ಲಾಕ್​ಡೌನ್​ ನಿಂದ ಆಹಾರ ಇಲ್ಲದೆ ಬೀದಿ ನಾಯಿಗಳ ಪರದಾಟ; ಪುತ್ತೂರಿನಲ್ಲಿದ್ದಾರೆ ಬೀದಿ ನಾಯಿಗಳ ಅನ್ನದಾತರು

ಕಳೆದ 15 ವರ್ಷಗಳಿಂದ ಈ ಕಾಯಕವನ್ನು ರಾತ್ರಿ ಸಮಯದಲ್ಲಿ ಮಾಡುತ್ತಿದ್ದ ರಾಜೇಶ್ ಬನ್ನೂರು ಲಾಕ್​ಡೌನ್ ಕಾರಣಕ್ಕೆ ಈಗ ನಾಯಿಗಳಿಗೆ ಆಹಾರ ವಿತರಿಸಲು ಸಂಜೆಯೇ ಹೊರಡುತ್ತಾರೆ. ರಾತ್ರಿ 11 ಗಂಟೆಯವರೆಗೆ ಆಹಾರ ನೀಡುವ ಇವರ ದಾರಿಯನ್ನೇ ಕಾಯುವ ನೂರಾರು ನಾಯಿಗಳು ಪುತ್ತೂರಿನಲ್ಲಿವೆ.

Youtube Video
  • Share this:
ಪುತ್ತೂರು: ಕೊರೋನಾ ಲಾಕ್​ಡೌನ್ ಸಮಯದಲ್ಲಿ ಹಲವು ಬಡ ಕುಟುಂಬಗಳು ಒಪ್ಪತ್ತಿನ ಊಟಕ್ಕೂ ಪರಿತಪಿಸಿವೆ. ಉದ್ಯೋಗವಿಲ್ಲದೆ ಇರುವ ಈ ಕುಟುಂಬಗಳಿಗೆ ಸರಕಾರದ ವತಿಯಿಂದ ಹಲವು ಯೋಜನೆಗಳನ್ನು ನೀಡುತ್ತಿರುವ ಪರಿಣಾಮ ಈ ಕುಟುಂಬಗಳು ಜೀವಂತವಾಗಿದೆ. ಜನರ ಪರಿಸ್ಥಿತಿ ಇದಾಗಿದ್ದರೆ, ಪ್ರಾಣಿಗಳ ಪರಿಸ್ಥಿತಿಯಂತು ಹೇಳ ತೀರದು. ಮನುಷ್ಯನ ಅತ್ಯಂತ ಪ್ರೀತಿಯ ಪ್ರಾಣಿಯಾಗಿರುವ ನಾಯಿಗಳಿಗೆ ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಆಹಾರದ ಸಮಸ್ಯೆ ಸ್ವಾಭಾವಿಕವಾಗಿ ಉದ್ಭವಿಸಿದೆ. ಅದರಲ್ಲೂ ಬೀದಿ ನಾಯಿಗಳ ಸ್ಥಿತಿಯಂತು ಚಿಂತಾಜನಕವಾಗಿದ್ದು, ಹೋಟೆಲ್ ಸೇರಿದಂತೆ ಯಾವುದೇ ಆಹಾರ ಪೂರೈಕೆಯ ವ್ಯವಸ್ಥೆಗಳು ಇಲ್ಲದ ಕಾರಣ ಬೀದಿ ನಾಯಿಗಳು ಆಹಾರಕ್ಕಾಗಿ ಹಾತೊರೆಯುತ್ತಿರುವುದು ಸಾಮಾನ್ಯವಾಗಿದೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿರುವ ನಾಯಿಗಳಿಗೆ ಲಾಕ್ ಡೌನ್ ನಿಂದ ಆಹಾರದ ಸಮಸ್ಯೆ ಕಾಡಿಲ್ಲ. ಹೇಗೆ ಹೇಳ್ತೀವಿ ಈ ಸ್ಟೋರಿ ನೋಡಿ. ಲಾಕ್ ಡೌನ್ ಘೋಷಣೆಯಾದ ಬಳಿಕ ಕೂಲಿ ಸೇರಿದಂತೆ ಇತರ ಸಣ್ಣ ಪುಟ್ಟ ಕೆಲಸ ನಿರ್ವಹಿಸಿ ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ತೊಂದರೆಯಾಗಿದೆ. ಸರಿಯಾದ ಉದ್ಯೋಗವಿಲ್ಲದ ಕಾರಣ ಊಟಕ್ಕೆ ಗತಿಯಿಲ್ಲದೆ ಹಲವು ಕುಟುಂಬಗಳು ಒಪ್ಪತ್ತಿನ ಊಟಕ್ಕಾಗಿಯೂ ಪರದಾಡಿದಂ ತಹ ಘಟನೆಗಳೂ ನಡೆದಿವೆ. ಸರಕಾರ ಇಂಥ ಕುಟುಂಬಗಳಿಗಾಗಿ ಇದೀಗ ವಿವಿಧ ರೀತಿಯ ಸವಲತ್ತುಗಳನ್ನು ಒದಗಿಸುವ ಕಾರಣಕ್ಕಾಗಿ ಈ ಕುಟುಂಬಗಳು ಬದುಕುಳಿದಿವೆ.

ಜನರ ಪರಿಸ್ಥಿತಿ ಇದಾಗಿದ್ದರೆ, ಇನ್ನು ಪ್ರಾಣಿಗಳ ಸ್ಥಿತಿಯನ್ನು ಕೇಳೋರೇ ಇಲ್ಲ. ಮನುಷ್ಯನ ಅತ್ಯಂತ ಪ್ರೀತಿ ಪಾತ್ರವಾದ ನಾಯಿಗಳಿಗೂ ಕೊರೊನಾ ಲಾಕ್ ಡೌನ್ ಬಿಸಿ ತಟ್ಟಿದೆ. ಅದರಲ್ಲೂ ಬೀದಿ ನಾಯಿಗಳಿಗೆ ಸರಿಯಾದ ಆಹಾರದ ವ್ಯವಸ್ಥೆಯಿಲ್ಲದ ಕಾರಣ, ನಾಯಿಗಳು ಆಹಾರಕ್ಕಾಗಿ ಅಲೆದಾಡುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿರುವ 150 ಕ್ಕೂ ಮಿಕ್ಕಿದ ಬೀದಿ ನಾಯಿಗಳಿಗೆ ಲಾಕ್ ಡೌನ್ ನಿಂದ ಯಾವುದೇ ಸಮಸ್ಯೆಯಾಗಿಲ್ಲ.

ಸಮಯಕ್ಕೆ ಸರಿಯಾಗಿ ಈ ನಾಯಿಗಳು ಇದ್ದಲ್ಲಿಗೇ ಆಹಾರ ಪೂರೈಕೆಯಾಗುತ್ತಿದೆ. ಹೌದು ಈ ರೀತಿ ನಾಯಿಗಳಿಗೆ ಆಹಾರ ಪೂರೈಕೆ ಮಾಡುತ್ತಿರುವವರು ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು. ಪುತ್ತೂರು ನಗರಸಭೆಯಲ್ಲಿ ನಿರಂತರ 20 ವರ್ಷಗಳ ಕಾಲ ಸದಸ್ಯರಾಗಿ ಆಯ್ಕೆಯಾಗಿರುವ ಇವರು ಪುತ್ತೂರು ಪುರಸಭೆಯಾಗಿದ್ದ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರೂ ಆಗಿದ್ದವರು. ನಗರಸಭೆಯ ಸದಸ್ಯರಾಗಿ ಹೆಸರುವಾಸಿಯಾಗಿರುವ ರಾಜೇಶ್ ಬನ್ನೂರು  ರ ಶ್ವಾನಪ್ರೇಮ ಮಾತ್ರ ತೆರೆಮರೆಯಲ್ಲಿಯೇ ನಡೆಯುತ್ತಿದೆ.

ತಾವೇ ಅತ್ಯಂತ ಮುದ್ದಾಗಿ ಸಾಕಿದ ನಾಯಿ ಇಡುವ ಗಂಡು ಮರಿಗಳನ್ನು ಮಾತ್ರ ತನ್ನ ಬಳಿಯಿಟ್ಟು, ಹೆಣ್ಣು ಮರಿಯನ್ನು ಬೀದಿಗೆ ಬಿಡುವ ಜಾಯಮಾನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂಥ ಬೀದಿಗೆ ಬಿದ್ದ ಮರಿಗಳು ಕೆಲವು ಆಹಾರವಿಲ್ಲದೆ ಸತ್ತರೆ, ಇನ್ನು ಕೆಲವು ಬೀದಿಯಲ್ಲಿ ಸಿಕ್ಕಿದನ್ನೆಲ್ಲಾ ತಿಂದು ಬೀದಿಬದಿ ನಾಯಿಯಾಗಿ ಬೆಳೆಯುತ್ತದೆ. ಇಂಥ ಆಹಾರವಿಲ್ಲದೆ ಅಲೆದಾಡುವ ನಾಯಿಗಳಿಗೆ ಅನ್ನದಾತ ಈ ರಾಜೇಶ್ ಬನ್ನೂರು.

ಪುತ್ತೂರು ನಗರದಲ್ಲಿರುವ ಸರಿ ಸುಮಾರು 150 ಬೀದಿ ನಾಯಿಗಳಿಗೆ ಲಾಕ್ ಡೌನ್ ಕಾರಣದಿಂದ ಬೇರೆ ಮೂಲಗಳಿಂದ ಆಹಾರ ಸಿಗುತ್ತಿಲ್ಲ. ಇದರಿಂದಾಗಿ ಇವರು ಪ್ರತೀ ದಿನ ಸಂಜೆ ವೇಳೆಗೆ ಮನೆಯಲ್ಲಿ ನಾಯಿಗಳಿಗೆ ತಯಾರಿಸಿದ ಆಹಾರವನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ನಗರ ತುಂಬೆಲ್ಲಾ ಸಂಚರಿಸಿ, ನಾಯಿಗಳಿಗೆ ಆಹಾರ ಪೂರೈಕೆಯನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: Karnataka Corona Death: ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ; ಒಂದೇ ದಿನದಲ್ಲಿ 353 ಮಂದಿ ಬಲಿ!

ಕಳೆದ 15 ವರ್ಷಗಳಿಂದ ಈ ಕಾಯಕವನ್ನು ರಾತ್ರಿ ಸಮಯದಲ್ಲಿ ಮಾಡುತ್ತಿದ್ದ ರಾಜೇಶ್ ಬನ್ನೂರು ಲಾಕ್​ಡೌನ್ ಕಾರಣಕ್ಕೆ ಈಗ ನಾಯಿಗಳಿಗೆ ಆಹಾರ ವಿತರಿಸಲು ಸಂಜೆಯೇ ಹೊರಡುತ್ತಾರೆ. ರಾತ್ರಿ 11 ಗಂಟೆಯವರೆಗೆ ಆಹಾರ ನೀಡುವ ಇವರ ದಾರಿಯನ್ನೇ ಕಾಯುವ ನೂರಾರು ನಾಯಿಗಳು ಪುತ್ತೂರಿನಲ್ಲಿವೆ. ಡೌನ್ ನಲ್ಲಿ ಸಂಕಷ್ಟಕ್ಕೀಡಾಗಿರುವ ಜನರಿಗೆ ಸಹಾಯ ಮಾಡಲು ಸಾಕಷ್ಟು ಜನರಿದ್ದು, ಬೀದಿ ನಾಯಿಗಳ ಆಹಾರದ ಸಮಸ್ಯೆಯ ಬಗ್ಗೆ ಯಾರೂ ಗಮನಹರಿಸಿಲ್ಲ.

ಇದನ್ನೂ ಓದಿ: ಓರ್ಕಾಸ್‍ನ ಆಕರ್ಷಣಿಯ ಬೇಟೆ ಸೆರೆ: ವಾವ್‌ ಎಂದ ಪ್ರವಾಸಿಗರು..!

ಈ ಸಮಯದಲ್ಲಿ ರಾಜೇಶ್ ಬನ್ನೂರು ತಮ್ಮ ಸಂಕಷ್ಟದ ಜೊತೆಗೇ ನಾಯಿಗಳ ಬಗ್ಗೆ ತೋರಿಸುತ್ತಿರುವ ಕಾಳಜಿ ಪ್ರಶಂಸೆಗೂ ಪಾತ್ರವಾಗಿದೆ. ಬೀದಿ ನಾಯಿಗಳನ್ನು ಒಂದು ಕಡೆ ಸೇರಿಸಿ ಅವುಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಇಂಗಿತ ರಾಜೇಶ್ ಬನ್ನೂರು ಅವರದ್ದು. ಅದಕ್ಕಾಗಿ ಸರಕಾರವೇನಾದರೂ ಭೂಮಿ ನೀಡಿದ್ದಲ್ಲಿ ಸಣ್ಣ ಮಟ್ಟಿನ ಶೆಡ್ ನಿರ್ಮಿಸಿ ಬೀದಿ ನಾಯಿಗಳನ್ನು ಸಾಕಬೇಕೆನ್ನುವ ಇವರ ಆಶಯಕ್ಕೆ ಸರಕಾರ ಹಾಗೂ ಸಂಘ ಸಂಸ್ಥೆಗಳು ನೆರವು ನೀಡಬೇಕಿದೆ.

ಮನುಷ್ಯನ ಅತ್ಯಂತ ನಂಬಿಕಸ್ಥ ಪ್ರಾಣಿಯಾಗಿರುವ ನಾಯಿಗಳು ಇಂದು ಬೀದಿ ನಾಯಿಯಾಗಿ ಜನರನ್ನು ಕಾಡುತ್ತಿರುವ ಸಂದರ್ಭದಲ್ಲಿ ಇವುಗಳನ್ನು ನಿಯಂತ್ರಿಸುವ ರಾಜೇಶ್ ಬನ್ನೂರ್ ಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯ ಸಮಾಜದ ಮೇಲಿದೆ.
ನಗರಸಭೆಯ ಸದಸ್ಯತ್ವದ ಜೊತೆಗೆ ಪತ್ರಿಕಾ ಏಜೆಂಟ್ ಆಗಿಯೂ ಕಾರ್ಯ ನಿರ್ವಹಿಸು ತ್ತಿರುವ ಬನ್ನೂರರ ಶ್ವಾನ ಪ್ರೇಮಕ್ಕೆ ಪುತ್ತೂರಿನ ಎರಡು ಹೋಟೇಲ್ ಗಳು ಹಾಗೂ ಇಬ್ಬರು ಮುಸ್ಲಿಂ ಬಂಧುಗಳು ತಿಂಡಿ ಮತ್ತು ಇತರ ರೂಪದಲ್ಲಿ ಸಹಕಾರ ನೀಡುತ್ತಿದೆ. ಅಲ್ಲದೆ ನಾಯಿಗಳಿಗೆ ಚಿಕಿತ್ಸೆ ನೀಡಲು ಕರೆದಲ್ಲಿ ಬರುವ ಪಶುವೈದ್ಯರ ಸಹಕಾರವೂ ಇವರಿಗಿದೆ.
Published by:MAshok Kumar
First published: