Rain Damage: ಸದಾ ಬರಗಾಲದಿಂದ ತತ್ತರಿಸುತ್ತಿದ್ದ ಕೊಪ್ಪಳದಲ್ಲೀಗ ಮಳೆಯೂ ಶಾಪ

ಅವಧಿಯ ಮುನ್ನ ಮಳೆಯಾಗಿದ್ದರಿಂದ ಖುಷಿಯಾಗಿ ಹೆಸರು ಬಿತ್ತನೆ ಮಾಡಿದ ರೈತರಿಗೆ ಅಧಿಕ ಮಳೆಯಾಗಿ ಹೆಸರು ಬೆಳೆಗೆ ರೋಗ ತಗುಲಿ ಹಾಳಾಗಿದೆ, ಒಂದು ಕಡೆ ಅಧಿಕ ಮಳೆಯು ಖುಷಿ ಕೊಟ್ಟಿದ್ದರೂ ಇನ್ನೊಂದು ಕಡೆ ಅಧಿಕ ತೇವಾಂಶದಿಂದಾಗಿ ರೈತರು ಬೆಳೆಯುವ ಬೆಳೆಗೆ ರೋಗ ತಗುಲಿ ಹಾನಿ ಸಂಭವಿಸುತ್ತಿದೆ.

ಬರದ ನಾಡಲ್ಲಿ ಮಳೆ

ಬರದ ನಾಡಲ್ಲಿ ಮಳೆ

  • Share this:
ಕೊಪ್ಪಳ: ಸದಾ ಬರಗಾಲವನ್ನೆ ಏದುರಿಸುವ ಕೊಪ್ಪಳ ಜಿಲ್ಲೆಯಲ್ಲಿ ಈ ಭಾರಿ ಉತ್ತಮ ಮಳೆಯಾಗಿದೆ, ಇಲ್ಲಿಯವರೆಗೂ ವಾಡಿಕೆಗಿಂತ ಶೇ 42 ಅಧಿಕ ಮಳೆಯಾಗಿದೆ, ಇದು ಒಂದು ಕಡೆ ರೈತರಿಗೆ ಖುಷಿ ನೀಡಿದರೆ ಹೆಸರು ಬೆಳೆ ಸೇರಿದಂತೆ ಹಲವಾರು ಬೆಳೆಗಳು ಅಧಿಕ ಮಳೆಯಿಂದಾಗಿ ಹಾಳಾಗಿವೆ,ಕೊಪ್ಪಳ ಜಿಲ್ಲೆ ವಾಡಿಕೆ ಈ ದಿನಕ್ಕೆ ೨೧೧.೬ ಎಂ ಎಂ ಮಳೆಯಾಗಬೇಕಿತ್ತು, ಆದರೆ ಆಗಿದ್ದು ೩೦೦.೮ ಎಂ ಎಂ ಮಳೆ ಇದರಿಂದಾಗಿ ಜಿಲ್ಲೆಯಲ್ಲಿ ಶೇ ೪೨ ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ,  ಅದರಲ್ಲಿ ಕನಕಗಿರಿ ತಾಲೂಕಿನಲ್ಲಿ ವಾಡಿಕೆಯಂತೆ ೧೬೭.೭ ml ಮಳೆಯಾಗಬೇಕಿತ್ತು, ಆದರೆ ಆಗಿದ್ದು ೩೧೬. ೬ ಎಂ ಎಂ ಮಳೆ ಇದರಿಂದಾಗಿ ಶೇ ೮೯ ರಷ್ಟು ಅಧಿಕ ಮಳೆಯಾಗಿದೆ, ಗಂಗಾವತಿ ತಾಲೂಕಿನಲ್ಲಿ ಮಾತ್ರ ವಾಡಿಕೆಯಂತೆ ೧೯೬.೧ ml ಮಳೆಯಾಗಬೇಕಿತ್ತು, ಆಗಿದ್ದು ೨೦೫ ಎಂಎA ಮಳೆ ಇದರಿಂದಾಗಿ ಶೇ ೫ ರಷ್ಟು ಮಾತ್ರ ಅಧಿಕ ಮಳೆಯಾಗಿದೆ,ಅದರಲ್ಲಿಯೂ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿದ್ದು ೫೧.೩ ml ವಾಡಿಕೆಯಂತೆ ಮಳೆಗೆ ೧೦೪ ml ಮಳೆಯಾಗಿ ಶೇ ೧೦೩ ರಷ್ಟು ಅಧಿಕ ಮಳೆಯಾಗಿದೆ, ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ ೧೨೯.೯ ml ಮಳೆಯಾಗುವದಕ್ಕೆ ೧೯೮.೪ ml ಮಳೆಯಾಗಿ ಶೇ ೫೩ ರಷ್ಟು ಅಧಿಕ ಮಳೆಯಾಗಿದೆ, ಈ ಬಾರಿ ಮುಂಗಾರು ಪೂರ್ವ ಮಳೆ ಸೇರಿದಂತೆ ಇಲ್ಲಿಯವರೆಗೂ ಅಧಿಕ ಮಳೆಯಾಗಿದ್ದು ಕೆರೆ ಕಟ್ಟೆಗಳು ಭರ್ತಿಯಾಗಿವೆ.

ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆಯ ಪ್ರಮಾಣವು ಅಧಿಕವಾಗಿದೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ೩೦೮೦೦೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು, ಆದರೆ ಈಗ ೧೪೮೦೨೭ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಅದರಲ್ಲಿ ಎಣ್ಣೆ ಕಾಳು ಸೂರ್ಯಕಾಂತಿ ಹಾಗು ದ್ವಿದಳ ಧಾನ್ಯವಾಗಿರುವ ಹೆಸರು ಅಧಿಕ ಬಿತ್ತನೆ ಮಾಡಲಾಗಿದೆ, ಹೆಸರನ್ನು ೧೫೪೧೧ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇತ್ತು, ಆದರೆ ಬಿತ್ತನೆಯಾಗಿದ್ದು ೧೯೯೨೦ ಹೆಕ್ಟರ್ ಪ್ರದೇಶ, ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಹೆಚ್ಚಳವಾಗಿರುವದರಿಂದ ಸೂರ್ಯಕಾಂತಿಯನ್ನು ಅಧಿಕವಾಗಿ ಬಿತ್ತನೆ ಮಾಡಲಾಗಿದೆ., ೮೮೩೧ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿಗೆ ೧೧೬೨೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅವಧಿಯ ಮುನ್ನ ಮಳೆಯಾಗಿದ್ದರಿಂದ ಖುಷಿಯಾಗಿ ಹೆಸರು ಬಿತ್ತನೆ ಮಾಡಿದ ರೈತರಿಗೆ ಅಧಿಕ ಮಳೆಯಾಗಿ ಹೆಸರು ಬೆಳೆಗೆ ರೋಗ ತಗುಲಿ ಹಾಳಾಗಿದೆ, ಒಂದು ಕಡೆ ಅಧಿಕ ಮಳೆಯು ಖುಷಿ ಕೊಟ್ಟಿದ್ದರೂ ಇನ್ನೊಂದು ಕಡೆ ಅಧಿಕ ತೇವಾಂಶದಿಂದಾಗಿ ರೈತರು ಬೆಳೆಯುವ ಬೆಳೆಗೆ ರೋಗ ತಗುಲಿ ಹಾನಿ ಸಂಭವಿಸುತ್ತಿದೆ.

ಈ ಬಾರಿ ಮೇ ತಿಂಗಳಲ್ಲಿ ಅಧಿಕ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದರು, ಮೇ ತಿಂಗಳಲ್ಲಿ ಮಳೆಯಾಗಿದ್ದರಿಂದ ಎರೆ ಭೂಮಿಯಲ್ಲಿ ಹೆಸರು ಬೆಳೆಯನ್ನು ಬೆಳೆದಿದ್ದರು, ಆದರೆ ಅಧಿಕ ಮಳೆಯಿಂದ ಹೆಸರು ಬೆಳೆಯು ಹಾನಿಯಾಗಿದೆ, ಈ ಮಧ್ಯೆ ಹೆಸರು, ಶೇಂಗಾ, ಹತ್ತಿ ಬೆಳೆಗೆ ತೇವಾಂಶ ಅಧಿಕಗೊಂಡು ರೋಗ ತಗುಲಿದೆ, ರೋಗ ನಿಯಂತ್ರಣಕ್ಕಾಗಿ ರೈತರು ಸಾಕಷ್ಟು ಪ್ರಮಾಣದಲ್ಲಿ ಕ್ರಿಮಿನಾಶಕ ಸಿಂಪರಣೆ ಮಾಡಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ಈ ಸರಕಾರ ರೋಗ ನಿಯಂತ್ರಣಕ್ಕೆ ಔಷಧಿ ಖರೀದಿಗಾದರೂ ಹಣ ನೀಡಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕೆಂದು ರೈತರು ಆಗ್ರಹಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: