, ರೇಖಾಬಾಯಿ ಅರಗಲಮನಿ ಅವರಿಗೆ ಪ್ರದಾನ ಮಾಡಲಾಯಿತು.
Youtube Video

ಅಮ್ಮ ಪ್ರಶಸ್ತಿ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರಶಸ್ತಿ ಪುರಸ್ಕೃತರಿಗೆ ಕೌದಿ ಹಾಗೂ ತೊಗರಿ ಬೇಳೆ ಕಾಣಿಕೆಯಾಗಿ ನೀಡಿದ್ದ ಈ ಬಾರಿ ಪ್ರಶಸ್ತಿಯ ವಿಶೇಷ. ಕಲಬುರ್ಗಿ ಅಂದ್ರೆ ತೊಗರಿಯ ಕಣಜ. ಹೀಗಾಗಿ ಕಲಬುರ್ಗಿಯ ನೆನಪಿಗಾಗಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ಎರಡು ಕೆ.ಜಿ. ತೊಗರಿ ಹಾಗೂ ತಲಾ ಒಂದು ಕೌದಿಯನ್ನು ಕಾಣಿಕೆಯಾಗಿ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರು ಅತ್ಯಂತ ಅಭಿಮಾನದಿಂದ ತೊಗರಿ ಹಾಗೂ ಕೌದಿಗಳನ್ನು ಸ್ವೀಕರಿಸಿ, ಧನ್ಯವಾದ ತಿಳಿಸಿದ್ದಾರೆ.
Published by: G Hareeshkumar
First published: November 26, 2020, 10:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories