HOME » NEWS » District » AMBULANCE REPAIR IN YADAGIRI DISTRICT RHHSN NMPG

ಯಾದಗಿರಿ ಜಿಲ್ಲೆಯಲ್ಲಿ ರೋಗಗ್ರಸ್ತ ಆ್ಯಂಬುಲೆನ್ಸ್​ಗಳಿಗೆ ಬೇಕಿದೆ ಸೂಕ್ತ ಚಿಕಿತ್ಸೆ!

ಯಾದಗಿರಿ ಜಿಲ್ಲೆಗೆ ಇನ್ನು ನಾಲ್ಕು ಆ್ಯಂಬುಲೆನ್ಸ್ ಗಳನ್ನು ಸರಕಾರ ಒದಗಿಸಲಿದ್ದು, ಶೀಘ್ರವೇ ಜಿಲ್ಲೆಗೆ ನಾಲ್ಕು ಆ್ಯಂಬುಲೆನ್ಸ್ ಗಳು ಬರಲಿವೆಯಂತೆ, ಆದ್ರೆ, ಆರೋಗ್ಯ ಇಲಾಖೆಯು  ಹಾಳು ಕೊಂಪೆಯಾದ ಆ್ಯಂಬುಲೆನ್ಸ್​ಗಳನ್ನು ದುರಸ್ಥಿ ಇಲ್ಲವೇ ಟೆಂಡರ್ ಕರೆದು ಮಾರಾಟ ಮಾಡಿ, ಹೊಸ ಆ್ಯಂಬುಲೆನ್ಸ್ ಸೌಕರ್ಯ ಕಲ್ಪಿಸಿ ರೋಗಿಗಳ ಹಿತ ಕಾಪಾಡಬೇಕಿದೆ.

news18-kannada
Updated:March 25, 2021, 7:08 AM IST
ಯಾದಗಿರಿ ಜಿಲ್ಲೆಯಲ್ಲಿ ರೋಗಗ್ರಸ್ತ ಆ್ಯಂಬುಲೆನ್ಸ್​ಗಳಿಗೆ ಬೇಕಿದೆ ಸೂಕ್ತ ಚಿಕಿತ್ಸೆ!
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ: ರೋಗಿಗಳ ಪಾಲಿಗೆ ಸಂಜೀವಿನಿಯಾದ ಆ್ಯಂಬುಲೆನ್ಸ್​ಗಳಿಗೆ ಈಗ ಚಿಕಿತ್ಸೆ ಬೇಕಾಗಿದೆ. ರೋಗಿಗಳ ಜೀವ ಉಳಿಸುವ ಆ್ಯಂಬುಲೆನ್ಸ್​ಗಳು ಜಿಲ್ಲೆಯಲ್ಲಿ ಈಗ ಹಾಳಾಗಿ ನಿಂತಿವೆ..!  ಗುಜರಿಗೆ ಸೇರಬೇಕಾದ ಆ್ಯಂಬುಲೆನ್ಸ್​ಗಳು ಆರೋಗ್ಯ ಇಲಾಖೆ ಕಚೇರಿಯಲ್ಲಿ ವರ್ಷಾನುಗಟ್ಟಲೇ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ. ಟೆಂಡರ್ ಕರೆದು ಮಾರಾಟ ಮಾಡಿ ಹೊಸ ಆ್ಯಂಬುಲೆನ್ಸ್ ಸೌಕರ್ಯ ಕಲ್ಪಿಸಬೇಕಾದ ಇಲಾಖೆ ಮಾತ್ರ ನಿಷ್ಕಾಳಜಿ ವಹಿಸಿದೆ. ರೋಗಿಗಳ ಪಾಲಿಗೆ ಸಂಜೀವಿನಿಯಾದ ಆ್ಯಂಬುಲೆನ್ಸ್​ಗಳು ಈಗ ರೋಗಗ್ರಸ್ಥವಾಗಿವೆ. ಇದರಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಗಳು ಸಿಗದೆ, ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಆ್ಯಂಬುಲೆನ್ಸ್​ಗಳ ಕೊರತೆ ಜಿಲ್ಲೆಯಲ್ಲಿ ತಲೆದೋರಿದೆ.

ಯಾದಗಿರಿ ಜಿಲ್ಲೆ ರಚನೆಯಾಗಿ 11 ವರ್ಷಗಳು ಕಳೆದರೂ ಸಹ ಇನ್ನು ಆರೋಗ್ಯ ಇಲಾಖೆ ಸುಧಾರಣೆ ಕಂಡಿಲ್ಲ. ಹೀಗಾಗಿ ಗ್ರಾಮೀಣ ಭಾಗದ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಇರುವಂತ ಆ್ಯಂಬುಲೆನ್ಸ್ಗಳಲ್ಲಿ 6ಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳು ಕೆಟ್ಟು ಹಾಳಾಗಿವೆ. ಯಾದಗಿರಿ ಜಿಲ್ಲೆಯಲ್ಲಿ ಕೇವಲ 24 ಆ್ಯಂಬುಲೆನ್ಸ್ ಗಳು ಮಾತ್ರ ಸದ್ಯಕ್ಕೆ ಕಾರ್ಯನಿರ್ವಹಣೆ ಮಾಡುತ್ತಿವೆ. ಇದು ಜನರಿಗೆ ಸಮರ್ಪಕವಾಗಿ ಸಿಗ್ತಾಯಿಲ್ಲ.ಇನ್ನು ಇದರಲ್ಲಿ 12 ಸರ್ಕಾರದ  ಆ್ಯಂಬುಲೆನ್ಸ್ ಗಳು ಇದ್ರೆ ಇನ್ನು ಆರೋಗ್ಯ ಕವಚದ 108 ಆ್ಯಂಬುಲೆನ್ಸ್ ಗಳು 12 ಇವೆ. ಆದರೆ 108 ಆ್ಯಂಬುಲೆನ್ಸ್ಗಳ ನಿರ್ವಹಣೆ ಜವಾಬ್ದಾರಿ ಹೊಂದಿರುವ ಜಿವಿಕೆ ಸಂಸ್ಥೆ ಸರಿಯಾಗಿ ನಿರ್ವವಣೆ ಮಾಡದೆ ಇರೋದಕ್ಕೆ ಈ ಸಮಸ್ಯೆಯಾಗಿದೆ.

ಇದನ್ನು ಓದಿ: ಮಹಾರಾಷ್ಟ್ರದ ಗೃಹ ಸಚಿವ‌ರ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ಯಾದಗಿರಿ ಜಿಲ್ಲೆಯಲ್ಲಿ  44 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅದೇ ರೀತಿ 6 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಎರಡು ತಾಲೂಕು ಆಸ್ಪತ್ರೆಗಳಿದ್ದು, ಒಂದು ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇದ್ದು, ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದ ಕಾರಣ ಇನ್ನು ಆ್ಯಂಬುಲೆನ್ಸ್ ಗಳು ರೋಗಿಗಳಿಗೆ ಬೇಕಾಗಿದ್ದು ಅವಶ್ಯವಿದೆ. ನೂತನ ಜಿಲ್ಲಾಸ್ಪತ್ರೆ ಸೇರಿ ಗ್ರಾಮೀಣ ಭಾಗದಲ್ಲಿ ಕೂಡ ಆರೋಗ್ಯ ಇಲಾಖೆ ಆ್ಯಂಬುಲೆನ್ಸ್ ಗಳ ಸೌಲಭ್ಯ  ಕಲ್ಪಿಸಬೇಕಾಗಿತ್ತು. ಆದರೆ, ಆರೋಗ್ಯ ಇಲಾಖೆಯು ಸಂಪೂರ್ಣ  ನಿಷ್ಕಾಳ ಜಿವಹಿಸಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಇಂದುಮತಿ ಪಾಟೀಲ ಈ ಬಗ್ಗೆ ಮಾತನಾಡಿ, ಯಾವುದೇ ಸಮಸ್ಯೆಯಿಲ್ಲ. ಶೀಘ್ರವೇ ಮತ್ತೆ ನಾಲ್ಕು ಆ್ಯಂಬುಲೆನ್ಸ್ ಗಳು ಬರುತ್ತವೆ ಎಂದು ಹೇಳುತ್ತಾರೆ.
Youtube Video

ಯಾದಗಿರಿ ಜಿಲ್ಲೆಯ ಕೊಡೇಕಲ್, ದೋರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಕೆಲ ಕಡೆ ಅಂಬುಲೆನ್ಸ್ ಗಳ ಕೊರತೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ರಸ್ತೆ ಅಪಘಾತ ಘಟನೆ ಏನಾದರೂ ಸಂಭವಿಸಿದರೆ  ಆ್ಯಂಬುಲೆನ್ಸ್ ಗಳು ಸಕಾಲಕ್ಕೆ ಬರುತ್ತಿಲ್ಲವಂತೆ. ಯಾದಗಿರಿ ಜಿಲ್ಲೆಗೆ ಇನ್ನು ನಾಲ್ಕು ಆ್ಯಂಬುಲೆನ್ಸ್ ಗಳನ್ನು ಸರಕಾರ ಒದಗಿಸಲಿದ್ದು, ಶೀಘ್ರವೇ ಜಿಲ್ಲೆಗೆ ನಾಲ್ಕು ಆ್ಯಂಬುಲೆನ್ಸ್ ಗಳು ಬರಲಿವೆಯಂತೆ, ಆದ್ರೆ, ಆರೋಗ್ಯ ಇಲಾಖೆಯು ಹಾಳು ಕೊಂಪೆಯಾದ ಆ್ಯಂಬುಲೆನ್ಸ್​ಗಳನ್ನು ದುರಸ್ಥಿ ಇಲ್ಲವೇ ಟೆಂಡರ್ ಕರೆದು ಮಾರಾಟ ಮಾಡಿ, ಹೊಸ ಆ್ಯಂಬುಲೆನ್ಸ್ ಸೌಕರ್ಯ ಕಲ್ಪಿಸಿ ರೋಗಿಗಳ ಹಿತ ಕಾಪಾಡಬೇಕಿದೆ.
Published by: HR Ramesh
First published: March 25, 2021, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories