ತುಮಕೂರಿನಲ್ಲಿ ಭಯಾನಕ ರೇಪ್; ದನ ಮೇಯಿಸಲು ಹೋದ ಮಹಿಳೆ ನಿರ್ಜನ ಬೆಟ್ಟದಲ್ಲಿ ಕಾಮುಕರಿಗೆ ಬಲಿ

ತುಮಕೂರು ತಾಲೂಕಿನ ಹಿರೇಹಳ್ಳಿ ಸಮೀಪದ ಚೋಟಾಸಾಬರ ಪಾಳ್ಯದ ಬಳಿ ಇರುವ ನಿರ್ಜನ ಬೆಟ್ಟದಲ್ಲಿ ಮಹಿಳೆಯೊಬ್ಬರ ಬೆತ್ತಲೆ ದೇಹ ಪತ್ತೆಯಾಗಿದೆ. ಇಲ್ಲಿ ಅಪರಿಚಿತ ವ್ಯಕ್ತಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ಇದೆ.

ಕ್ರೈಮ್ ಸ್ಥಳದಲ್ಲಿ ಪೊಲಿಸರು

ಕ್ರೈಮ್ ಸ್ಥಳದಲ್ಲಿ ಪೊಲಿಸರು

  • Share this:
ತುಮಕೂರು: ಆ ಮಹಿಳೆ ಎಂದಿನಂತೆ ತಮ್ಮ ಜಮೀನಿಗೆ ಹಸು ಮೇಯಿಸಲು ತೆರಳಿರುತ್ತಾಳೆ. ಇನ್ನೇನು ಸಂಜೆ ನಾಲ್ಕುಗಂಟೆಯಾಯ್ತು ಮನೆಗೆ ಹೋಗೋಣ ಅಂತ ಅಂದ್ಕೊಳ್ತಿದ್ದ ಆ ಮಹಿಳೆ ಮನೆಗೆ ಹೋಗ್ಲೇ ಇಲ್ಲ. ಸಂಜೆಯಾದರೂ ಹೆಂಡತಿ ಮನೆಗೆ ಬರದೇ ಇದ್ದದ್ದನ್ನ ಗಮನಿಸಿದ ಗಂಡ ತನ್ನ ಪತ್ನಿಯನ್ನ ಹುಡುಕುತ್ತಾ ಜಮೀನಿನತ್ತ ಬರುತ್ತಾನೆ. ಅಲ್ಲಿಗೆ ಬಂದವನಿಗೆ ಕಂಡದ್ದು ಮಾತ್ರ ಘೋರ ದೃಶ್ಯ. ಹೌದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮಹಿಳೆಯೋರ್ವಳ ಶವ ಪತ್ತೆಯಾಗಿರುವ ಘಟನೆ ತುಮಕೂರು ತಾಲೂಕಿನ ಹೀರೇಹಳ್ಳಿ ಸಮೀಪದ ಚೋಟಾಸಾಬರ ಪಾಳ್ಯದ ಬಳಿ ನಡೆದಿದೆ. 35 ವರ್ಷದ ಜಯಲಕ್ಷ್ಮಿ ಕೊಲೆಯಾಗಿರುವ ಮಹಿಳೆ.

ಬೆಟ್ಟದ ಮೇಲೆ ಹಸು ಮೇಯಿಸಲು ಜಯಲಕ್ಷ್ಮೀ ಒಬ್ಬರೇ ಹೋಗಿದ್ದಾರೆ. ಸಂಜೆಯಾದರೂ ಮನೆಗೆ ವಾಪಸ್ ಬರದೇ ಇದ್ದದನ್ನು ನೋಡಿ ಪತಿ ಶಿವಕುಮಾರ್ ಹುಡುಕಾಟ ಶುರುಮಾಡಿದ್ದಾನೆ. ಆಗ ಬೆಟ್ಟದ ಮೇಲಿನ ಪೊದೆಯಲ್ಲಿ ಬೆತ್ತಲೆಯಾಗಿ ಬಿದ್ದಿದ್ದ ಜಯಲಕ್ಷ್ಮೀಯ ಮೃತದೇಹ ಕಂಡು ಬೆಚ್ಚಿಬಿದ್ದಿದಾನೆ. ಜೊತೆಗೆ ಮೃತದೇಹದ ಮೇಲೆ ಕಚ್ಚಿದ ಗಾಯದ ಕಲೆಗಳು ಇದ್ದವು. ಮಾಂಗ್ಯಲ್ಯ ಸರವನ್ನು ದುಷ್ಕರ್ಮಿಗಳು ಕಿತ್ತೊಯ್ದಿದ್ದಾರೆ. ಅಪರಿಚಿತ ಯುವಕರ ಗುಂಪು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಚೋಟಾಸಾಬ್‌ರ ಪಾಳ್ಯ ಗ್ರಾಮಕ್ಕೆ ಹೊಂದಿಕೊಂಡಿರುವ ಈ ನಿರ್ಜನ ಬೆಟ್ಟದ ಮೇಲೆ ಆಗಾಗ ಅಪರಿಚಿತ ಯುವಕರ ಗುಂಪು ಸೇರಿಕೊಂಡು ಮದ್ಯಪಾನ, ಗಾಂಜಾ ಸೇವನೆಯಂತಹ ಅನೈತಿಕ ಚಟುವಟಿಕೆ ಮಾಡುತ್ತಾರೆ ಎನ್ನಲಾಗಿದೆ. ಗಾಂಜಾ ಸೇವನೆ ನಶೆಯಲ್ಲಿ ಗ್ಯಾಂಗ್ ರೇಪ್ ನಡೆದಿರಬಹುದು ಎಂದು ಮೃತಳ ಸಂಬಂಧಿಕರು ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ಕ್ಯಾತಂದ್ರ ಠಾಣೆಯ ವ್ಯಾಪ್ತಿಯಲ್ಲಿ ಈ ರೀತಿಯ ಅನುಮಾನಾಸ್ಪದ ಕೊಲೆಗಳು, ರೇಪ್ ಗಳು ನಡೆಯುತ್ತಲೇ ಇರ್ತವೆ. ಆದ್ರೆ ಪೊಲೀಸರು ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಇದ್ದಾರೆ. ಜೊತೆಗೆ ಇದೇ ಪೊದೆಯಲ್ಲಿ ನಿತ್ಯ ಹತ್ತಾರು ಮಂದಿ ಗಾಂಜಾ ಸೇವನೆ ಮಾಡುತ್ತಾ, ಜೂಜು ಆಡುತ್ತಿರುತ್ತಾರಂತೆ. ಈ ಬಗ್ಗೆಯೂ ಪೊಲೀಸರು ಕ್ರಮ ಕೈಗೊಳ್ಳದೇ ಇರೋದು ಇಂಥಾ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ‌‌.

ಇದನ್ನೂ ಓದಿ: ಐಎಎಸ್, ಐಪಿಎಸ್ ಅಧಿಕಾರಿಗಳು ಸಿಂಗಂ ಇಮೇಜ್ ಬಳಸಿಕೊಂಡು ಕೆಲಸ ಮಾಡಬೇಡಿ: ಪ್ರತಾಪ್ ಸಿಂಹ

ಮೃತೆಯ ಸಹೋದರ ಹೇಳುವ ಪ್ರಕಾರ ಈ ದುರಂತಕ್ಕೆಲ್ಲಾ ಜಯಲಕ್ಷ್ಮಿಯ ಅತ್ತೆಯೇ ನೇರ ಕಾರಣವಂತೆ. ಜಯಲಕ್ಷ್ಮಿಗೆ ನಿತ್ಯ ದನ ಮೇಯಿಸುವಂತೆ ಕಿರುಕುಳ ಕೊಡ್ತಾ ಇದ್ದಳಂತೆ. ಪ್ರತಿದಿನ ದನ ಮೇಯಿಸೋಕೆ ಹೋಗಲೇ ಬೇಕಂತ ತಾಕೀತು ಮಾಡಿದ್ದಳಂತೆ.‌ ಹೀಗಾಗಿ ಜಯಲಕ್ಷ್ಮಿ ಬೇರೆ ದಾರಿ ಕಾಣದೆ ಪ್ರತಿನಿತ್ಯ ದನ ಕಾಯೋಕೆ ಹೋಗುತ್ತಿದ್ದಂತೆ.

ಇನ್ನು ಘಟನೆ ನಡೆದಿರೋ ಸ್ಥಳವೇ ತುಂಬಾ ಭಯಾನಕವಾಗಿದೆ. ಯಾರೂ ಆ ಜಾಗದಲ್ಲಿ ಓಡಾಡುತ್ತಿರಲಿಲ್ಲ. ಮೃತ ಜಯಲಕ್ಷ್ಮಿಗೆ ಏಳು ವರ್ಷದ ಒಂದು ಹೆಣ್ಣು ಮಗುವಿದ್ದು ಆ ಮಗುವಿಗೆ ಈಗ ತಾಯಿಯ ಪ್ರೀತಿ ಇಲ್ಲದಂತಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.

ಇದನ್ನೂ ಓದಿ: Mysuru Gang Rape Case: ಸಂತ್ರಸ್ಥೆ ಬಳಿ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾಮುಕರು, ಕಂಠಪೂರ್ತಿ ಕುಡಿದು ಗ್ಯಾಂಗ್​ ರೇಪ್

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ವಿಠಲ್ ಕುಮಾರ್
Published by:Vijayasarthy SN
First published: