ಕುಡಿಯುವ ನೀರಿನ ಪೂರೈಕೆ ದುರಸ್ತಿ ಕಾಮಗಾರಿಯಲ್ಲಿ ಗೋಲ್ ಮಾಲ್ ಆರೋಪ, ಪಿಡಿಒ ವಿರುದ್ದ ಪಂಚಾಯ್ತಿಯಿಂದಲೇ ತನಿಖೆಗೆ ಶಿಫಾರಸ್ಸು

ಕುಡಿಯುವ ನೀರಿನ ಪೂರೈಕೆಯ  ದುರಸ್ತಿ ಕಾಮಗಾರಿಗೆಂದು ಕೋಲಾರದ ರಾಯಲ್ ಹಾರ್ಡ್ ವೇರ್ ಮಳಿಗೆಯಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಖರೀದಿಸಿದ್ದು, ಆದರೆ ದುರಸ್ತಿ ಕೆಲಸಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡಿರುವ ಮಾಹಿತಿಯಂತೆ ಅಗತ್ಯ ವಸ್ತುಗಳು ಪಂಚಾಯಿತಿಗೆ ತಂದಿಲ್ಲ ಎಂಬುದು ಅಧ್ಯಕ್ಷ್ಯೆ ಸುಮಿತ್ರ, ಹಾಗು ಉಪಾಧ್ಯಕ್ಷ ಸುಮನ್ ಚಂದ್ರು ಅವರ ಆರೋಪವಾಗಿದೆ.

ನರಸಾಪುರ ಗ್ರಾಮ ಪಂಚಾಯ್ತಿ

ನರಸಾಪುರ ಗ್ರಾಮ ಪಂಚಾಯ್ತಿ

  • Share this:
ಕೋಲಾರ(ಏಪ್ರಿಲ್ 07) : ಇರದ ಸಾಮಗ್ರಿಗಳನ್ನು ಇದೆ ಎಂದು ಲೆಕ್ಕ ತೋರಿಸಿ ಮೋಸವೆಸಗಿದ್ದಾರೆ ಎಂದು ಪಿಡಿಒ ಮತ್ತು ಆಡಳಿತಾಧಿಕಾರಿ ಮೇಲೆ ಕೋಲಾರ ಜಿಲ್ಲೆಯ ನರಸಾಪುರ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಪಿಡಿಒ ಮತ್ತು ಆಡಳಿತಾಧಿಕಾರಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಕುಡಿಯುವ ನೀರಿನ ಪೂರೈಕೆಯ  ದುರಸ್ತಿ ಕಾಮಗಾರಿಗೆಂದು ಕೋಲಾರದ ರಾಯಲ್ ಹಾರ್ಡ್ ವೇರ್ ಮಳಿಗೆಯಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಖರೀದಿಸಿದ್ದು, ಆದರೆ ದುರಸ್ತಿ ಕೆಲಸಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡಿರುವ ಮಾಹಿತಿಯಂತೆ ಅಗತ್ಯ ವಸ್ತುಗಳು ಪಂಚಾಯಿತಿಗೆ ತಂದಿಲ್ಲ ಎಂಬುದು ಅಧ್ಯಕ್ಷ್ಯೆ ಸುಮಿತ್ರ, ಹಾಗು ಉಪಾಧ್ಯಕ್ಷ ಸುಮನ್ ಚಂದ್ರು ಅವರ ಆರೋಪವಾಗಿದೆ.

ಆದರೆ ಸಾಮಗ್ರಿಗಳನ್ನು ತಂದಿರುವುದಾಗಿ ಪಿಡಿಒ ರವಿ ಹೇಳ್ತಿದ್ದಾರೆ. ಆದರೆ ವಾಟರ್ ಮೆನ್ ಬಾಲಪ್ಪ ಮಾತ್ರ ಯಾವುದೆ ವಸ್ತುಗಳು ಬಂದಿಲ್ಲ ಎಂದು ಹೇಳಿದ್ದಾರೆ. ಇನ್ನು ಕಳೆದ ಪೆಬ್ರವರಿ 26 ರಂದು ನೀರಿನ ಪೈಪ್ ದುರಸ್ತಿ ಕಾಮಗಾರಿಗೆ ಬಳಸುವ ವಸ್ತುಗಳು ಪಂಚಾಯ್ತಿಗೆ ಬಂದಿದ್ದರು, ಬಂದಿಲ್ಲವೆಂದು ಪಿಡಿಒ ರವಿ ಹೇಳಿದ್ದಾರೆ. ಆದರೆ ವಸ್ತುಗಳು ಬಂದಿರೊದಾಗಿ ವಾಟರ್ ಮೆನ್ ಬಾಲಪ್ಪ ಹೇಳಿದ್ದು, ಹಿಂದೆ ವಸ್ತುಗಳನ್ನು ಖರೀದಿಸಿರುವ ಬಿಲ್ ಗಳನ್ನ ತೋರಿಸದೆ, ವಸ್ತುಗಳನ್ನು ತರದೆ ಹಣ ನುಂಗಿಹಾಕಿದ್ದಾರೆಂಬುದು ಅಧ್ಯಕ್ಷ್ಯ ಮತ್ತು ಉಪಾಧ್ಯಕ್ಷ್ಯರ ಆರೋಪವಾಗಿದೆ.

ಮಾರ್ಚ್ 31 ರಂದು ನಡೆದ ಸಾಮಾನ್ಯ ಸಭೆಯಲ್ಲಿ ವಸ್ತುಗಳು ಮೊದಲು ಬಂದಿಲ್ಲ ಎಂದು ಪಿಡಿಒ ನೀಡಿರುವ ಹೇಳಿಕೆ, ಪ್ರೊಸೀಡಿಂಗ್ಸ್ ಬುಕ್ ನಲ್ಲಿ ದಾಖಲಾಗಿದ್ದು ಅಕ್ರಮ ತನಿಖೆಯಾಗಲಿ ಎಂದು ಸದಸ್ಯರ ಸಮೇತರಾಗಿ ಎಲ್ಲರು ಆಗ್ರಹಿಸಿದ್ದಾರೆ.  ಇನ್ನು ಈ ಬಗ್ಗೆ ಮಾತನಾಡಿರುವ ಉಪಾಧ್ಯಕ್ಷ್ಯ ಸುಮನ್ ಚಂದ್ರು, ಯಾವುದೇ ಕೆಲಸಗಳನ್ನು ಮಾಡದೆ ಹಣ ಡ್ರಾ ಮಾಡಿದ್ದು, ಓದಲು ಬರೆಯಲು ಬಾರದ ವಾಟರ್ ಮೆನ್ ಗಳ ಬಳಿ ಸಹಿ ಮಾಡಿಸಿಕೊಂಡು, ಪಿಡಿಒ  ಅಕ್ರಮ ಎಸಗಿದ್ದಾರೆಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಡಿಒ ರವಿ ಅವರು, ಎಲ್ಲಾ ಆರೋಪಗಳನ್ನ ತಳ್ಳಿಹಾಕಿದ್ದು, ಪ್ರಾಮಾಣಿಕ ಅಧಿಕಾರಿಯಾಗಿ ಕೆಲಸ ಮಾಡ್ತಿದ್ದರು ವಿನಾಕಾರಣ ಆರೋಪ ಮಾಡ್ತಿರೊದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವಾಟರ್ ಮೆನ್ ಬಾಲಪ್ಪ, ಕೆಲ ಸಾಮಗ್ರಿಗಳನ್ನು ನಾವು ನೋಡಿ ಸಹಿ ಮಾಡಿದ್ದೇವೆ. ಕೆಲವು ಬಾರಿ ಹಿರಿಯ ಅಧಿಕಾರಿ ಕೇಳಿದ್ದಾರೆಂದು ಸಹಿ ಮಾಡಿದ್ದಾಗಿ ಹೇಳಿದ್ದು, ಓದಲು ಬರೆಯಲು ಬಾರದೆ ಇದ್ದ ಕಾರಣ ಮಾಹಿತಿ ತಿಳಿದಿಲ್ಲ ಎಂದು ಹೇಳಿದ್ದಾರೆ.

ಇನ್ನು ಆಡಳಿತಾಧಿಕಾರಿ ಮತ್ತು ಪಿಡಿಒ ವಿರುದ್ದ ಕೇಳಿಬಂದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ಅವರು, ಕೂಡಲೇ ಮಾಹಿತಿಯನ್ನ ಪರಿಶೀಲನೆ ನಡೆಸಿ, ಅಕ್ರಮ ಕಂಡುಬಂದರೆ ತನಿಖೆಗೆ ಶಿಪಾರಸು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಪಂಚಾಯಿತಿ ದಾಸ್ತಾನು ಕೇಂದ್ರಕ್ಕೆ ಸಾಮಗ್ರಿಗಳು ಬಾರದೆ ಇದ್ದರೂ, ಬಂದಿರುವಂತೆ ಅನಕ್ಷರಸ್ತರಾಗಿರುವ ವಾಟರ್ ಮೆನ್ ಹಾಗು ಡಿ ಗ್ರೂಪ್ ನೌಕರರ ಬಳಿ ಪಿಡಿಒ ರವಿ ಅವರು ಸಹಿ ಪಡೆದುಕೊಂಡಿದ್ದಾರೆ ಎಂಬ ಆರೋಪಗಳಿಗೆ ದಾಖಲೆಯನ್ನ ಪಂಚಾಯ್ತಿಯ ಉಪಾಧ್ಯಕ್ಷ್ಯರು ನೀಡಿದ್ದು, ಪಂಚಾಯಿತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವ ವೇಳೆಯಲ್ಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗು ಆಡಳಿತಾಧಿಕಾರಿ ನಡೆಸಿರುವ ಅಕ್ರಮದ ತನಿಖೆಯನ್ನ,  ಉನ್ನತ ಮಟ್ಟದ ಅಧಿಕಾರಿಗಳಿಂದ ನಡೆಸಬೇಕೆಂದು ಪಂಚಾಯಿತಿಯ ಅಧ್ಯಕ್ಷ್ಯ ಮತ್ತು ಉಪಾಧ್ಯಕ್ಷ್ಯರು ಆಗ್ರಹಿಸಿದ್ದಾರೆ.
Published by:Soumya KN
First published: