ಹೆಲಿಟೂರಿಸಂಗೆ ನನ್ನ ವಿರೋಧ ಇದೆ, ಪ್ರವಾಸೋದ್ಯಮ ಇಲಾಖೆಯವರು ಕಾಗೆ ಹಾರಿಸಬಾರದು; ಪ್ರತಾಪ್‌ಸಿಂಹ

ಮೈಸೂರಿನಿಂದ ಕಾರವಾರ, ಬಳ್ಳಾರಿ, ಬೆಂಗಳೂರಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡುತ್ತೇವೆ ಅಂತೀರಿ, ಮೈಸೂರಿನಿಂದ ಕಾರವಾರಕ್ಕೆ ಹೋಗಿ ನೋಡುವುದು ಏನಿದೆ ? ದಸರಾ ಸಂದರ್ಭದಲ್ಲಿ ಮಾಡುವ ಹೆಲಿರೈಡ್‌ಗೇ ಜನರ ಬರೋದಿಲ್ಲ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಸಂಸದ ಪ್ರತಾಪ್​ ಸಿಂಹ.

ಸಂಸದ ಪ್ರತಾಪ್​ ಸಿಂಹ.

  • News18
  • Last Updated :
  • Share this:
ಮೈಸೂರಿನಲ್ಲಿ ಹೆಲಿಟೂರಿಸಂ ಪ್ರಸ್ತಾವ ವಿಚಾರ‌ವಾಗಿ, ಪ್ರವಾಸೋದ್ಯಮ ಇಲಾಖೆಯವರು ಬಣ್ಣ ಬಣ್ಣದ ಕಾಗೆ ಹಾರಿಸಬಾರದು ಮಂಡ್ಯದಲ್ಲಿ ಡಿಸ್ನಿಲ್ಯಾಂಡ್, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡ್ತೀವಿ ಅಂತಾರೆ, ಇಂಥವೆಲ್ಲ ನಾವೂ ತುಂಬಾ ನೋಡಿದ್ದೇವೆ ಅಂತಪ್ರವಾಸೋಧ್ಯಮ ಸಚಿವ ಸಿ‌.ಪಿ.ಯೋಗೀಶ್ವರ್‌ಗೆ ಸಂಸದ ಪ್ರತಾಪ್‌ ಸಿಂಹ ಟಾಂಗ್ ನೀಡಿದ್ದಾರೆ. ಹೆಲಿಟೂರಿಸಂ ಪ್ರಸ್ತಾವನೆ ಇರುವ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಂಸದ ಹೆಲಿಟೂರಿಸಂಗಾಗಿ ಮಾಡಿರುವ ಕ್ರೀಯಾಯೋಜನೆಗಳನ್ನ ಕೇಳಿ ಅಧಿಕಾರಿಗಳನ್ನ ತಬ್ಬಿಬ್ಬು ಮಾಡಿದ್ರು. ಪ್ರವಾಸೋದ್ಯಮ ಇಲಾಖೆ ಎಡಿ ರಾಘವೇಂದ್ರರಿನ್ನ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡ ಪ್ರತಾಪ್‌ಸಿಂಹ, ನಿಮ್ಮ ಬಳಿ ಏನ್ ವಿಷನ್ ಡಾಕಿಮೆಂಟ್ ಇದೆ ಕೇಳಿದರು. ಪ್ರತಾಪ್‌ಸಿಂಹ ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿ ರಾಘವೇಂದ್ರ ಯಾವುದೇ ಉತ್ತರ ಕೊಡದೆ ಸುಮ್ಮನೆ ನಿಂತುಕೊಂಡರು. 

ಪ್ರವಾಸೋದ್ಯಮ ಇಲಾಖೆಯವರ ತಲೆಯಲ್ಲಿ ಗೊಬ್ಬರ ತುಂಬಿದೆ. ಇಲ್ಲಿ ಯಾವ ಘನಕಾರ್ಯ ಮಾಡಲು ಮುಂದಾಗಿದ್ದೀರಿ ಅಂತ ಪ್ರಶ್ನಿಸಿದ ಪ್ರತಪ್‌ಸಿಂಹ ಮರಗಳ ತೊಗಟೆ ಎಡೆದು ಗುರುತು ಮಾಡಿದ್ದೀರಾ, ನಾನು ಮಲೆನಾಡಿನವನು, ನಿಮಗಿಂತ ಮರಗಳ ಬಗ್ಗೆ ಹೆಚ್ಚು ಗೊತ್ತು. ಬೇಸಿಗೆಯಲ್ಲಿ ಮರಗಳ ತೊಗಟೆ ತೆಗೆದರೆ ಮರಗಳಿಗೆ ತೊಂದರೆಯಾಗುತ್ತೆ. ಇದು‌ ನಿಮಗೆ ಗೊತ್ತಿಲ್ಲವ ಎಂದು ತರಾಟೆ ತೆಗೆದುಕೊಂಡರು. ಪ್ರ

ವಾಸೋದ್ಯಮ ಇಲಾಖೆ‌ಯವರು ಹೇಳಿದರು ಅದಕ್ಕಾಗಿ ನಾವು ಹೀಗೆ ಮಾಡಿದ್ವಿ ಅಂತ  ಹೇಳಿದ ಅರಣ್ಯಧಿಕಾರಿ ಹೇಳಿಕೆಗೂ ಕೆಂಡಮಂಡಲವಾದ ಸಂಸದ ಪ್ರತಾಪ್ ಸಿಂಹ, ನಿಮಗಾದ್ರು ಗೊತ್ತಾಗೋಲ್ವೇನ್ರಿ ಅಂತ ಅರಣ್ಯ ಇಲಾಖೆ ಅಧಿಕಾರಿಗಳಿಗು ಪ್ರಶ್ನಿಸಿದರು.

ಹೆಲಿಟೂರಿಸಂಗೆ ನನ್ನ ವಿರೋಧ ಇದೆ ಎಂದ ಪ್ರತಾಪ್‌ಸಿಂಹ ಎರಡು ಸಲ ಸಭೆ ಮಾಡಿ ಪ್ರಚಾರಕ್ಕೆ ಅಂತ ಮಾತಾಡ್ತಾರೆ, 6 ತಿಂಗಳಿಗೆ ಮತ್ತೊಬ್ಬ ಸಚಿವರು  ಬದಲಾಗುತ್ತಾರೆ ಆಗ ಮತ್ತೆ ಸಭೆ  ಆಮೇಲೆ ಎಲ್ಲವೂ ಮರೆತು ಹೋಗುತ್ತೆ.  ಹೆಲಿ ಟೂರಿಸಂ ಅನ್ನುವ ಪದ ಮಾತ್ರ ಕೇಳಿದ್ದೇವೆ ಆ ಯೋಜನೆ ರೂಪುರೇಷೆ ಏನು ? ನಿಮ್ಮ ಬಳಿ ವಿಷನ್ ಡಾಕ್ಯುಮೆಂಟ್ ಎಲ್ಲಿದೆ? ಯಾವ ಘನಕಾರ್ಯ ಮಾಡ್ತೀರಿ ಅಂತ ನಮಗೂ ಹೇಳಿ ಅಂತ ಪ್ರವಾಸೋಧ್ಯಮ ಇಲಾಖೆಯನ್ನ ಕೇಳಿದ ಸಿಂಹ,

ಇದನ್ನೂ ಓದಿ: Rafale Deal: ರಫೇಲ್ ಹಗರಣದ ತನಿಖೆಗೆ ಒತ್ತಾಯಿಸಿ PIL: ಮತ್ತೆ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್​

ಮೈಸೂರಿನಿಂದ ಕಾರವಾರ, ಬಳ್ಳಾರಿ, ಬೆಂಗಳೂರಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡುತ್ತೇವೆ ಅಂತೀರಿ, ಮೈಸೂರಿನಿಂದ ಕಾರವಾರಕ್ಕೆ ಹೋಗಿ ನೋಡುವುದು ಏನಿದೆ ? ದಸರಾ ಸಂದರ್ಭದಲ್ಲಿ ಮಾಡುವ ಹೆಲಿರೈಡ್‌ಗೇ ಜನರ ಬರೋದಿಲ್ಲ ಯೋಜನೆ ರೂಪಿಸುವ ಮುನ್ನ ಇದೆಲ್ಲವನ್ನೂ ಗಮನಿಸಬೇಕು.  ಇಷ್ಟಾಗಿಯೂ ನಿಮಗೆ ಹೆಲಿಕಾಪ್ಟರ್ ಹಾರಿಸಬೇಕು ಅನ್ನಿಸಿದರೆ ಬನ್ನಿ ವಿಮಾನ ನಿಲ್ದಾಣದಲ್ಲಿ ನಾವೇ ಜಾಗ ಕೊಡುತ್ತೇವೆ.

ಕೇವಲ 10 ಮೀಟರ್ ದೂರದಲ್ಲಿ ರಾಜವಂಶಸ್ಥರಿಗೆ ಸೇರಿದ ಹೆಲಿಪ್ಯಾಡ್ ಇದೆ, ಅದನ್ನು ಬಾಡಿಗೆ, ಬೋಗ್ಯಕ್ಕೆ ಕೇಳಿದ್ರೆ ಕೊಡಲ್ಲ ಅಂತಾರಾ ? ಹೆಲಿ ಟೂರಿಸಂ‌ಗೆ ನನ್ನ ವಿರೋಧ ಇದೆ  ಈ ಸಂಬಂಧ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
Published by:MAshok Kumar
First published: